ಸಿಂಧನೂರಲ್ಲಿ ಐದು ಸಾವಿರ ಗಿಡಗಳಿಗೆ ಹೊಸ ಲುಕ್

Team Udayavani, Dec 6, 2021, 3:01 PM IST

21plants

ಸಿಂಧನೂರು: ಹಸಿರು ತೋರಣ ಕಲ್ಪನೆಯೊಂದಿಗೆ ನಗರದ ರಾಜ್ಯ ಹೆದ್ದಾರಿಗಳಲ್ಲಿ ಹಾಕಿರುವ ಗಿಡಗಳು ಸಮೃದ್ಧವಾಗಿ ನೆರಳು ನೀಡುತ್ತಿರುವ ಬೆನ್ನಲ್ಲೇ ಅವುಗಳನ್ನು ಮುಂದಿನ ದಿನಕ್ಕೂ ಕಾಪಾಡುವ ನಿಟ್ಟಿನಲ್ಲಿ ಟ್ರಿಮ್‌ಗೊಳಿಸುವ ಕೆಲಸ ಚುರುಕು ಪಡೆದಿದೆ.

ನಗರದ ರಾಯಚೂರು, ಕುಷ್ಟಗಿ, ಗಂಗಾವತಿ, ಮಸ್ಕಿ ಮಾರ್ಗದ ರಸ್ತೆಗಳಲ್ಲಿ ಹಾಕಿರುವ ಗಿಡಗಳಿಗೆ ಹೊಸ ರೂಪ ನೀಡಲಾಗುತ್ತಿದೆ. ಹೆಚ್ಚುವರಿಯಾಗಿ ಬೆಳೆದ ರೆಂಬೆ, ಕೊಂಬೆಗಳನ್ನು ಕತ್ತರಿಸಿ, ಗಿಡಗಳು ಮತ್ತಷ್ಟೂ ಎತ್ತರಕ್ಕೆ ಬೆಳೆಯುವಂತೆ ನೋಡಿಕೊಳ್ಳಲಾಗಿದೆ. ಇದಕ್ಕಾಗಿ ಕಳೆದ ತಿಂಗಳಿಂದ ಶ್ರಮಿಸಲಾಗುತ್ತಿದೆ.

ಗಿಡಗಳಿಗೆ ಹೊಸ ರೂಪ

ಸಿಂಧನೂರು ನಗರದ ಹೆದ್ದಾರಿ ಮುಖ್ಯ ಬೀದಿಗಳಲ್ಲಿ ಎಡ-ಬಲದಲ್ಲಿ ಬೆಳೆಸಿರುವ ಗಿಡಗಳು ರೆಂಬೆಕೊಂಬೆ ಬಿಟ್ಟಿವೆ. ಇದರಿಂದಾಗಿ ವಾಣಿಜ್ಯ ಮಳಿಗೆಯ ಮೇಲೆ, ಅಕ್ಕ-ಪಕ್ಕದ ವಿದ್ಯುತ್‌, ಕೇಬಲ್‌ ತಂತಿಗಳಿಗೆ ತಾಗಿಕೊಂಡಿವೆ. ಇವುಗಳನ್ನು ಬಿಡಿಸಿ, ಗಿಡಗಳು ಮತ್ತಷ್ಟೂ ಎತ್ತರಕ್ಕೆ ಬೆಳೆಸಲು ಟ್ರಿಮ್ಮಿಂಗ್‌ ಕೆಲಸ ಕೈಗೊಳ್ಳಲಾಗಿದೆ. ವಾರದ ಪ್ರತಿ ಸಂಡೆಯೂ ಆರ್‌.ಸಿ. ಪಾಟೀಲ್‌ ನೇತೃತ್ವದ ತಂಡ ತಿಂಗಳಿಂದ ಶ್ರಮದಾನಕ್ಕೆ ನಿಲ್ಲುತ್ತಿದೆ. ಇದರ ಪರಿಣಾಮ ಕುಷ್ಟಗಿ ರಸ್ತೆಯ ಅರ್ಧ ಭಾಗ ಹೊರತುಪಡಿಸಿ, ಉಳಿದ ಎಲ್ಲ ಕಡೆಯೂ ಗಿಡಗಳ ಟ್ರಿಮ್ಮಿಂಗ್‌ ಕೆಲಸ ಪೂರ್ಣಗೊಂಡಿದೆ.

