Udayavni Special

ಅಧಿಕಾರಿಗಳಿಗೆ ಮತಗಟ್ಟೆ ಉಸ್ತುವಾರಿ


Team Udayavani, Jan 9, 2018, 12:53 PM IST

Ashwin_Naik at_British_Rally_championship.jpg

ಹುಮನಾಬಾದ: ಪ್ರಸಕ್ತ ಸಾಲಿನಲ್ಲಿ ನಡೆಯಲಿರುವ ವಿಧಾನ ಸಭಾಚುನಾವಣೆಯನ್ನು ವಿವಿಧ ಪಕ್ಷಗಳ ಮುಖಂಡರು ಬಹುದಿನಗಳಿಂದ ಎದುರು ನೋಡುತ್ತಿದ್ದು, ಚುನಾವಣಾಧಿಕಾರಿಗಳು ಚುನಾವಣೆಯ ಪೂರ್ವಸಿದ್ದತೆಗಾಗಿ ಆಯಾ ತಾಲೂಕು ಮಟ್ಟದ ಅಧಿಕಾರಿಗಳಿಗೆ ಮತಗಟ್ಟೆಗಳ ಉಸ್ತುವಾರಿ ವಹಿಸಿ ಆದೇಶ ನೀಡಿದ್ದು, ಚುನಾವಣಾ ಕಾವು ಹೆಚ್ಚಿಸಿದಂತಾಗಿದೆ.

2018ರ ವಿಧಾನಸಭಾ ಚುನಾವಣೆಯನ್ನು ವ್ಯವಸ್ಥಿತವಾಗಿ ನಿರ್ವಹಿಸಲು ಹುಮನಾಬಾದ ತಾಲೂಕಿನ ಸೆಕ್ಟರ್‌ ಅಧಿಕಾರಿಗಳನ್ನು ನೇಮಕಗೊಳಿಸಿ ಜಿಲ್ಲಾಧಿಕಾರಿ ಹಾಗೂ ಚುನಾವಣಾ ಅಧಿಕಾರಿ ಅಧಿಕೃತ ಜ್ಞಾಪನ ಹೊರಡಿಸಿದ್ದಾರೆ. ಹುಮನಾಬಾದ ಮತ ಕ್ಷೇತ್ರದ ಒಟ್ಟು 248 ಮತಗಟ್ಟೆಗಳ ಪೈಕಿ ತಲಾ 20 ಮತಗಟ್ಟೆಗಳ ಉಸ್ತುವಾರಿಯನ್ನು ಒಬ್ಬ ತಾಲೂಕು ಅಧಿಕಾರಿಗೆ ವಹಿಸಲಾಗಿದೆ. ಒಟ್ಟು 13 ಅಧಿಕಾರಿಗಳು ಕ್ಷೇತ್ರದ 248 ಮತಗಟ್ಟೆಗಳ ಉಸ್ತುವಾರಿ ಕೆಲಸ ನಿರ್ವಹಿಸಲಿದ್ದಾರೆ. ಜ.8ರಿಂದಲೇ ಅಧಿಕಾರಿಗಳು ಚುನಾವಣಾ ಕಾರ್ಯದಲ್ಲಿ ತೊಡಗಬೇಕಾಗಿದ್ದು, ತಪ್ಪಿದಲ್ಲಿ ಪ್ರಜಾ ಪ್ರತಿನಿಧಿ ಕಾಯ್ದೆ 1951ರನ್ವಯ ಶಿಸ್ತಿನ ಕ್ರಮ ಕೈಗೊಳ್ಳುವುದಾಗಿ ಆದೇಶದಲ್ಲಿ ಸೂಚಿಸಿದ್ದಾರೆ. 

