ವಿನೂತನ ಅನುಭವ ಮಂಟಪಕ್ಕೆ ಜನವರಿಯಲ್ಲಿ ಅಡಿಗಲ್ಲು

Team Udayavani, Nov 18, 2019, 2:25 PM IST

ಬೀದರ್: ಬಸವ ಕಲ್ಯಾಣದಲ್ಲಿ ರಾಜ್ಯ ಸರ್ಕಾರದಿಂದ ವಿನೂತನ ಅನುಭವ ಮಂಟಪ ನಿರ್ಮಾಣಕ್ಕೆ ಬರುವ ಜನವರಿ ತಿಂಗಳಲ್ಲಿ ಅಡಿಗಲ್ಲು ನೆರವೇರಿಸಲು ನಿರ್ಧರಿಸಲಾಗಿದೆ ಎಂದು ಅನುಭವ ಮಂಟಪ ಟ್ರಸ್ಟ್ ಅಧ್ಯಕ್ಷರಾದ ಡಾ. ಬಸವಲಿಂಗ ಪಟ್ಟದ್ದೇವರು ಹೇಳಿದರು.

ನಗರದಲ್ಲಿ ಸೋಮವಾರ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ಅನುಭವ ಮಂಟಪ ಉತ್ಸವದ ವೇಳೆಯೇ ಕಾಮಗಾರಿಗೆ ಚಾಲನೆ ನೀಡುವ ಉದ್ದೇಶ ಹೊಂದಲಾಗಿತ್ತು. ಆದರೆ, ಉಪ ಚುನಾವಣೆ ಹಿನ್ನಲೆಯಲ್ಲಿ ಇದನ್ನು ಮುಂದೂಡಲಾಗಿದೆ. ವಿನೂತನ ಅನುಭವ ಮಂಟಪಕ್ಕೆ ರಾಜ್ಯ ಸರ್ಕಾರ ಈಗಾಗಲೇ 50 ಕೋಟಿ ರೂ. ಮಂಜೂರು ಮಾಡಿದ್ದು, ರಾಜ್ಯದಿಂದ ಕೇಂದ್ರ ಸರ್ಕಾರಕ್ಕೆ ಅನುದಾನ ಕೋರಿ ಪ್ರಸ್ತಾವನೆ ಸಲ್ಲಿಸಿದರೆ ಕೋಟ್ಯಂತರ ಹಣ ಸಿಗಲು ಸಾಧ್ಯವಿದೆ. ಈ ದಿಸೆಯಲ್ಲಿ ಪ್ರಯತ್ನ ಮಾಡಲಾಗುತ್ತಿದೆ ಎಂದು ತಿಳಿಸಿದರು.

ಸಂಶೋಧನೆಗಳ ಆಧಾರದ ಮೇಲೆಯೇ 1955ರಲ್ಲಿ ಲಿಂ. ಡಾ. ಚನ್ನಬಸವ ಪಟ್ಟದ್ದೇವರು ಅನುಭವ ಮಂಟಪವನ್ನು ನಿರ್ಮಿಸಿದ್ದಾರೆ. ಗೆಜೆಟ್ ಪ್ರಕಾರ ಮಂಟಪವು ಒಟ್ಟು 80 ಎಕರೆ ಜಮೀನು ಹೊಂದಿತ್ತು. ಆದರೆ, ಅದು ಈಗ 25 ಎಕರೆಗೆ ಬಂದಿದೆ. ನೂತನ ಕಟ್ಟಡ ಟ್ರಸ್ಟ್‌ಗೆ ಸೇರಬಹುದೆಂಬ ಉದ್ದೇಶಕ್ಕೆ ಕೆಲವರು ಈ ಸ್ಥಳಕ್ಕೆ ವಿರೋಧ ವ್ಯಕ್ತಪಡಿಸುತ್ತಿದ್ದಾರೆ. ಆ ಜಮೀನು ಸಹ ಟ್ರಸ್ಟ್ ಹೆಸರಿನಲ್ಲಿಲ್ಲ, ಕೇವಲ ಕಬ್ಜಾದಲ್ಲಿದೆ. ನೂತನ ಕಟ್ಟಡಕ್ಕಾಗಿ ಟ್ರಸ್ಟ್ ಬೇಷರತ್ತಾಗಿ ಈ ಜಾಗವನ್ನು ಸರ್ಕಾರಕ್ಕೆ ಕೊಟ್ಟಿದೆ ಎಂದು ಡಾ. ಪಟ್ಟದ್ದೇವರು ಸ್ಪಷ್ಟಪಡಿಸಿದರು.

