ಲಿಂಗಾಯತ-ಪಂಚಾಚಾರ್ಯ ಧರ್ಮ ಭಿನ್ನ

Team Udayavani, Feb 18, 2019, 9:05 AM IST

bid-1.jpg

ಬೀದರ: ಲಿಂಗಾಯತ ಧರ್ಮಕ್ಕೂ ಪಂಚಾಚಾರ್ಯರ ಧರ್ಮಕ್ಕೂ ಬಹಳ ವ್ಯತಾಸವಿದೆ. ಲಿಂಗಾಯತರು ಇಷ್ಟಲಿಂಗ ಪೂಜಿಸಿದರೆ, ಪಂಚಾರ್ಯರು ಸ್ಥಾವರ ಲಿಂಗ ಪೂಜಿಸುತ್ತಾರೆ ಎಂದು ಜಾಗತಿಕ ಲಿಂಗಾಯತ ಮಹಾಸಭಾ ಪ್ರಧಾನ ಕಾರ್ಯದರ್ಶಿ ಡಾ|ಎಸ್‌. ಎಂ. ಜಾಮದಾರ ಹೇಳಿದರು.

ನಗರದ ಬಸವಗಿರಿಯಲ್ಲಿ ನಡೆದ 16ನೇ ವಚನ ವಿಜಯೋತ್ಸವದಲ್ಲಿ ನಡೆದ ಲಿಂಗಾಯತ ಜಾಗೃತಿ ಸಮಾವೇಶದಲ್ಲಿ ಮಾತನಾಡಿದ ಅವರು, ಲಿಂಗಾಯತ ಧರ್ಮದಲ್ಲಿ ಏಕ ದೇವೋಪಾಸಾನೆ ಆಚರಣೆಯಾದರೆ, ಅಲ್ಲಿ ಬಹುದೇವ ಉಪಾಸನೆ ಜಾರಿಯಲ್ಲಿದೆ. ಇಲ್ಲಿ ಜ್ಯೋತಿಷಿಗಳಿಗೆ ಸ್ಥಾನವಿಲ್ಲ. 

ಆದರೆ ಅಲ್ಲಿ ಪುರಾಣ, ಮೂಢನಂಬಿಕೆ, ಕಂದಾಚಾರಗಳಿಗೆ ಸ್ಥಾನವಿದೆ. ಬಸವ ತತ್ವವು ವೈಜ್ಞಾನಿಕ ತಳಹದಿ ಮೇಲೆ ನಿಂತಿದೆ ಎಂದರು. ಇತ್ತೀಚೆಗೆ ಕರ್ನಾಟಕ ಸರಕಾರವು 15 ವಚನ ಸಂಪುಟಗಳನ್ನು ಪ್ರಕಟಿಸಿದೆ. ಪ್ರಪಂಚದ ಮೊಟ್ಟಮೊದಲನೇಯ ವಿಶ್ವದ ಪಾರ್ಲಿಮೆಂಟ್‌ ಅನ್ನು ಬಸವಣ್ಣನವರು ಸ್ಥಾಪನೆ ಮಾಡಿದರು.

ಲಿಂಗಾಯತ ಧರ್ಮದಲ್ಲಿ ಸರ್ವರಿಗೂ ಸಮನಾದ ಅವಕಾಶವಿದೆ. ವಿಶ್ವದಲ್ಲಿ ಶಾಂತಿ ನೆಲೆಸುವುದು ಬಸವಣ್ಣನವರ ಹಾಗೂ ಶರಣರ ವಚನಗಳಿಂದ ಮಾತ್ರ ಸಾಧ್ಯ ಎಂದ ಅವರು, ಕಲ್ಯಾಣ ಕರ್ನಾಟಕ ಪವಿತ್ರ ಭೂಮಿಯಾಗಿದೆ. ಈ ಭಾಗದಲ್ಲಿ ಶರಣರ ಚಿಂತನೆಗಳನ್ನು ಜನರಿಗೆ ಮುಟ್ಟಿಸುವ ಕೆಲಸ ನಡೆಯುತ್ತಿರುವುದು ಸಂತಸ ತಂದಿದೆ ಎಂದರು. 

