ತ್ರಿವಳಿ ತಲಾಖ್‌ ಕಾನೂನು ಜಾರಿ ಬೇಡ

Team Udayavani, Feb 25, 2018, 2:39 PM IST

ಬೀದರ: ದೇಶದಲ್ಲಿರುವ ಜ್ವಲಂತ ಸಮಸ್ಯೆಗಳತ್ತ ಇರುವ ಜನರ ಗಮನ ಬೇರೆಡೆ ಸೆಳೆಯುವ ಉದ್ದೇಶದಿಂದ ಮುಸ್ಲಿಂ ಸಮಾಜದಲ್ಲಿರುವ ತ್ರಿವಳಿ ತಲಾಖ್‌ ಬಿಲ್‌ ಮಂಡನೆಗೆ ಸರ್ಕಾರ ಮುಂದಾಗಿದೆ ಎಂದು ಆಲ್‌ ಇಂಡಿಯಾ ಮುಸ್ಲಿಂ ವೈಯಕ್ತಿಕ ಕಾನೂನು ಮಂಡಳಿ ಸದಸ್ಯ ಮೌಲಾನಾ ಅಬು ತಾಲೀಬ್‌ ರಹಮಾನಿ ಆರೋಪಿಸಿದರು.

ನಗರದಲ್ಲಿ ಶನಿವಾರ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ತ್ರಿವಳಿ ತಲಾಖ್‌ ಜಾರಿಗೆ ತರುವ ಮೂಲಕ ಹಿಟ್ಲರಿಜ್‌ಂ ಪಾಲಿಸಿ ತರುವ ಪ್ರಯತ್ನ ನಡೆಯುತ್ತಿದೆ. ಇದರಿಂದ ನೂರಾರು ವರ್ಷಗಳಿಂದ ಭಾತೃತ್ವದಿಂದ ಜೀವಿಸುತ್ತಿರುವ ಹಿಂದು ಮುಸ್ಲಿಂರ ಮಧ್ಯೆ ವೈರತ್ವ ತರುವ ಷಡ್ಯಯಂತ್ರ ನಡೆಸಲಾಗುತ್ತಿದೆ ಎಂದು ಆಕ್ರೋಶ ವ್ಯಕ್ತಪಡಿಸಿದರು. 

ಸ್ವತಂತ್ರ ಭಾರತದಲ್ಲಿ ವಿವಿಧ ಸಮಾಜದ ಸುಮಾರು 200 ವೈಯಕ್ತಿಕ ಕಾನೂನುಗಳಿವೆ. ಇದರಲ್ಲಿ ಆದಿವಾಸಿ, ನಾಗಾಲ್ಯಾಂಡ್‌, ಪಾಂಡಿಚೇರಿ, ಗೋವಾ, ಉತ್ತರ ಭಾರತ ಹಾಗೂ ದಕ್ಷಿಣ ಭಾರತಕ್ಕೆ ಬೇರೆ ಬೇರೆ ವೈಯಕ್ತಿಕ ಕಾನೂನುಗಳಿವೆ. ಅದರಲ್ಲಿಯೇ ಮುಸ್ಲಿಂ ಪರ್ಸನಲ್‌ ಲಾ ಬೋರ್ಡ್‌ ಕೂಡ ಒಂದಾಗಿದೆ ಎಂದರು.

ದೇಶದಲ್ಲಿ ಎರಡು ಲಕ್ಷ ಮುಸ್ಲಿಂ ಮಹಿಳೆಯರ ತಲಾಖ್‌ ಪ್ರಕರಣಗಳಿವೆ. ಉಳಿದವರು ಯಾರೆ ಇರಲಿ ಇಲ್ಲಿ ಯಾವುದೇ ಭೇದ ಇಲ್ಲದೆ ಮಹಿಳೆಯರ ಮಾತು ಏಕೆ ಆಡುತ್ತಿಲ್ಲ. ಸಹೋದರತೆಯಿಂದ ಜೀವಿಸುತ್ತಿರುವವರ ಮಧ್ಯೆ ಜಾತಿವಾದಿ ವಾತಾವರಣ ನಿರ್ಮಿಸುತಿದ್ದಾರೆ. ದೇಶದಲ್ಲಿ ತ್ರಿವಳಿ ತಲಾಖ್‌ ಎಷ್ಟು ಎಂದು ಯಾರು ಹೇಳುತ್ತಿಲ್ಲ, ವಾಟ್ಸ್‌ ಆ್ಯಪ್‌, ಇ-ಮೇಲ್‌ ಮೂಲಕ ಎಷ್ಟು ಎಂಬುವುದನ್ನು ಯಾರು ಹೇಳಿತ್ತಿಲ್ಲ. ಆದರೆ 2017ರ ಒಂದು ಅಂಕಿ ಅಂಶಗಳ ಪ್ರಕಾರ ತ್ರಿವಳಿ ತಲಾಖ್‌ನ 2900 ಮಹಿಳೆಯರಿದ್ದಾರೆ. ಆದರೆ ಕೆಲ ಸುದ್ದಿವಾಹಿನಿಗಳು ನಮ್ಮ ಸಮಾಜಕ್ಕೆ ಕಳಂಕ ತರುವ ಕೆಲಸ ಮಾಡುತಿದ್ದಾರೆ. ಇದರಿಂದ ದೇಶದ ಶಕ್ತಿ ಕುಂದುತ್ತಿದೆ ಎಂದರು.

