Udayavni Special

4 ವರ್ಷದ ಬಳಿ ಕಾರಂಜಾ ಭರ್ತಿ


Team Udayavani, Oct 16, 2020, 5:11 PM IST

rc-tdy-1

ಬೀದರ: ಗಡಿ ನಾಡು ಬೀದರ ರೈತರ ಜೀವನಾಡಿ ಆಗಿರುವ ಕಾರಂಜಾ ಜಲಾಶಯ ಮೈದುಂಬಿ ಹರಿಯುತ್ತಿದೆ. ಪ್ರಸಕ್ತ ವರ್ಷ ಜಲಾನಯನ ಪ್ರದೇಶದಲ್ಲಿ ಭಾರೀ ವರ್ಷಧಾರೆ ಪರಿಣಾಮ ನಾಲ್ಕು ವರ್ಷಗಳ ಬಳಿಕ ಕಾರಂಜಾ ಒಡಲು ಮತ್ತೂಮ್ಮೆ (7.45 ಟಿಎಂಸಿ) ಭರ್ತಿಯಾಗಿದೆ.

ಈ ಹಿಂದೆ 2016ರಲ್ಲಿ ಡ್ಯಾಮ್‌ ಗರಿಷ್ಠ ಮಟ್ಟ ತುಂಬಿತ್ತು. ಜಲಾಶಯವು 7.69 ಟಿಎಂಸಿ ಅಡಿ ನೀರು ಸಂಗ್ರಹ ಸಾಮರ್ಥ್ಯ ಹೊಂದಿದ್ದು, ಗುರುವಾರ ಮಧ್ಯಾಹ್ನದವರೆಗೆ 7.53 ಟಿಎಂಸಿ ನೀರು ಸಂಗ್ರಹ ವಾಗಿದೆ. ಜಲಾಶಯಕ್ಕೆ ಒಳಹರಿವು ಹೆಚ್ಚುತ್ತಲೇ ಇದೆ. ಬೆಳಗಿನ ಜಾವ ಡ್ಯಾಮ್‌ನ ಮೂರು ಗೇಟ್‌ಗಳನ್ನು ತೆರೆದು 9420.27 ಕ್ಯೂಸೆಕ್‌ ನೀರನ್ನು ಮಾಂಜ್ರಾ ನದಿಗೆ ಹರಿಬಿಡಲಾಗಿದೆ.ಸದ್ಯ ಒಳಹರಿವು (9420.27 ಕ್ಯೂಸೆಕ್‌) ಸಹ ಹೆಚ್ಚುತ್ತಲೇ ಇದ್ದು, ನದಿ ಪಾತ್ರದ ಜನರಲ್ಲಿ ಪ್ರವಾಹ ಪರಿಸ್ಥಿತಿ ಆತಂಕ ಹೆಚ್ಚುತ್ತಿದೆ. ಜೂ.1ರಂದು ಕೇವಲಅರ್ಧ ಟಿಎಂಸಿ ಅಡಿ ಮಾತ್ರ ನೀರು ಇತ್ತು. ನಾಲ್ಕೂವರೆ ತಿಂಗಳಲ್ಲಿ ಪೂರ್ಣ ತುಂಬಿದೆ. ಸೆ. 15ರಿಂದ ನಾಲ್ಕು ದಿನ ಉತ್ತಮ ಮಳೆ ಸುರಿದಿದ್ದರಿಂದ ಜಲಾಶಯಕ್ಕೆ 4 ಟಿಎಂಸಿ ಅಡಿ ನೀರು ಹರಿದು ಬಂದಿತ್ತು.

