ಲಾಕ್‌ಡೌನ್‌: ಗ್ರಾಹಕರ ಮನೆ ಬಾಗಿಲಿಗೆ ನಂದಿನಿ!


Team Udayavani, Apr 3, 2020, 5:20 PM IST

ಲಾಕ್‌ಡೌನ್‌: ಗ್ರಾಹಕರ ಮನೆ ಬಾಗಿಲಿಗೆ ನಂದಿನಿ!

ಬೀದರ: ಲಾಕ್‌ಡೌನ್‌ ಹೇರಿಕೆಯಿಂದಾಗಿ ಮಾರಾಟ ಕುಸಿತ ಕಂಡಿರುವ ಸರ್ಕಾರಿ ಸ್ವಾಮ್ಯದ ನಂದಿನಿ ಹಾಲಿನ ಮಾರುಕಟ್ಟೆ ಹೆಚ್ಚಿಸುವ ದಿಸೆಯಲ್ಲಿ ಕಲಬುರಗಿ-ಬೀದರ್‌ -ಯಾದಗಿರಿ ಹಾಲು ಒಕ್ಕೂಟ ಜಿಲ್ಲೆಯಲ್ಲಿ ನಂದಿನಿ ಹಾಲು ಹಾಗೂ ಹಾಲಿನ ಉತ್ಪನ್ನಗಳನ್ನು ಗ್ರಾಹಕರ ಮನೆ ಬಾಗಿಲಿಗೇ ತಲುಪಿಸುವ ವಿನೂತನ ಪ್ರಯೋಗಕ್ಕೆ ಮುಂದಾಗಿದೆ.

ಕೋವಿಡ್ 19 ಸೋಂಕು ನಿಯಂತ್ರಣಕ್ಕಾಗಿ ಜಾರಿಯಲ್ಲಿರುವ ಲಾಕ್‌ಡೌನ್‌ ಎಫೆಕ್ಟ್ ನಂದಿನಿ ಹಾಲಿಗೂ ತಟ್ಟಿದೆ. ಬಂದ್‌ನಿಂದಾಗಿ ಹೋಟೆಲ್‌ ಉದ್ದಿಮೆ ಬಂದ್‌ ಆಗಿರುವುದು, ಮತ್ತೂಂದೆಡೆ ಸಾರ್ವಜನಿಕರು ಮನೆಯಿಂದ ಹೊರಗೆ ಬರಲು ಸಾಧ್ಯವಾಗದೇ ನಂದಿನಿ ಹಾಲು ಮಾರಾಟ ಇಳಿಮುಖವಾಗಿದೆ. ಅಷ್ಟೇ ಅಲ್ಲ ನೆರೆ ರಾಜ್ಯಕ್ಕೆ ಸಂಪರ್ಕ ರದ್ದತಿಯಿಂದ ನಂದಿನಿ ಹಾಲು ಪೂರೈಕೆಯೂ ಕಡಿಮೆಯಾಗಿದೆ. ಒಟ್ಟಾರೆ, ಜಿಲ್ಲೆಯಲ್ಲಿಶೇ.30ಕ್ಕಿಂತ ಹೆಚ್ಚು ಪ್ರಮಾಣದ ನಂದಿನ ಹಾಲಿನ ಮಾರಾಟ ಕುಸಿತವಾಗಿದ್ದು, ಇದರಿಂದ ಒಕ್ಕೂಟಕ್ಕೆ ಆರ್ಥಿಕ ಸಂಕಷ್ಟ ಎದುರಾಗಿದೆ. ಹಾಗಾಗಿ ಕೆಎಂಎಫ್‌ ಬೀದರ ಘಟಕ ವಿಶೇಷ ಸೇವೆ ಶುರು ಮಾಡಿದೆ. ಕೆ

