Udayavni Special

ವೀರಭದ್ರೇಶ್ವರ ಜಾತ್ರೆ; ಅಗ್ಗಿ ತುಳಿಯಲು ಹರಿದುಬಂದ ಭಕ್ತರು

ದೇವರಿಗೆ ಶಾಲು ಹೊದಿಸುವುದು, ಸಕ್ಕರೆ ಪೇಢಾ ಸೇರಿದಂತೆ ಇತರೆ ನೈವೇದ್ಯ ಅರ್ಪಿಸಿ ಭಕ್ತಿ ಸಮರ್ಪಿಸಿದರು.

Team Udayavani, Jan 27, 2021, 5:23 PM IST

ವೀರಭದ್ರೇಶ್ವರ ಜಾತ್ರೆ; ಅಗ್ಗಿ ತುಳಿಯಲು ಹರಿದುಬಂದ ಭಕ್ತರು

ಹುಮನಾಬಾದ: ಪಟ್ಟಣದ ಶ್ರೀ ವೀರಭದ್ರೇಶ್ವರ ದೇವರ ಜಾತ್ರೆ ನಿಮಿತ್ತ ಸೋಮವಾರ ರಾತ್ರಿಯಿಂದ ಅಗ್ನಿ ತುಳಿಯಲು ರಾಜ್ಯ ಸೇರಿದಂತೆ ನೆರೆ ರಾಜ್ಯಗಳ ಲಕ್ಷಾಂತರ ಭಕ್ತರು ಹರಿದು ಬಂದಿದ್ದರು. ಕರ್ನಾಟಕ, ಆಂಧ್ರ, ತೆಲಂಗಾಣ, ಮಹಾರಾಷ್ಟ್ರ ಸೇರಿದಂತೆ ಇತರೆ ರಾಜ್ಯಗಳ ಭಕ್ತರು ಆಗಮಿಸಿ ಭಕ್ತಿ ಭಾವದಿಂದ ಅಗ್ನಿ ತುಳಿದು ಪುನೀತರಾದರು. ಆದರೆ, ಅಗ್ನಿ ತುಳಿಯುವ ಭಕ್ತರಿಗೆ ಈ ವರ್ಷ ಕಟ್ಟಿಗೆ ದೊರೆಯದ ಹಿನ್ನೆಲೆಯಲ್ಲಿ ನಿರಾಸೆ ಮೂಡಿಸಿತ್ತು. ಕೊರೊನಾ ಕಟ್ಟುನಿಟ್ಟಿನ ನಿಯಮಗಳ ಮಧ್ಯೆ ಭಕ್ತರಿಗೆ ಅಗ್ನಿ ಪ್ರವೇಶಿಸುವ ಭಾಗ್ಯ ದೊರೆತಿದೆ.

ಅಗ್ನಿ ತುಳಿಯಲು ದೇವಸ್ಥಾನದಿಂದ ಸೋಮವಾರ ರಾತ್ರಿ 9.30ಕ್ಕೆ ದೇವರ ಪಲ್ಲಕ್ಕಿ ಮೆರವಣಿಗೆ ಹೊರಟು, ಪಟ್ಟಣದ ಪ್ರಮುಖ ಬೀದಿಗಳ ಮೂಲಕ ರಾತ್ರಿ 11ಕ್ಕೆ ಅಗ್ನಿ ಕುಂಡಕ್ಕೆ ಆಗಮಿಸಿತು. ಮೊದಲಿಗೆ ದೇವರು ಅಗ್ನಿ ತುಳಿಯುವ ವಿವಿಧ  ಧಾರ್ಮಿಕ ಕಾರ್ಯಕ್ರಮಗಳು ನಡೆದವು. ನಂತರ ದೇವರ ಮಂಚ ಅಗ್ನಿ ಕುಂಡಕ್ಕೆ ಪ್ರದಕ್ಷಣೆ ಹಾಕಲಾಯಿತು. ನಂತರ ಭಕ್ತರಿಗೆ ಅಗ್ನಿ ತುಳಿಯಲು ಅನುವು ಮಾಡಿಕೊಡಲಾಯಿತು. ದೇವರ ಪಲ್ಲಕ್ಕಿ ಮೆರವಣಿಗೆ ರಾತ್ರಿ 12 ಗಂಟೆಗೆ ಮರಳಿ ದೇವಸ್ಥಾನಕ್ಕೆ ಸೇರಿತು.

