ಯೋಜನೆಗಳ ಅನುಷ್ಠಾನಕ್ಕೆ ಗಮನ ಹರಿಸಲು ಸೂಚನೆ

ಜನತೆಗೆ ಆರೋಗ್ಯ ಕಾರ್ಡ್‌ನ ಮಹತ್ವ ತಿಳಿಸಬೇಕು.

Team Udayavani, Mar 9, 2021, 6:57 PM IST

ಯೋಜನೆಗಳ ಅನುಷ್ಠಾನಕ್ಕೆ ಗಮನ ಹರಿಸಲು ಸೂಚನೆ

ಬೀದರ: ನಗರದ ಡಿಸಿ ಕಚೇರಿಯ ವಿಡಿಯೋ ಸಭಾಂಗಣದಲ್ಲಿ ಜಿಲ್ಲಾಧಿಕಾರಿ ರಾಮಚಂದ್ರನ್‌ ಆರ್‌. ವಿವಿಧ ತಾಲೂಕುಗಳ ತಹಶೀಲ್ದಾರರು, ಕಂದಾಯ ಇಲಾಖೆಯ ಇತರ ಅಧಿಕಾರಿಗಳೊಂದಿಗೆ ವಿಡಿಯೋ ಸಂವಾದ ನಡೆಸಿ ಹಲವಾರು ವಿಷಯ ಚರ್ಚಿಸಿದರು.

ಸಹಾಯಕ ಆಯುಕ್ತರಾದ ಗರೀಮಾ ಪನ್ವಾರ, ಭುವನೇಶ ಪಟೇಲ್‌ ಸಮ್ಮುಖದಲ್ಲಿ ಜಿಲ್ಲಾಧಿಕಾರಿಗಳು, ಯೋಜನೆಗಳ ಅನುಷ್ಠಾನದಲ್ಲಿ ಇನ್ನೂ ಆಗಬೇಕಾದ ಪ್ರಗತಿ ಕುರಿತು ತಹಶೀಲ್ದಾರರಿಗೆ ಮನವರಿಕೆ ಮಾಡಿ, ಸಭೆಯಲ್ಲಿ ನಿರ್ದೇಶಿಸಿದಂತೆ ಕಾರ್ಯಪವೃತ್ತರಾಗಲು ಸೂಚಿಸಿದರು. ಕುಡಿವ ನೀರು ಸರಬರಾಜು, ಆಯುಷ್ಮಾನ್‌ ಭಾರತ ಆರೋಗ್ಯ ಕರ್ನಾಟಕ, ಯುಡಿಐಟಿ ಕಾರ್ಡ್ ಗಳ ವಿತರಣೆ, ಸ್ಮಶಾನ ಭೂಮಿ ಗುರುತಿಸುವಿಕೆ ಸೇರಿದಂತೆ ಹತ್ತಾರು ಯೋಜನೆಗಳ ಅನುಷ್ಠಾನದ ವಾಸ್ತವ ಸ್ಥಿತಿಗತಿ ಬಗ್ಗೆ ಚರ್ಚಿಸಿದರು. ಕೆಲವು ಕಾರ್ಯಕ್ರಮಗಳ ಅನುಷ್ಠಾನಕ್ಕೆ ಕಾಲಮಿತಿ ನಿಗದಿಪಡಿಸಿದರು.