ಬಿಡುವಿನ ವೇಳೆ ಭಾನುವಾರ ಕೈಗೊಳ್ಳುವ ಈ ಕೆಲಸಕ್ಕೆ ನಾಲ್ಕಾರು ಕೂಲಿಕಾರರನ್ನು ಬಳಸಿಕೊಳ್ಳಲಾಗುತ್ತಿದೆ. ಗಿಡದ ರೆಂಬೆ ಕತ್ತರಿಸಲು ಕಟಿಂಗ್‌ ಮಿಷನ್‌ ಬಳಸಲಾಗುತ್ತಿದೆ. ವಾರಕ್ಕೊಂದು ದಿನ ನಾಲ್ಕೈದು ಸಾವಿರ ರೂ. ಖರ್ಚಾದರೂ ಪಾಟೀಲ್ಸ್‌ ಅಕಾಡೆಮಿಯವರೇ ಖರ್ಚು ಭರಿಸುತ್ತಿದ್ದಾರೆ. ಕ್ಲಾಸ್‌ ಕಂಟ್ರ್ಯಾಕ್ಟರ್‌ ಆರ್‌.ಪಂಪಾಪತಿ ಅಲಬನೂರು, ಗಿಡಗಳ ರೆಂಬೆ ಕತ್ತರಿಸುವ ಯಂತ್ರ ಕೊಡಿಸಿ ಈ ಕಾರ್ಯಕ್ಕೆ ಕೈ ಜೋಡಿಸಿದ್ದಾರೆ. ಯುವಕರ ತಂಡವೂ ಕೂಡ ಸಾಥ್‌ ನೀಡಿದೆ.

ಆರಂಭದಲ್ಲಿ ರೆಂಬೆ-ಕೊಂಬೆ ಕತ್ತರಿಸಿದ ಬಳಿಕ ಅದನ್ನು ಸಾಗಿಸಲು ಕಷ್ಟ ಪಡುವಂತಾಗಿತ್ತು. ಇದೀಗ ಜನರೇ ಉರುವಳಿಗೆ ಬಳಸಲು ಕಟ್ಟಿಗೆಯನ್ನು ಕಡಿದುಕೊಂಡು ಹೋಗುತ್ತಿರುವುದರಿಂದ ಉಳಿದ ಎಲೆಗಳನ್ನು ಮಾತ್ರ ನಗರಸಭೆಯವರು ಸಾಗಿಸುತ್ತಿದ್ದಾರೆ. ಕಳೆದ ಒಂದು ತಿಂಗಳಲ್ಲಿ 5 ಸಾವಿರ ಗಿಡಗಳು ಟ್ರಿಮ್ಮಿಂಗ್‌ ಆಗಿರುವ ಪರಿಣಾಮ ಹೊಸ ರೀತಿಯಲ್ಲಿ ಕಂಗೊಳಿಸುತ್ತಿವೆ.

ದ್ವಿಪಥ ರಸ್ತೆ ನಿರ್ಮಾಣವಾದ ಬಳಿಕ ರಸ್ತೆ ಎರಡು ಬದಿಯಲ್ಲೂ ಗಿಡಗಳೇ ಇರಲಿಲ್ಲ. ಆಗ ವೃದ್ಧೆಯೊಬ್ಬರು ಬರಿಗಾಗಲಲ್ಲಿ ಹೋಗುವುದನ್ನು ಕಂಡು ಮರುಗಿದ್ದೆ. ಇಂದು ಗಿಡಗಳು ಬೆಳೆದಿರುವ ಪರಿಣಾಮ ನೆರಳು ಕೊಡುತ್ತಿವೆ. ಅವು ಮತ್ತಷ್ಟೂ ಬೆಳೆಯಬೇಕೆಂಬ ನಿಟ್ಟಿನಲ್ಲಿ ಎಲ್ಲರ ಸಹಕಾರದೊಟ್ಟಿಗೆ ಅವುಗಳನ್ನು ಟ್ರಿಮ್‌ ಮಾಡಲಾಗುತ್ತಿದೆ. ಆರ್‌.ಸಿ. ಪಾಟೀಲ್‌, ದುದ್ದುಪಡಿ ಶಿಕ್ಷಣ ಸಂಸ್ಥೆ ಕಾರ್ಯದರ್ಶಿ, ಸಿಂಧನೂರು