ಮಂಗಳವಾರ ಬೆಳಗ್ಗೆ 5 ಟಿಎಂಸಿ ಅಡಿ ನೀರಿನ ಪ್ರಮಾಣ ದಾಖಲಾಗಿತ್ತು. ಈಗ ಮತ್ತೆಮಳೆಯಾರ್ಭಟ ಹಿನ್ನೆಲೆ ಬುಧವಾರ ಸಂಜೆ ವೇಳೆಗೆ 6.2 ಟಿಎಂಸಿ ಅಡಿಗೆತಲುಪಿತ್ತು. ಗುರುವಾರ ಮಧ್ಯಾಹ್ನ ಶೇ. 97.90ರಷ್ಟು ಭರ್ತಿಯಾಗಿದೆ. ಭಾರೀ ಮಳೆ ಅವಾಂತರ ರೈತ ಸಮುದಾಯಕ್ಕೆಘಾಸಿಗೊಳಿಸಿದ್ದರೆ ಕಾರಂಜಾ ತುಂಬಿರುವುದು ಬರುವ ಬೇಸಿಗೆಯ ಜಲ ಸಮಸ್ಯೆಗೆ ಮುಕ್ತಿ ಒದಗಿಸಲಿದೆ ಎಂಬ ಸಮಾಧಾನ ತಂದಿದೆ.

ಹೈಸ್ಟೀಡ್‌ ಭ್ರಷ್ಟಾಚಾರ ಮತ್ತು ಯೋಜನೆಗಳ ನನೆಗುದಿತನದಿಂದಾಗಿ ಸದಾ ಚರ್ಚೆಗೆ ಒಳಪಡುವ ಕಾರಂಜಾ ಜಲಾಶಯದ ಒಡಲು ಕಳೆದ 50 ವರ್ಷಗಳಲ್ಲಿ ನಾಲ್ಕೈದು ಬಾರಿ ಮಾತ್ರ ತುಂಬಿದೆ. ಮಹತ್ವಾಕಾಂಕ್ಷಿ ಯೋಜನೆ ಆರಂಭವಾಗಿ ದಶಕಗಳು ಉರುಳಿದರೂ ಅಪೂರ್ಣ ಸ್ಥಿತಿಯಲ್ಲಿದ್ದು, ನೀರಿನಂತೆ  ಹಣ ಹರಿಯಿತೇ ಹೊರತು ಕೊನೆಯಂಚಿನ ರೈತರಿಗೆ ನೀರು ಮಾತ್ರ ಉಣಿಸಲು ಸಾಧ್ಯವಾಗಿರಲಿಲ್ಲ. ಜಲಾಶಯವು ಹೆಚ್ಚಿನ ಪ್ರಮಾಣದಲ್ಲಿ ಬೀದರ ಜಿಲ್ಲೆಯ ನಗರ, ಪಟ್ಟಣಗಳಕುಡಿವ ನೀರಿನ ದಾಹ ಇಂಗಿಸುವುದಕ್ಕೆಸೀಮಿತವಾಗಿತ್ತು. ಈಗ ಯೋಜನೆಗೆ ಕಾಯಕಲ್ಪ ಸಿಕ್ಕಿದೆ. ಮಾಂಜ್ರಾದ ಉಪ ನದಿಯಾದ ಕಾರಂಜಾ ಅಥವಾ ನಾರಂಜಾ ನದಿ ತೆಲಂಗಾಣಾದಲ್ಲಿ ಹುಟ್ಟಿ ಕರ್ನಾಟಕವನ್ನು ಪ್ರವೇಶಿಸುತ್ತದೆ. ಬೀದರ ಮತ್ತು ಹುಮನಾಬಾದತಾಲೂಕುಗಳ ನಡುವೆ ಹರಿಯುತ್ತ ಭಾಲ್ಕಿ ತಾಲೂಕು ಪ್ರವೇಶಿಸುವ ಮಾರ್ಗವಾದ ಹಾಲಹಳ್ಳಿಯ ಬಳಿಈ ಜಲಾಶಯ ನಿರ್ಮಿಸಲಾಗಿದೆ.