ತ್ರಿವಳಿ ತಲಾಖ್‌ ಬಿಲ್‌ ಯಾವುದೇ ಕಾರಣಕ್ಕೂ ರಾಜ್ಯಸಭೆಯಲ್ಲಿ ಮಂಡನೆ ಮಾಡಬಾರದು. ಇದು ಕಾನೂನು ವಿರೋಧಿಯಾಗಿದೆ. ಈ ಕಾನೂನಿನಡಿ ಯಾರೇ ದೂರು ಸಲ್ಲಿಸಿದರು ಪತಿಗೆ ಮೂರು ವರ್ಷ ಜೈಲು ಹಾಗೂ ಅವಳ ಖರ್ಚು ನೀಡಬೇಕು. ಒಳ್ಳೆಯ ಬಿಲ್‌ ತಂದರೆ ಅದಕ್ಕೆ ನಾವು ಸ್ವಾಗತಿಸುತ್ತೇವೆ ಎಂದರು. 

ಪ್ರಧಾನಿ ಯಾವುದೇ ಪಕ್ಷದವರಾಗಿರಲಿ, ದೇಶದ ಚುನಾಯಿತ ಪ್ರಧಾನಿಗಳಾಗಿರುತ್ತಾರೆ. ಅವರು ದೇಶ ಅಭಿವೃದ್ಧಿಪಡಿಸಬೇಕು. ಯುವಕರಿಗೆ ಉದ್ಯೋಗ, ಜನರ ರಕ್ಷಣೆಯ ಕಡೆಗೆ ಗಮನ ಹರಿಸಬೇಕು. ಆದರೆ, ಯಾವುದೇ ಒಂದು ಧರ್ಮವನ್ನು ಹತೋಟಿಯಲ್ಲಿಡಲು ಮುಂದಾಗಿರುವುದು ಸಂವಿಧಾನದ ಪ್ರಕಾರ ಕಾನೂನು ಬಾಹೀರವಾಗಿದೆ ಎಂದು ಹೇಳಿದರು.

ಪ್ರಮುಖರಾದ ಮೌಲಾನಾ ಮುಫ್ತೀ ಗುಲಾಮ್‌ ಯಝದಾನಿ, ಸೈಯದ್‌ ಸುಜಾವೋದ್ದಿನ್‌, ಮಹ್ಮದ್‌ ಖಾಲೀದ್‌ ಇಕ್ಬಾಲ್‌, ಜಯವಂತ ಅಂಬಣ್ಣ, ವಿಕಾರೋದ್ದಿನ್‌ ಬಹಮನಿ, ಮೌಲಾನಾ ತಸದ್ದುಕ್‌ ಇದ್ದರು. 

ಅಯೋಧ್ಯೆ ವಿಷಯದಲ್ಲಿ ಸುಪ್ರೀಂ ಕೋರ್ಟ್‌ ನಿರ್ಣಯಕ್ಕೆ ನಾವು ಬದ್ಧರಾಗಿದ್ದು, ನಿರ್ಣಯ ನಮ್ಮ ಪರವಾಗಿರಲಿ ಅಥವಾ ಬರದೆ ಇರಲಿ ಅದಕ್ಕೆ ಮಂಡಳಿ ಸ್ವಾಗತಿಸುತ್ತದೆ. ಇದನ್ನು ಮೂರನೇ ಅವರ ಮಧ್ಯಸ್ಥಿಕೆಯಿಂದ ಬಗೆಹರಿಯುವುದಿಲ್ಲ. ಹಿಂದು-ಮುಸ್ಲಿಂ ಜಾತಿಗಳ ಮಧ್ಯೆ ಒಡಕು ಹಾಕಿ ದೇಶದ ಸಂಪತ್ತು ನಾಶ ಮಾಡಲು ಬಿಡುವುದಿಲ್ಲ. ಶಾಂತಿ ಹಾಗೂ ಕಾನೂನು ಮೂಲಕ ಬಗೆಹರಿಸಬೇಕು. ಯಾವುದೇ ಕಾರಣಕ್ಕೂ ಅಶಾಂತಿಗೆ ಆಸ್ಪದ ನೀಡುವವರು ನಾವಲ್ಲ.
 ಮೌಲಾನಾ ಅಬು ತಾಲೀಬ್‌ ರಹಮಾನಿ

Disclaimer:The views expressed in comments section published on Udayavani.com are those of comment writers alone. They do not represent the views or opinions of Udayavani.com, its staff or The Manipal Group, or any entity associated with The Manipal Group. Udayavani.com reserves rights to remove a comment or all the comments any time.

To report any comment you can email us at udayavani.response@manipalgroup.info. We will review the request and delete the comments.


ಈ ವಿಭಾಗದಿಂದ ಇನ್ನಷ್ಟು

ಹೊಸ ಸೇರ್ಪಡೆ