ರೈತರು ಯೋಜನೆಗಳ ಲಾಭ ಪಡೆಯಲಿ


Team Udayavani, Nov 16, 2020, 6:57 PM IST

ರೈತರು ಯೋಜನೆಗಳ ಲಾಭ ಪಡೆಯಲಿ

ಬೀದರ: ತಾಲೂಕಿನ ಭಂಗೂರ ಗ್ರಾಮದ ಪಿಕೆಪಿಎಸ್‌ನಲ್ಲಿ ರಾಜ್ಯ ಸಹಕಾರ ಮಹಾಮಂಡಳ, ಜಿಲ್ಲಾ ಸಹಕಾರ ಯೂನಿಯನ್‌, ಡಿಸಿಸಿ ಬ್ಯಾಂಕ್‌, ಸಹಕಾರ ಇಲಾಖೆ ಆಶ್ರಯದಲ್ಲಿ 67ನೇ ಅಖೀಲ ಭಾರತ ಸಹಕಾರ ಸಪ್ತಾಹ ನಿಮಿತ್ತ “ಸಹಕಾರ ಮಾರಾಟ, ಗ್ರಾಹಕ, ರೂಪಾಂತರ ಮತ್ತು ಮೌಲ್ಯವರ್ಧನೆ’ ದಿನ ಆಚರಿಸಲಾಯಿತು.

ಮುಖಂಡ ಜಗನ್ನಾಥರೆಡ್ಡಿ ರಾಜರೆಡ್ಡಿ ಎಖ್ಖೆಳ್ಳಿ ಮಾತನಾಡಿ, ಸಹಕಾರ ಸಪ್ತಾಹವನ್ನು ಸಹಕಾರ ಯೂನಿಯನ್‌ ವತಿಯಿಂದ ಪ್ರತಿ ವರ್ಷವೂ ಆಚರಿಸಲಾಗುತ್ತಿದೆ. ಸಹಕಾರ ಕ್ಷೇತ್ರದಲ್ಲಿ ರೈತರ ಅಭಿವೃದ್ಧಿ ಬಹಳ ಮುಖ್ಯ ಎಂದರು. ದಿ. ಗುರುಪಾದಪ್ಪ ನಾಗಮಾರಪಳ್ಳಿ ಅವರು ಹಾಕಿಕೊಟ್ಟಂತಹ ದಾರಿಯಲ್ಲಿಯೇ ಸಾಗುತ್ತಿದ್ದಾರೆ. ಮಹಿಳೆಯರು ಸ್ವ ಸಹಾಯ ಗುಂಪಿನಿಂದ ಆರ್ಥಿಕವಾಗಿ ಸಬಲರಾಗಿದ್ದಾರೆ. ಸ್ವ ಸಹಾಯ ಗುಂಪಿನಿಂದಲೇ ಸಾಲ ಪಡೆದು ಸರಿಯಾದ ಸಮಯಕ್ಕೆ ಪಾವತಿ ಮಾಡಿ ಸದುಪಯೋಗ ಪಡೆದುಕೊಳ್ಳಿ ಎಂದರು.

ಜಿ.ಪಂ ಸದಸ್ಯ ಅಫರೋಜ್‌ ಖಾನ್‌ ಕಾರ್ಯಕ್ರಮ ಉದ್ಘಾಟಿಸಿ ಮಾತನಾಡಿ, ರೈತರಿಗೆ ಸರ್ಕಾರದಿಂದ ದೊರೆಯುವ ಲಾಭಗಳನ್ನು ಪಡೆದುಕೊಳ್ಳಿ ಎಂದರು. ಪಿಕೆಪಿಎಸ್‌ ಅಧ್ಯಕ್ಷ ಶಿವಶರಣಪ್ಪ ತಗಾರೆ ಅಧ್ಯಕ್ಷತೆ ವಹಿಸಿ ಮಾತನಾಡಿ, ಸಹಕಾರ ಕ್ಷೇತ್ರದಿಂದ ಮಹಿಳೆಯರು, ಅಬಲ ವರ್ಗದವರು, ನಿರುದ್ಯೋಗಿಗಳು ಪ್ರತಿಯೊಬ್ಬರು ಅಭಿವೃದ್ಧಿ ಹೊಂದುತ್ತಿದ್ದಾರೆ. ಸಹಕಾರ ಕ್ಷೇತ್ರದ ಚಿಹ್ನೆ ಹಸ್ತಲಾಘವ ಮಾಡುವುದು ಹಾಗೆಯೇ ಪ್ರತಿಯೊಬ್ಬರು ಒಬ್ಬರಿಗೊಬ್ಬರು ಸಹಾಯ ಮಾಡಿಕೊಳ್ಳುವುದಾಗಿದೆ ಎಂದು ಹೇಳಿದರು.