ಭಕ್ತರು ದೇವರಿಗೆ ಶಾಲು ಹೊದಿಸುವುದು, ಸಕ್ಕರೆ ಪೇಢಾ ಸೇರಿದಂತೆ ಇತರೆ ನೈವೇದ್ಯ ಅರ್ಪಿಸಿ ಭಕ್ತಿ ಸಮರ್ಪಿಸಿದರು. ಭಕ್ತರಿಗೆ ದೂರದಿಂದಲೇ ದೇವರ ದರ್ಶನ ಮಾಡುವ ಭಾಗ್ಯ ಲಭಿಸಿದ್ದು, ವಿವಿಧ ಯಾವ ಸೇವೆಗಳಿಗೂ ಅವಕಾಶ ದೊರೆತಿಲ್ಲ. ಸೋಮವಾರ ಮಧ್ಯಾಹ್ನದ ವೇಳೆಗೆ ಅಗ್ನಿ ಕುಂಡದ ಎದುರಿಗೆ ಗಂಟೆಗಳ ಕಾಲ ಸರದಿಯಲ್ಲಿ ನಿಂತ ಭಕ್ತರು ವೀರಭದ್ರನಿಗೆ ಜಯಕಾರ ಹಾಕುತ್ತ ಮುಂದೆ ಸಾಗಿ ಅಗ್ನಿ ತುಳಿದರು.

ಜಾತ್ರೆ ಯಶಸ್ವಿ: ಶ್ರಮಿಕರಿಗೆ ಅಭಿನಂದನೆ ಶ್ರೀ ವೀರಭದ್ರೇಶ್ವರ ಜಾತ್ರೆ ನಿಮಿತ್ತ ಸತತವಾಗಿ ಕಳೆದ 13 ದಿನಗಳಿಂದ ಜಾತ್ರೆ ಯಶಸ್ವಿಗಾಗಿ ಶ್ರಮಿಸಿದವರಿಗೆ ಶಾಸಕ ರಾಜಶೇಖರ ಪಾಟೀಲ ಅಭಿನಂದನೆ ಸಲ್ಲಿಸಿದ್ದಾರೆ. ಮಂಗಳವಾರ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ವೀರಭದ್ರೇಶ್ವರ ಜಾತ್ರೆಗೆ ಅನೇಕ ಭಕ್ತರು ಆಗಮಿಸಿ ದೇವರ ದರ್ಶನ ಪಡೆದುಕೊಂಡಿದ್ದಾರೆ. ಜಾತ್ರೆಗೆ ಹರಿದು ಬರುವ ಲಕ್ಷಾಂತರ ಜನರಿಗೆ ವಿವಿಧ ಮೂಲ ಸೌಕರ್ಯ ಒದಗಿಸಿ, ಪಟ್ಟಣ ಸ್ವಚ್ಛತೆ ಕಾಪಾಡಿದ ಸ್ಥಳಿಯ ಪುರಸಭೆಯ ಅಧಿಕಾರಿಗಳು, ಕಾರ್ಮಿಕರು, ಕಂದಾಯ ಇಲಾಖೆ, ಆರೋಗ್ಯ ಇಲಾಖೆ, ಹಾಗೂ ಸ್ಥಳಿಯ ವಿವಿಧ ಸಂಘ, ಸಂಸ್ಥೆಗಳ ಪ್ರತಿನಿ ಧಿಗಳು, ಸಿಬ್ಬಂದಿ, ಪಟ್ಟಣದ ಸ್ವಯಂ ಸೇವಕರು ಉತ್ತಮ ಕಾರ್ಯ ನಿರ್ವಹಿಸಿದ್ದಾರೆ ಎಂದು ಪ್ರಶಂಸೆ ವ್ಯಕ್ತಪಡಿಸಿದರು.

