Udayavni Special

ಮುಖ್ಯಾಧಿಕಾರಿ ನಡೆಗೆ ಪುರಸಭೆ “ಆಡಳಿತ’ ಆಕ್ರೋಶ”

ಮುಖ್ಯಾಧಿಕಾರಿಗಳು ತುರ್ತು ಸಭೆ ಕರೆದು ಚರ್ಚಿಸಬೇಕಿತ್ತು.

Team Udayavani, Sep 24, 2021, 6:29 PM IST

ಮುಖ್ಯಾಧಿಕಾರಿ ನಡೆಗೆ ಪುರಸಭೆ “ಆಡಳಿತ’ ಆಕ್ರೋಶ”

ಹುಮನಾಬಾದ: ನಿವಾಸಿಗಳು ನಳಗಳಿಗೆ ಮೋಟಾರ್‌ ಬಳಸದೆ ನೀರು ತುಂಬಿಕೊಳ್ಳಬೇಕು. ಒಂದು ವೇಳೆ ಮೋಟಾರ್‌ ಬಳಸಿ ನೀರು ತುಂಬಿದರೆ ಕಾನೂನು ಕ್ರಮ ಕೈಗೊಳ್ಳುತ್ತೇವೆ. ಮೋಟಾರ್‌ ಜಪ್ತಿ ಮಾಡುತ್ತೇವೆಂದು ಪುರಸಭೆ ವತಿಯಿಂದ ಡಂಗುರ ಸಾರಿರುವುದು “ಪುರಸಭೆ ಆಡಳಿತ’ದ ಆಕ್ರೋಶಕ್ಕೆ ಕಾರಣವಾಗಿದೆ.

ಪುರಸಭೆ ಸದಸ್ಯರಾದ ಅಪ್ಸರ್‌ ಮಿಯ್ನಾ, ರಮೇಶ ಕಲ್ಲೂರ್‌, ವೀರೇಶ ಸೀಗಿ, ಎಸ್‌.ಎ ಬಾಸಿದ್‌ ಸೇರಿದಂತೆ ಇತರೆ ಸದಸ್ಯರು ಮುಖ್ಯಾಧಿಕಾರಿ ನಡೆ ಕುರಿತು ಆಕ್ರೋಶ ವ್ಯಕ್ತಪಡಿಸಿದ್ದಾರೆ. ಜನರಿಂದ ಆಯ್ಕೆಗೊಂಡ ಸದಸ್ಯರ ಗಮನಕ್ಕೆ ತರದೆ ಇಂತಹ ಆದೇಶ ಹೊರಡಿಸಿರುವುದು ಸರಿ ಅಲ್ಲ.

ಮುಖ್ಯಾಧಿಕಾರಿಗಳು ತುರ್ತು ಸಭೆ ಕರೆದು ಚರ್ಚಿಸಬೇಕಿತ್ತು. ಬಡಾವಣೆಗಳ ಜನರು ಛೀಮಾರಿ ಹಾಕುತ್ತಿದ್ದು, ನಮ್ಮ ಹಕ್ಕಿಗೆ ಧಕ್ಕೆ ಬರುತ್ತಿದೆ ಎಂದು ಅವರು ಆಕ್ರೋಶ ವ್ಯಕ್ತಪಡಿಸಿದ್ದಾರೆ. ಕೆಲ ಭಾಗದಲ್ಲಿ ಮೋಟಾರ್‌ ಬಳಸದಿದ್ದರೆ ನೀರು ಪೂರೈಕೆ ಸರಿಯಾಗಿ ಆಗಲ್ಲ. ನೀರಿಗಾಗಿ ಗಂಟೆಗಳ ಕಾಲ ಜನರು ಹೈರಾಣವಾಗಬೇಕಾ? ಜನರು ಮೇಲ್ಮಹಡಿಗೆ ನೀರನ್ನು ಹೇಗೆ ತೆಗೆದುಕೊಂಡು ಹೋಗಬೇಕು. ಎರಡ್ಮೂರು ದಿನಕ್ಕೆ ಒಂದು ಬಾರಿ ನೀರು ಪೂರೈಸಲಾಗುತ್ತಿದ್ದು, ಎರಡು ದಿನಕ್ಕಾಗುವಷ್ಟು ನೀರನ್ನು ಕೊಡಗಳಿಂದ ತುಂಬಿಕೊಳ್ಳಲು ಸಾಧ್ಯವೇ? ಪಟ್ಟಣದ ಹಳೆ ಭಾಗದಲ್ಲಿ ಪುರಸಭೆ ನೀರಿನ ಮೂಲ ಬಿಟ್ಟರೆ ಬೇರೆಯಾವುದೇ ಮೂಲಗಳಿಲ್ಲ. ಇಂತಹ ಸಂದರ್ಭದಲ್ಲಿ ಪುರಸಭೆ ಜನರ ಸಂಕಷ್ಟ ಅರಿತು ಆದೇಶ ಹೊರಡಿಸಬೇಕು ಬಡಾವಣೆಗಳ ಜನರು ಹೇಳುತ್ತಿದ್ದಾರೆ.

