ಸೋಯಾ ಬಣವಿಗೆ ಬೆಂಕಿ: ರೈತ ಕಂಗಾಲು

Team Udayavani, Oct 8, 2020, 6:02 PM IST

ಸೋಯಾ ಬಣವಿಗೆ ಬೆಂಕಿ: ರೈತ ಕಂಗಾಲು

ಕಮಲನಗರ: ತಾಲೂಕಿನ ಕೋಟಗ್ಯಾಳ ಗ್ರಾಮದಲ್ಲಿ ಸೋಯಾಬಿನ್‌ ಬಣವಿಗೆ ಆಕಸ್ಮಿಕ ಬೆಂಕಿ ತಗುಲಿ ಸಾವಿರಾರು ರೂ. ಗಳ ಸೋಯಾ ಬೆಳೆ ನಷ್ಟವಾದ ಘಟನೆ ಮಂಗಳವಾರ ರಾತ್ರಿ ಜರುಗಿದೆ. ರೈತ ವಿಠ್ಠಲರಾವ್‌ ವೆಂಕಟರಾವ್‌ ಅವರು ತಮ್ಮ 3.24 ಎಕರೆ ಜಮೀನಿನಲ್ಲಿ ಸೋಯಾಬಿನ್‌ ಬೆಳೆ ಕಟಾವು ಮಾಡಿ ಬಣವಿ ಹಾಕಿದ್ದರು. ರಾತ್ರಿ ಆಕಸ್ಮಿಕ ಬೆಂಕಿ ತಗುಲಿ ಸುಮಾರು 80 ಸಾವಿರ ಮೌಲ್ಯದ ಬೆಳೆ ಸುಟ್ಟು ಕರಕಲಾಗಿದೆ.

ಇತ್ತೀಚೆಗೆ ಸುರಿದ ಭಾರೀ ಮಳೆಗೆ ಸೋಯಾ ಬೆಳೆ ಹಾಳಾಗಿದ್ದು, ಅಲ್ಪ-ಸ್ವಲ್ಪ ಇರುವ ಸೋಯಾ ಬೆಳೆ ಕಟಾವು ಮಾಡಿ ಬಣವಿ ಹಾಕಿದ್ದೆ. ಸ್ವಲ್ಪ ಒಣಗಿಸಿ ರಾಶಿ ಮಾಡಿಕೊಳ್ಳೋಣ ಎನ್ನುವಷ್ಟರಲ್ಲಿ ಅದೂ ಕೂಡಾ ಕೈಗೆ ಬಾರದೆ ಬೆಂಕಿಗೆ ಸುಟ್ಟು ಹೋಗಿದೆ ಎಂದು ರೈತ ವಿಠ್ಠಲರಾವ್‌ ತಮ್ಮ ಅಳಲು ತೊಡಿಕೊಂಡಿದ್ದಾರೆ.

ಈ ಕುರಿತು ಕಮಲನಗರ ಪೊಲೀಸ್‌ ಠಾಣೆಯಲ್ಲಿ ರೈತ ವೆಂಕಟರಾವ್‌ ದೂರು ಸಲ್ಲಿಸಿದ್ದಾರೆ. ಎಎಸ್‌ಐ ಚಿದಾನಂದ ಹಿರೇಮಠ, ಎಚ್‌ಸಿ ಗುರುನಾಥ ಸ್ಥಳಕ್ಕೆ ಭೇಟಿ ನೀಡಿ ಪರಿಶೀಲನೆ ನಡೆಸಿದರು.

ಇದನ್ನೂ ಓದಿ :ಚಿತ್ರದುರ್ಗ ಜಿಲ್ಲೆಯಲ್ಲಿ 182 ಜನರಿಗೆ ಕೋವಿಡ್, ಸೋಂಕಿತರ ಸಂಖ್ಯೆ 8,292ಕ್ಕೆ ಏರಿಕೆ

