ಬೀದರ್ ಐತಿಹಾಸಿಕ ಮದರಸಾಕ್ಕೆ ನುಗ್ಗಿ ಪೂಜೆ: ನಾಲ್ವರ ಬಂಧನ; ವಿಡಿಯೋ ವೈರಲ್


Team Udayavani, Oct 7, 2022, 1:18 PM IST

ಬೀದರ್ ಐತಿಹಾಸಿಕ ಮದರಸಾಕ್ಕೆ ನುಗ್ಗಿ ಪೂಜೆ: ನಾಲ್ವರ ಬಂಧನ; ವಿಡಿಯೋ ವೈರಲ್

ಬೀದರ: ವಿಜಯ ದಶಮಿ ಹಿನ್ನೆಲೆಯಲ್ಲಿ ಕೇಂದ್ರ ಪುರಾತತ್ವ ಇಲಾಖೆ ಅಧೀನದಲ್ಲಿರುವ ನಗರದ ಓಲ್ಡ್‌ ಸಿಟಿಯ ಮಹಮದ್ ಗವಾನ್ ಮದರಸಾ ಆವರಣಕ್ಕೆ ಕೆಲ ಕಿಡಿಗೇಡಿಗಳು ಪ್ರವೇಶಿಸಿ ಪೂಜೆ ಸಲ್ಲಿಸಿದ ಘಟನೆ ನಡೆದಿದ್ದು, ಈ ದೃಶ್ಯ ವಿಡಿಯೋ ವೈರಲ್‌ ದಿಂದಾಗಿ ಸೌಹಾರ್ದತೆ ನೆಲದಲ್ಲಿ ಈಗ ತ್ವೇಷಮಯ ವಾತಾವರಣ ಸೃಷ್ಟಿಯಾಗಿದೆ. ಘಟನೆಗೆ ಸಂಬಂದಿಸಿದಂತೆ ನಾಲ್ಕು ಜನರನ್ನು ಜಿಲ್ಲಾ ಪೊಲೀಸರು ಬಂಧಿಸಿದ್ದಾರೆ.

ಒಳಕೋಟೆ ಭವಾನಿ ದೇವಿ ಮೂರ್ತಿಯ ಮೆರವಣಿಗೆ ವೇಳೆ ಕೆಲವರು ಓಲ್ಡ್‌ಸಿಟಿ ಗವಾನ್ ಸ್ಮಾರಕದಲ್ಲಿ ಅಕ್ರಮವಾಗಿ ಪ್ರವೇಶಿಸಿ ಪೂಜೆ ಸಲ್ಲಿಸಿದ್ದಾರೆ. ಈ ದೃಶ್ಯವನ್ನು ಸೆರೆ ಹಿಡಿದು ವಿಡಿಯೋ ವೈರಲ್ ಮಾಡಲಾಗಿತ್ತು. ಇದು ಒಂದು ಕೋಮಿನ ಧಾರ್ಮಿಕ ಭಾವನೆಗಳಿಗೆ ಧಕ್ಕೆ ತಂದಂತಾಗಿದೆ ಎಂದು ಆರೋಪಿಸಿ ಉದ್ಯಮಿ ಸೈಯ್ಯದ್ ಮುಬಾಶಿರ್ ಅಲಿ ಎಂಬುವರು 9 ಜನ ಸೇರಿ 60 ಜನ ಅನಾಮಧೇಯರ ವಿರುದ್ಧ ಮಾರ್ಕೆಟ್ ಠಾಣೆಯಲ್ಲಿ ದೂರು ನೀಡಿದ್ದರು. ಅಷ್ಟೇ ಅಲ್ಲ ಧಾರ್ಮಿಕ ಸಾಮರಸ್ಯ ಕದಡಲು ಯತ್ನಿಸಿದವರ ವಿರುದ್ಧ ಕಾನೂನು ಕ್ರಮ ಕೈಗೊಳ್ಳಬೇಕು ಎಂದು ಒತ್ತಾಯಿಸಿ ಮುಸ್ಲಿಮ್ ಸಂಘಟನೆಗಳು ಠಾಣೆಯ ಎದುರು ಪ್ರತಿಭಟನೆ ನಡೆಸಿದ್ದರು.

