ದೀಪದಿಂದ ಆತ್ಮನಿರ್ಭರತೆ ಶಕ್ತಿ ಪ್ರಜ್ವಲಿಸಲಿ: ಸ್ವಾಮೀಜಿ


Team Udayavani, Dec 16, 2020, 7:12 PM IST

ದೀಪದಿಂದ ಆತ್ಮನಿರ್ಭರತೆ ಶಕ್ತಿ ಪ್ರಜ್ವಲಿಸಲಿ: ಸ್ವಾಮೀಜಿ

ಬೀದರ: ಜ್ಞಾನದ ಪ್ರತೀಕವಾಗಿರುವ ದೀಪವನ್ನು ಬೆಳಗುವುದರಿಂದ ಮನುಷ್ಯರಲ್ಲಿ ಆತ್ಮ ನಿರ್ಭರತೆಯ ದಿವ್ಯಶಕ್ತಿ ಸಹಜವಾಗಿ ತುಂಬಿ ಬರುತ್ತದೆ ಎಂದು ಬೇಮಳೇಡ ಹಿರೇಮಠದ ಕಿ. ರಾಜಶೇಖರ ಶಿವಾಚಾರ್ಯರುನುಡಿದರು.

ನಗರದ ನೌಬಾದ್‌ ಬಳಿಯ ಜ್ಞಾನ ಶಿವಯೋಗಾಶ್ರಮದಲ್ಲಿ ಏರ್ಪಡಿಸಿದ್ದ ಕಾರ್ತಿಕ ದೀಪೋತ್ಸವದ ನೇತೃತ್ವ ವಹಿಸಿ ಮಾತನಾಡಿದ ಅವರು, ಭಾರತೀಯರಿಗೆ ಶ್ರಾವಣದಂತೆ ಕಾರ್ತಿಕ ಮಾಸವು ಅಷ್ಟೇ ಪವಿತ್ರವಾಗಿದೆ. ಸುಂದರ ಮತ್ತು ಸಮೃದ್ಧ ಜೀವನಕ್ಕಾಗಿ ಕಾರ್ತಿಕ ದೀಪಾರಾಧನೆಯನ್ನು ಸನಾತನ ಕಾಲದಿಂದಲೂ ಮಾಡಿಕೊಂಡು ಬರಲಾಗುತ್ತಿದ್ದು, ಈ ವರ್ಷ ಕೊರೊನಾ ಮಹಾಮಾರಿ ವಿನಾಶಾರ್ಥಕ್ಕಾಗಿ ಆಶ್ರಮದಲ್ಲಿ ಕಾರ್ತಿಕ ದೀಪೋತ್ಸವ ನಡೆಸಲಾಗುತ್ತಿದೆ ಎಂದು ಹೇಳಿದರು.

ಇದನ್ನೂ ಓದಿ:ಹಂದಿ ಸಾಕಾಣಿಕೆಗೆ ಸರ್ಕಾರಿ ಜಾಗ ಗುರುತಿಸಿ

ಜೀವನದಲ್ಲಿ ಅನೇಕ ಕಷ್ಟಕಾರ್ಪಣ್ಯಗಳು ಬರುವುದು ಸಹಜವಾಗಿದ್ದು, ಅವುಗಳನ್ನು ಧೈರ್ಯದಿಂದ ಎದುರಿಸಬೇಕು. ನಮ್ಮಲ್ಲಿ ಆ ಧೈರ್ಯ ಬರಬೇಕಾದರೆ ಪ್ರತಿಯೊಬ್ಬರೂ ಕಾರ್ತಿಕ ದೀಪಾರಾಧನೆ ದೀಪೋತ್ಸವವನ್ನು ತಪ್ಪದೇ ಆಚರಿಸಬೇಕು ಎಂದರು.
ಶ್ರೀಶೈಲದ ಅಕ್ಕಮಹಾದೇವಿ ಚೈತನ್ಯ ಪೀಠದ ಕರುಣಾದೇವಿ ಮಾತಾ ಕಾರ್ತಿಕ ದೀಪೋತ್ಸವಕ್ಕೆ ಚಾಲನೆ ನೀಡಿದರು. ಮಲ್ಲಿಕಾರ್ಜುನ ಸ್ವಾಮಿ ಧನ್ನೂರ ಅಧ್ಯಕ್ಷತೆ ವಹಿಸಿದ್ದರು. ಕಾಶಿನಾಥ ಶಂಭು, ರೇವಪ್ಪಾ ಮುದ್ದಾ, ಶಕುಂತಲಾ ತಂಬಾಕೆ, ಡಾ| ಸುಭಾಷ ಪಾಟೀಲ, ಸಂಗಶೆಟ್ಟಿ ಚಿದ್ರಿ, ಮಾದಪ್ಪ ಭಂಗೂರೆ, ಮಹಾದೇವಿ ಮಠಪತಿ, ಸಂಗಮೇಶ ಬಿರಾದಾರ, ಹಣಮಂತಪ್ಪ ಕಪಲಾಪುರ, ಮಲ್ಲಿಕಾರ್ಜುನ ಶಂಭು,  ಶಿವಯ್ಯ ಸ್ವಾಮಿ, ಮಹಾಂತೇಶ ಡೊಂಗರಗಿ, ರಾಜಕುಮಾರ ಮಾಳಗೆ, ಸುರೇಶ ಶಂಭು, ಪ್ರತಾಪ ತಾಂಬಾಕೆ, ಲೋಕೇಶ ಡೊಂಗರಗಿ, ಶಿವರಾಜ ಕೊಳಾರ ಇದ್ದರು. ಡೊಂಗರಗಿ ಭಜನಾ ಮಂಡಳಿಯಿಂದ ಭಜನಾ ಕಾರ್ಯಕ್ರಮ ಜರುಗಿತು.

