ಲಸಿಕಾಕರಣ ಸಮರೋಪಾದಿಯಲ್ಲಿ ಸಾಗಲಿ
Team Udayavani, May 25, 2021, 4:24 PM IST
ಬೀದರ: ಫ್ರಂಟ್‌ಲೆçನ್ ವರ್ಕರ್ಸ್‌ಗೆ ಕೋವಿಡ್ ಲಸಿಕೆ ನೀಡಿಕೆ ಪ್ರಕ್ರಿಯೆ ಬಲಗೊಳಿಸುವ ಸಂಬಂಧ ಪ್ರಕ್ರಿಯೆಯನ್ನು ತೀವ್ರಗೊಳಿಸುವ ಹಿನ್ನೆಲೆಯಲ್ಲಿ ಜಿಲ್ಲಾ ಧಿಕಾರಿ ರಾಮಚಂದ್ರನ್ ಆರ್. ಅವರು ಅಧಿ ಕಾರಿಗಳೊಂದಿಗೆ ಮತ್ತೂಂದು ಸುತ್ತಿನ ಸಭೆ ನಡೆಸಿ ಚರ್ಚಿಸಿದರು.
ಜಿಲ್ಲಾಧಿಕಾರಿ ಕಚೇರಿ ಸಭಾಂಗಣದಲ್ಲಿ ಎರಡು ಗಂಟೆಗೆ ಹೆಚ್ಚು ಕಾಲ ನಡೆದ ಸಭೆಯಲ್ಲಿ ಫ್ರಂಟಲೈನ್ ವರ್ಕರ್ಸ್ ಮತ್ತು ದುರ್ಬಲ ಗುಂಪಿನವರಿಗೆ ಲಸಿಕೆ ನೀಡಿಕೆ ಬಗ್ಗೆ ಚರ್ಚಿಸಿದರು. ಈ ವೇಳೆ ಮಾತನಾಡಿದ ಜಿಲ್ಲಾ ಧಿಕಾರಿಗಳು, ಜೀವ ರಕ್ಷಕ ಲಸಿಕೆ ನೀಡಿಕೆ ಕಾರ್ಯ ಯಶಸ್ವಿಯಾಗಲು ಎಲ್ಲ ಅಧಿ ಕಾರಿಗಳು ಸಹಕರಿಸಬೇಕು. ಇಡೀ ಬೀದರ ಜಿಲ್ಲಾದ್ಯಂತ ಈ ಲಸಿಕಾಕರಣ ಕಾರ್ಯವು ಸಮರೋಪಾದಿಯಲ್ಲಿ ನಡೆಯುವಂತಾಗಬೇಕು.
ಜಿಲ್ಲಾ ಹಂತದಲ್ಲಿ ನೇಮಕಗೊಂಡಿರುವ ನೋಡಲ್ ಅಧಿ ಕಾರಿಗಳು ತಮ್ಮ ಹಂತದಲ್ಲಿ ತಾಲೂಕು ಮಟ್ಟದಲ್ಲಿ ಕೂಡ ನೋಡಲ್ ಅ ಧಿಕಾರಿಗಳನ್ನು ನೇಮಿಸಿ ಲಸಿಕೆ ನೀಡಿಕೆ ಪ್ರಕ್ರಿಯೆಯನ್ನು ಚುರುಕುಗೊಳಿಸಬೇಕು ಎಂದು ನೋಡಲ್ ಅಧಿ ಕಾರಿಗಳಿಗೆ ನಿರ್ದೇಶನ ನೀಡಿದರು. ದುರ್ಬಲ ಗುಂಪಿನ ಜನರಿಗೆ ತಪ್ಪದೇ ಲಸಿಕೆ ಸಿಗುವ ನಿಟ್ಟಿನಲ್ಲಿ, ಬೀದರ ಜಿಲ್ಲೆಯಲ್ಲಿ ಇರುವ ದುರ್ಬಲ ಗುಂಪಿನ ಫಲಾನುಭವಿಗಳೆಷ್ಟು ಎಂಬುದರ ಬಗ್ಗೆ ಮೈಕ್ರೋ ಯೋಜನೆ ಸಿದ್ಧಪಡಿಸಿ ಸಲ್ಲಿಸುವಂತೆ ಇದೆ ವೇಳೆ ಜಿಲ್ಲಾಧಿ ಕಾರಿಗಳು ಅ ಧಿಕಾರಿಗಳಿಗೆ ಸಲಹೆ ಮಾಡಿದರು.