ಗುರುವಾರ ಮಂಜಾನೆ 1.30ರ ಸುಮಾರಿಗೆ ಕಿಡಿಗೇಡಿಗಳು ಮಹಮೂದ್ ಗವಾನ್ ಮದರಸಾ ಹಾಗೂ ಮಸೀದಿ ಬೀಗ ಒಡೆದು ಕಾನೂನು ಬಾಹಿರವಾಗಿ ಸ್ಮಾರಕ ಪ್ರದೇಶದೊಳಗೆ ಪ್ರವೇಶಿಸಿ ಶಾಂತಿ, ಸೌಹಾರ್ದತೆ ಕದಡುವ ಕೆಲಸ ಮಾಡಿದ್ದಾರೆ. ಗೋಡೆಗಳ ಮೇಲೆ ಅನುಪಯುಕ್ತ ವಸ್ತುಗಳನ್ನು ಎಸೆದು ಹಾನಿ ಮಾಡಲು ಪ್ರಯತ್ನಿಸಿದ್ದಾರಲ್ಲದೇ ದೇಶ ವಿರೊಧಿ ಘೋಷಣೆಗಳನ್ನು ಕೂಗಿದ್ದಾರೆ. ಈ ಕೃತ್ಯದಲ್ಲಿ ಭಾಗಿಯಾಗಿರುವ ನರೇಶ ಗೌಳಿ, ಪ್ರಕಾಶ, ವಿನು, ಮನ್ನಾ, ಸಾಗರ ಬಂಟಿ, ಜಗದೀಶ ಗೌಳಿ, ಅರುಣ ಗೌಳಿ, ಗೋರಖ ಗೌಳಿ ಸೇರಿ 60 ಜನರು ಭಾಗಿಯಾಗಿದ್ದು, ತಕ್ಷಣ ಕ್ರಮ ಕೈಗೊಳ್ಳಬೇಕು ಎಂದು ದೂರಿನಲ್ಲಿ ಒತ್ತಾಯಿಸಿದ್ದಾರೆ.

ಇದನ್ನೂ ಓದಿ:ಬಿಸಿಸಿಐನಲ್ಲಿ ಮುಗಿಯಿತಾ ಗಂಗೂಲಿ ಅಧಿಕಾರ? ಬಿಜೆಪಿ ನಾಯಕನ ಮನೆಯಲ್ಲಿ ಸಭೆ ನಡೆದಿದ್ಯಾಕೆ?

ಓಲ್ಡ್‌ಸಿಟಿಯಲ್ಲಿ ನಿರಂತರವಾಗಿ ಇಂತಹ ಘಟನೆಗಳು ನಡೆಯುತ್ತಿವೆ. ಆರೋಪಿಗಳನ್ನು ತಕ್ಷಣ ಬಂಧಿಸಬೇಕು ಎಂದು ಠಾಣೆ ಎದುರು ಪ್ರತಿಭಟನಾನಿರತ ಮುಸ್ಲಿಂ ಸಮುದಾಯದವರು ಆಗ್ರಹಿಸಿದರು. ಶುಕ್ರವಾರ ಮಧ್ಯಾಹ್ನದ ವೇಳೆಗೆ ಆರೋಪಿಗಳನ್ನು ಬಂಧಿಸಬೇಕು. ಇಲ್ಲವಾದಲ್ಲಿ ಪ್ರತಿಭಟನೆ ನಡೆಸಬೇಕಾಗುತ್ತದೆ ಎಂದು ಎಚ್ಚರಿಕೆ ನೀಡಿದ್ದರು. ದೂರಿನ ಆಧಾರದ ಮೇಲೆ 9 ಜನರ ವಿರುದ್ಧ ಪ್ರಕರಣ ದಾಖಲಿಸಿಕೊಂಡಿರುವ ಪೊಲೀಸರು ಕಿಡಿಗೇಡಿಗಳ ವಿರುದ್ಧ ಕಾನೂನು ಕ್ರಮ ಕೈಗೊಳ್ಳುವ ಭರವಸೆ ನೀಡಿದ್ದರು. ಘಟನೆ ಸಂಬಂಧ ಪೊಲೀಸರು 4 ಜನರನ್ನು ವಶಕ್ಕೆ ಪಡೆದಿದ್ದು, ಇನ್ನುಳಿದವರನ್ನು ಬಂಧನಕ್ಕೆ ಜಾಲ ಬೀಸಿದೆ.

ಐತಿಹಾಸಿಕ ಗವಾನ್ ಮದರಸಾದಲ್ಲಿ ಕೆಲ ಕಿಡಿಗೇಡಿಗಳು ಪೂಜೆ ಸಲ್ಲಿಸಿರುವ ಕೃತ್ಯವನ್ನು ಎಂಐಎಂ ಪ್ರಮುಖ ಓವೈಸಿ ಟ್ವಿಟರ್ ಮೂಲಕ ಖಂಡಿಸಿದ್ದಾರೆ. ಪೂಜೆ ಸಲ್ಲಿಸಲು ಹೇಗೆ ಅವಕಾಶ ಮಾಡಿಕೊಟ್ಟಿದೆ ಎಂದು ಜಿಲ್ಲಾ ಪೊಲೀಸರನ್ನು ಪ್ರಶ್ನಿಸಿದ್ದಾರಲ್ಲದೇ ಬಿಜೆಪಿ ಮುಸ್ಲಿಂ ಸಮುದಾಯವನ್ನು ಕೀಳಾಗಿ ಕಾಣುವ ಮತ್ತು ಇಂಥ ಘಟನೆಗಳಿಗೆ ಪ್ರಚೋದಿಸುವ ಕೆಲಸ ಮಾಡುತ್ತಿದೆ ಎಂದು ಹರಿಹಾಯ್ದಿದ್ದಾರೆ.