ಜಿಲ್ಲೆಯಲ್ಲಿ 634 ರೆವಿನ್ಯೂ ಹಳ್ಳಿಗಳ ಪೈಕಿ 590 ಹಳ್ಳಿಗಳಲ್ಲಿ ಸ್ಮಶಾನಭೂಮಿ ಇದೆ. 29 ಹಳ್ಳಿಗಳಲ್ಲಿ ಸ್ಮಶಾನ ಭೂಮಿ ಬೇಕು ಎಂದು ಔರಾದ ತಾಲೂಕಿನಿಂದ ಬೇಡಿಕೆ ಬಂದಿದೆ. ಪ್ರತಿಯೊಂದು ಹಳ್ಳಿಗೂ ಸ್ಮಶಾನ ಭೂಮಿ ಒದಗಿಸುವುದು ಕಂದಾಯ ಇಲಾಖೆ ಮಹತ್ವದ ಕೆಲಸ. ಯಾವ ಯಾವ ಕಡೆಗಳಲ್ಲಿ ಸ್ಮಶಾನಭೂಮಿ ಬೇಕಿದೆ ಎಂಬುದರ ಬಗ್ಗೆ ಕೂಡಲೇ ಪ್ರಸ್ತಾವನೆ ಸಿದ್ಧಪಡಿಸಿ ಸಲ್ಲಿಸುವುದನ್ನು ಆದ್ಯತೆ ಮೇರೆಗೆ ಮಾಡಬೇಕು.ಈಗಿರುವ ಸ್ಮಶಾನ ಭೂಮಿನಲ್ಲಿ ಮೂಲಕ ಸೌಕರ್ಯ ಕಲ್ಪಿಸಲು ಒತ್ತು ಕೊಡಬೇಕು ಎಂದು ಡಿಸಿ ತಹಶೀಲ್ದಾರರಿಗೆ ಸೂಚಿಸಿದರು.

ಜಿಲ್ಲೆಯ ಬಹಳಷ್ಟು ಅಂಗನವಾಡಿಗಳಲ್ಲಿ ಕಾಲ ಕಾಲಕ್ಕೆ ನೇಮಕಾತಿ ನಡೆಯುವುದು ಬಾಕಿ ಇದ್ದು, ಹೀಗಾದರೆ ಅಲ್ಲಿನ ಮಕ್ಕಳಿಗೆ ಪೌಷ್ಟಿಕ ಆಹಾರ ಸಿಗಲು ಸಾಧ್ಯವೆ? ಎಂದು ತಹಶೀಲ್ದಾರರಿಗೆ ಪ್ರಶ್ನಿಸಿದ ಡಿಸಿ, ಅಂಗನವಾಡಿ ಬಲಪಡಿಸುವ ನಿಟ್ಟಿನಲ್ಲಿ ಅಂಗನವಾಡಿಗಳಿಗೆ ಆಗಾಗ ಭೇಟಿ ನೀಡಿ ಅಲ್ಲಿನ ಮಕ್ಕಳಿಗೆ ಪೌಷ್ಟಿಕ ಆಹಾರ, ಮೊಟ್ಟೆ, ಮೊಳಕೆ ಕಾಳುಗಳ ವಿತರಣೆ ಪರಿಶೀಲಿಸಬೇಕು ಎಂದು ಸೂಚಿಸಿದರು.

ಆಯುಷ್ಮಾನ್‌ ಭಾರತ ಆರೋಗ್ಯ ಕಾರ್ಡ್‌ ಮತ್ತು 2017ರಿಂದಲೇ ಜಾರಿ ಬಂದಿರುವ ಯುಡಿಐಡಿ ಕಾರ್ಡ್‌ಗಳ ವಿತರಣೆ ಕಾರ್ಯ ಚುರುಕುಗೊಳಿಸಿ ನಿಗದಿಪಡಿಸಿದ ಗುರಿ ತಲುಪು ವಂತಾಗಬೇಕು. ಜನತೆಗೆ ಆರೋಗ್ಯ ಕಾರ್ಡ್‌ನ ಮಹತ್ವ ತಿಳಿಸಬೇಕು. ತಾಲೂಕು ಬೋರ್ಡ್‌ಗೆ ಕರೆದು ವಿಕಲಚೇತನರಿಗೆ ಯುಡಿಐಡಿ ಕಾರ್ಡ್‌ ವಿತರಣೆ ಕಾರ್ಯ ನಡೆಸಬೇಕು. ಜಿಲ್ಲೆಯಲ್ಲಿರುವ ಪಿಡಬ್ಲುಡಿ ಓಟರ್ಗಳನ್ನು ಗುರುತಿಸಿ ಅವರಿಗೂ ಯುಡಿಐಡಿ ಕಾರ್ಡ್‌ ನೀಡುವ ಬಗ್ಗೆ ಗಮನ ಹರಿಸಬೇಕು ಎಂದು ತಿಳಿಸಿದರು.