ಟಾಪ್ ನ್ಯೂಸ್

Bangladesh PM: ಚೀನಾ ಬಗ್ಗೆ ಮುನಿಸು: ಪ್ರವಾಸ ಮೊಟಕುಗೊಳಿಸಿ ಮರಳಿದ ಬಾಂಗ್ಲಾ ಪ್ರಧಾನಿ

Bangladesh PM: ಚೀನಾ ಬಗ್ಗೆ ಮುನಿಸು: ಪ್ರವಾಸ ಮೊಟಕುಗೊಳಿಸಿ ಮರಳಿದ ಬಾಂಗ್ಲಾ ಪ್ರಧಾನಿ

Car-Fire

Car Catches Fire: ಮಡಿಕೇರಿ ಬಳಿ ಬೆಂಕಿಗಾಹುತಿಯಾದ ಕಾರು!

Kalyana-Karnataka

Hyderbad-Karnataka 371(J) ಸಮರ್ಪಕ ಅನುಷ್ಠಾನಕ್ಕಾಗಿ ಜು.22, 23ರಂದು ಪ್ರತಿಭಟನೆ

1-asdsadsa-a

Mangaluru; MSPC ಗೆ ದಿಢೀರ್ ಭೇಟಿ ನೀಡಿ ಪರಿಶೀಲಿಸಿದ ಸಚಿವೆ ಹೆಬ್ಬಾಳ್ಕರ್

Rain-M

Heavy Rain: ಉಡುಪಿ, ದಕ್ಷಿಣ ಕನ್ನಡ ಸೇರಿ 6 ಜಿಲ್ಲೆಗಳಿಗೆ ರೆಡ್‌ ಅಲರ್ಟ್‌

9

Imran Khan: ಅಕ್ರಮ ವಿವಾಹ ಕೇಸ್‌; ಪಾಕ್‌ ಮಾಜಿ ಪ್ರಧಾನಿ ಇಮ್ರಾನ್‌ ಖುಲಾಸೆ

1-reee

Mangaluru; ಟ್ರಾಫಿಕ್ ದಟ್ಟಣೆಯಿಂದ ಕಂಗೆಟ್ಟ ಸ್ಪೀಕರ್: ತ್ವರಿತ ಕ್ರಮಕ್ಕೆ ಆದೇಶ


ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು

Bommai BJP

MUDA ಹಗರಣವಾಗದಿದ್ದಲ್ಲಿ ತನಿಖೆಗೆ ಯಾಕೆ ಹಿಂಜರಿಕೆ: ಬೊಮ್ಮಾಯಿ ಪ್ರಶ್ನೆ

gadaga

Gadag; ಸುಪ್ರೀಂ ಕೋರ್ಟ್ ನಲ್ಲಿ ದಾಖಲಾಗಿದ್ದ ಪ್ರಕರಣ ಜಿಲ್ಲಾ ಕೋರ್ಟ್ ನಲ್ಲಿ ಅಂತ್ಯಕಂಡಿತು

Gadag; 4 couples who had applied for divorce get united in Lok Adalat

Gadag; ವಿಚ್ಛೇದನಕ್ಕೆ ಅರ್ಜಿ ಸಲ್ಲಿಸಿದ್ದ 4 ಜೋಡಿಗಳು ಲೋಕ ಅದಾಲತ್ ನಲ್ಲಿ ಒಂದಾದರು

ಪ್ರವಾಸೋದ್ಯಮ ವ್ಯಾಪ್ತಿಯಲ್ಲಿ ಅಕ್ರಮ; ತಪ್ಪು ಮಾಡಿದ್ದರೆ ಕಠಿಣ ಕ್ರಮ: ಎಚ್.ಕೆ.ಪಾಟೀಲ

