Udayavni Special

ನಿಂಬೆ ಹಣ್ಣು ಸಿಕ್ಕಾಪಟ್ಟೆ ಹುಳಿ!

•ಪ್ರತಿ ಕಾಯಿಗೆ 6-ಹಣ್ಣಿಗೆ 12 ರೂ•ಕಳೆದ ವರ್ಷಕ್ಕಿಂತ ಹೆಚ್ಚು ದರ

Team Udayavani, May 21, 2019, 2:11 PM IST

bidar-tdy-03..

ಹುಮನಾಬಾದ: ಪಟ್ಟಣದ ಡಾ| ಅಂಬೇಡ್ಕರ್‌ ವೃತ್ತದ ಬಳಿ ನಿಂಬೆ ಹಣ್ಣು ಮಾರಾಟಕ್ಕೆ ಕುಳಿತ ಮಹಿಳೆಯರು.

ಹುಮನಾಬಾದ: ಅತ್ಯುತ್ತಮ ಔಷಧಿ ಗುಣ ಹೊಂದಿರುವ, ಆರೋಗ್ಯಕ್ಕೆ ಅಗತ್ಯವಾದ ನಿಂಬೆ ಹಣ್ಣಿನ ಬೆಲೆ ಈ ಬಾರಿ ಬಲು ದುಬಾರಿಯಾಗಿದೆ. ಪ್ರತೀ ವರ್ಷ ಬೇಸಿಗೆ ಅವಧಿಯಲ್ಲಿ ನಿಂಬೆ ಹಣ್ಣಿನ ಬೆಲೆ ಹೆಚ್ಚುವುದು ಸಹಜ. ಆದರೆ ಈ ಬಾರಿ ಕಳೆದ ವರ್ಷಕ್ಕಿಂತ ಹೆಚ್ಚು ದುಬಾರಿಯಾಗಿದೆ.

ಕಳೆದ ವರ್ಷ ಗುಣಮಟ್ಟದ ಒಂದು ನಿಂಬೆಹಣ್ಣು 5 ರೂಪಾಯಿಗೆ ಲಭ್ಯವಾಗುತ್ತಿತ್ತು. ಈ ಬಾರಿ 12 ರೂಪಾಯಿಗೆ ಏರಿದೆ. ಗಾತ್ರ ಆಧರಿಸಿ, ದೊಡ್ಡದಾದ ಪೂರ್ಣ ಹಣ್ಣಾದ ಪ್ರತಿ ನಿಂಬೆಗೆ 8ರಿಂದ 10 ಮತ್ತು 12 ರೂಪಾಯಿ. ಹಣ್ಣಾಗದ ಕಸುಕಾದ ನಿಂಬೆ ಹಣ್ಣಿನ ಬೆಲೆ 4, 5 ಮತ್ತು 6 ರೂಪಾಯಿ ಇದೆ.

ಬೇಸಿಗೆಯಲ್ಲಿ ದೇಹಕ್ಕೆ ತಂಪನ್ನೀಯುವ ನಿಂಬೆಯನ್ನು ಗ್ರಾಹಕರು ಹೇಗೂ ಖರೀದಿಸುತ್ತಾರೆ ಎಂಬ ವಿಶ್ವಾಸದಿಂದ ಹಣ್ಣು ಮಾರುವವರು ನಿಂಬೆ ಬೆಲೆಯನ್ನು ದ್ವಿಗುಣಗೊಳಿಸಿದ್ದಾರೆ ಎಂಬುದು ಶಿಕ್ಷಕ ಶಶಿಧರ ಘವಾಲ್ಕರ್‌, ಶ್ರೀಕಾಂತ ಸೂಗಿ, ಅನಿರುದ್ಧ ಜೋಷಿ, ಬಾಬುರಾವ್‌ ಕಾಳೆ, ಶ್ರೀಧರ ಚವ್ಹಾಣ ಅವರ ವಾದ.