ಜಾತ್ರೆಯಲ್ಲಿ ಯಾವುದೇ ರೀತಿಯ ಅಹಿತಕರ ಘಟನೆಗಳು ಸಂಬಂಧಿಸದಂತೆ ನೋಡಿಕೊಳ್ಳಲು ಹಾಗೂ ರಸ್ತೆಗಳಲ್ಲಿ ಯಾವುದೇ ಸಂಚಾರ ಸಮಸ್ಯೆ ಉಂಟಾಗದಂತೆ ಪೊಲೀಸ್‌ ಅಧಿ ಕಾರಿಗಳು ಹಾಗೂ ಸಿಬ್ಬಂದಿ ಉತ್ತಮ ಬಂದೋಬಸ್ತ್ ಮಾಡಿದ್ದಾರೆ. ವಿವಿಧ ಇಲಾಖೆಗಳ ಅ ಧಿಕಾರಿಗಳು ಹಾಗೂ ಸಿಬ್ಬಂದಿ ಜಾತ್ರೆಯಲ್ಲಿ ಸತತ ಶ್ರಮಿಸಿ ಯಾವುದೇ ಸಮಸ್ಯೆ ಆಗದಂತೆ ನೋಡಿಕೊಂಡಿದು ಅವರಿಗೆಲ್ಲ ಅಭಿನಂದನೆ ಸಲ್ಲಿಸುತ್ತೇನೆ ಎಂದರು.

ಟಾಪ್ ನ್ಯೂಸ್

Kamal Hasan Against on Modi

ತಮಿಳರ ಮತಗಳು ಮಾರಾಟಕ್ಕಿಲ್ಲ : ಕಮಲ್ ಹಾಸನ್

ಕೇರಳದಲ್ಲಿ ಬಿಜೆಪಿಯ ಸಿಎಂ ಅಭ್ಯರ್ಥಿಯಾಗಿ ‘ಮೆಟ್ರೋ ಮ್ಯಾನ್’

ಹೇಗಿದ್ದೆ ಹೇಗಾದೆ : ಈ ತಾತ ಶ್ರೀಮಂತ ಭಿಕ್ಷುಕ..!

ಶಾಸಕ ಸಂಗಮೇಶ್ ಸದನ ಪ್ರವೇಶಕ್ಕೆ ಮಾರ್ಷಲ್ ಗಳ ತಡೆ: ಸಿದ್ದರಾಮಯ್ಯ ತರಾಟೆ!

ಅಕ್ರಮವಾಗಿ ಸಾಗಿಸುತ್ತಿದ್ದ ಜಿಲೆಟಿನ್ ಕಡ್ಡಿಗಳು, ಜಿಟೋನೇಟರ್ ಪೊಲೀಸ್ ವಶಕ್ಕೆ

ಅಕ್ರಮವಾಗಿ ಸಾಗಿಸುತ್ತಿದ್ದ ಜಿಲೆಟಿನ್ ಕಡ್ಡಿಗಳು, ಡಿಟೋನೇಟರ್ ಪೊಲೀಸ್ ವಶಕ್ಕೆ

ಒಂದು ದೇಶ ಒಂದು ಚುನಾವಣೆ ಚರ್ಚೆಗೆ ಕಾಂಗ್ರೆಸ್ ವಿರೋಧ: ಪರಿಷತ್ ಬಾವಿಗಿಳಿದು ಪ್ರತಿಭಟನೆ

ಒಂದು ದೇಶ ಒಂದು ಚುನಾವಣೆ ಚರ್ಚೆಗೆ ಕಾಂಗ್ರೆಸ್ ವಿರೋಧ: ಪರಿಷತ್ ಬಾವಿಗಿಳಿದು ಪ್ರತಿಭಟನೆ

ಸುಸ್ಥಿರ ಮತ್ತು ಗುಣಮಟ್ಟದ ಜೀವನ ನಡೆಸಲು ಬೆಂಗಳೂರೇ ಬೆಸ್ಟ್‌ !