ಐತಿಹಾಸಿಕ ಸ್ಮಾರಕ ಮತ್ತು ಮಸೀದಿಯಲ್ಲಿ ಪೂಜೆ ಸಲ್ಲಿಕೆ ಘಟನೆ ಇದೀಗ ಓಲ್ಡ್ ಸಿಟಿಯಲ್ಲಿ ತ್ವೇಷಮಯ ವಾತಾವರಣ ನಿರ್ಮಾಣವಾಗಿದ್ದು, ಮುನ್ನೆಚ್ಚರಿಕೆ ಕ್ರಮವಾಗಿ ಪೊಲೀಸರು ಬಂದೋಬಸ್ತ್ ಬಿಗಿಗೊಳಿಸಿದ್ದಾರೆ. ಶುಕ್ರವಾರದ ಮಧ್ಯಾಹ್ನದ ಪ್ರಾರ್ಥನೆಗೆ ಪೊಲೀಸರ ಬಂದೋಬಸ್ತ್ ನಲ್ಲಿ ಅವಕಾಶ ಮಾಡಿಕೊಡಲಾಗಿದೆ.

ಟಾಪ್ ನ್ಯೂಸ್

ಮುದ್ದೇಬಿಹಾಳ: ಬಾವಿಯಲ್ಲಿ ಯುವತಿಯ ಶವ ಪತ್ತೆ; ಕೊಲೆ ಆರೋಪ

ಮುದ್ದೇಬಿಹಾಳ: ಬಾವಿಯಲ್ಲಿ ಯುವತಿಯ ಶವ ಪತ್ತೆ; ಕೊಲೆ ಆರೋಪ

1-fdfadad

ಅಂಜನಾದ್ರಿ: ಸ್ವಪ್ರೇರಣೆಯಿಂದ ಅನ್ಯಕೋಮಿನ ವ್ಯಾಪಾರಿಗಳ ಅಂಗಡಿಗಳು ಬಂದ್

ಚೀನ ಮಾಜಿ ಅಧ್ಯಕ್ಷ ಜಿಯಾಂಗ್‌ ಜೆಮಿನ್‌ ನಿಧನ

ಚೀನ ಮಾಜಿ ಅಧ್ಯಕ್ಷ ಜಿಯಾಂಗ್‌ ಜೆಮಿನ್‌ ನಿಧನ

1-sadadasd

ಅಫ್ಘಾನ್ ಧಾರ್ಮಿಕ ಕೇಂದ್ರಕ್ಕೆ ಉಗ್ರ ದಾಳಿ : 10 ವಿದ್ಯಾರ್ಥಿಗಳು ಬಲಿ

tdy-20

ಮದುವೆಯಾದ ಕೆಲವೇ ಗಂಟೆಗಳಲ್ಲಿ ಉಸಿರು ನಿಲ್ಲಿಸಿದ ಖ್ಯಾತ ಗಾಯಕ: ಸಾವಿರಾರು ಮಂದಿ ಕಂಬನಿ

1-sddfdsf

ತಂದೆಗೆ ಮತ್ತೊಮ್ಮೆ ಸಿಎಂ ಆಗುವ ಅವಕಾಶವಿದೆ: ಡಾ.ಯತೀಂದ್ರ ಸಿದ್ದರಾಮಯ್ಯ

1 weqwew

ಯಕ್ಷರಂಗದ ಸು’ಪ್ರಾಸ’ಸಿದ್ದ ರಾಜಕಾರಣಿ ಕುಂಬಳೆಯ ರಾಯರುಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು

7

ಅಂಬೇಡ್ಕರ್ ಭಾವಚಿತ್ರಕ್ಕೆ ಸಗಣಿ: ಒಂದೇ ದಿನದಲ್ಲಿ ಆರೋಪಿ ಪತ್ತೆಗೆ ಎಂ.ಎಲ್.ಸಿ.ಗಳ ಒತ್ತಾಯ

4

ಹುಮನಾಬಾದ: ಘಾಟಬೋರಳ ಗ್ರಾಮದ ಅಂಬೇಡ್ಕರ್ ಭಾವಚಿತ್ರಕ್ಕೆ ಸಗಣಿ

ನಿರ್ವಹಣೆ ಕೊರತೆ; ಹಾಳು ಕೊಂಪೆಯಾದ ಬರೀದ ಶಾಹಿ

ನಿರ್ವಹಣೆ ಕೊರತೆ; ಹಾಳು ಕೊಂಪೆಯಾದ ಬರೀದ ಶಾಹಿ

26ರಿಂದ ಶರಣ ಕಮ್ಮಟ, ಅನುಭವ ಮಂಟಪ ಉತ್ಸವ

26ರಿಂದ ಶರಣ ಕಮ್ಮಟ, ಅನುಭವ ಮಂಟಪ ಉತ್ಸವ

ಮನುಕುಲಕ್ಕೆ ಬೆಳಕಾದ ಕನಕದಾಸ: ಚಿಮಕೋಡೆ

ಮನುಕುಲಕ್ಕೆ ಬೆಳಕಾದ ಕನಕದಾಸ: ಚಿಮಕೋಡೆ

MUST WATCH

udayavani youtube

Oxygen Cylinder ಇಲ್ಲದಿದ್ದರೂ ಉಪಯೋಗಕ್ಕೆ ಬರುತ್ತದೆ ಈ machine ! | Girija Surgicals

udayavani youtube

ಶ್ರೀ ದುರ್ಗಾ ಆದಿಶಕ್ತಿ ಕ್ಷೇತ್ರ ದೊಡ್ಡಣಗುಡ್ಡೆ ಕ್ಷೇತ್ರದಲ್ಲಿ ‘ದೀಪೋತ್ಸವ’ ಸಂಭ್ರಮ

udayavani youtube

ಅಸ್ತಮಾ ರೋಗಿಗಳು ಮನೆಯಲ್ಲಿಯೇ ಚಿಕಿತ್ಸೆ ಪಡೆಯುವುದು ಹೇಗೆ ? |Girija Surgicals

udayavani youtube

ಕುಕ್ಕೆ ಸುಬ್ರಹ್ಮಣ್ಯಕ್ಕೆ ಕ್ರಿಕೆಟಿಗ ಕೆ.ಎಲ್.ರಾಹುಲ್ ಭೇಟಿ

udayavani youtube

ಶಾರೀಕ್ ಜೊತೆಗಿದ್ನಾ ಇನ್ನೋರ್ವ ವ್ಯಕ್ತಿ ? ಪೊಲೀಸ್ ಆಯುಕ್ತರು ಹೇಳಿದ್ದೇನು..

ಹೊಸ ಸೇರ್ಪಡೆ

1-aweqwewq

ಶಾಲೆಯ ನೀರಿನ ಟ್ಯಾಂಕ್ ನಲ್ಲಿ ನಾಗರಹಾವು; ಆತಂಕಗೊಂಡ ವಿದ್ಯಾರ್ಥಿಗಳು

ಮುದ್ದೇಬಿಹಾಳ: ಬಾವಿಯಲ್ಲಿ ಯುವತಿಯ ಶವ ಪತ್ತೆ; ಕೊಲೆ ಆರೋಪ

ಮುದ್ದೇಬಿಹಾಳ: ಬಾವಿಯಲ್ಲಿ ಯುವತಿಯ ಶವ ಪತ್ತೆ; ಕೊಲೆ ಆರೋಪ

1-fdfadad

ಅಂಜನಾದ್ರಿ: ಸ್ವಪ್ರೇರಣೆಯಿಂದ ಅನ್ಯಕೋಮಿನ ವ್ಯಾಪಾರಿಗಳ ಅಂಗಡಿಗಳು ಬಂದ್

tdy-21

ಹಿರೇಮನ್ನಾಪೂರ ಏಳನೇ ಅಂಗನವಾಡಿ ಕೇಂದ್ರ ಸರಕಾರಿ ಶಾಲಾ ಕಟ್ಟಡಕ್ಕೆ ಶಿಫ್ಟ್

ಜೆಡಿಎಸ್‌ ಗೆದ್ದು ಎಚ್‌ಡಿಕೆ ಸಿಎಂ ಆಗ್ತಾರೆ: ಇಬ್ರಾಹಿಂ

ಜೆಡಿಎಸ್‌ ಗೆದ್ದು ಎಚ್‌ಡಿಕೆ ಸಿಎಂ ಆಗ್ತಾರೆ: ಇಬ್ರಾಹಿಂ

Thanks for visiting Udayavani

You seem to have an Ad Blocker on.
To continue reading, please turn it off or whitelist Udayavani.