1960ರಲ್ಲಿ ಕೇವಲ 9 ಕೋಟಿ ರೂ. ಅಂದಾಜು ವೆಚ್ಚದಲ್ಲಿ ಆರಂಭವಾದ ಜಲಾಶಯದ ಕಾಮಗಾರಿಗೆ ಈವರೆಗೆ564 ಕೋಟಿ ರೂ. ವೆಚ್ಚವಾಗಿದೆ.ಕಾರಂಜಾ ಜಲಾನಯನದ ಒಟ್ಟು 782 ಚ.ಕಿ.ಮೀ. ಪ್ರದೇಶದ ಪೈಕಿ ತೆಲಂಗಾಣ 565 ಚ.ಕಿ.ಮೀ, ಬೀದರ ಜಿಲ್ಲೆ 217 ಚ.ಕಿ.ಮೀ. ವಿಸ್ತೀರ್ಣ ಹೊಂದಿದೆ. ಒಟ್ಟಾರೆ 7.69 ಟಿಎಂಸಿ ಅಡಿ ಸಾಮರ್ಥ್ಯದ ಜಲಾಶಯದಲ್ಲಿ 7 ಟಿಎಂಸಿ ಅಡಿ ನೀರನ್ನು ಹಿಡಿದಿಡಬಹುದು. ಒಳ ಹರಿವು ಹೆಚ್ಚಾದರೆ ಬೀದರ ಮತ್ತು ಹುಮನಾಬಾದ ತಾಲೂಕಿನ ಹತ್ತಾರು ಗ್ರಾಮಗಳಿಗೆ ಹಿನ್ನೀರು ನುಗ್ಗುವ ಆತಂಕ ಇದೆ.

ಜಲಾಶಯದಲ್ಲಿ ಕಳೆದ 1997-98, 2008-09, 2010-11ನೇ ಸಾಲಿನಲ್ಲಿ 6 ಟಿಎಂಸಿ ಅಡಿ ನೀರು ಸಂಗ್ರಹವಾಗಿತ್ತು. ನಂತರ 2016ರಲ್ಲಿಗರಿಷ್ಠ ಮಟ್ಟ ತಲುಪಿದ್ದರಿಂದ ನದಿಗೆ  ನೀರು ಬಿಡಲಾಗಿತ್ತು. ಈಗ ಮತ್ತೆ ಐದುವರ್ಷಗಳ ಬಳಿಕ ಮಳೆ ಅಬ್ಬರದಿಂದ ಈ ಯೋಗ ಕೂಡಿಬಂದಿದ್ದು, ಜಲಾಶಯಕ್ಕೆ ಕಳೆ ತಂದುಕೊಟ್ಟಿದೆ.

 

-ಶಶಿಕಾಂತ ಬಂಬುಳಗೆ

ಉದಯವಾಣಿ ಸುದ್ದಿ ಈಗ ಟೆಲಿಗ್ರಾಂನಲ್ಲೂ ಲಭ್ಯ; ಟೆಲಿಗ್ರಾಂ ಮೂಲಕ ನಮ್ಮ ಸುದ್ದಿಗಳ ಅಪ್ ಡೇಟ್ಸ್ ಪಡೆಯಲು ಇಲ್ಲಿ ಕ್ಲಿಕ್ ಮಾಡಿ.

Ad

ಶ್ರೀ ಅಷ್ಠ ಲಕ್ಷ್ಮೀ ಜೋತಿಷ್ಯ ಮಂದಿರ,
ಉದ್ಯೋಗ, ಮದುವೆ ವಿಳಂಬ, ಸತಿ-ಪತಿ ಕಲಹ, ಶತ್ರುಪೀಡೆ, ಅತ್ತೆ-ಸೊಸೆ ಕಲಹ, ವಶೀಕರಣ, ವ್ಯವಹಾರದಲ್ಲಿ ನಷ್ಟ, ನಿಮ್ಮ ಸಮಸ್ಯೆ ಯಾವುದೇ ಇರಲಿ, ಎಷ್ಟೇ ಕಠಿಣವಾಗಿರಲಿ ಶಾಶ್ವತ ಪರಿಹಾರ ಶತಃಸಿದ್ಧ. ನಿಮ್ಮ ಯಾವುದೇ ಇಷ್ಟಾರ್ಥ ಕಾರ್ಯಗಳಿದ್ದರೂ ಕೇವಲ ೫ ದಿನಗಳಲ್ಲಿ ನೆರವೇರಿಸಿ ಕೊಡುತ್ತಾರೆ. ಇಂದೇ ಭೇಟಿ ನೀಡಿ.
ಶ್ರೀ ಶ್ರೀ ಬಿ ಹೆಚ್ ಆಚಾರ್ಯ ಗುರೂಜಿ
ಜಯನಗರ ಬೆಂಗಳೂರು, ಮೋ- 8884889444

