Udayavni Special

ಮಾನಸಿಕ ರೋಗಿಗೂ ಬದುಕು ಕಲ್ಪಿಸಿ: ಕಾಡಲೂರ

ಮಾನಸಿಕ ಆರೋಗ್ಯ ರಕ್ಷಣೆ ಕಾಯ್ದೆ ಅನುಷ್ಠಾನ ಪ್ರತಿಯೊಬ್ಬರ ಕರ್ತವ್ಯವಾಗಿದೆ.

Team Udayavani, Mar 5, 2021, 5:59 PM IST

ಮಾನಸಿಕ ರೋಗಿಗೂ ಬದುಕು ಕಲ್ಪಿಸಿ: ಕಾಡಲೂರ

ಬೀದರ: ಮಾನಸಿಕ ರೋಗಿಗಳಿಗೂ ಸಹ ಗೌರವಾನ್ವಿತ ಬದುಕನ್ನು ಕಲ್ಪಿಸಿಕೊಡಬೇಕಾಗಿದೆ. ಇದು ಕೇವಲ ಆರೋಗ್ಯ ಇಲಾಖೆಯ ಕರ್ತವ್ಯ ಮಾತ್ರ ಅಲ್ಲ. ಜಿಲ್ಲೆಯ ಪ್ರತಿ ಇಲಾಖೆಯ ಕರ್ತವ್ಯವಾಗಿದೆ ಎಂದು ಪ್ರಧಾನ ಜಿಲ್ಲಾ ಮತ್ತು ಸತ್ರ ನ್ಯಾಯಾಧೀಶರಾದ ಜಿಲ್ಲಾ ಕಾನೂನು ಸೇವೆಗಳ ಪ್ರಾ ಧಿಕಾರದ ಅಧ್ಯಕ್ಷ ಕಾಡಲೂರ ಸತ್ಯನಾರಾಯಣಾಚಾರ್ಯ ಹೇಳಿದರು.

ನಗರದ ಡಿಎಚ್‌ಒ ಕಚೇರಿ ಸಭಾಂಗಣದಲ್ಲಿ ಜಿಲ್ಲಾ ಕಾನೂನು ಸೇವೆಗಳ ಪ್ರಾಧಿಕಾರ, ಜಿಲ್ಲಾ ವಕೀಲರ ಸಂಘ, ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಇಲಾಖೆ ಹಾಗೂ ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಇಲಾಖೆ ಆಶ್ರಯದಲ್ಲಿ ನಡೆದ ಮಾನಸಿಕ ಆರೋಗ್ಯ ರಕ್ಷಣೆ ಕಾಯ್ದೆ-2017 ಕುರಿತು ಕಾನೂನು ಅರಿವು ಕಾರ್ಯಕ್ರಮ ಉದ್ಘಾಟಿಸಿ ಅವರು ಮಾತನಾಡಿದರು.

ಒತ್ತಡ ಸನ್ನಿವೇಶ ಹಾಗೂ ಜೀವನದ ಶೈಲಿಯಿಂದಾಗಿ ಖನ್ನತೆ, ಮಾನಸಿಕ ಒತ್ತಡದಂತಹ ಹಲವಾರು ಮಾನಸಿಕ ಕಾಯಿಲೆಗಳು ಇತ್ತೀಚಿನ ದಿನಗಳಲ್ಲಿ ಕಂಡುಬರುತ್ತಿವೆ. ಮನುಷ್ಯನ ದೇಹಕ್ಕೆ ಯಾವ ರೀತಿ ಕಾಯಿಲೆಗಳು ಬರುತ್ತಿವೆಯೋ ಅದೇ ರೀತಿ ಮನಸ್ಸಿಗೂ ಕೂಡ ಕಾಯಿಲೆ ಬರುವುದು ನೈಸರ್ಗಿಕವಾಗಿದ್ದು, ಪ್ರತಿಯೊಬ್ಬರು ಮಾನಸಿಕ ಕಾಯಿಲೆಯುಳ್ಳ ವ್ಯಕ್ತಿಗಳನ್ನು ಗುರುತಿಸಿ ಚಿಕಿತ್ಸೆ ನೀಡಿ ಗುಣಪಡಿಸುವ ಹೊಣೆಗಾರಿಕೆ ಇದೇ ಎಂದರು.