ಕೆರೆ-ಬಾವಿ ಸಂರಕ್ಷಿಸಿ: ಹಲವಾರು ಕಡೆಗಳಲ್ಲಿ ಬಾಕಿ ಇರುವ ಆಧಾರ್‌ ಜೋಡಣೆ ಕಾರ್ಯ ಜಿಲ್ಲಾದ್ಯಂತ ಅಚ್ಚುಕಟ್ಟಾಗಿ ನಡೆಯಬೇಕು. ಜಿಲ್ಲೆಯ ಆಯಾ ಕಡೆ ನಾಡ ಕಚೇರಿಗಳ ನಿರ್ಮಾಣ ಕಾರ್ಯವೂ ಕಾಲಮಿತಿಯೊಳಗೆ ನಡೆಯಬೇಕು. ಅಂತರ್ಜಲ ಮೂಲವಾದ ಕೆರೆ, ಬಾವಿಗಳ ಸಂರಕ್ಷಣೆಗೆ ಜಿಲ್ಲಾಡಳಿತವು ಒತ್ತು ನೀಡಿದೆ. ಪ್ರತಿ ಬುಧವಾರ ಕೆರೆ ಸಂರಕ್ಷಣೆ ಸಭೆ ನಡೆಸಿ ಅಲ್ಲಿ ಹೇಳಿದಂತೆ ಗ್ರಾಮೀಣ ಮತ್ತು ನಗರ ಪ್ರದೇಶಗಳಲ್ಲಿರುವ ಕೆರೆಗಳ ಸಂರಕ್ಷಣೆ ಮತ್ತು ಒತ್ತುವರಿ ತಡೆ ಕಾರ್ಯಕ್ಕೂ ತಾವುಗಳು ಗಮನ ಹರಿಸಬೇಕು ಎಂದು ತಹಶೀಲ್ದಾರರಿಗೆ ಸೂಚಿಸಿದರು.

ಸರ್ಕಾರವು ಮ್ಯಾನ್ಯುವಲ್‌ ಸ್ಕಾವೆಂಜಿಂಗ್‌ ಪದ್ಧತಿ ನಿಷೇಧಿ ಸಿದೆ. ಯುಜಿಡಿ ಮ್ಯಾನ್‌ ಹೋಲ್‌ ಮತ್ತು ಸೆಪ್ಟಿಕ್‌ ಟ್ಯಾಂಕ್‌ಗಳನ್ನು ಕೆಲಸಗಾರರಿಂದ ಸ್ವತ್ಛಗೊಳಿಸುವುದು ಅಪರಾಧ. ಹೀಗಾಗಿ ಜಿಲ್ಲೆಯ ಯಾವ ಯಾವ ಕಡೆಗಳಲ್ಲಿ ಮ್ಯಾನ್ಯುವಲ್‌ ಸ್ಕಾವೆಂಜಿಂಗ್ಸ್‌ ಇದ್ದಾರೆ ಎಂಬುದನ್ನು ಗುರುತಿಸುವ ಕಾರ್ಯ ಆದ್ಯತೆ ಮೇರೆಗೆ ಮಾಡಬೇಕು. ಯುಜಿಡಿ ಮ್ಯಾನ್‌ ಹೋಲ್‌ ಮತ್ತು ಸೆಪ್ಟಿಕ್‌ ಟ್ಯಾಂಕ್‌ ಸ್ವತ್ಛಗೊಳಿಸಲು ಅನುಕೂಲವಾಗುವಂತೆ ವಿಳಂಬ ಮಾಡದೇ ಜಟ್ಟಿಂಗ್‌ ಯಂತ್ರಗಳ ಖರೀದಿಗೆ ಒತ್ತು ಕೊಡಬೇಕು. ಕಚೇರಿಗೆ ಇನ್ನಾವುದೇ ಯಂತ್ರಗಳ ಖರೀದಿ ಅವಶ್ಯವಿದ್ದರೆ ಮಾಡಬೇಕು.
ರಾಮಚಂದ್ರನ್‌ ಆರ್‌, ಜಿಲ್ಲಾಧಿಕಾರಿ