ಟಾಪ್ ನ್ಯೂಸ್

netflix

Stream Fest: ಇನ್ನು ಮುಂದೆ ಉಚಿತವಾಗಿ Netflix ವೀಕ್ಷಿಸಬಹುದು: ಹೇಗೆ ಗೊತ್ತಾ ?

00

ಆರ್ ಸಿಬಿ ಬೊಂಬಾಟ್ ಬೌಲಿಂಗ್ ಗೆ ಕೆಕೆಆರ್ ಬ್ಯಾಟಿಂಗ್ ತತ್ತರ : 85 ರ ಸವಾಲು

ghorka

ಪ್ರಮುಖ ಬೆಳವಣಿಗೆ: ಎನ್ ಡಿಎ ಮೈತ್ರಿಕೂಟದಿಂದ ಹೊರಬಂದ ಗೂರ್ಖಾ ಜನಮುಕ್ತಿ ಮೋರ್ಚಾ

mandya

ಮಂಡ್ಯದಲ್ಲಿ 202 ಕೋವಿಡ್ ಹೊಸ ಪ್ರಕರಣ; 104 ಮಂದಿ ಚೇತರಿಕೆ

cricket

ಜಯದ ವಿಶ್ವಾಸದಲ್ಲಿ RCB-KKR: ಟಾಸ್ ಗೆದ್ದ ಮಾರ್ಗನ್ ಪಡೆ ಬ್ಯಾಟಿಂಗ್ ಆಯ್ಕೆ: ತಂಡ ಇಂತಿದೆ…

ಕಿಡಿಗೇಡಿಗಳಿಂದ ಅವಹೇಳನಕಾರಿ ಫ್ಲೆಕ್ಸ್ : ಕ್ರಮಕ್ಕೆ ಒತ್ತಾಯಿಸಿ ಪೊಲೀಸರಿಗೆ ದೂರು

ಕಿಡಿಗೇಡಿಗಳಿಂದ ಅವಹೇಳನಕಾರಿ ಫ್ಲೆಕ್ಸ್ : ಕ್ರಮಕ್ಕೆ ಒತ್ತಾಯಿಸಿ ಪೊಲೀಸರಿಗೆ ದೂರು

4 ಜಿಲ್ಲೆಗಳಿಗೆ ಸಿಎಂ ವೈಮಾನಿಕ ಸಮೀಕ್ಷೆ : ಹವಾಮಾನ ವೈಪರೀತ್ಯದಿಂದ ವಿಜಯಪುರ ಸಮೀಕ್ಷೆ ರದ್ದು

4 ಜಿಲ್ಲೆಗಳ ಸಿಎಂ ವೈಮಾನಿಕ ಸಮೀಕ್ಷೆ : ಹವಾಮಾನ ವೈಪರೀತ್ಯದಿಂದ ವಿಜಯಪುರ ಸಮೀಕ್ಷೆ ರದ್ದು

ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು

BIADAR-TDY-2

ಶಾಹೀನ್‌ನಿಂದ 5 ಕೋಟಿ ವಿದ್ಯಾರ್ಥಿ ವೇತನ

ಕೋವಿಡ್‌; ಬೀದರ್‌ನಲ್ಲಿ ಪರಿಹಾರ ಮರೀಚಿಕೆ

ಕೋವಿಡ್‌; ಬೀದರ್‌ನಲ್ಲಿ ಪರಿಹಾರ ಮರೀಚಿಕೆ

bidara-tdy-1

ಪ್ರಜಾಪ್ರಭುತ್ವ ಉಳಿವಿಗೆ ಕಾಂಗ್ರೆಸ್‌ ಬೆಂಬಲಿಸಿ

ನೆರೆ ವಿಷಯದಲ್ಲಿ ವಿಪಕ್ಷಗಳು ರಾಜಕೀಯ ಬಿಟ್ಟು ಸಂತ್ರಸ್ತರ ಕಣ್ಣೀರು ಒರೆಸುವ ಕೆಲಸ ಮಾಡಲಿ ಕಟೀಲ್