ಹಿರಿಯ ಸಿವಿಲ್‌ ನ್ಯಾಯಾಧೀಶ ಸಿದ್ರಾಮ್‌ ಟಿ.ಪಿ. ಮಾತನಾಡಿ, ಸಂವಿಧಾನವು ಎಲ್ಲರಿಗೂ ಜೀವಿಸುವ ಹಕ್ಕು ನೀಡಿದೆ. ಆ ಹಕ್ಕನ್ನು ಮಾನಸಿಕ ರೋಗಿಗಳಿಗೂ
ಕಲ್ಪಿಸಿಕೊಡುವ ಸಲುವಾಗಿ ಇಂತಹ ಕಾರ್ಯಕ್ರಮಗಳು ಬಹಳ ಪರಿಣಾಮಕಾರಿ ಆಗಿದ್ದು, ಮಾನಸಿಕ ಆರೋಗ್ಯ ರಕ್ಷಣೆ ಕಾಯ್ದೆ ಅನುಷ್ಠಾನ ಪ್ರತಿಯೊಬ್ಬರ ಕರ್ತವ್ಯವಾಗಿದೆ. ಈ ಕಾನೂನಿನ ವ್ಯಾಖ್ಯಾನ, ವ್ಯಾಪ್ತಿ ಮತ್ತು ಅನುಷ್ಠಾನ ಅರಿತು ಜಿಲ್ಲೆಯ ಹಲವಾರು ಇಲಾಖೆಗಳ ಮುಖ್ಯಸ್ಥರು ಕಾರ್ಯ ನಿರ್ವಹಿಸಬೇಕು ಎಂದು ತಿಳಿಸಿದರು.

ಡಿಸಿ ರಾಮಚಂದ್ರನ್‌ ಆರ್‌. ಅಧ್ಯಕ್ಷತೆ ವಹಿಸಿ, ಜಿಲ್ಲಾಡಳಿತ ಮಾನಸಿಕ ಆರೋಗ್ಯ ರಕ್ಷಣೆ ಕಾಯ್ದೆ ಅನುಷ್ಠಾನ, ಮಾನಸಿಕ ರೋಗಿಗಳಿಗೆ ಸಿಗಬೇಕಾದ ಸೇವಾ ಸೌಲಭ್ಯಗಳನ್ನು ಒದಗಿಸಲು ಸದಾ ಸನ್ನದ್ದವಾಗಿದೆ ಎಂದರು. ಮಾನಸಿಕ ಆರೋಗ್ಯ ತಜ್ಞರಾದ ಡಾ| ಅಭಿಜಿತ ಪಾಟೀಲ, ಡಾ| ಶ್ವೇತಾ ಕೋಣಕೇರಿ ಅವರು ಮಾನಸಿಕ ಆರೋಗ್ಯ ರಕ್ಷಣೆ ಕಾಯ್ದೆ ಕುರಿತು ಪಿ.ಪಿ.ಟಿ. ಮೂಲಕ ವಿಶ್ಲೇಷಣೆ ಮಾಡಿದರು.