ಅಗ್ನಿಶಾಮಕ ಠಾಣೆ ಆರಂಭಿಸಿ: ಕಮಲನಗರ ತಾಲೂಕಿನಲ್ಲಿ ಅಗ್ನಿ ಅವಘಡ ಸಂಭವಿಸಿದರೆ ತುರ್ತು ಪರಿಸ್ಥಿತಿಯಲ್ಲಿ ಔರಾದ ಮತ್ತು ಭಾಲ್ಕಿ ತಾಲೂಕು ಕೇಂದ್ರಗಳಿಂದ ವಾಹನಗಳನ್ನು ತರಿಸಿಕೊಳ್ಳಬೇಕಾಗುತ್ತದೆ. ಔರಾದ ಪಟ್ಟಣ ಸುಮಾರು 30 ಕಿ.ಮೀ. ಹಾಗೂ ಭಾಲ್ಕಿ ಸುಮಾರು 35 ಕಿ.ಮೀ. ಅಂತರದಲ್ಲಿರುವುದರಿಂದ ತುರ್ತು ಪರಿಸ್ಥಿತಿಯಲ್ಲಿ ವಾಹನಗಳು ತಲುಪಲು ಸಾಧ್ಯವಾಗುತ್ತಿಲ್ಲ. ಇದರಿಂದ ಆಕಸ್ಮಿಕ ಬೆಂಕಿ ತಗುಲಿ ಸುಟ್ಟು ಕರಕಲಾಗಿರುವ ಅನೇಕ ಘಟನೆಗಳು ಜರುಗಿವೆ.

ಸಂಬಂಧಿತ ಅಧಿಕಾರಿಗಳು ಶೀಘ್ರದಲ್ಲಿ ಕಮಲನಗರಕ್ಕೆ ಅಗ್ನಿಶಾಮಕ ಇಲಾಖೆ ಆರಂಭಿಸಬೇಕೆಂದು ಮುಖಂಡ ಶ್ರೀರಂಗ ಆಗ್ರಹಿಸಿದ್ದಾರೆ.

ಟಾಪ್ ನ್ಯೂಸ್

ಸಿರಿಯಾದಲ್ಲಿ ಏರ್ ಸ್ಟ್ರೈಕ್ ನಡೆಸಿದ ಅಮೆರಿಕ: ಹಿರಿಯ ಅಲ್ ಖೈದಾ ಉಗ್ರನ ಹತ್ಯೆ

ಸಿರಿಯಾದಲ್ಲಿ ಏರ್ ಸ್ಟ್ರೈಕ್ ನಡೆಸಿದ ಅಮೆರಿಕ: ಹಿರಿಯ ಅಲ್ ಖೈದಾ ಉಗ್ರನ ಹತ್ಯೆ

ಬುಮ್ರಾ ಮತ್ತು ಶಾಹಿನ್ ಅಫ್ರಿದಿ ನಡುವಿನ ಹೋಲಿಕೆ ಮೂರ್ಖತನ: ಆಮಿರ್

ಬುಮ್ರಾ ಮತ್ತು ಶಾಹಿನ್ ಅಫ್ರಿದಿ ನಡುವಿನ ಹೋಲಿಕೆ ಮೂರ್ಖತನ: ಆಮಿರ್

ಲಾಸರ್‍ದೊಡ್ಡಿಯಲ್ಲಿ ಸಿಡಿಲಿನ ಹೊಡೆತಕ್ಕೆ ಕುಸಿದ ಮನೆಯ ಗೋಡೆ: ತಪ್ಪಿದ ಭಾರೀ ಅನಾಹುತ

ಲಾಸರ್‍ದೊಡ್ಡಿಯಲ್ಲಿ ಸಿಡಿಲಿನ ಹೊಡೆತಕ್ಕೆ ಕುಸಿದ ಮನೆಯ ಗೋಡೆ: ತಪ್ಪಿದ ಭಾರೀ ಅನಾಹುತ

11 ಮಂದಿ ಚಾರಣಿಗರು ಸಾವು! 17,000 ಅಡಿ ಎತ್ತರದಲ್ಲಿ ವಾಯುಪಡೆ ಕಾರ್ಯಾಚರಣೆ

11 ಮಂದಿ ಚಾರಣಿಗರು ಸಾವು! 17,000 ಅಡಿ ಎತ್ತರದಲ್ಲಿ ವಾಯುಪಡೆ ಕಾರ್ಯಾಚರಣೆ

daily-horoscope

ಈ ರಾಶಿಯವರು ಇಂದು ಬಂಧುಮಿತ್ರರಲ್ಲಿ ವ್ಯವಹರಿಸುವಾಗ ದುಡುಕದಿರಿ. ತಾಳ್ಮೆಯಿಂದ ನಿರ್ಣಯ ನೀಡಿ.

ಟಿ-20 ವಿಶ್ವಕಪ್‌ ಕ್ರಿಕೆಟ್‌ ಯಾರು ಫೇವರಿಟ್‌ ?