ಶ್ರೀ ಅಷ್ಠ ಲಕ್ಷ್ಮೀ ಜೋತಿಷ್ಯ ಮಂದಿರ,
ಉದ್ಯೋಗ, ಮದುವೆ ವಿಳಂಬ, ಸತಿ-ಪತಿ ಕಲಹ, ಶತ್ರುಪೀಡೆ, ಅತ್ತೆ-ಸೊಸೆ ಕಲಹ, ವಶೀಕರಣ, ವ್ಯವಹಾರದಲ್ಲಿ ನಷ್ಟ, ಇನ್ನೂ ನಿಮ್ಮಸಮಸ್ಯೆ ಯಾವುದೇ ಇರಲಿ, ಎಷ್ಟೇ ಕಠಿಣವಾಗಿರಲಿ ಶಾಶ್ವತ ಪರಿಹಾರ ಶತಃ ಶಿದ್ದ , ನಿಮ್ಮ ಯಾವುದೇ ಇಷ್ಟಾರ್ಥ ಕಾರ್ಯಗಳಿದ್ದರೂ ಕೇವಲ 5 ದಿನಗಳಲ್ಲಿ ನೇರವೆರಿಸಿ ಕೋಡುತ್ತಾರೇ. ಇಂದೇ ಭೇಟಿ ನೀಡಿ.
ಶ್ರೀ ಶ್ರೀ ಬಿ ಹೆಚ್ ಆಚಾರ್ಯ ಗೂರುಜೀ
ಜಯನಗರ ಬೆಂಗಳೂರು, ಮೋ- 8884889444

ಈ ವಿಭಾಗದಿಂದ ಇನ್ನಷ್ಟು

  • ಹುಮನಾಬಾದ: ಈ ಹಿಂದಿನ ಶಿಕ್ಷಣ ಹಾಗೂ ಇಂದಿನ ಶಿಕ್ಷಣದ ವ್ಯವಸ್ಥೆಗಳು ಬದಲಾದಂತೆ ವಿದ್ಯಾರ್ಥಿಗಳು ಕೂಡ ಬದಲಾಗುತ್ತಿದ್ದಾರೆ. ಗುರುಶಿಷ್ಯರ ಮಧ್ಯೆ ಕೂಡ ಅಂತರ ಉಂಟಾಗುತ್ತಿರುವ...

  • ಔರಾದ: ಪಟ್ಟಣದ ಆರಾಧ್ಯ ದೈವ ಶ್ರೀ ಅಮರೇಶ್ವರ ಜಾತ್ರಾ ಮಹೋತ್ಸವ ನಿಮಿತ್ತ ರವಿವಾರ ಸಾವಿರಾರು ಭಕ್ತಾದಿಗಳ ಸಮ್ಮುಖದಲ್ಲಿ ಅದ್ಧೂರಿಯಾಗಿ ರಥೋತ್ಸವ ಜರುಗಿತು. ಜಾತ್ರೋತ್ಸವ...

  • ಬಸವಕಲ್ಯಾಣ: ಇಷ್ಟಲಿಂಗ ಪೂಜೆ ಗುರು, ಲಿಂಗ, ಜಂಗಮ, ವಿಭೂತಿ ರುದ್ರಾಕ್ಷಿ ಸೇರಿದಂತೆ ಅಷ್ಟಾವರಣಗಳನ್ನು ಒಳಗೊಂಡಿದ್ದು, ನಿತ್ತ ಪೂಜೆ ಮಾಡಿದರೆ ಇಷ್ಟಾರ್ಥಗಳು ಈಡೇರುತ್ತವೆ...

  • ಕಲಬುರಗಿ: ದಕ್ಷಿಣಮತಕ್ಷೇತ್ರದ ಶಾಸಕರಾದ ದತ್ತಾತ್ರೇಯ ಪಾಟೀಲ ರೇವೂರ ಜನ್ಮ ದಿನಾಚರಣೆ ಅಂಗವಾಗಿ ಫೆ. 28ರಂದು ನಗರದ ನೂತನ ವಿದ್ಯಾಲಯ ಮೈದಾನದಲ್ಲಿ ಹಮ್ಮಿಕೊಳ್ಳಲಾಗಿರುವ...

  • ಬೀದರ್: ಕೌಟುಂಬಿಕ ಕಲಹದಿಂದ ಬೇಸತ್ತು ಬಸವಕಲ್ಯಾಣ ಅಬಕಾರಿ ಇಲಾಖೆಯ ಪ್ರೊಬೇಷನರಿ ಪಿಎಸ್ಐ ನೇಣು ಬಿಗಿದು ಆತ್ಮಹತ್ಯೆ ಮಾಡಿಕೊಂಡ ಘಟನೆ ರವಿವಾರ ನಡೆದಿದೆ. ರೇಖಾ...

ಹೊಸ ಸೇರ್ಪಡೆ