ಪ್ರವಾಸೋದ್ಯಮ ಇಲಾಖೆ ವ್ಯಾಪ್ತಿಯಲ್ಲಿ ಅಕ್ರಮ; ತಪ್ಪು ಮಾಡಿದ್ದರೆ ಕಠಿಣ ಕ್ರಮ: ಎಚ್.ಕೆ.ಪಾಟೀಲ

Dengue Fever; ಶಂಕಿತ ಡೆಂಗ್ಯೂಗೆ ಬಾಲಕಿ ಬಲಿ

Dengue Fever; ಶಂಕಿತ ಡೆಂಗ್ಯೂಗೆ ಬಾಲಕಿ ಬಲಿ

MUST WATCH

udayavani youtube

ಕಾಡಾನೆ ದಾಳಿಯಿಂದ ಜಸ್ಟ್ ಮಿಸ್ |ಭಯಾನಕ ಕಾಡಾನೆಯಿಂದ ಜಸ್ಟ್ ಮಿಸ್ ವಿಡಿಯೋ ಸೆರೆ

udayavani youtube

ಅನಂತ್- ರಾಧಿಕಾ ಮದುವೆ ಮಂಟಪದಲ್ಲಿ ಕಾಶಿ ಬನಾರಸ್ ಘಾಟ್ ಗಳ ಮರುಸೃಷ್ಟಿ

udayavani youtube

ತೆಂಕನಿಡಿಯೂರು ಗ್ರಾಮ ಪಂಚಾಯತ್ ನಲ್ಲಿ ಸದಸ್ಯರ ಜಟಾಪ

udayavani youtube

ಮಾತು ನಿಲ್ಲಿಸಿದ ಅಪರ್ಣಾ | ಗೆಳತಿಯರೊಂದಿಗೆ ಕಳೆದ ಭಾವನಾತ್ಮಕ ಕ್ಷಣಗಳು

udayavani youtube

ಪದ್ಮಶ್ರೀ ಪುರಸ್ಕೃತ ಹಿರಿಯ ಕಳರಿ ಕಲೆಯ ಛಲಗಾರ್ತಿ ಮೀನಾಕ್ಷಿ ಅಮ್ಮ

ಹೊಸ ಸೇರ್ಪಡೆ

Bangladesh PM: ಚೀನಾ ಬಗ್ಗೆ ಮುನಿಸು: ಪ್ರವಾಸ ಮೊಟಕುಗೊಳಿಸಿ ಮರಳಿದ ಬಾಂಗ್ಲಾ ಪ್ರಧಾನಿ

Bangladesh PM: ಚೀನಾ ಬಗ್ಗೆ ಮುನಿಸು: ಪ್ರವಾಸ ಮೊಟಕುಗೊಳಿಸಿ ಮರಳಿದ ಬಾಂಗ್ಲಾ ಪ್ರಧಾನಿ

13

Udupi: ಉಚ್ಚಿಲ ಮೂಳೂರು; ಶಾಲಾ ಬಸ್‌ಗೆ ಕಾರು ಢಿಕ್ಕಿ

Car-Fire

Car Catches Fire: ಮಡಿಕೇರಿ ಬಳಿ ಬೆಂಕಿಗಾಹುತಿಯಾದ ಕಾರು!

11

Padubidri: 29 ವರ್ಷಗಳಿಂದ ತಲೆಮರೆಸಿಕೊಂಡಿದ್ದ ಆರೋಪಿ ಸೆರೆ

Kalyana-Karnataka

Hyderbad-Karnataka 371(J) ಸಮರ್ಪಕ ಅನುಷ್ಠಾನಕ್ಕಾಗಿ ಜು.22, 23ರಂದು ಪ್ರತಿಭಟನೆ

Thanks for visiting Udayavani

You seem to have an Ad Blocker on.
To continue reading, please turn it off or whitelist Udayavani.