ಬಿ.ಜಿ.ಶಟಕಾರ, ಬಸವರಾಜ ಬುಳ್ಳಾ, ಶಂಕರ ಗೂಡಸ್‌, ಹನುಮೇಶ ಕಲಮಂಗಿ, ಡಾ| ಸೋಮನಾಥ ಯಾಳವಾರ, ಪ್ರಭುರಾವ ವಸಮತೆ, ಶ್ರೀಕಾಂತ ಸ್ವಾಮಿ, ಪ್ರಭುಲಿಂಗ ಮಹಾಗಾಂವಕರ, ಡಾ| ರವಿಕುಮಾರ ಬಿರಾದಾರ, ರವಿ ಕೊಳಕೂರ, ಸೋಮಶೇಖರ ಪಾಟೀಲ ಗಾದಗಿ, ರಾಜಶೇಖರ ಯಂಕಂಚಿ, ಡಾ| ಜಗನ್ನಾಥ ಹೆಬ್ಟಾಳೆ, ವೀರಶೆಟ್ಟಿ ಮಣಗೆ, ರವೀಂದ್ರ ಶಾಬಾದಿ, ರಾಜಕುಮಾರ ಪಾಟೀಲ, ಆನಂದ ದೇವಪ್ಪ, ರಾಜೇಂದ್ರ ಕುಮಾರ ಗಂದಗೆ, ಕಲ್ಯಾಣಪ್ಪ ಕಲಬುರಗಿ, ಪಿ. ಚನ್ನಬಸವಣ್ಣ, ಅನೀಲಕುಮಾರ ಪನಾಳೆ, ಸಂಜಯ ಪಾಟೀಲ, ಸುಭಾಷ ಕೋಣಿನ್‌, ಅಪ್ಪಾರಾವ್‌ ಗೂನಳ್ಳಿ, ಲಿಂಗಾನಂದ ಮಹಾಜನ, ರಾಜಕುಮಾರ ಬೇಲೂರ, ಲಿಂಗರಾಜ ಶಾಶೆಟ್ಟಿ, ಮಲ್ಲಿಕಾರ್ಜುನ ಬಾಗೇವಾಡಿ, ಶರಣಬಸವಗೌಡ,‌ಗಿ ಇದ್ದರು.

12ನೇ ಶತಮಾನದ ನಂತರದ ವರ್ಷಗಳಲ್ಲಿ ಕೇವಲ 350 ವಚನಗಳು ದೊರೆಕಿದ್ದವು. ಆ ನಂತರ ಸಂಶೋಧನೆ ಹುಡುಕಾಟದ ನಂತರ 15 ಸಾವಿರ ವಚನಗಳು ಸಿಕ್ಕಿವೆ. ಪುರೋಹಿತಶಾಹಿಗಳು ಪಟ್ಟಭದ್ರ ಹಿತಾಸಕ್ತಿಗಳು ಸಾವಿರಾರು ವಚನಗಳನ್ನು ನಾಶ ಪಡಿಸಿದ್ದಾರೆ. 
 ಡಾ| ಎಸ್‌.ಎಂ. ಜಾಮದಾರ, ಜಾಗತಿಕ ಲಿಂಗಾಯತ ಮಹಾಸಭಾ ಪ್ರಧಾನ ಕಾರ್ಯದರ್ಶಿ

ಸಾಮೂಹಿಕ ಇಷ್ಟಲಿಂಗ ಪೂಜ ಅಂಗ-ಲಿಂಗ ಒಂದಾದರೆ ಜೀವನ ಸಮರಸ  
ಬೀದರ: 16ನೇ ವಚನ ವಿಜಯೋತ್ಸವ ನಿಮಿತ್ಯ ರವಿವಾರ ಬಸವಗಿರಿಯಲ್ಲಿ ಸಾಮೂಹಿಕ ಇಷ್ಟಲಿಂಗ ಪೂಜೆ ಜರುಗಿತು. ಜಗನ್ನಾಥ ರಾಯಚೋಟ್ಟಿ ಮಾತನಾಡಿ, ಅಂಗ-ಲಿಂಗ ಒದಾದರೆ ಜೀವನ ಸಮರಸವಾಗುತ್ತದೆ. ಪ್ರತಿನಿತ್ಯ ಲಿಂಗಾರ್ಚನೆ ಮಾಡುವ ಮೂಲಕ ಜೀವನ ಸ್ವಾರ್ಥಕ ಮಾಡಿಕೊಳ್ಳಬೇಕು ಎಂದು ಹೇಳಿದರು.