ಟಿ-20 ವಿಶ್ವಕಪ್‌ ಕ್ರಿಕೆಟ್‌ ಯಾರು ಫೇವರಿಟ್‌ ?

300ರ ಬದಲು ಇರುವುದು 22 ಯಂತ್ರಗಳು !

300ರ ಬದಲು ಇರುವುದು 22 ಯಂತ್ರಗಳು !

ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು

4former

ದೂರದ ಕಾರ್ಖಾನೆಗೆ ಕಬ್ಬು ಸಾಗಾಟ; ಬೆಳೆಗಾರರ ಪರದಾಟ

3-college

ಈ ಶಾಲಾ ಮಕ್ಕಳಿಗೆ ಮರದ ಕೆಳಗೆ ನಿತ್ಯ ಬೋಧನೆ

19

ಡಿಎಪಿ ಸಿಗದೆ ಹಿಂಗಾರಲ್ಲಿ ಕಂಗಾಲಾದ ರೈತ!

—–18

ಗೊಂಡ ಸಮುದಾಯದಿಂದ ಸಿಎಂ ಬಳಿ ನಿಯೋಗ

eye-17

ನೇತ್ರ ಆರೋಗ್ಯ ಜಾಗೃತಿ ಮೂಡಿಸಿದ ಜಾಥಾ

MUST WATCH

udayavani youtube

ಆಟೋ ಚಾಲಕನ ನತದೃಷ್ಟ ಕಥೆಯಿದು

udayavani youtube

ನಮ್ಮ ದೇಶ ಕರ್ತವ್ಯ ಪಾಲಿಸಿದೆ : ಪ್ರಧಾನಿ ನರೇಂದ್ರ ಮೋದಿ

udayavani youtube

ಶೆಟ್ಟಿ ನೀನು ಹುಡುಗಿ ತರ ಮಾತಾಡ್ತೀಯ

udayavani youtube

POLYHOUSE ನಲ್ಲಿ ಸೌತೆಕಾಯಿ ತರಕಾರಿ ಕೃಷಿ; ಇಲ್ಲಿದೆ ಸಂಪೂರ್ಣ ಮಾಹಿತಿ…

udayavani youtube

ನೂರು ಕೋಟಿ ಡೋಸ್‌ ಲಸಿಕಾ ಗುರಿ ತಲುಪಿದ ಸಂಭ್ರಮ

ಹೊಸ ಸೇರ್ಪಡೆ

ತಂತ್ರಜ್ಞಾನ ಆಧಾರಿತ ಯುದ್ಧ ಎದುರಿಸಲು ಸಜ್ಜಾಗಿ

ತಂತ್ರಜ್ಞಾನ ಆಧಾರಿತ ಯುದ್ಧ ಎದುರಿಸಲು ಸಜ್ಜಾಗಿ

5politics

ಪ್ರಚಾರದ ಅಬ್ಬರ ಜೋರು: ಸಮಸ್ಯೆಗಳ ಚಿಂತನೆ ಚೂರು

ಶಂಕಿತ ಉಗ್ರ ಸದ್ದಾಂ ಹುಸೇನ್‌ ಪತ್ನಿ ಸೆರೆ

ಶಂಕಿತ ಉಗ್ರ ಸದ್ದಾಂ ಹುಸೇನ್‌ ಪತ್ನಿ ಸೆರೆ

ಸಿರಿಯಾದಲ್ಲಿ ಏರ್ ಸ್ಟ್ರೈಕ್ ನಡೆಸಿದ ಅಮೆರಿಕ: ಹಿರಿಯ ಅಲ್ ಖೈದಾ ಉಗ್ರನ ಹತ್ಯೆ

ಸಿರಿಯಾದಲ್ಲಿ ಏರ್ ಸ್ಟ್ರೈಕ್ ನಡೆಸಿದ ಅಮೆರಿಕ: ಹಿರಿಯ ಅಲ್ ಖೈದಾ ಉಗ್ರನ ಹತ್ಯೆ

4former

ದೂರದ ಕಾರ್ಖಾನೆಗೆ ಕಬ್ಬು ಸಾಗಾಟ; ಬೆಳೆಗಾರರ ಪರದಾಟ

Thanks for visiting Udayavani

You seem to have an Ad Blocker on.
To continue reading, please turn it off or whitelist Udayavani.