ಸಭೆಯಲ್ಲಿ ಜಿಪಂ ಸಿಇಒ ಜಹೀರಾ ನಸೀಮ್, ಅಪರ ಜಿಲ್ಲಾಧಿ ಕಾರಿ ರುದ್ರೇಶ ಗಾಳಿ, ಸಹಾಯಕ ಆಯುಕ್ತರಾದ ಗರೀಮಾ ಪನ್ವಾರ, ಡಾ| ಭುವನೇಶ ಪಾಟೀಲ, ಡಿಎಚ್‌ಒ ಡಾ| ವಿ.ಜಿ.ರೆಡ್ಡಿ, ಡಿಎಸ್‌ಒ ಡಾ| ಕೃಷ್ಣಾ ರೆಡ್ಡಿ, ಆರ್‌ಸಿಎಚ್ ಅ ಧಿಕಾರಿ ಡಾ| ರಾಜಶೇಖರ, ಡಿಡಿಪಿಐ ಟಿ.ಆರ್. ದೊಡ್ಡೆ ಹಾಗೂ ಇತರರು ಇದ್ದರು.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
MUST WATCH
ಮಲ್ಲಾರು : ಗಾಳಿ ಮಳೆಗೆ ಹಾರಿ ಹೋದ ಶಾಲೆಯ ಮೇಲ್ಛಾವಣಿ, ವಿದ್ಯಾರ್ಥಿಗಳು ಕಂಗಾಲು
ಬಾಳೆ ಕೃಷಿ ಮಾಡಿ ಸೈ ಎನಿಸಿಕೊಂಡಿರುವ ಕಳಸದ ಪ್ರಕಾಶ್ ಕುಮಾರ್
ಕಾಪು ತಾಲೂಕಿನಾದ್ಯಂತ ಭಾರೀ ಮಳೆ ತಗ್ಗು ಪ್ರದೇಶಗಳಲ್ಲಿ ನೆರೆ ಭೀತಿ
ಮಹಾ ತಿರುವು ; ಏಕನಾಥ್ ಶಿಂಧೆಗೆ ಮುಖ್ಯಮಂತ್ರಿ ಹುದ್ದೆ ಬಿಟ್ಟು ಕೊಟ್ಟ ಬಿಜೆಪಿ
ಸುರತ್ಕಲ್ ಸುತ್ತಮುತ್ತ 15 ಕ್ಕೂ ಹೆಚ್ಚು ಮನೆಗಳಿಗೆ ನುಗ್ಗಿದ ನೀರು
ಹೊಸ ಸೇರ್ಪಡೆ
ವಿವಿದ ಬೇಡಿಕೆಗೆ ಒತ್ತಾಯಿಸಿ ಕಾರ್ಮಿಕರಿಂದ ಅನಿರ್ದಿಷ್ಟಾವಧಿ ಮುಷ್ಕರ ಆರಂಭ
ಶೀತಲ್ ಶೆಟ್ಟಿ ನಿರ್ದೇಶನದ ಮರ್ಡರ್ ಮಿಸ್ಟ್ರಿ ‘ವಿಂಡೋಸೀಟ್’ ಜರ್ನಿ ಶುರು
ಮಣಿಪುರ: ಧಾರಾಕಾರ ಮಳೆಗೆ ಭಾರೀ ಭೂಕುಸಿತ-14 ಮಂದಿ ಸಾವು, 60 ಜನರು ಜೀವಂತ ಸಮಾಧಿ?
ವಿದ್ಯುತ್ ಕಂಬಕ್ಕೆ ಬಿಯರ್ ಸಾಗಿಸುತ್ತಿದ್ದ ಲಾರಿ ಡಿಕ್ಕಿ; ಚಾಲಕ ಸ್ಥಳದಲ್ಲೇ ಸಾವು
ಸಾಮಾನ್ಯ ಮನುಷ್ಯನ ಅಸಾಮಾನ್ಯ ಶಕ್ತಿ: ಇಂದಿನಿಂದ ‘ಬೈರಾಗಿ’ ದರ್ಶನ