ಎಂಎಫ್‌ ಬೀದರ ಘಟಕದಲ್ಲಿ ಪ್ರತಿ ನಿತ್ಯ ರೈತರಿಂದ 32 ಸಾವಿರ ಲೀಟರ್‌ ಹಾಲಿನ ಸಂಗ್ರಹ ಮಾಡಲಾಗುತ್ತದೆ. ಇದರಲ್ಲಿ ಜಿಲ್ಲೆಯಲ್ಲಿ 14 ಸಾವಿರ ಲೀ. ಮಾರಾಟ ಮತ್ತು ತೆಲಂಗಾಣಕ್ಕೆ 5 ಸಾವಿರ ಲೀ. ಪೂರೈಕೆಯಾಗುತ್ತದೆ. ಉಳಿದ ಹಾಲನ್ನು ಕಲಬುರಗಿ ಘಟಕಕ್ಕೆ ಕಳುಹಿಸಲಾಗುತ್ತದೆ. ಈಗ ಲಾಕ್‌ಡೌನ್‌ದಿಂದಾಗಿ ಜಿಲ್ಲೆಯಲ್ಲಿ 7 ಸಾವಿರ ಲೀ. ಮತ್ತು ತೆಲಂಗಾಣಕ್ಕೆ 2.5 ಸಾವಿರ ಲೀ. ಹಾಲು ಮಾತ್ರ ಮಾರಾಟ ಆಗುತ್ತಿದೆ. ಮನೆ ಬಾಗಿಲಿಗೇ ಹಾಲು ತಲುಪಿಸಿ ಗ್ರಾಹಕರಿಗೆ ಸೇವೆ ನೀಡುವುದು, ಆ ಮೂಲಕ ಒಕ್ಕೂಟ ಹಾಲಿನ ಮಾರಾಟ ಪ್ರಮಾಣವನ್ನು ಹೆಚ್ಚಿಸುವುದು ಘಟಕದ ಉದ್ದೇಶವಾಗಿದೆ.

ಸದ್ಯ ನಗರದಲ್ಲಿ ಒಂದು ವ್ಯಾನ್‌ ಮೂಲಕ ಹಾಲು ಮತ್ತು ಹಾಲಿನ 69 ಉತ್ಪನ್ನಗಳ ಮಾರಾಟ ಆರಂಭಿಸಲಾಗಿದೆ. ಇದಕ್ಕೆ ಜನರಿಂದ ಉತ್ತಮ ಸ್ಪಂದನೆ ಸಿಕ್ಕಲ್ಲಿ ನಗರ ಮತ್ತು ತಾಲೂಕು ಕೇಂದ್ರಗಳಲ್ಲಿ ವ್ಯಾನ್‌ಗಳನ್ನು ಹೆಚ್ಚಿಸಿ ನಿತ್ಯ 2 ಸಾವಿರ ಲೀ.ವರೆಗೆ ಹಾಲನ್ನು ವಿನೂತನ ಸೇವೆ ಮೂಲಕ ಮಾರಾಟ ಮಾಡುವ ಆಶಯ ಹೊಂದಿದೆ. ಧ್ವನಿವರ್ಧಕ ಹೊಂದಿರುವ ಇಬ್ಬರು ಸಿಬ್ಬಂದಿಯನ್ನು ಒಳಗೊಂಡ ವಾಹನವು ಪ್ರತಿ ದಿನ ಬೆಳಗ್ಗೆ 6 ರಿಂದ ರಾತ್ರಿ 8ರವರೆಗೆ ಸಂಚರಿಸಲಿದೆ. ಸಿಬ್ಬಂದಿಗೆ ಸುರಕ್ಷತಾ ಕ್ರಮವಾಗಿ ಮಾಸ್ಕ್, ಹ್ಯಾಂಡ್‌ಗ್ಲೌಸ್‌ ಹಾಗೂ ಸ್ಯಾನಿಟೈಸರ್‌ ವ್ಯವಸ್ಥೆ ಮಾಡಲಾಗಿದೆ.

