ಮೌಲ್ಯ ಅಳವಡಿಸಿಕೊಂಡರೆ ಜಯಂತಿ ಸಾರ್ಥಕ

Team Udayavani, Aug 15, 2017, 12:37 PM IST

ಬಸವಕಲ್ಯಾಣ: ಮಹಾತ್ಮರು ಸಾರಿದ ಆದರ್ಶ ಮೌಲ್ಯಗಳನ್ನು ಬದುಕಿನಲ್ಲಿ ಅಳವಡಿಸಿಕೊಂಡಾಗ ಜಯಂತಿ ಆಚರಣೆ ಸಾರ್ಥಕವಾಗುತ್ತದೆ ಎಂದು ಶಾಸಕ ಮಲ್ಲಿಕಾರ್ಜುನ ಖೂಬಾ ಹೇಳಿದರು. ನಗರದ ಸರ್ಕಾರಿ ಸಮುದಾಯ ಭವನದಲ್ಲಿ ತಾಲೂಕು ಆಡಳಿತದಿಂದ ಆಯೋಜಿಸಿದ್ದ ಶ್ರೀಕೃಷ್ಣ ಜಯಂತಿ ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿ ಮಾತನಾಡಿದ ಅವರು, ಯಾಧವ ಸಮಾಜದ ಜನರು ಹೆಚ್ಚಿ ಸಂಖ್ಯೆಯಲ್ಲಿ ವಾಸಿಸುವ ತಾಲೂಕಿನ ಮುಡಬಿ ವಾಡಿಯನ್ನು ಕಂದಾಯ ಗ್ರಾಮವನ್ನಾಗಿ ಸರ್ಕಾರ ಘೋಷಿಸಿದೆ. ಇನ್ನು ಮುಂದೆ ಈ ವಾಡಿಯನ್ನು ಕೃಷ್ಣ ನಗರವೆಂದು ಕರೆಯಬೇಕು ಎಂದರು. ಒಂದೆರಡು ಗಂಟೆಯಲ್ಲಿ ಜಯಂತಿ ಕಾರ್ಯಕ್ರಮ ಮುಗಿಸುವ ಬದಲಿಗೆ ವರ್ಷದಲ್ಲಿ ಒಂದು ಸಲ ಮೂರು ದಿನಗಳ ವರೆಗೆ ತಾಲೂಕು ಮಟ್ಟಗಳಲ್ಲಿ ನಿರಂತರ ಕಾರ್ಯಕ್ರಮಗಳನ್ನು ಆಯೋಜಿಸಿ ಎಲ್ಲ ಮಹಾತ್ಮರ ಸಂದೇಶಗಳನ್ನು ಮಕ್ಕಳಿಗೆ ಪರಿಣಾಮಕಾರಿಯಾಗಿ ತಿಳಿಸಿಕೊಡುವ ಕಾರ್ಯಕ್ರಮ ನಡೆಯಬೇಕು. ಈ ಸಂಬಂಧ ಸರ್ಕಾರಕ್ಕೆ ಪ್ರಸ್ತಾವನೆ ಕಳಿಸಲಾಗುವುದು ಎಂದು ಹೇಳಿದರು. ಕಾರ್ಯಕ್ರಮ ಉದ್ಘಾಟಿಸಿದ ಸಹಾಯಕ ಆಯುಕ್ತ ಶರಣಬಸಪ್ಪ
ಕೊಟಪ್ಪಗೋಳ ಮಾತನಾಡಿ, ಶ್ರೀಕೃಷ್ಣನ ಜೀವನ ಮನುಕುಲಕ್ಕೆ ಬೇಕಾದ ಮೌಲ್ಯಯುತ, ಸ್ಫೂರ್ತಿದಾಯಕ ಸಂದೇಶವಾಗಿದೆ.
ಭಗವದ್ಗೀತೆ ಮನುಕುಲಕ್ಕೆ ನೀಡಿದ ಧರ್ಮ ಗ್ರಂಥವಾಗಿದೆ. ಭಕ್ತಿ, ಕರ್ಮ, ಯೋಗ ಮಾರ್ಗದಿಂದ ದೇವರನ್ನು ಕಾಣುವ ಸಂದೇಶ ಇದರಲ್ಲಿದೆ. ಶ್ರೀ ಕೃಷ್ಣನ ಮೌಲ್ಯಗಳನ್ನು ಬದುಕಿನಲ್ಲಿ ಅಳವಡಿಸಿಕೊಳ್ಳಲು ಪ್ರಯತ್ನಿಸಬೇಕು. ವಿದ್ಯಾರ್ಥಿಗಳು ಇತಿಹಾಸವನ್ನು
ಅರಿತು ಇದರಿಂದ ಸ್ಫೂರ್ತಿ ಪಡೆಯಬೇಕು ಎಂದು ಹೇಳಿದರು. ನೀಲಾಂಬಿಕಾ ಕಾಲೇಜು ಉಪನ್ಯಾಸಕ ಅಮೃತರೆಡ್ಡಿ ವಿಶೇಷ
ಉಪನ್ಯಾಸ ನೀಡಿದರು. ನಗರಸಭೆ ಅಧ್ಯಕ್ಷ ಮೀರ ಅಜರಅಲಿ ನವರಂಗ, ತಾಪಂ ಅಧ್ಯಕ್ಷೆ ಯಶೋಧಾ ನೀಲಕಂಠ ರಾಠೊಡ, ಜಿಪಂ ಸದಸ್ಯೆ ಅಮ್ರಪಾಲಿ ವೀರಣ್ಣ, ತಹಶೀಲ್ದಾರ ಕೀರ್ತಿ, ನಗರಸಭೆ ಪೌರಾಯುಕ್ತ ಮಹ್ಮದ ಯೂಸೂಫ ಉಪಸ್ಥಿತರಿದ್ದರು. ಡಾ| ರವೀಂದ್ರನಾಥ ನಿರೂಪಿಸಿದರು.