ಅಕ್ಕ ಅನ್ನಪೂರ್ಣ ಅವರು ಮಾತನಾಡಿ, ಲಿಂಗಾರ್ಚನೆ ಮೂಲಕ ಜೀವನದಲ್ಲಿ ಒತ್ತಡದಿಂದ ಹೊರಬರ ಬರಲು ಸಾಧ್ಯ. ವೈಜ್ಞಾನಿ ದೃಷ್ಟಿಯಿಂದ ಕೂಡಿದ ಲಿಂಗಾರ್ಚನೆಯಿಂದ ದುಃಖ ದುಮ್ಮಾನಗಳಿಂದ ಹೋರಬರಲು ಸಾಧ್ಯವಾಗುತ್ತದೆ. ಜೀವನದಲ್ಲಿ ಸಂತೃಪ್ತಿ ನೆಮ್ಮದಿ, ಶಾಂತಿ ನೆಲೆಗೊಳಿಸಬೇಕಾದರೆ ನಿತ್ಯ ಪ್ರತಿಯೊಬ್ಬರು ಇಷ್ಟಲಿಂಗ ಪೂಜೆ ಮಾಡಬೇಕು.

ಪರಮ ಸತ್ಯ ಅರಿಯಬೇಕಾದರೆ ಇಷ್ಟಲಿಂಗದ ಮೊರೆ ಹೋಗಬೇಕು. ಇಷ್ಟಲಿಂಗದಲ್ಲಿ ಆರ್ಕಷಣೆ ಶಕ್ತಿಯಿದೆ. ಮಾನಸಿಕ ನೆಮ್ಮದಿ ಇದೆ. ಶಾರರೀಕವಾಗಿ ಸದೃಢಗೊಳಿಸುತ್ತದೆ ಎಂದು ವಿವರಿಸಿದರು. ಶ್ರೀ ತೋಂಟದಾರ್ಯ ಸಿದ್ಧಲಿಂಗ ಮಹಾಸ್ವಾಮಿ, ರಮೇಶ ಮಠಪತಿ ಲಿಂಗಪೂಜಾ ವಿಧಾನಗಳನ್ನು ವಿವರಿಸಿದರು. ಡಾ| ಗಂಗಾಂಬಿಕಾ, ಪ್ರಭುದೇವರು, ಸಿದ್ಧರಾಮಪ್ಪ ಕಪಲಾಪುರೆ, ಪ್ರಶಾಂತ ಪರ್ತಾಪುರೆ, ಶಿವಾನಂದ ಪಾಟೀಲ, ಚಂದ್ರಕಾಂತ ರತ್ನಾಪುರೆ, ಶರಣ ಕಂಟೆಪ್ಪ ಗಂದಿಗುಡೆ, ಮಲ್ಲಮ್ಮ ನಾಗನಕೇರಿ, ವಿದ್ಯಾವತಿ ಸೋಮನಾಥಪ್ಪ ಅಷೂರ, ವಿರೂಪಾಕ್ಷ ಗಾದಗಿ, ಅಣ್ಣಾರಾವ್‌ ಮೊಗಶೆಟ್ಟಿ, ಶರಣಪ್ಪ ಬಿರಾದಾರ, ಜಗನ್ನಾಥ ರಾಯಚೋಟಿ, ಅಣ್ಣಾರಾವ್‌ ಮೊಗಶೆಟ್ಟಿ, ಶರಣಪ್ಪ ಬಿರಾದಾರ, ಶರಣ ಚಂದ್ರಶೇಖರ ಉಳಗಡ್ಡಿ, ಶಾಮರಾವ್‌ ಮೋರಗಿಕರ್‌, ಹಣಮಂತರಾವ್‌ ಕೊಳಕ್ಕೂರ, ಅರವಿಂದ ರಗಟೆ, ಸಂತೋಷ ಹಡಪದ, ವೀರೇಶ ಜಗನ್ನಾಥ ಸಿರ್ಸೆ, ಚಂದ್ರಕಾಂತ ಹೆಬ್ಟಾಳೆ, ಹಾವಗಿರಾವ್‌ ವಟಗೆ, ಸಂತೋಷ ಪಾಟೀಲ ಉಪಸ್ಥಿತರಿದ್ದರು. 