ಸಭೆಯಲ್ಲಿ ಎಸ್‌ಪಿ ನಾಗೇಶ ಡಿ.ಎಲ್‌., ವಕೀಲರ ಸಂಘದ ಅಧ್ಯಕ್ಷ ಜಗದೀಶ ಜಗತಾಪ, ಕಾರ್ಯದರ್ಶಿ ಧನರಾಜ ಬಿರಾದರ, ಸಹಾಯಕ ಆಯುಕ್ತರಾದ ಗರೀಮಾ ಪನ್ವಾರ, ಭುವನೇಶ ಪಟೇಲ್‌, ಡಿಎಚ್‌ಒ ಡಾ| ವಿ.ಜಿ.ರೆಡ್ಡಿ, ಅ ಧಿಕಾರಿಗಳಾದ ಡಾ| ಮಹೇಶ ಬಿರಾದರ, ತಿಪ್ಪಣ್ಣ ಶಿರಸಗಿ, ಸಂಗಪ್ಪ ಕಾಂಬಳೆ, ಶ್ರಾವಣ ಜಾಧವ ಇನ್ನಿತರರು ಇದ್ದರು.

ಟಾಪ್ ನ್ಯೂಸ್

ಶೇ.50ರಷ್ಟು ಬೆಡ್ ನೀಡಲು ಒಪ್ಪದ 66 ಖಾಸಗಿ ಆಸ್ಪತ್ರೆೆಗಳಿಗೆ ಬಿಬಿಎಂಪಿ ತುರ್ತು ನೋಟಿಸ್

ಶೇ.50ರಷ್ಟು ಬೆಡ್ ನೀಡಲು ಒಪ್ಪದ 66 ಖಾಸಗಿ ಆಸ್ಪತ್ರೆಗಳಿಗೆ ಬಿಬಿಎಂಪಿ ತುರ್ತು ನೋಟಿಸ್

ಚಾರ್‌ಧಾಮ್‌ ಯಾತ್ರೆಗೆ ಕಠಿಣ ಕ್ರಮ ಕೈಗೊಳ್ಳಿ : ಉತ್ತರಾಖಂಡ ಸರ್ಕಾರಕ್ಕೆ ಹೈ ಕೋರ್ಟ್ ಆದೇಶ

ಚಾರ್‌ಧಾಮ್‌ ಯಾತ್ರೆಗೆ ಕಠಿಣ ಕ್ರಮ ಕೈಗೊಳ್ಳಿ : ಉತ್ತರಾಖಂಡ ಸರ್ಕಾರಕ್ಕೆ ಹೈ ಕೋರ್ಟ್ ಆದೇಶ

Untitled-3

ಕೆಕೆಆರ್ Vs ಚೆನ್ನೈ ಫೈಟ್ : ಟಾಸ್ ಗೆದ್ದ ಮಾರ್ಗನ್ ಪಡೆ

fghdgrr

ಕೋವಿಡ್ ಮಾರ್ಗಸೂಚಿ ಉಲ್ಲಂಘಿಸಿದ ‘ಬಾರ್‌’ ಸೀಜ್‌

hghfdsa

ರಾಜ್ಯದಲ್ಲಿ ಇಂದು 23558 ಕೋವಿಡ್ ಕೇಸ್ ಪತ್ತೆ : 116 ಸಾವು!

ಮದುವೆ ಮಾಡು.. ಕೋವಿಡ್‌ ನೋಡು..

ಮದುವೆ ಮಾಡು.. ಕೋವಿಡ್‌ ನೋಡು..

Statement about Covid Vaccine by Dr, K Sudhakar

ಕೋವಿಡ್ ವಿರುದ್ಧದ ಹೋರಾಟದಲ್ಲಿ ಲಸಿಕೆ ಅತ್ಯಂತ ದೊಡ್ಡ ಅಸ್ತ್ರ : ಸುಧಾಕರ್ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು

mnbvcxsza

72 ಹಳ್ಳಿಗಳಿಗೆ ಕಾಡಲಿದೆ ನೀರಿನ ಸಮಸ್ಯೆ

Untitled-2

ಬೀದರ್: ಬೆಡ್ ಕೊರತೆ ಫುಟ್ ಪಾತ್ ನಲ್ಲೇ ನರಳಾಡಿದ ರೋಗಿಗಳು

Desha

ಸ್ಮಾರಕಗಳು ದೇಶದ ಸಾಂಸ್ಕೃತಿಕ ಕುರುಹು

Apara

ಜಗದೋನ್ನತಿಗೆ ಪಂಚಾಚಾರ್ಯರ ಕೊಡುಗೆ ಅಪಾರ

ಬೀದರ್ : ದಕ್ಷಿಣ ಭಾರತದ ಮೊದಲ ಬಿಎಸ್ಪಿ ಶಾಸಕ ಜುಲ್ಫೇಕರ್‌ ಹಾಶ್ಮಿ ನಿಧನ

ಬೀದರ್ : ದಕ್ಷಿಣ ಭಾರತದ ಮೊದಲ ಬಿಎಸ್ಪಿ ಶಾಸಕ ಜುಲ್ಫೇಕರ್‌ ಹಾಶ್ಮಿ ನಿಧನ

MUST WATCH

udayavani youtube

ಗಮನಿಸಿ: ವೀಕೆಂಡ್ ಕರ್ಫ್ಯೂ ಸಮಯದಲ್ಲಿ ಮದುವೆಯಾಗುವುದಾದರೆ ಈ ನಿಯಮಗಳನ್ನು ಪಾಲಿಸಲೇಬೇಕು!

udayavani youtube

ಬೀದರ್: ಬೆಡ್ ಕೊರತೆ. ಫುಟ್ ಪಾತ್ ನಲ್ಲೇ ನರಳಾಡಿದ ರೋಗಿಗಳು

udayavani youtube

ತಮಿಳುನಾಡಿನ ಅಪ್ಪಟ ರೇಷ್ಮೆ, ಕೃಷ್ಣ ನೂರಿನ ಜಯಲಕ್ಷ್ಮಿಯಲ್ಲಿ

udayavani youtube

ರಾಮನವಮಿ ವಿಶೇಷ | ವಿಶ್ವ ಪ್ರಸನ್ನ ತೀರ್ಥ ಸ್ವಾಮೀಜಿ ಅವರೊಂದಿಗೆ ಸಂದರ್ಶನ

udayavani youtube

ಮಾದರಿ ಕೋವಿಡ್ ಠಾಣೆಯಾಗಿ ಮಂಗಳೂರಿನ ಉರ್ವ ಪೊಲೀಸ್ ಠಾಣೆ

ಹೊಸ ಸೇರ್ಪಡೆ

mnbvcxsza

72 ಹಳ್ಳಿಗಳಿಗೆ ಕಾಡಲಿದೆ ನೀರಿನ ಸಮಸ್ಯೆ

ಶೇ.50ರಷ್ಟು ಬೆಡ್ ನೀಡಲು ಒಪ್ಪದ 66 ಖಾಸಗಿ ಆಸ್ಪತ್ರೆೆಗಳಿಗೆ ಬಿಬಿಎಂಪಿ ತುರ್ತು ನೋಟಿಸ್

ಶೇ.50ರಷ್ಟು ಬೆಡ್ ನೀಡಲು ಒಪ್ಪದ 66 ಖಾಸಗಿ ಆಸ್ಪತ್ರೆಗಳಿಗೆ ಬಿಬಿಎಂಪಿ ತುರ್ತು ನೋಟಿಸ್

fgdgte

ಸಾರಿಗೆ ನೌಕರರ ಪ್ರತಿಭಟನೆ: 30 ಮಂದಿ ಪ್ರೊಬೇಷನರಿ ಸಿಬ್ಬಂದಿ ವಜಾ

gfgewrw

ಹಾವೇರಿ ಜಿಲ್ಲೆಯಲ್ಲಿ ಜಾತ್ರೆಗಳು ಸಂಪೂರ್ಣ ನಿಷೇಧ

ಮನಬವಚಷಗ

ಸ್ವಯಂ ಲಾಕ್‌ ಡೌನ್‌ ಗೆ ಸಂಘ-ಸಂಸ್ಥೆಗಳ ನಿರ್ಧಾರ

Thanks for visiting Udayavani

You seem to have an Ad Blocker on.
To continue reading, please turn it off or whitelist Udayavani.