ಪಿಕೆಪಿಎಸ್‌ ಉಪಾಧ್ಯಕ್ಷ ಸಲಿಂಖಾನ್‌, ನಿರ್ದೇಶಕರಾದ ಶರಣ್ಯ ಸ್ವಾಮಿ, ಮಹಾದೇವಿ, ಶೇಶಮ್ಮ, ಪುಂಡಲೀಕರಾವ,ಪಿಕೆಪಿಎಸ್‌ ರೇಖುಳಗಿ ಅಧ್ಯಕ್ಷ ಮಲ್ಲಿಕಾರ್ಜುನ ಹಚ್ಚಿ, ಪಿಕೆಪಿಎಸ್‌ ಬೇಮಳಖೇಡ ಅಧ್ಯಕ್ಷ ಅನಿಲಕುಮಾರ ಉಪಸ್ಥಿತರಿದ್ದರು. ಯೂನಿಯನ್‌ ಮುಖ್ಯ ಕಾರ್ಯನಿರ್ವಹಣಾ ಧಿಕಾರಿ ಎಚ್‌.ಆರ್‌ ಮಲ್ಲಮ್ಮ ನಿರೂಪಿಸಿದರು.

ಗೋಶಾಲೆ ಕಾರ್ಯ ಪ್ರಶಂಸನೀಯ :

ಭಾಲ್ಕಿ: ದೇಶಿ ತಳಿಗಳ ಸಂರಕ್ಷಣೆಗೆ ಮುಂದಾಗಿ ಭಾರತೀಯ ಸಂಸ್ಕೃತಿ, ಪರಂಪರೆ ಉಳಿಸಿ ಮುಂದಿನ ಪೀಳಿಗೆಗೆ ಪರಿಚಯಿಸುವ ನಿಟ್ಟಿನಲ್ಲಿ ದಕ್ಷಿಣ ಮುಖೀ ಹನುಮಾನ ಗೋಶಾಲೆಯ ಸದಸ್ಯರು ಮಾಡುತ್ತಿರುವ ಕಾರ್ಯ ಪ್ರಶಂಶನೀಯ ಎಂದು ಪುರಸಭೆ ಅಧ್ಯಕ್ಷ ಬಸವರಾಜ ವಂಕೆ ಹೇಳಿದರು.

ತಾಲೂಕಿನ ಅಂಬೇಸಾಂಗವಿ ಕ್ರಾಸ್‌ ಹತ್ತಿರದ ದಕ್ಷಿಣಮುಖೀ ಹನುಮಾನ ಗೋಶಾಲೆಯಲ್ಲಿ ನಡೆದ ಗೋವುಗಳಿಗೆ ಮೊಸರು ನೀಡುವ ಮತ್ತು ಉಚಿತ ಗೋ ಮೂತ್ರ ವಿತರಣೆ ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿ ಮಾತನಾಡಿದರು.

ಡಾ| ಯುವರಾಜ ಜಾಧವ ಮಾತನಾಡಿ, ಗೋ ಮೂತ್ರ ಸೇವನೆಯಿಂದ ಮನುಷ್ಯರ ಸರ್ವ ರೋಗಗಳು ಪರಿಹಾರ ಆಗುತ್ತವೆ. ಗೋಶಾಲೆಯಲ್ಲಿ ಶುದ್ಧ ದೇಶಿ ಸಗಣಿ ಬಳಸಿ ವಿಭೂತಿ ಹಾಗು ಸೊಳ್ಳೆಗಳನ್ನು ಹೊಡೆದೋಡಿಸುವ ಬತ್ತಿ, ಗಡಿಯಾರ, ಗಣಪತಿ, ದೇವರ ಮೂರ್ತಿ, ಗಲ್ಲಾ ಪಟ್ಟಿಗೆ, ಮಹಾದೇವ ಪಿಂಡ, ಕುಂಕುಮ ಡಬ್ಬಿ, ಮನೆಯಲ್ಲಿ ಬೆಳಸುವ ಡಿಸೈನ್‌ ವಸ್ತುಗಳನ್ನು ಸೇರಿದಂತೆ ಸುಮಾರು 20 ರೀತಿಯ ಸಾಮಗ್ರಿಗಳನ್ನು ತಯಾರಿಸುವ ಗೋಶಾಲೆಯ ವ್ಯವಸ್ಥಾಪಕ ಸಂತೋಷ ಮುರಾಳೆಯವರ ಕಾರ್ಯ ಯುವಕರಿಗೆ ಮಾದರಿಯಾಗಿದೆ ಎಂದು ಬಣ್ಣಿಸಿದರು.