ಟಾಪ್ ನ್ಯೂಸ್

ರಾಜ್ಯದಲ್ಲಿ ಎನ್‌ಕೌಂಟರ್‌ ಕಾನೂನು ಜಾರಿ ಅವಶ್ಯ: ಸಂತೋಷ್‌ ಲಾಡ್‌

ರಾಜ್ಯದಲ್ಲಿ ಎನ್‌ಕೌಂಟರ್‌ ಕಾನೂನು ಜಾರಿ ಅವಶ್ಯ: ಸಂತೋಷ್‌ ಲಾಡ್‌

ವೈಯಕ್ತಿಕ ಕಾರಣಗಳಿಂದ ರಾಜ್ಯದಲ್ಲಿ ಕೊಲೆ: ಸಿಎಂ ಸಿದ್ದರಾಮಯ್ಯ

ವೈಯಕ್ತಿಕ ಕಾರಣಗಳಿಂದ ರಾಜ್ಯದಲ್ಲಿ ಕೊಲೆ: ಸಿಎಂ ಸಿದ್ದರಾಮಯ್ಯ

ಯುವತಿ ಹತ್ಯೆ ಲವ್‌ ಜೆಹಾದ್‌ ಅಲ್ಲ: ಡಾ| ಜಿ.ಪರಮೇಶ್ವರ್‌

ಯುವತಿ ಹತ್ಯೆ ಲವ್‌ ಜೆಹಾದ್‌ ಅಲ್ಲ: ಡಾ| ಜಿ.ಪರಮೇಶ್ವರ್‌

1aaaa

IPL; ಚೆನ್ನೈ ವಿರುದ್ಧ ಲಕ್ನೋಗೆ 8 ವಿಕೆಟ್ ಗಳ ಅಮೋಘ ಜಯ

Siddaramaiah ಸರಕಾರದಲ್ಲಿ ಹಿಂದೂಗಳ ರಕ್ತಕ್ಕೆ ಬೆಲೆ ಇಲ್ಲ: ಅಶೋಕ್‌

Siddaramaiah ಸರಕಾರದಲ್ಲಿ ಹಿಂದೂಗಳ ರಕ್ತಕ್ಕೆ ಬೆಲೆ ಇಲ್ಲ: ಅಶೋಕ್‌

ಚೊಂಬಿನ ಮೂಲಕ ಮೋದಿ ಸ್ವಾಗತಕ್ಕೆ ಕಾಂಗ್ರೆಸ್‌ ಸಿದ್ಧತೆ

ಚೊಂಬಿನ ಮೂಲಕ ಮೋದಿ ಸ್ವಾಗತಕ್ಕೆ ಕಾಂಗ್ರೆಸ್‌ ಸಿದ್ಧತೆ

Congresss ಚೊಂಬು ಜಾಹೀರಾತು ವಿರುದ್ಧ ಬಿಜೆಪಿ ಚಾರ್ಜ್‌ಶೀಟ್‌

Congresss ಚೊಂಬು ಜಾಹೀರಾತು ವಿರುದ್ಧ ಬಿಜೆಪಿ ಚಾರ್ಜ್‌ಶೀಟ್‌

ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು

Minchu

Bidar; ಬಿರುಗಾಳಿ‌ ಸಹಿತ ಭಾರಿ ಮಳೆ :ಸಿಡಿಲು ಬಡಿದು‌ ರೈತ ಸಾವು

Bidar; ನಾಮಪತ್ರ ಸಲ್ಲಿಸಲು ಓಡೋಡಿ ಬಂದ ಖೂಬಾ

Bidar; ನಾಮಪತ್ರ ಸಲ್ಲಿಸಲು ಓಡೋಡಿ ಬಂದ ಖೂಬಾ

Bidar ಬಿಜೆಪಿಯ ಹಿರಿಯ ಮುಖಂಡ, ಮಾಜಿ ಶಾಸಕ ರಮೇಶ ಕುಮಾರ್ ಪಾಂಡೆ ನಿಧನ

Bidar ಬಿಜೆಪಿಯ ಹಿರಿಯ ಮುಖಂಡ, ಮಾಜಿ ಶಾಸಕ ರಮೇಶ ಕುಮಾರ್ ಪಾಂಡೆ ನಿಧನ

UPSC Result: ಬೀದರ್ ನ ಮೊಹಮ್ಮದ್ ಅಸೀಮ್‌ ಮುಜತೇಬಾಗೆ 481ನೇ ರ‍್ಯಾಂಕ್‌