-ಯಮನಪ್ಪ ಪವಾರ

ಟಾಪ್ ನ್ಯೂಸ್

1-qwqwewqe

IPL ಅಕ್ರಮ ಪ್ರಸಾರ ಕೇಸ್; ನಟಿ ತಮನ್ನಾಗೆ ಸಂಕಷ್ಟ: ಸೈಬರ್ ಸೆಲ್ ನೋಟಿಸ್

1-wqqwewqe

BJP; ಖೂಬಾ ಮತ್ತೊಮ್ಮೆ ಸಚಿವರಾಗ್ತಾರೆ : ಔರಾದ್ ನಲ್ಲಿ ಯಡಿಯೂರಪ್ಪ ಘೋಷಣೆ

Kollywood: ಅಜಿತ್‌ ಹುಟ್ಟುಹಬ್ಬಕ್ಕೆ ಸೂಪರ್‌ ಹಿಟ್ ʼಬಿಲ್ಲಾʼ ರೀ ರಿಲೀಸ್; ಫ್ಯಾನ್ಸ್‌ ಖುಷ್

Kollywood: ಅಜಿತ್‌ ಹುಟ್ಟುಹಬ್ಬಕ್ಕೆ ಸೂಪರ್‌ ಹಿಟ್ ʼಬಿಲ್ಲಾʼ ರೀ ರಿಲೀಸ್; ಫ್ಯಾನ್ಸ್‌ ಖುಷ್

Malicious Calls; ಜ್ಞಾನವ್ಯಾಪಿ ಮಸೀದಿ ಸರ್ವೆ ತೀರ್ಪು ನೀಡಿದ್ದ ಜಡ್ಜ್ ಗೆ ಬೆದರಿಕೆ ಕರೆ

Malicious Calls; ಜ್ಞಾನವ್ಯಾಪಿ ಮಸೀದಿ ಸರ್ವೆ ತೀರ್ಪು ನೀಡಿದ್ದ ಜಡ್ಜ್ ಗೆ ಬೆದರಿಕೆ ಕರೆ

19-uv-fusion

Vote: ಬನ್ನಿ ಉತ್ತಮ ನಾಯಕನನ್ನು ಆಯ್ಕೆ ಮಾಡೋಣ

ಜ.26ರಂದು 2ನೇ ಹಂತದ ಚುನಾವಣೆ;ರಾಹುಲ್‌, ತರೂರ್‌, ಹೇಮಾ ಮಾಲಿನಿ ಹಲವು ಘಟಾನುಘಟಿಗಳು ಕಣದಲ್ಲಿ

ಜ.26ರಂದು 2ನೇ ಹಂತದ ಚುನಾವಣೆ;ರಾಹುಲ್‌, ತರೂರ್‌, ಹೇಮಾ ಮಾಲಿನಿ ಹಲವು ಘಟಾನುಘಟಿಗಳು ಕಣದಲ್ಲಿ

18-aranthodu

Aranthodu: ಜೀಪ್-ಬೈಕ್ ಅಪಘಾತ; ಗಂಭೀರ ಗಾಯಗೊಂಡಿದ್ದ ಬೈಕ್ ಸವಾರ ಸಾವು

ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು

1-wqqwewqe

BJP; ಖೂಬಾ ಮತ್ತೊಮ್ಮೆ ಸಚಿವರಾಗ್ತಾರೆ : ಔರಾದ್ ನಲ್ಲಿ ಯಡಿಯೂರಪ್ಪ ಘೋಷಣೆ

siddaramaiah

Bidar; ನೇಹಾ ಪ್ರಕರಣದಲ್ಲಿ ಬಿಜೆಪಿ ರಾಜಕೀಯ‌ ಮಾಡುವುದು ಸರಿಯಲ್ಲ: ಸಿಎಂ ಸಿದ್ಧರಾಮಯ್ಯ‌

Lok Sabha Election: ಸೀನಿಯರ್‌ ಖೂಬಾಗೆ ಜ್ಯೂನಿಯರ್‌ ಖಂಡ್ರೆ ಸವಾಲು

Lok Sabha Election: ಸೀನಿಯರ್‌ ಖೂಬಾಗೆ ಜ್ಯೂನಿಯರ್‌ ಖಂಡ್ರೆ ಸವಾಲು