ಸುಸ್ಥಿರ ಮತ್ತು ಗುಣಮಟ್ಟದ ಜೀವನ ನಡೆಸಲು ಬೆಂಗಳೂರೇ ಬೆಸ್ಟ್‌ !ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು

ಕೋವಿಡ್‌ ಲಸಿಕೆ ಸಂಪೂರ್ಣ ಸುರಕ್ಷಿತ

ಕೋವಿಡ್‌ ಲಸಿಕೆ ಸಂಪೂರ್ಣ ಸುರಕ್ಷಿತ

ಸಿದ್ಧಿವಿನಾಯಕನ ದರ್ಶನಕ್ಕೆ ಪಾದಯಾತ್ರೆ

ಸಿದ್ಧಿವಿನಾಯಕನ ದರ್ಶನಕ್ಕೆ ಪಾದಯಾತ್ರೆ

ನ್ಯಾಯವಾದಿ ಹಂತಕನಿಗೆ ಗಲ್ಲು ಶಿಕ್ಷೆ ವಿಧಿಸಿ

ನ್ಯಾಯವಾದಿ ಹಂತಕನಿಗೆ ಗಲ್ಲು ಶಿಕ್ಷೆ ವಿಧಿಸಿ

Bidar-New

ಬೀದರ: ಪ್ರತಿಯೊಬ್ಬರು ಕೋವಿಡ್‌ ಲಸಿಕೆ ಪಡೆಯಿರಿ

ಯುಜಿಡಿ ಕಾಮಗಾರಿ ತನಿಖೆ ನಡೆಯುತ್ತಾ

ಯುಜಿಡಿ ಕಾಮಗಾರಿ ತನಿಖೆ ನಡೆಯುತ್ತಾ?

MUST WATCH

udayavani youtube

ಇಂದಿನ ಸುದ್ದಿ ಸಮಾಚಾರ | Udayavani 04-March-2021 News Bulletin | Udayavani

udayavani youtube

ಪುತ್ತೂರು: ಜೆಸಿಬಿಯಲ್ಲಿ ಗುಂಡಿ ಅಗೆಯುವ ವೇಳೆ ಮಣ್ಣಿನಡಿ ಸಿಲುಕಿದ ಕಾರ್ಮಿಕರು!

udayavani youtube

ಗದ್ದೆಗೆ ಉಪ್ಪುನೀರು ಹರಿದು ಬಂದು ಬೆಳೆಗಳು ನಾಶ! |Udayavani

udayavani youtube

ನಾಗರಹೊಳೆ ಹುಲಿ ಸಂರಕ್ಷಿತ ಅರಣ್ಯದಲ್ಲಿ ಬೆಂಕಿ

udayavani youtube

ಬಿಗಿಯಾದ ಬಟ್ಟೆ ಧರಿಸಿದರೆ ಆಗುವ ಆರೋಗ್ಯ ಸಮಸ್ಯೆ ಏನು?

ಹೊಸ ಸೇರ್ಪಡೆ

farmers protest

ರೈತರ ಬೇಡಿಕೆಗಾಗಿ ಬೀದಿಗಿಳಿದ ರೈತರು  

Protest agaisnt Ramesh Jarakiholi

ರಮೇಶ ಜಾರಕಿಹೊಳಿ ವಿರುದ್ಧ ಕಾನೂನು ಕ್ರಮಕ್ಕೆ ಒತ್ತಾಯ

Kamal Hasan Against on Modi

ತಮಿಳರ ಮತಗಳು ಮಾರಾಟಕ್ಕಿಲ್ಲ : ಕಮಲ್ ಹಾಸನ್

MLA Aravind bellad visit IIIT

ಐಐಐಟಿ ನೂತನ ಕಟ್ಟಡ 2 ತಿಂಗಳಲ್ಲಿ ಪೂರ್ಣ: ಬೆಲ್ಲದ

BRTS

ಬಿಆರ್‌ಟಿಎಸ್‌ ರಸ್ತೆ ಫ‌ುಟ್‌ಪಾತ್‌ ಒತ್ತುವರಿ ತೆರವು

Thanks for visiting Udayavani

You seem to have an Ad Blocker on.
To continue reading, please turn it off or whitelist Udayavani.