ಈ ಸಂದರ್ಭದಲ್ಲಿ ದಕ್ಷಿಣಮುಖೀ ಹನುಮಾನ ಗೋಶಾಲೆಯ ವತಿಯಿಂದ ಪುರಸಭೆ ನೂತನ ಅಧ್ಯಕ್ಷ ಬಸವರಾಜ ವಂಕೆ, ಉಪಾಧ್ಯಕ್ಷೆ ರಾಜೇಶ್ವರಿ ರಾಜಕುಮಾರಮೋರೆ ಅವರನ್ನು ಸನ್ಮಾನಿಸಲಾಯಿತು. ಪುರಸಭೆ ಸದಸ್ಯ ವಿಜಯಕುಮಾರ ರಾಜಭವನ, ವೈದ್ಯರಾದ ಡಾ| ವಸಂತ ಪವಾರ, ಡಾ| ಅಮಿತ ಅಷ್ಟೂರೆ, ಓಂ ಬಿಜಿಪಾಟೀಲ, ಗೋಶಾಲೆಯ ಪ್ರಮುಖರಾದ ಸಂತೋಷ ಮುರಾಳೆ, ಪುರಸಭೆ ಮಾಜಿ ಸದಸ್ಯ ಶಾಮ ತಮಗ್ಯಾಳೆ, ಸಾಗರ ಭೊಸಲೆ ಉಪಸ್ಥಿತರಿದ್ದರು.

ಟಾಪ್ ನ್ಯೂಸ್

1-24-saturday

Daily Horoscope: ಉದ್ಯೋಗ ಸ್ಥಾನದಲ್ಲಿ ನೆಮ್ಮದಿಯ ವಾತಾವರಣ, ಅಕಸ್ಮಾತ್‌ ಧನಪ್ರಾಪ್ತಿ

Heavy Rain; ದುಬಾೖ ಪ್ರಯಾಣ ಬೇಡ: ಸಲಹೆ

Heavy Rain; ದುಬಾೖ ಪ್ರಯಾಣ ಬೇಡ: ಸಲಹೆ

ಇಂದು ಚಿಕ್ಕಬಳ್ಳಾಪುರ, ಬೆಂಗಳೂರಲ್ಲಿ ಮೋದಿ ಗರ್ಜನೆ: ಒಂದೂವರೆ ಲಕ್ಷ ಜನ ಸೇರುವ ನಿರೀಕ್ಷೆ

ಇಂದು ಚಿಕ್ಕಬಳ್ಳಾಪುರ, ಬೆಂಗಳೂರಲ್ಲಿ ಮೋದಿ ಗರ್ಜನೆ: ಒಂದೂವರೆ ಲಕ್ಷ ಜನ ಸೇರುವ ನಿರೀಕ್ಷೆ

voter

Vote ಮಾಡದಿದ್ದರೆ ಬ್ಯಾಂಕ್‌ ಖಾತೆಯಿಂದ 350 ರೂ. ಕಡಿತ?

