ಲಕ್ಷ್ಮೀ ವೆಂಕಟೇಶ್ವರ ಮೂರ್ತಿ ಪ್ರಾಣ ಪ್ರತಿಷ್ಠಾಪನೆ

Team Udayavani, Jan 23, 2018, 1:27 PM IST

ಬಸವಕಲ್ಯಾಣ: ನಗರದ ಲಕ್ಷ್ಮೀ ವೆಂಕಟೇಶ ಸಂಸ್ಥಾನದ ವಾರ್ಷಿಕೋತ್ಸವ ನಿಮಿತ್ತ ಸಂಸ್ಥಾನದಲ್ಲಿ ವೆಂಕಟೇಶ್ವರ ಮೂರ್ತಿ ಪ್ರಾಣ ಪ್ರತಿಷ್ಠಾಪನೆ ಮಹೋತ್ಸವ ವಿಜೃಂಭಣೆಯಿಂದ ಜರುಗಿತು.

ತಿರುಮಲಾದ ಶ್ರೀ ಮಹಂತ ಅರ್ಜುನದಾಸಜಿ ಮಹಾರಾಜ, ನಾಸಿಕನ ಶ್ರೀ ಅನಿಕೇತಾನಂದ ಶಾಸ್ತ್ರೀ ಮಹಾರಾಜ, ತಿರುಪತಿ ದೇವಸ್ಥಾನದ ಮುಖ್ಯ ಅರ್ಚಕ ಶ್ರೀ ರಂಗನಾಥ ಸ್ವಾಮಿ ನೇತೃತ್ವದಲ್ಲಿ ವೇದ ಮಂತ್ರ ಘೋಷಣೆಗಳ ಮಧ್ಯೆ ಮೂರ್ತಿ ಪ್ರಾಣ ಪ್ರತಿಷ್ಠಾನ ನೆರವೇರಿಸಲಾಯಿತು. ಉಸ್ಮಾನಾಬಾದ ಜಿಲ್ಲೆಯ ಶ್ರೀ ಅಪ್ಪ ಮಹಾರಾಜ
ಹಾಗೂ ಶ್ರೀಗಳು ಭಾಗವಹಿಸಿದ್ದರು. 

ನಗರ ಸೇರಿದಂತೆ ವಿವಿಧೆಡೆಯ ಭಕ್ತರು ಭಾಗವಹಿಸಿ ದರ್ಶನ ಪಡೆದರು. ಇದಕ್ಕೂ ಮುನ್ನ ನಗರದ ಶ್ರೀ ಸದಾನಂದ ಸ್ವಾಮಿ ಮಠದಿಂದ ಸಂಸ್ಥಾನದ ವರೆಗೆ ಅಲಂಕೃತ ವಾಹನದಲ್ಲಿ ವೆಂಕಟೇಶ್ವ ಮೂರ್ತಿ ಮೆರವಣಿಗೆ ಜರುಗಿತು.
 
ಉಸ್ಮಾನಾಬಾದನ ಪಾಂಡುರಂಗ ಭಜನಾ ಮಂಡಳ, ಹೈದರಾಬಾದನ ಮಹೇಶ್ವರಿ ಮಹಿಳಾ ಮಂಡಳ, ಸೋಲಾಪುರ ಕಲಾ ತಂಡ ಸೇರಿ ವಿವಿಧ ತಂಡಗಳಿಂದ ಮೆರವಣಿಗೆಯಲ್ಲಿ ಭಜನೆ, ಲೇಜಿಮ್‌, ಕೋಲಾಟ, ನೃತ್ಯ ಪ್ರದರ್ಶನ ನಡೆಯಿತು. 

ಸಂಸ್ಥಾನದ ಶ್ರೀ ಅನಂತ ಬುವಾ ಕಾಟೇಕರ್‌ ಮಹಾರಾಜ, ಸೇವಾಧಿಕಾರಿಗಳಾದ ಶ್ರೀ ಮುರುಳೀಧರ ಕಾಟೇಕರ್‌
ಮಹಾರಾಜ, ಶ್ರೀ ಪುರುಷೋತ್ತಮ ಕಾಟೇಕರ್‌ ಮಹಾರಾಜ ನೇತೃತ್ವದಲ್ಲಿ ಮೂರ್ತಿ ಪ್ರಾಣ ಪ್ರತಿಷ್ಠಾಪನೆ ಮಹೋತ್ಸವ
ಮತ್ತು ಶೋಭಾ ಯಾತ್ರೆ ಜರುಗಿತು. 

ಬ್ರಾಹ್ಮಣ ಸಮಾಜದ ಅಧ್ಯಕ್ಷ ಕಮಲಾಕರ್‌ ದೀಕ್ಷಿತ, ಬಿಕೆಡಿಬಿ ಸದಸ್ಯ ಶಿವರಾಜ ನರಶೆಟ್ಟಿ, ಪ್ರಮುಖರಾದ ಎ.ಎನ್‌
.ದೇಶಪಾಂಡೆ, ರಾಜಶೇಖರ ಪಾಟೀಲ್‌ ಸಸ್ತಾಪುರ, ಬಂಡು ಕರಾಡೆ, ರಾಜು ಕುಲ್ಕರ್ಣಿ, ಪೃಥ್ವಿಗೀರ ಗೋಸ್ವಾಮಿ, ರಾಜು ಪಾಟೀಲ ಹಳ್ಳಿ, ನಾಗಭೂಷಣ ಗರ್ಜೆ, ಕೃಷ್ಣಾ ಕುಲ್ಕರ್ಣಿ, ವಿಜಯಕುಮಾರ ದೇಶಪಾಂಡೆ ಹಾಗೂ ಇನ್ನಿತರರು ಮೆರವಣಿಗೆಯಲ್ಲಿ ಪಾಲ್ಗೊಂಡಿದ್ದರು.