ನೆರೆ ವಿಷಯದಲ್ಲಿ ವಿಪಕ್ಷಗಳು ರಾಜಕೀಯ ಬಿಟ್ಟು ಸಹಕಾರ ನೀಡಲಿ : ಕಟೀಲ್

ಅತಿವೃಷ್ಟಿ ಹಾನಿ ಪರಿಶೀಲನೆಯಲ್ಲಿ ಬೀದರ್ ಬಗ್ಗೆ ಸಿಎಂ ಮಲತಾಯಿ ಧೋರಣೆ : ಈಶ್ವರ ಖಂಡ್ರೆ ಆರೋಪ

ಅತಿವೃಷ್ಟಿ ಹಾನಿ ಪರಿಶೀಲನೆಯಲ್ಲಿ ಬೀದರ್ ಬಗ್ಗೆ ಸಿಎಂ ಮಲತಾಯಿ ಧೋರಣೆ : ಈಶ್ವರ ಖಂಡ್ರೆ ಆರೋಪ

MUST WATCH

udayavani youtube

ಮಲ್ಪೆ: ಬಲೆಗೆ ಬಿತ್ತು ಭಾರಿ ಗಾತ್ರದ ಎರಡು ಕೊಂಬು ತೊರಕೆ ಮೀನು

udayavani youtube

ಉಡುಪಿಯಲ್ಲಿ ಪ್ರಪ್ರಥಮ ಬಾರಿಗೆ ಪ್ರಾರಂಭವಾಗಿರುವ ದೇಶಿ ಉತ್ಪನ್ನಗಳ ಮಳಿಗೆ

udayavani youtube

ಸ್ವಾಮಿತ್ವ: ಹೊಸ ಯೋಜನೆಯಿಂದ ನಮಗೆ ಏನು ಲಾಭ ?

udayavani youtube

ಚಿಕ್ಕಮಗಳೂರು : ಪುಷ್ಪ ಸಮರ್ಪಣೆ ವೇಳೆ ಮಗಳನ್ನ ನೆನೆದು ಕಣ್ಣೀರಿಟ್ಟ ಮೃತ ಪೇದೆ ತಾಯಿ

udayavani youtube

ಮಂಗಳೂರು: ಡ್ರಗ್ಸ್ ಜಾಗೃತಿ ಬರಹದಿಂದ ಗಮನಸೆಳೆಯುತ್ತಿದೆ ಸಿಟಿ ಬಸ್ಹೊಸ ಸೇರ್ಪಡೆ

netflix

Stream Fest: ಇನ್ನು ಮುಂದೆ ಉಚಿತವಾಗಿ Netflix ವೀಕ್ಷಿಸಬಹುದು: ಹೇಗೆ ಗೊತ್ತಾ ?

00

ಆರ್ ಸಿಬಿ ಬೊಂಬಾಟ್ ಬೌಲಿಂಗ್ ಗೆ ಕೆಕೆಆರ್ ಬ್ಯಾಟಿಂಗ್ ತತ್ತರ : 85 ರ ಸವಾಲು

ghorka

ಪ್ರಮುಖ ಬೆಳವಣಿಗೆ: ಎನ್ ಡಿಎ ಮೈತ್ರಿಕೂಟದಿಂದ ಹೊರಬಂದ ಗೂರ್ಖಾ ಜನಮುಕ್ತಿ ಮೋರ್ಚಾ

avalu-tdy-2

ತೆಳ್ಳಗಾಗೋಕೆ ಸುಲಭದ ದಾರಿ ಯಾವುದು?

avalu-tdy-1

ಸೋಲಿಲ್ಲದೆ ಬಾಳುಂಟೇ?

Thanks for visiting Udayavani

You seem to have an Ad Blocker on.
To continue reading, please turn it off or whitelist Udayavani.