ಒಂದು ನಿಂಬೆ ಹಣ್ಣಿನ್ನು 10, 12ರ ಬದಲಿಗೆ 5ರಿಂದ 6ಕ್ಕೆ ನೀಡಿದರೇ ಖರೀದಿಸುವವರಿಗೂ ಹೆಚ್ಚು ಭಾರ ಆಗದು ಎನ್ನುತ್ತಾರೆ ಮಡೆಪ್ಪ ಕುಂಬಾರ. ಗುಣಮಟ್ಟದ ದೊಡ್ಡ‌ ನಿಂಬೆ ಹಣ್ಣಿನ ಬೆಲೆ 15 ರೂಪಾಯಿ ಎಂದರೆ ಏನರ್ಥ. ಅವರ ಉಪಜೀವನವೂ ಅದರ ಮೇಲೆ ಇದೆ ಎಂಬುದು ನಮಗೂ ಗೊತ್ತು. ಆದರೆ ಅದಕ್ಕೂ ಒಂದು ಮಿತಿ ಬೇಡವೇ ಎನ್ನುತ್ತಾರೆ ಪಂಡಿತರಾವ್‌ ಬಾಳೂರೆ.

ಬೆಲೆ ದುಬಾರಿ ಹಿನ್ನೆಲೆಯಲ್ಲಿ ಪಟ್ಟಣದ ವಿವಿಧ ಡಾಬಾಗಳಲ್ಲಿ ಊಟದ ಜೊತೆಗೆ ಕಡ್ಡಾಯವಾಗಿ ಕೊಡುತ್ತಿದ್ದ ನಿಂಬೆ ಹಣ್ಣನ್ನು ಈ ಬಾರಿ ಕಡಿತಗೊಳಿಸಿದ್ದಾರೆ. ಬೇಕಾದರೆ ಈರುಳ್ಳಿ ತೆಗೆದುಕೊಳ್ಳಿ ನಿಂಬೆ ಮಾತ್ರ ಕೇಳಬೇಡಿ ಅಂತ ಡಾಬಾ ಮಾಲೀಕರು ವಿನಂತಿಸುತ್ತಿದ್ದಾರೆ ಎಂದು ಪ್ರಾಧ್ಯಾಪಕ ಚಂದ್ರಕಾಂತ ಬಿರಾದಾರ, ಡಾಬಾ ಗ್ರಾಹಕರಾದ ಪ್ರಶಾಂತ ಹೊಸಮನಿ, ದಿಲೀಪಕುಮಾರ ಮೇತ್ರೆ, ಎಂ.ಡಿ.ರಿಜ್ವಾನ್‌, ರಾಜಪ್ಪ ಪೂಜಾರಿ ಹೇಳುತ್ತಾರೆ.

ಹಣ್ಣು ಮೊದಲು ನಮ್ಮ ಹೊಲದಲ್ಲೇ ಬೆಳೆಯುತ್ತಿದ್ದ ಕಾರಣ ಕಡಿಮೆ ಬೆಲೆಗೆ ಮಾರಾಟ ಮಾಡಿದ್ದೇವೆ. ನೀರೇ ಇಲ್ಲದಿರುವಾಗ ಹಣ್ಣು ಎಲ್ಲಿಂದ ಮಾರುಕಟ್ಟೆಗೆ ಬರುತ್ತವೆ. ಈ ಭಾಗದಲ್ಲಿ ನಿಂಬೆ ತೋಟಗಳು ಒಣಗಿ ಬರಿದಾಗಿವೆ. ನಮ್ಮ ಉಪಜೀವನ ಜೋತೆಗೆ ಗ್ರಾಹಕರಿಗೆ ನಿಂಬೆ ಹಣ್ಣಿನ ಅಭಾವ ಆಗದಿರಲಿ ಎಂಬ ಕಾರಣಕ್ಕಾಗಿ ದುಬಾರಿ ಬೆಲೆ ಆದರೂ ತೆತ್ತು ತೆಲಂಗಾಣದಿಂದ ಖರೀದಿಸಿ, ತರುತ್ತಿದ್ದೇವೆ. ನಿಂಬೆ ಖರೀದಿ ಜೊತೆಗೆ ಸಾಗಾಣಿಕೆ ವೆಚ್ಚ ಸೇರಿ ನಮಗೆ ದುಬಾರಿ ಬೆಲೆ ಬೀಳುತ್ತಿದೆ. ಬೆಲೆ ಹೆಚ್ಚಿಸುವುದು ನಮಗೆ ಅನಿವಾರ್ಯವಾಗಿದೆ ಎನ್ನುತ್ತಾರೆ ನಿಂಬೆ ವ್ಯಾಪಾರಿಗಳಾದ ಕಾಶಮ್ಮ,ಸುಶೀಲಾಬಾಯಿ, ಸರಸ್ವತಿ ಅವರು.