UPSC Result: ಬೀದರ್ ನ ಮೊಹಮ್ಮದ್ ಅಸೀಮ್‌ ಮುಜತೇಬಾಗೆ 481ನೇ ರ‍್ಯಾಂಕ್‌

1-eqwewqeqwe

Bidar; ಬಿಜೆಪಿಗೆ ನಾಗಮಾರಪಳ್ಳಿ ಕುಟುಂಬದ ಬೆಂಬಲ

MUST WATCH

udayavani youtube

‘ಕಸಿ’ ಕಟ್ಟುವ ಸುಲಭ ವಿಧಾನ

udayavani youtube

ಬೇಸಿಗೆಯಲ್ಲಿ ನಮ್ಮನ್ನು ಕಾಡುವ Heat Illnessಏನಿದು ಸಮಸ್ಯೆ ? ಪರಿಹಾರವೇನು ?

udayavani youtube

ದ್ವಾರಕೀಶ್ ನಿಧನಕ್ಕೆ ನಟ ಶಿವರಾಜ್ ಕುಮಾರ್ ಸಂತಾಪ

udayavani youtube

ದೇವೇಗೌಡರಿದ್ದ ವೇದಿಕೆಗೆ ನುಗ್ಗಿದ ಕಾಂಗ್ರೆಸ್‌ ಕಾರ್ಯಕರ್ತೆಯರು

udayavani youtube

ಮಂಗಳೂರಿನಲ್ಲಿ ಪ್ರಧಾನಿ ಶ್ರೀ Narendra Modi ಅವರ ಬೃಹತ್‌ ರೋಡ್‌ ಶೋ

ಹೊಸ ಸೇರ್ಪಡೆ

ರಾಜ್ಯದಲ್ಲಿ ಎನ್‌ಕೌಂಟರ್‌ ಕಾನೂನು ಜಾರಿ ಅವಶ್ಯ: ಸಂತೋಷ್‌ ಲಾಡ್‌

ರಾಜ್ಯದಲ್ಲಿ ಎನ್‌ಕೌಂಟರ್‌ ಕಾನೂನು ಜಾರಿ ಅವಶ್ಯ: ಸಂತೋಷ್‌ ಲಾಡ್‌

ವೈಯಕ್ತಿಕ ಕಾರಣಗಳಿಂದ ರಾಜ್ಯದಲ್ಲಿ ಕೊಲೆ: ಸಿಎಂ ಸಿದ್ದರಾಮಯ್ಯ

ವೈಯಕ್ತಿಕ ಕಾರಣಗಳಿಂದ ರಾಜ್ಯದಲ್ಲಿ ಕೊಲೆ: ಸಿಎಂ ಸಿದ್ದರಾಮಯ್ಯ

ಯುವತಿ ಹತ್ಯೆ ಲವ್‌ ಜೆಹಾದ್‌ ಅಲ್ಲ: ಡಾ| ಜಿ.ಪರಮೇಶ್ವರ್‌

ಯುವತಿ ಹತ್ಯೆ ಲವ್‌ ಜೆಹಾದ್‌ ಅಲ್ಲ: ಡಾ| ಜಿ.ಪರಮೇಶ್ವರ್‌

1aaaa

IPL; ಚೆನ್ನೈ ವಿರುದ್ಧ ಲಕ್ನೋಗೆ 8 ವಿಕೆಟ್ ಗಳ ಅಮೋಘ ಜಯ

Siddaramaiah ಸರಕಾರದಲ್ಲಿ ಹಿಂದೂಗಳ ರಕ್ತಕ್ಕೆ ಬೆಲೆ ಇಲ್ಲ: ಅಶೋಕ್‌

Siddaramaiah ಸರಕಾರದಲ್ಲಿ ಹಿಂದೂಗಳ ರಕ್ತಕ್ಕೆ ಬೆಲೆ ಇಲ್ಲ: ಅಶೋಕ್‌

Thanks for visiting Udayavani

You seem to have an Ad Blocker on.
To continue reading, please turn it off or whitelist Udayavani.