ಪಟ್ಟಣದ ಕೆಲವು ಭಾಗದಲ್ಲಿ ನೀರು ಪೂರೈಸುವ ಕುರಿತು ದೂರು ಬಂದಿದ್ದು, ನಳಗಳಿಗೆ ಸಾರ್ವಜನಿಕರು ಮೋಟಾರ್‌ ಅಳವಡಿಸುವುದು ನಿಷೇಧಿಸಿ ಆದೇಶ ಮಾಡಲಾಗಿದೆ. ನಳದ ನೀರು ಸಂಪಿಗೆ ಬಿಟ್ಟುಕೊಂಡು ಬೇಕಾದರೆ ಮೋಟಾರ್‌ ಬಳಸಿಕೊಳ್ಳಲಿ. ಆದರೆ ನೇರವಾಗಿ ನಳಗಳಿಗೆ ಮೋಟಾರ್‌ ಬಳಸುವಂತಿಲ್ಲ. ಬೇಕಾದರೆ ಪರವಾನಗಿ ಪಡೆದು ಬಳಕೆಗೆ ಅವಕಾಶ ಕಲ್ಪಿಸಬಹುದಾಗಿದೆ. ನಾಗಯ್ನಾ ಹಿರೇಮಠ, ತಹಶೀಲ್ದಾರ್‌, ಪ್ರಭಾರಿ ಮುಖ್ಯಾಧಿಕಾರಿ

ಕಳೆದ ಎರಡು ದಿನಗಳಿಂದ ಪಟ್ಟಣದ ವಿವಿಧೆಡೆಯಿಂದ ಕರೆಗಳು ಬರುತ್ತಿವೆ. ಪಟ್ಟಣದಲ್ಲಿ ಪುರಸಭೆಯಿಂದ ಡಂಗುರ ಸಾರುತ್ತಿರುವ ಬಗ್ಗೆ ಮಾಹಿತಿ ತಿಳಿದು ಬಂದಿದ್ದು, ಈ ಕುರಿತು ಪುರಸಭೆಯಲ್ಲಿ ಯಾವುದೇ ಚರ್ಚೆ ನಡೆದಿಲ್ಲ. ಮುಖ್ಯಾ ಧಿಕಾರಿಗಳು ಅಧ್ಯಕ್ಷರ ಹಾಗೂ ಸದಸ್ಯರ ಗಮನಕ್ಕೆ ತರದೆ ಆದೇಶ ಹೊರಡಿಸಿರುವುದು ಸರಿ ಅಲ್ಲ. ಈ ಕುರಿತು ಎಲ್ಲರ ಜತೆ ಚರ್ಚಿಸಿ ಮುಂದಿನ ತೀರ್ಮಾನ ಕೈಗೊಳ್ಳಲಾಗುವುದು.
ಕಸ್ತೂರಬಾಯಿ ಪಸನೂರ್‌, ಪುರಸಭೆ ಅಧ್ಯಕ್ಷ