gold

Gold 10 ಗ್ರಾಂ ಬೆಲೆ 74,100 ರೂ.: ಇದು ನೂತನ ದಾಖಲೆ

1-aqweq

Delhi ತವರಿಗೆ ಮರಳಿದ ಖುಷಿಯಲ್ಲಿ: ಕೋಟ್ಲಾದಲ್ಲಿ ಹೈದರಾಬಾದ್‌ ವಿರುದ್ಧ ಮುಖಾಮುಖಿ

ರಾಜ್ಯ 2ನೇ ಹಂತ: 337 ಮಂದಿ ಕಣಕ್ಕೆ: ನಾಮಪತ್ರ ಸಲ್ಲಿಕೆ ಮುಕ್ತಾಯ, ಇಂದು ಪರಿಶೀಲನೆ

ರಾಜ್ಯ 2ನೇ ಹಂತ: 337 ಮಂದಿ ಕಣಕ್ಕೆ: ನಾಮಪತ್ರ ಸಲ್ಲಿಕೆ ಮುಕ್ತಾಯ, ಇಂದು ಪರಿಶೀಲನೆ


ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು

Minchu

Bidar; ಬಿರುಗಾಳಿ‌ ಸಹಿತ ಭಾರಿ ಮಳೆ :ಸಿಡಿಲು ಬಡಿದು‌ ರೈತ ಸಾವು

Bidar; ನಾಮಪತ್ರ ಸಲ್ಲಿಸಲು ಓಡೋಡಿ ಬಂದ ಖೂಬಾ

Bidar; ನಾಮಪತ್ರ ಸಲ್ಲಿಸಲು ಓಡೋಡಿ ಬಂದ ಖೂಬಾ

Bidar ಬಿಜೆಪಿಯ ಹಿರಿಯ ಮುಖಂಡ, ಮಾಜಿ ಶಾಸಕ ರಮೇಶ ಕುಮಾರ್ ಪಾಂಡೆ ನಿಧನ

Bidar ಬಿಜೆಪಿಯ ಹಿರಿಯ ಮುಖಂಡ, ಮಾಜಿ ಶಾಸಕ ರಮೇಶ ಕುಮಾರ್ ಪಾಂಡೆ ನಿಧನ

UPSC Result: ಬೀದರ್ ನ ಮೊಹಮ್ಮದ್ ಅಸೀಮ್‌ ಮುಜತೇಬಾಗೆ 481ನೇ ರ‍್ಯಾಂಕ್‌

UPSC Result: ಬೀದರ್ ನ ಮೊಹಮ್ಮದ್ ಅಸೀಮ್‌ ಮುಜತೇಬಾಗೆ 481ನೇ ರ‍್ಯಾಂಕ್‌

1-eqwewqeqwe

Bidar; ಬಿಜೆಪಿಗೆ ನಾಗಮಾರಪಳ್ಳಿ ಕುಟುಂಬದ ಬೆಂಬಲ

MUST WATCH

udayavani youtube

‘ಕಸಿ’ ಕಟ್ಟುವ ಸುಲಭ ವಿಧಾನ

udayavani youtube

ಬೇಸಿಗೆಯಲ್ಲಿ ನಮ್ಮನ್ನು ಕಾಡುವ Heat Illnessಏನಿದು ಸಮಸ್ಯೆ ? ಪರಿಹಾರವೇನು ?

udayavani youtube

ದ್ವಾರಕೀಶ್ ನಿಧನಕ್ಕೆ ನಟ ಶಿವರಾಜ್ ಕುಮಾರ್ ಸಂತಾಪ

udayavani youtube

ದೇವೇಗೌಡರಿದ್ದ ವೇದಿಕೆಗೆ ನುಗ್ಗಿದ ಕಾಂಗ್ರೆಸ್‌ ಕಾರ್ಯಕರ್ತೆಯರು

udayavani youtube

ಮಂಗಳೂರಿನಲ್ಲಿ ಪ್ರಧಾನಿ ಶ್ರೀ Narendra Modi ಅವರ ಬೃಹತ್‌ ರೋಡ್‌ ಶೋ

ಹೊಸ ಸೇರ್ಪಡೆ

1-24-saturday

Daily Horoscope: ಉದ್ಯೋಗ ಸ್ಥಾನದಲ್ಲಿ ನೆಮ್ಮದಿಯ ವಾತಾವರಣ, ಅಕಸ್ಮಾತ್‌ ಧನಪ್ರಾಪ್ತಿ

Heavy Rain; ದುಬಾೖ ಪ್ರಯಾಣ ಬೇಡ: ಸಲಹೆ

Heavy Rain; ದುಬಾೖ ಪ್ರಯಾಣ ಬೇಡ: ಸಲಹೆ

1-qweqwqe

Ban in Singapore; ಎವರೆಸ್ಟ್‌ ಮಸಾಲಾದಲ್ಲಿ ಕ್ರಿಮಿನಾಶಕ ಅಂಶ?

ಇಂದು ಚಿಕ್ಕಬಳ್ಳಾಪುರ, ಬೆಂಗಳೂರಲ್ಲಿ ಮೋದಿ ಗರ್ಜನೆ: ಒಂದೂವರೆ ಲಕ್ಷ ಜನ ಸೇರುವ ನಿರೀಕ್ಷೆ

ಇಂದು ಚಿಕ್ಕಬಳ್ಳಾಪುರ, ಬೆಂಗಳೂರಲ್ಲಿ ಮೋದಿ ಗರ್ಜನೆ: ಒಂದೂವರೆ ಲಕ್ಷ ಜನ ಸೇರುವ ನಿರೀಕ್ಷೆ

voter

Vote ಮಾಡದಿದ್ದರೆ ಬ್ಯಾಂಕ್‌ ಖಾತೆಯಿಂದ 350 ರೂ. ಕಡಿತ?

Thanks for visiting Udayavani

You seem to have an Ad Blocker on.
To continue reading, please turn it off or whitelist Udayavani.