16

ನೀತಿ ಸಂಹಿತೆ ನಡುವೆಯೂ ರಾಜ್ಯಕ್ಕೆ ನೆರವು ಎನ್ನುವ ಬಿಜೆಪಿಗೆ ನಾಚಿಕೆ ಇಲ್ಲವೇ? – ಖಂಡ್ರೆ

Minchu

Rain; ಬೀದರ್,ಕೊಪ್ಪಳದಲ್ಲಿ ಸಿಡಿಲಿನ ಆರ್ಭಟಕ್ಕೆ ಇಬ್ಬರು ಮೃತ್ಯು

MUST WATCH

udayavani youtube

ವೈಭವದ ಹಿರಿಯಡ್ಕ ಸಿರಿಜಾತ್ರೆ ಸಂಪನ್ನ

udayavani youtube

ಯಾವೆಲ್ಲಾ ಚರ್ಮದ ಕಾಯಿಲೆಗಳಿವೆ ಹಾಗೂ ಪರಿಹಾರಗಳೇನು?

udayavani youtube

Mangaluru ಹೆಬ್ಬಾವಿನ ದೇಹದಲ್ಲಿ ಬರೋಬ್ಬರಿ 11 ಬುಲೆಟ್‌ ಪತ್ತೆ!

udayavani youtube

ನನ್ನ ಕಥೆ ನಿಮ್ಮ ಜೊತೆ

udayavani youtube

‘ಕಸಿ’ ಕಟ್ಟುವ ಸುಲಭ ವಿಧಾನ

ಹೊಸ ಸೇರ್ಪಡೆ

1-qwqwewqe

IPL ಅಕ್ರಮ ಪ್ರಸಾರ ಕೇಸ್; ನಟಿ ತಮನ್ನಾಗೆ ಸಂಕಷ್ಟ: ಸೈಬರ್ ಸೆಲ್ ನೋಟಿಸ್

1-wqqwewqe

BJP; ಖೂಬಾ ಮತ್ತೊಮ್ಮೆ ಸಚಿವರಾಗ್ತಾರೆ : ಔರಾದ್ ನಲ್ಲಿ ಯಡಿಯೂರಪ್ಪ ಘೋಷಣೆ

ಬಾಗಲಕೋಟೆ: ಯಾರೇ ಪಕ್ಷ ಬಿಟ್ಟರೂ ಏನೂ ಆಗಲ್ಲ- ಸಿದ್ದು ಸವದಿ

ಬಾಗಲಕೋಟೆ: ಯಾರೇ ಪಕ್ಷ ಬಿಟ್ಟರೂ ಏನೂ ಆಗಲ್ಲ- ಸಿದ್ದು ಸವದಿ

ಧಾರವಾಡ: “ಶ್ರೀರಾಮ-ಕೃಷ್ಣರ ಜೀವನ ಇಂದಿಗೂ ಆದರ್ಶ’

ಧಾರವಾಡ: “ಶ್ರೀರಾಮ-ಕೃಷ್ಣರ ಜೀವನ ಇಂದಿಗೂ ಆದರ್ಶ’

Kollywood: ಅಜಿತ್‌ ಹುಟ್ಟುಹಬ್ಬಕ್ಕೆ ಸೂಪರ್‌ ಹಿಟ್ ʼಬಿಲ್ಲಾʼ ರೀ ರಿಲೀಸ್; ಫ್ಯಾನ್ಸ್‌ ಖುಷ್

Kollywood: ಅಜಿತ್‌ ಹುಟ್ಟುಹಬ್ಬಕ್ಕೆ ಸೂಪರ್‌ ಹಿಟ್ ʼಬಿಲ್ಲಾʼ ರೀ ರಿಲೀಸ್; ಫ್ಯಾನ್ಸ್‌ ಖುಷ್

Thanks for visiting Udayavani

You seem to have an Ad Blocker on.
To continue reading, please turn it off or whitelist Udayavani.