ಲಾಕ್‌ಡೌನ್‌ ಹಿನ್ನೆಲೆಯಲ್ಲಿ ಗ್ರಾಹಕರಿಗೆ ಅನುಕೂಲ ಮಾಡಿಕೊಡಲು ಮನೆ ಬಾಗಿಲಿಗೆ ನಂದಿನಿ ಉತ್ಪನ್ನಗಳ ಸೇವೆ ಶುರು ಮಾಡಲಾಗಿದೆ. ಗ್ರಾಹಕರು ಇದರ ಪ್ರಯೋಜನ ಪಡೆಯಬೇಕು. ಇದರಿಂದ ಕುಸಿತ ಕಂಡಿರುವ ಒಕ್ಕೂಟದ ಹಾಲಿನ ಮಾರಾಟ ಹೆಚ್ಚಲಿದೆ. ವಿನೂತನ ಪ್ರಯೋಗ ಯಶಸ್ವಿಯಾದರೆ ವಾಹನಗಳ ಸಂಖ್ಯೆ ಹೆಚ್ಚಿಸಲಾಗುವುದು. ಗ್ರಾಹರು ಖರೀದಿ ವೇಳೆ ಸಾಮಾಜಿಕ ಅಂತರ ಕಾಯ್ದುಕೊಳ್ಳಬೇಕು.ಶಾಲಿವಾನ್‌ ವಾಡೆ,ಉಪ ವ್ಯವಸ್ಥಾಪಕ, ಕೆಎಂಎಫ್‌ ಬೀದರ.

 