ಶ್ರೀ ಅಷ್ಠ ಲಕ್ಷ್ಮೀ ಜೋತಿಷ್ಯ ಮಂದಿರ,
ಉದ್ಯೋಗ, ಮದುವೆ ವಿಳಂಬ, ಸತಿ-ಪತಿ ಕಲಹ, ಶತ್ರುಪೀಡೆ, ಅತ್ತೆ-ಸೊಸೆ ಕಲಹ, ವಶೀಕರಣ, ವ್ಯವಹಾರದಲ್ಲಿ ನಷ್ಟ, ಇನ್ನೂ ನಿಮ್ಮಸಮಸ್ಯೆ ಯಾವುದೇ ಇರಲಿ, ಎಷ್ಟೇ ಕಠಿಣವಾಗಿರಲಿ ಶಾಶ್ವತ ಪರಿಹಾರ ಶತಃ ಶಿದ್ದ , ನಿಮ್ಮ ಯಾವುದೇ ಇಷ್ಟಾರ್ಥ ಕಾರ್ಯಗಳಿದ್ದರೂ ಕೇವಲ 5 ದಿನಗಳಲ್ಲಿ ನೇರವೆರಿಸಿ ಕೋಡುತ್ತಾರೇ.
ಶ್ರೀ ಶ್ರೀ ಬಿ ಹೆಚ್ ಆಚಾರ್ಯ ಗೂರುಜೀ
ಜಯನಗರ ಬೆಂಗಳೂರು, ಮೋ- 8884889444

ಈ ವಿಭಾಗದಿಂದ ಇನ್ನಷ್ಟು

  • ಬೀದರ: ಮೋಟಾರು ವಾಹನ ನಿಯಮ, ಕಾನೂನು ಪಾಲಿಸಿ ಅಪಘಾತಗಳನ್ನು ತಡೆಯಬೇಕು ಎಂದು ಪ್ರಾದೇಶಿಕ ಸಾರಿಗೆ ಅಧಿಕಾರಿ ಕೆ.ಟಿ. ವಿಶ್ವನಾಥ ಸಲಹೆ ನೀಡಿದರು. ನಗರದ ಹೊರವಲಯದ...

  • ಅಫಜಲಪುರ: ಅನೇಕರಲ್ಲಿ ಆಯುಷ್‌ ಇಲಾಖೆ ಬಗ್ಗೆ ತಪ್ಪು ತಿಳಿವಳಿಕೆಯಿದೆ. ಆದರೆ ಆಯುಷ್‌ ವೈದ್ಯ ಪದ್ಧತಿ ಸಾವಿರಾರು ವರ್ಷಗಳಷ್ಟು ಹಳೆಯದು. ಅಡ್ಡಪರಿಣಾಮವಿಲ್ಲದ...

  • ಬೀದರ: ರಾಷ್ಟ್ರೀಯ ಮತದಾರರ ದಿನಾಚರಣೆ ನಿಮಿತ್ತ ಶುಕ್ರವಾರ ನಗರದ ಜಿಲ್ಲಾಧಿಕಾರಿಗಳ ಕಚೇರಿಯಲ್ಲಿ ಪ್ರತಿಜ್ಞಾವಿಧಿ ಸ್ವೀಕಾರ ಕಾರ್ಯಕ್ರಮ ನಡೆಯಿತು. ಜಿಲ್ಲಾಧಿಕಾರಿ...

  • ಬೀದರ: ತುರ್ತು ಸಂದರ್ಭದಲ್ಲಿ ರಕ್ಷಣೆ ಮತ್ತು ಸಮಾಜ ಸೇವೆ ಮಾಡುತ್ತಿರುವ ಗೃಹ ರಕ್ಷಕರಿಗೆ "ಡ್ನೂಟಿ' ಹಾಕಲು ಯೂನಿಟ್‌ ಹೆಡ್‌ಗಳು ಸತಾಯಿಸುತ್ತಾರೆಂಬ ಆರೋಪಗಳು...

  • ಬಸವಕಲ್ಯಾಣ: ನಿಜ ಶರಣ ಅಂಬಿಗರ ಚೌಡಯ್ಯ ಪೀಠಕ್ಕೆ 50 ಕೋಟಿ ರೂ. ಅನುದಾನ ಬಿಡುಗಡೆ ಮಾಡುವಂತೆ ಸಿಎಂ ಬಿಎಸ್‌ವೈ ಅವರಿಗೆ ಮನವಿ ಸಲ್ಲಿಸಲಾಗುವುದು ಎಂದು ಶಾಸಕ ಬಿ.ನಾರಾಯಣರಾವ್‌...

ಹೊಸ ಸೇರ್ಪಡೆ