*ದುರ್ಯೋಧನ ಹೂಗಾರ

ಟಾಪ್ ನ್ಯೂಸ್

ಸಿಂಘು ಗಡಿ ಹತ್ಯೆ: ಪೊಲೀಸರೆದುರು ಶರಣಾದ ಮತ್ತಿಬ್ಬರು ನಿಹಾಂಗ್ ಸಿಖ್ಖರು

ಸಿಂಘು ಗಡಿ ಹತ್ಯೆ: ಪೊಲೀಸರೆದುರು ಶರಣಾದ ಮತ್ತಿಬ್ಬರು ನಿಹಾಂಗ್ ಸಿಖ್ಖರು

daily-horoscope

ಈ ರಾಶಿಯವರು ಇಂದು ಹಣಕಾಸಿನ ವಿಚಾರದಲ್ಲಿ ಸ್ಪಷ್ಟತೆಗೆ ಆದ್ಯತೆ ನೀಡುವುದು ತುಂಬಾ ಮುಖ್ಯ

ಈ ಗ್ರಾಮದ ಯುವಕರಿಗೆ ಹುಡುಗಿ ಸಿಗುತ್ತಿಲ್ಲವಂತೆ!

ಈ ಗ್ರಾಮದ ಯುವಕರಿಗೆ ಹುಡುಗಿ ಸಿಗುತ್ತಿಲ್ಲವಂತೆ!

ವಾಟ್ಸ್‌ಆ್ಯಪ್‌ಗೆ 5 ಹೊಸ ಫೀಚರ್‌; ಕೆಲವು ಈಗಾಗಲೇ ಬೀಟಾ ವರ್ಷನ್‌ನಲ್ಲಿ ಲಭ್ಯ

ವಾಟ್ಸ್‌ಆ್ಯಪ್‌ಗೆ 5 ಹೊಸ ಫೀಚರ್‌; ಕೆಲವು ಈಗಾಗಲೇ ಬೀಟಾ ವರ್ಷನ್‌ನಲ್ಲಿ ಲಭ್ಯ

ಐನ್‌ ದುಬಾೖ ; ಕಡಲನಗರಿಯ ಮುಕುಟಕ್ಕೆ ಇನ್ನೊಂದು ವಿಶ್ವದಾಖಲೆಯ ಗರಿ

ಐನ್‌ ದುಬಾೖ ; ಕಡಲನಗರಿಯ ಮುಕುಟಕ್ಕೆ ಇನ್ನೊಂದು ವಿಶ್ವದಾಖಲೆಯ ಗರಿ

ಕರಾವಳಿಯಲ್ಲಿ ಭಾರೀ ಮಳೆ; ಸಂಚಾರಕ್ಕೆ ತೊಂದರೆ

ಕರಾವಳಿಯಲ್ಲಿ ಭಾರೀ ಮಳೆ; ಸಂಚಾರಕ್ಕೆ ತೊಂದರೆ

ಕೇರಳ ಮಳೆಗೆ 8 ಸಾವು; 12ಕ್ಕೂ ಅಧಿಕ ಮಂದಿ ಕಣ್ಮರೆ

ಕೇರಳ ಮಳೆಗೆ 8 ಸಾವು; 12ಕ್ಕೂ ಅಧಿಕ ಮಂದಿ ಕಣ್ಮರೆ

ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು

9

ಶರಣರ ವೈಚಾರಿಕತೆ ವೈಜ್ಞಾನಿಕ ಕಾಂತ್ರಿಗೆ ಪೂರಕ: ಅಗಸರ

8

ಪ್ರಜಾಪ್ರಭುತ್ವಕ್ಕೆ ಅಡಿಪಾಯ ಹಾಕಿದ ನೆಲ ಕಲ್ಯಾಣ

7

ಬುದ್ಧನ ಕಂಚಿನ ಮೂರ್ತಿ ಪ್ರತಿಷ್ಠಾಪನೆ

6

ಕೋವಿಡ್‌ನಿಂದ ಮೃತ ಕುಟುಂಬಕ್ಕೆ ಪರಿಹಾರ ನೀಡಿ

5

ಮೀಸಲು ಸೌಲಭ್ಯದ ಮೇಲೆ ಶೂನ್ಯ ಸವಾರಿ!