Disclaimer:The views expressed in comments section published on Udayavani.com are those of comment writers alone. They do not represent the views or opinions of Udayavani.com, its staff or The Manipal Group, or any entity associated with The Manipal Group. Udayavani.com reserves rights to remove a comment or all the comments any time.

To report any comment you can email us at udayavani.response@manipalgroup.info. We will review the request and delete the comments.


ಈ ವಿಭಾಗದಿಂದ ಇನ್ನಷ್ಟು

  • ಹುಮನಾಬಾದ: ಪಟ್ಟಣದ ಕರ್ನಾಟಕ ರಾಜ್ಯ ಸರ್ಕಾರಿ ನೌಕರರ ಸಂಘದ ಸಮುದಾಯ ಭವನದ ಬಾಕಿ ಕೆಲಸವನ್ನು ಪೂರ್ಣಗೊಳಿಸಲು ಸರ್ಕಾರದಿಂದ ರೂ.25 ಲಕ್ಷ ಅನುದಾನ ಕೊಡಿಸುವುದಾಗಿ...

  • ಭಾಲ್ಕಿ: ಇತ್ತೀಚೆಗೆ ಎಲ್ಲ ಭಾಗದಲ್ಲಿ ರಕ್ತದ ಅಭಾವ ಕಂಡು ಬರುತ್ತಿದೆ. ಬೇಡಿಕೆಗನುಗುಣವಾಗಿ ರಕ್ತ ಪೂರೈಕೆಯಾಗಬೇಕಾದರೆ ನವಯುವಕರು ರಕ್ತದಾನ ಮಾಡಲು ಉತ್ಸಾಹ ತೋರಬೇಕು...

  • ಬೀದರ: ಸಮಗ್ರ ಮತದಾರ ಪಟ್ಟಿಯ ವಿಶೇಷ ಪರಿಷ್ಕರಣೆ-2020ರ ಕುರಿತು ಬೆಂಗಳೂರು ಚುನಾವನಾಧಿಕಾರಿಗಳ ನಿರ್ದೇಶನದಂತೆ ಜಿಲ್ಲೆಯಲ್ಲಿ ಈ ವರೆಗೆ 2,06,036 ಮತದಾರರನ್ನು ಪರಿಶೀಲಿಸಲಾಗಿದೆ...

  • ಬೀದರ: 387.79 ಲಕ್ಷ ರೂ. ಕಾರ್ಯಾದೇಶದೊಂದಿಗೆ ನಡೆದ ಜಿಲ್ಲಾ ಕ್ರೀಡಾಂಗಣ ಕಾಮಗಾರಿ ಕಾರ್ಯ ತೃಪ್ತಿಕರವಾಗಿಲ್ಲ. ಟ್ರ್ಯಾಕ್‌ ಸರಿಯಾಗಿ ನಿರ್ಮಾಣವಾಗಿಲ್ಲ. ಈ ಬಗ್ಗೆ...

  •  „ಶಶಿಕಾಂತ ಕೆ.ಭಗೋಜಿ ಹುಮನಾಬಾದ: ಪಟ್ಟಣದಲ್ಲಿ ಅಂಗವಿಕಲರ ಸರ್ವಾಂಗೀಣ ಅಭಿವೃದ್ಧಿ ಉದ್ದೇಶದಿಂದ ಲಕ್ಷಾಂತರ ರೂ. ವೆಚ್ಚದಲ್ಲಿ ನಿರ್ಮಿಸಲಾದ ಅಂಗವಿಕಲರ ಸಹಾಯವಾಣಿ...

ಹೊಸ ಸೇರ್ಪಡೆ