ಟಾಪ್ ನ್ಯೂಸ್

ಜ.26ರಂದು 2ನೇ ಹಂತದ ಚುನಾವಣೆ;ರಾಹುಲ್‌, ತರೂರ್‌, ಹೇಮಾ ಮಾಲಿನಿ ಹಲವು ಘಟಾನುಘಟಿಗಳು ಕಣದಲ್ಲಿ

ಜ.26ರಂದು 2ನೇ ಹಂತದ ಚುನಾವಣೆ;ರಾಹುಲ್‌, ತರೂರ್‌, ಹೇಮಾ ಮಾಲಿನಿ ಹಲವು ಘಟಾನುಘಟಿಗಳು ಕಣದಲ್ಲಿ

18-aranthodu

Aranthodu: ಜೀಪ್-ಬೈಕ್ ಅಪಘಾತ; ಗಂಭೀರ ಗಾಯಗೊಂಡಿದ್ದ ಬೈಕ್ ಸವಾರ ಸಾವು

17-voting

Vote: ಮತದಾನದ ಮಹತ್ವ

Siddaramaiah

Haveri; ದೇಶ ಬಿಡುತ್ತೇನೆ ಎಂದಿದ್ದ ದೇವೇಗೌಡರು ಮೋದಿ ಜತೆ ಸೇರಿದ್ದಾರೆ: ಸಿದ್ದರಾಮಯ್ಯ

15-udupi

Lok Sabha Election-2024; ಕಾಪು ವಿಧಾನಸಭಾ ಕ್ಷೇತ್ರದಲ್ಲಿ ಅಂತಿಮ ಹಂತದ ಸಿದ್ಧತೆ ಪೂರ್ಣ

Delhi Police: ಮಾರುತಿ ಸ್ವಿಫ್ಟ್‌ ಕಾರಿನಲ್ಲಿ 30ಕ್ಕೂ ಅಧಿಕ ಕುರಿ, ಮೇಕೆ ಸಾಗಾಟ!

Delhi Police: ಮಾರುತಿ ಸ್ವಿಫ್ಟ್‌ ಕಾರಿನಲ್ಲಿ 30ಕ್ಕೂ ಅಧಿಕ ಕುರಿ, ಮೇಕೆ ಸಾಗಾಟ!