MUST WATCH

udayavani youtube

ಪರಸ್ಪರ ಮಜ್ಜಿಗೆ ಎರಚಿಕೊಂಡು ಗೌಳಿ ಬುಡಕಟ್ಟು ಸಮುದಾಯದಿಂದ ದಸರಾ ಆಚರಣೆ

udayavani youtube

ಟೀಂ ಇಂಡಿಯಾ ಮುಖ್ಯ ಕೋಚ್ ಸ್ಥಾನಕ್ಕೆ ದ್ರಾವಿಡ್ ನೇಮಕ

udayavani youtube

ಅಸಹಾಯಕ ಸ್ಥಿತಿಯಲ್ಲಿದ್ದ ವ್ಯಕ್ತಿ ಹಾಗೂ ಕೋತಿಯನ್ನು ರಕ್ಷಿಸಿ ಮಾದರಿಯಾದ ಯುವಕರು

udayavani youtube

ರಾಮನ ಹೆಸರಲ್ಲಿ ಅಧಿಕಾರಕ್ಕೆ ಬಂದವರಿಗೆ ಕುತ್ತು? ಮೈಲಾರಸ್ವಾಮಿ ಕಾರ್ಣಿಕ ನುಡಿ ಏನು ಗೊತ್ತಾ?

udayavani youtube

ಹುಮನಾಬಾದ್ ನಲ್ಲಿ ವಿಜಯ ದಶಮಿ ಸಂಭ್ರಮ : ನೋಡುಗರ ಗಮನ ಸೆಳೆದ ರಾವಣನ ಪ್ರತಿಕೃತಿ

ಹೊಸ ಸೇರ್ಪಡೆ

ಸಿಂಘು ಗಡಿ ಹತ್ಯೆ: ಪೊಲೀಸರೆದುರು ಶರಣಾದ ಮತ್ತಿಬ್ಬರು ನಿಹಾಂಗ್ ಸಿಖ್ಖರು

ಸಿಂಘು ಗಡಿ ಹತ್ಯೆ: ಪೊಲೀಸರೆದುರು ಶರಣಾದ ಮತ್ತಿಬ್ಬರು ನಿಹಾಂಗ್ ಸಿಖ್ಖರು

daily-horoscope

ಈ ರಾಶಿಯವರು ಇಂದು ಹಣಕಾಸಿನ ವಿಚಾರದಲ್ಲಿ ಸ್ಪಷ್ಟತೆಗೆ ಆದ್ಯತೆ ನೀಡುವುದು ತುಂಬಾ ಮುಖ್ಯ

ಈ ಗ್ರಾಮದ ಯುವಕರಿಗೆ ಹುಡುಗಿ ಸಿಗುತ್ತಿಲ್ಲವಂತೆ!

ಈ ಗ್ರಾಮದ ಯುವಕರಿಗೆ ಹುಡುಗಿ ಸಿಗುತ್ತಿಲ್ಲವಂತೆ!

ವಾಟ್ಸ್‌ಆ್ಯಪ್‌ಗೆ 5 ಹೊಸ ಫೀಚರ್‌; ಕೆಲವು ಈಗಾಗಲೇ ಬೀಟಾ ವರ್ಷನ್‌ನಲ್ಲಿ ಲಭ್ಯ

ವಾಟ್ಸ್‌ಆ್ಯಪ್‌ಗೆ 5 ಹೊಸ ಫೀಚರ್‌; ಕೆಲವು ಈಗಾಗಲೇ ಬೀಟಾ ವರ್ಷನ್‌ನಲ್ಲಿ ಲಭ್ಯ

ಐನ್‌ ದುಬಾೖ ; ಕಡಲನಗರಿಯ ಮುಕುಟಕ್ಕೆ ಇನ್ನೊಂದು ವಿಶ್ವದಾಖಲೆಯ ಗರಿ

ಐನ್‌ ದುಬಾೖ ; ಕಡಲನಗರಿಯ ಮುಕುಟಕ್ಕೆ ಇನ್ನೊಂದು ವಿಶ್ವದಾಖಲೆಯ ಗರಿ

Thanks for visiting Udayavani

You seem to have an Ad Blocker on.
To continue reading, please turn it off or whitelist Udayavani.