ಶಶಿಕಾಂತ ಬಂಬುಳಗೆ

ಟಾಪ್ ನ್ಯೂಸ್

1-wqqwqwe

West Bengal; ಮಗಳನ್ನು ಕಂಡು ಕಣ್ಣೀರಿಟ್ಟ ಶೇಖ್ ಷಹಜಹಾನ್: ಬಿಜೆಪಿ ವ್ಯಂಗ್ಯ

Politics: ಮೋದಿ ಸಾರ್ವಜನಿಕರಲ್ಲಿ ಕೋಮು ಭಾವನೆ ಹುಟ್ಟು ಹಾಕುತ್ತಿದ್ದಾರೆ; ಎಚ್.ಕೆ. ಪಾಟೀಲ

Politics: ಮೋದಿ ಸಾರ್ವಜನಿಕರಲ್ಲಿ ಕೋಮು ಭಾವನೆ ಹುಟ್ಟು ಹಾಕುತ್ತಿದ್ದಾರೆ; ಎಚ್.ಕೆ. ಪಾಟೀಲ

2-hubli

Neha Case: ನ್ಯಾಯಾಂಗ ಬಂಧನದಲ್ಲಿದ್ದ ಆರೋಪಿ ಸಿಐಡಿ ವಶಕ್ಕೆ

Udupi: ಅನುಮತಿಯಿಲ್ಲದೆ ಪೋಸ್ಟರ್‌ ಅಭಿಯಾನ; ಬಿಜೆಪಿ ಯುವ ಮೋರ್ಚಾ ಮುಖಂಡರ ವಿರುದ್ಧ ಕೇಸ್

Udupi: ಅನುಮತಿಯಿಲ್ಲದೆ ಪೋಸ್ಟರ್‌ ಅಭಿಯಾನ; ಬಿಜೆಪಿ ಯುವ ಮೋರ್ಚಾ ಮುಖಂಡರ ವಿರುದ್ಧ ಕೇಸ್

Amit Shah: 2024ರ ಚುನಾವಣೆಯಲ್ಲಿ ಎನ್‌ ಡಿಎಗೆ 400ಕ್ಕೂ ಅಧಿಕ ಸ್ಥಾನ ಖಚಿತ: ಶಾ

Amit Shah: 2024ರ ಚುನಾವಣೆಯಲ್ಲಿ ಎನ್‌ ಡಿಎಗೆ 400ಕ್ಕೂ ಅಧಿಕ ಸ್ಥಾನ ಖಚಿತ: ಶಾ

11

ಕ್ರಿಕೆಟ್‌ ಬಗ್ಗೆ ಕಿಂಚಿತ್ತೂ ಜ್ಞಾನವಿಲ್ಲದ ವ್ಯಕ್ತಿಗೆ ಡ್ರೀಮ್‌11ನಲ್ಲಿ ಒಲಿಯಿತು 1.5 ಕೋಟಿ

baba-ramdev

Patanjali ತಪ್ಪು ಜಾಹೀರಾತು; ಕ್ಷಮೆಯಾಚಿಸಿದ ಬಾಬಾ ರಾಮ್ ದೇವ್,ಬಾಲಕೃಷ್ಣ


ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು

16

ನೀತಿ ಸಂಹಿತೆ ನಡುವೆಯೂ ರಾಜ್ಯಕ್ಕೆ ನೆರವು ಎನ್ನುವ ಬಿಜೆಪಿಗೆ ನಾಚಿಕೆ ಇಲ್ಲವೇ? – ಖಂಡ್ರೆ

Minchu

Rain; ಬೀದರ್,ಕೊಪ್ಪಳದಲ್ಲಿ ಸಿಡಿಲಿನ ಆರ್ಭಟಕ್ಕೆ ಇಬ್ಬರು ಮೃತ್ಯು

Bidar; ಪ್ರೇಯಸಿ ಮದುವೆ ದಿನವೇ ಪ್ರಿಯಕರನ ಶವ ಪತ್ತೆ

Bidar; ಪ್ರೇಯಸಿ ಮದುವೆ ದಿನವೇ ಪ್ರಿಯಕರನ ಶವ ಪತ್ತೆ

rape

Bidar; ಯುವಕನಿಂದ ಅಪ್ರಾಪ್ತ ವಯಸ್ಕಳ ರೇಪ್

Bidar; Will file Defamation case against Khooba: Eshwar Khandre

Bidar; ಖೂಬಾ ವಿರುದ್ಧ ಮಾನನಷ್ಟ ಮೊಕದ್ದಮೆ ಹೂಡುವೆ: ಈಶ್ವರ್ ಖಂಡ್ರೆ

MUST WATCH

udayavani youtube

ವೈಭವದ ಹಿರಿಯಡ್ಕ ಸಿರಿಜಾತ್ರೆ ಸಂಪನ್ನ

udayavani youtube

ಯಾವೆಲ್ಲಾ ಚರ್ಮದ ಕಾಯಿಲೆಗಳಿವೆ ಹಾಗೂ ಪರಿಹಾರಗಳೇನು?

udayavani youtube

Mangaluru ಹೆಬ್ಬಾವಿನ ದೇಹದಲ್ಲಿ ಬರೋಬ್ಬರಿ 11 ಬುಲೆಟ್‌ ಪತ್ತೆ!

udayavani youtube

ನನ್ನ ಕಥೆ ನಿಮ್ಮ ಜೊತೆ

udayavani youtube

‘ಕಸಿ’ ಕಟ್ಟುವ ಸುಲಭ ವಿಧಾನ

ಹೊಸ ಸೇರ್ಪಡೆ

3-

Bagalkote: ಯತ್ನಾಳ ಗೊಡ್ಡ ಎಮ್ಮಿ ಇದ್ದಂಗ: ಕಾಶಪ್ಪನವರ ಟೀಕೆ

1-wqqwqwe

West Bengal; ಮಗಳನ್ನು ಕಂಡು ಕಣ್ಣೀರಿಟ್ಟ ಶೇಖ್ ಷಹಜಹಾನ್: ಬಿಜೆಪಿ ವ್ಯಂಗ್ಯ

Politics: ಮೋದಿ ಸಾರ್ವಜನಿಕರಲ್ಲಿ ಕೋಮು ಭಾವನೆ ಹುಟ್ಟು ಹಾಕುತ್ತಿದ್ದಾರೆ; ಎಚ್.ಕೆ. ಪಾಟೀಲ

Politics: ಮೋದಿ ಸಾರ್ವಜನಿಕರಲ್ಲಿ ಕೋಮು ಭಾವನೆ ಹುಟ್ಟು ಹಾಕುತ್ತಿದ್ದಾರೆ; ಎಚ್.ಕೆ. ಪಾಟೀಲ

2-hubli

Neha Case: ನ್ಯಾಯಾಂಗ ಬಂಧನದಲ್ಲಿದ್ದ ಆರೋಪಿ ಸಿಐಡಿ ವಶಕ್ಕೆ

1-eqewqe

JP Hegde; ಉತ್ತಮರನ್ನು ಉಳಿಸಿಕೊಳ್ಳಬೇಕಾದ ಅನಿವಾರ್ಯತೆ ಜನತೆಗಿದೆ: ತೇಜಸ್ವಿನಿ

Thanks for visiting Udayavani

You seem to have an Ad Blocker on.
To continue reading, please turn it off or whitelist Udayavani.