BJP 2025ರಲ್ಲಿ ಹಿಂದುಳಿದ ಸಮುದಾಯಗಳ ಮೀಸಲಾತಿ ತೆಗೆದು ಹಾಕಲಿದೆ: ರೇವಂತ್ ರೆಡ್ಡಿ

BJP 2025ರಲ್ಲಿ ಹಿಂದುಳಿದ ಸಮುದಾಯಗಳ ಮೀಸಲಾತಿ ತೆಗೆದು ಹಾಕಲಿದೆ: ರೇವಂತ್ ರೆಡ್ಡಿ


ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು

siddaramaiah

Bidar; ನೇಹಾ ಪ್ರಕರಣದಲ್ಲಿ ಬಿಜೆಪಿ ರಾಜಕೀಯ‌ ಮಾಡುವುದು ಸರಿಯಲ್ಲ: ಸಿಎಂ ಸಿದ್ಧರಾಮಯ್ಯ‌

Lok Sabha Election: ಸೀನಿಯರ್‌ ಖೂಬಾಗೆ ಜ್ಯೂನಿಯರ್‌ ಖಂಡ್ರೆ ಸವಾಲು

Lok Sabha Election: ಸೀನಿಯರ್‌ ಖೂಬಾಗೆ ಜ್ಯೂನಿಯರ್‌ ಖಂಡ್ರೆ ಸವಾಲು

16

ನೀತಿ ಸಂಹಿತೆ ನಡುವೆಯೂ ರಾಜ್ಯಕ್ಕೆ ನೆರವು ಎನ್ನುವ ಬಿಜೆಪಿಗೆ ನಾಚಿಕೆ ಇಲ್ಲವೇ? – ಖಂಡ್ರೆ

Minchu

Rain; ಬೀದರ್,ಕೊಪ್ಪಳದಲ್ಲಿ ಸಿಡಿಲಿನ ಆರ್ಭಟಕ್ಕೆ ಇಬ್ಬರು ಮೃತ್ಯು

Bidar; ಪ್ರೇಯಸಿ ಮದುವೆ ದಿನವೇ ಪ್ರಿಯಕರನ ಶವ ಪತ್ತೆ

Bidar; ಪ್ರೇಯಸಿ ಮದುವೆ ದಿನವೇ ಪ್ರಿಯಕರನ ಶವ ಪತ್ತೆ

MUST WATCH

udayavani youtube

ವೈಭವದ ಹಿರಿಯಡ್ಕ ಸಿರಿಜಾತ್ರೆ ಸಂಪನ್ನ

udayavani youtube

ಯಾವೆಲ್ಲಾ ಚರ್ಮದ ಕಾಯಿಲೆಗಳಿವೆ ಹಾಗೂ ಪರಿಹಾರಗಳೇನು?

udayavani youtube

Mangaluru ಹೆಬ್ಬಾವಿನ ದೇಹದಲ್ಲಿ ಬರೋಬ್ಬರಿ 11 ಬುಲೆಟ್‌ ಪತ್ತೆ!

udayavani youtube

ನನ್ನ ಕಥೆ ನಿಮ್ಮ ಜೊತೆ

udayavani youtube

‘ಕಸಿ’ ಕಟ್ಟುವ ಸುಲಭ ವಿಧಾನ

ಹೊಸ ಸೇರ್ಪಡೆ

ಜ.26ರಂದು 2ನೇ ಹಂತದ ಚುನಾವಣೆ;ರಾಹುಲ್‌, ತರೂರ್‌, ಹೇಮಾ ಮಾಲಿನಿ ಹಲವು ಘಟಾನುಘಟಿಗಳು ಕಣದಲ್ಲಿ

ಜ.26ರಂದು 2ನೇ ಹಂತದ ಚುನಾವಣೆ;ರಾಹುಲ್‌, ತರೂರ್‌, ಹೇಮಾ ಮಾಲಿನಿ ಹಲವು ಘಟಾನುಘಟಿಗಳು ಕಣದಲ್ಲಿ

18-aranthodu

Aranthodu: ಜೀಪ್-ಬೈಕ್ ಅಪಘಾತ; ಗಂಭೀರ ಗಾಯಗೊಂಡಿದ್ದ ಬೈಕ್ ಸವಾರ ಸಾವು

17-voting

Vote: ಮತದಾನದ ಮಹತ್ವ

Siddaramaiah

Haveri; ದೇಶ ಬಿಡುತ್ತೇನೆ ಎಂದಿದ್ದ ದೇವೇಗೌಡರು ಮೋದಿ ಜತೆ ಸೇರಿದ್ದಾರೆ: ಸಿದ್ದರಾಮಯ್ಯ

16-adu-jeevitham

Movie Review: ಆಡು ಜೀವಿದಂ

Thanks for visiting Udayavani

You seem to have an Ad Blocker on.
To continue reading, please turn it off or whitelist Udayavani.