•ಶಶಿಕಾಂತ ಕೆ.ಭಗೋಜಿ

ಟಾಪ್ ನ್ಯೂಸ್

 ಅಪರಾಧಿಯನ್ನು ಸಾರ್ವಜನಿಕವಾಗಿ ನೇಣಿಗೇರಿಸುವುದಿಲ್ಲ: ತಾಲಿಬಾನ್‌

 ಅಪರಾಧಿಯನ್ನು ಸಾರ್ವಜನಿಕವಾಗಿ ನೇಣಿಗೇರಿಸುವುದಿಲ್ಲ: ತಾಲಿಬಾನ್‌

ಡಿಎಚ್ಓ ಕಚೇರಿಯೆದುರು ಅಹೋ ರಾತ್ರಿಯವರೆಗೂ ಮುಷ್ಕರ

ಡಿಎಚ್ಓ ಕಚೇರಿಯೆದುರು ಅಹೋ ರಾತ್ರಿಯವರೆಗೂ ಮುಷ್ಕರ

 ಟಿಬೆಟಿಯನ್‌ ಗಡಿ ಪೊಲೀಸ್‌ಗೆ ಸೇರಿದ 38 ವೈದ್ಯರು

 ಟಿಬೆಟಿಯನ್‌ ಗಡಿ ಪೊಲೀಸ್‌ಗೆ ಸೇರಿದ 38 ವೈದ್ಯರು

ಸಮ್ಮಿಶ್ರ ಸರ್ಕಾರ ರಚಿಸಿದರೆ ಪುಣ್ಯಾತ್ಮ ಎಚ್‌ಡಿಕೆ ಉಳಿಸಿಕೊಳ್ಳಲಿಲ್ಲ: ಸಿದ್ದರಾಮಯ್ಯ

ಸಮ್ಮಿಶ್ರ ಸರ್ಕಾರ ರಚಿಸಿದರೆ ಪುಣ್ಯಾತ್ಮ ಎಚ್‌ಡಿಕೆ ಉಳಿಸಿಕೊಳ್ಳಲಿಲ್ಲ: ಸಿದ್ದರಾಮಯ್ಯ

ಜೆಡಿಎಸ್ ನಲ್ಲಿ ಅಲ್ಪಸಂಖ್ಯಾತರನ್ನು ಸಿಎಂ ಅಭ್ಯರ್ಥಿಯೆಂದು ಘೋಷಣೆ ಮಾಡಲಿ:ಜಮೀರ್

ಜೆಡಿಎಸ್ ಪಕ್ಷದಲ್ಲಿ ಅಲ್ಪಸಂಖ್ಯಾತರನ್ನು ಸಿಎಂ ಸ್ಥಾನದ ಅಭ್ಯರ್ಥಿಯೆಂದು ಘೋಷಣೆ ಮಾಡಲಿ

ಅಯೋಧ್ಯೆ ಯಾತ್ರೆಗೆ 5,000 ರೂ. ನೆರವು: ಗುಜರಾತ್‌ ಸರ್ಕಾರ

ಅಯೋಧ್ಯೆ ಯಾತ್ರೆಗೆ 5,000 ರೂ. ನೆರವು: ಗುಜರಾತ್‌ ಸರ್ಕಾರ

ರೈತರು ಅಸಮಾಧಾನಗೊಳ್ಳಲು ಬಿಡಬೇಡಿ: ಕೇಂದ್ರಕ್ಕೆ ಎಚ್ಚರಿಕೆ ನೀಡಿದ ಶರದ್‌ ಪವಾರ್‌

ರೈತರು ಅಸಮಾಧಾನಗೊಳ್ಳಲು ಬಿಡಬೇಡಿ: ಕೇಂದ್ರಕ್ಕೆ ಎಚ್ಚರಿಕೆ ನೀಡಿದ ಶರದ್‌ ಪವಾರ್‌

ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು

9

ಶರಣರ ವೈಚಾರಿಕತೆ ವೈಜ್ಞಾನಿಕ ಕಾಂತ್ರಿಗೆ ಪೂರಕ: ಅಗಸರ

8

ಪ್ರಜಾಪ್ರಭುತ್ವಕ್ಕೆ ಅಡಿಪಾಯ ಹಾಕಿದ ನೆಲ ಕಲ್ಯಾಣ

7

ಬುದ್ಧನ ಕಂಚಿನ ಮೂರ್ತಿ ಪ್ರತಿಷ್ಠಾಪನೆ

6

ಕೋವಿಡ್‌ನಿಂದ ಮೃತ ಕುಟುಂಬಕ್ಕೆ ಪರಿಹಾರ ನೀಡಿ

5

ಮೀಸಲು ಸೌಲಭ್ಯದ ಮೇಲೆ ಶೂನ್ಯ ಸವಾರಿ!

MUST WATCH

udayavani youtube

ಪರಸ್ಪರ ಮಜ್ಜಿಗೆ ಎರಚಿಕೊಂಡು ಗೌಳಿ ಬುಡಕಟ್ಟು ಸಮುದಾಯದಿಂದ ದಸರಾ ಆಚರಣೆ

udayavani youtube

ಟೀಂ ಇಂಡಿಯಾ ಮುಖ್ಯ ಕೋಚ್ ಸ್ಥಾನಕ್ಕೆ ದ್ರಾವಿಡ್ ನೇಮಕ

udayavani youtube

ಅಸಹಾಯಕ ಸ್ಥಿತಿಯಲ್ಲಿದ್ದ ವ್ಯಕ್ತಿ ಹಾಗೂ ಕೋತಿಯನ್ನು ರಕ್ಷಿಸಿ ಮಾದರಿಯಾದ ಯುವಕರು

udayavani youtube

ರಾಮನ ಹೆಸರಲ್ಲಿ ಅಧಿಕಾರಕ್ಕೆ ಬಂದವರಿಗೆ ಕುತ್ತು? ಮೈಲಾರಸ್ವಾಮಿ ಕಾರ್ಣಿಕ ನುಡಿ ಏನು ಗೊತ್ತಾ?

udayavani youtube

ಹುಮನಾಬಾದ್ ನಲ್ಲಿ ವಿಜಯ ದಶಮಿ ಸಂಭ್ರಮ : ನೋಡುಗರ ಗಮನ ಸೆಳೆದ ರಾವಣನ ಪ್ರತಿಕೃತಿ

ಹೊಸ ಸೇರ್ಪಡೆ

ಭಾರತದಲ್ಲೇ ಮುಂದಿನ ಐಪಿಎಲ್‌: ಗಂಗೂಲಿ

ಭಾರತದಲ್ಲೇ ಮುಂದಿನ ಐಪಿಎಲ್‌: ಗಂಗೂಲಿ

 ಅಪರಾಧಿಯನ್ನು ಸಾರ್ವಜನಿಕವಾಗಿ ನೇಣಿಗೇರಿಸುವುದಿಲ್ಲ: ತಾಲಿಬಾನ್‌

 ಅಪರಾಧಿಯನ್ನು ಸಾರ್ವಜನಿಕವಾಗಿ ನೇಣಿಗೇರಿಸುವುದಿಲ್ಲ: ತಾಲಿಬಾನ್‌

ಡಿಎಚ್ಓ ಕಚೇರಿಯೆದುರು ಅಹೋ ರಾತ್ರಿಯವರೆಗೂ ಮುಷ್ಕರ

ಡಿಎಚ್ಓ ಕಚೇರಿಯೆದುರು ಅಹೋ ರಾತ್ರಿಯವರೆಗೂ ಮುಷ್ಕರ

 ಟಿಬೆಟಿಯನ್‌ ಗಡಿ ಪೊಲೀಸ್‌ಗೆ ಸೇರಿದ 38 ವೈದ್ಯರು

 ಟಿಬೆಟಿಯನ್‌ ಗಡಿ ಪೊಲೀಸ್‌ಗೆ ಸೇರಿದ 38 ವೈದ್ಯರು

ಸಮ್ಮಿಶ್ರ ಸರ್ಕಾರ ರಚಿಸಿದರೆ ಪುಣ್ಯಾತ್ಮ ಎಚ್‌ಡಿಕೆ ಉಳಿಸಿಕೊಳ್ಳಲಿಲ್ಲ: ಸಿದ್ದರಾಮಯ್ಯ

ಸಮ್ಮಿಶ್ರ ಸರ್ಕಾರ ರಚಿಸಿದರೆ ಪುಣ್ಯಾತ್ಮ ಎಚ್‌ಡಿಕೆ ಉಳಿಸಿಕೊಳ್ಳಲಿಲ್ಲ: ಸಿದ್ದರಾಮಯ್ಯ

Thanks for visiting Udayavani

You seem to have an Ad Blocker on.
To continue reading, please turn it off or whitelist Udayavani.