ಸೆಕ್ಟರ್‌ ಅಧಿಕಾರಿಗಳ ಕಾರ್ಯ: ಆಯಾ ಮತಗಟ್ಟೆಗಳ ವ್ಯಾಪ್ತಿಯಲ್ಲಿನ ಮತದಾರರ ಗುರುತಿನ ಚೀಟಿಗಳಿಗೆ ಸಂಬಂಧಿಸಿದಂತೆ ಫಾರಂ 6, 7, 8 ಹಾಗೂ 8ಎ ಅರ್ಜಿಗಗಳ ಕನಿಷ್ಠ ಶೆ.30ರಷ್ಟು ನೈಜತೆ ಪರಿಶೀಲಿಸಿ ಖಾತ್ರಿ ಪಡೆಸಿಕೊಂಡು ಮುಂದಿನ 7 ದಿನಗಳಲ್ಲಿ ಅನುಪಾಲನೆ ಸಲ್ಲಿಸುವುದು. ಆಯಾ ಮತಗಟ್ಟೆಗಳಿಗೆ ಅಧಿಕಾರಿಗಳು ಭೇಟಿನೀಡಿ ಅವುಗಳ ಸುಸ್ಥಿತಿ, ವಿದ್ಯುತ್‌ ದೀಪ, ಕೀಟಕಿ, ಬಾಗಿಲು ರ್‍ಯಾಂಪ್‌ ಸೇರಿದಂತೆ ಮತಗಟ್ಟೆಗಳಲ್ಲಿನ ಇನ್ನಿತರೆ ಮೂಲ ಸೌಲಭ್ಯಗಳ ಕುರಿತು ವರದಿ ಸಲ್ಲಿಸುವುದು. ಲಿಂಗ ಅನುಪಾತ ಹೆಚ್ಚಾಗಿದ್ದು, ತಾರತಮ್ಯ ಸರಿಪಡಿಸುವ ಕುರಿತು ಜಿಲ್ಲಾ ಸಂಖ್ಯಾ ಸಂಗ್ರಹಣಾಧಿಕಾರಿಗಳಿಂದ ಜನಸಂಖ್ಯಾ ವಿವರ ಪಡೆದು ಪರಿಶೀಲಿಸುವುದು ಹಾಗೂ ಸೂಕ್ತ ಅಭಿಪ್ರಾಯವನ್ನು ಇಲಾಖೆಗೆ ನೀಡುವುದು ಸೆಕ್ಟರ್‌ ಅಧಿಕಾರಿಗಳ ಮೊದಲ ಕರ್ತವ್ಯವಾಗಿದೆ.

ಹುಮನಾಬಾದ: ಯಾವ ಅಧಿಕಾರಿ ಎಲ್ಲೆಲ್ಲಿ ? ಕ್ಷೇತ್ರ ಶಿಕ್ಷಣಾಧಿ ಕಾರಿ ಮತಗಟ್ಟೆ ಸಂಖ್ಯೆ 1ರಿಂದ 20, ಜಿಪಂ ಸಹಾಯಕ ಕಾರ್ಯನಿರ್ವಾಹಕ ಅಭಿಯಂತರರು ಮತಗಟ್ಟೆ ಸಂಖ್ಯೆ 21ರಿಂದ 40, ಲೋಕೋಪಯೋಗಿ ಇಲಾಖೆಯ ಎಇಇ ಮತಗಟ್ಟೆ ಸಂಖ್ಯೆ 41ರಿಂದ 60, ರಾಷ್ಟ್ರೀಯ ಹೆದ್ದಾರಿ ಇಲಾಖೆಯ ಸಹಾಯಕ ಅಭಿಯಂತರರು ಮತಗಟ್ಟೆ ಸಂಖ್ಯೆ 61ರಿಂದ 80, ಕೃಷಿ ಇಲಾಖೆಯ ಸಹಾಯಕ ಕಾರ್ಯನಿರ್ವಾಹಕ ಅಧಿಕಾರಿ ಮತಗಟ್ಟೆ ಸಂಖ್ಯೆ 81ರಿಂದ 100, ಕೆಪಿಟಿಸಿಎಲ್‌ ಸಹಾಯಕ ಅಭಿಯಂತರರು ಮತಗಟ್ಟೆ ಸಂಖ್ಯೆ 101ರಿಂದ 120, ಪಶು ಸಂಗೋಪನೆ ಇಲಾಖೆಯ ಸಹಾಯಕ ನಿದೇರ್ಶಕರು ಮತಗಟ್ಟೆ ಸಂಖ್ಯೆ 121ರಿಂದ 140, ಕಾರಂಜಾ ಯೋಜನೆಯ ಸಹಾಯ ಅಭಿಯಂತರರು ಮತಗಟ್ಟೆ ಸಂಖ್ಯೆ 141ರಿಂದ 160, ಶಿಶು ಅಅಭಿವೃದ್ಧಿ ಯೋಜನಾ ಧಿಕಾರಿ ಮತಗಟ್ಟೆ ಸಂಖ್ಯೆ 161ರಿಂದ 180, ವಲಯ ಅರಣ್ಯಾಧಿಕಾರಿ ಪ್ರಾದೇಶಿಕ ಮತಗಟ್ಟೆ ಸಂಖ್ಯೆ 181ರಿಂದ 200, ವಲಯ ಅರಣ್ಯಾಧಿಕಾರಿ ಸಾಮಾಜಿಕ ಮತಗಟ್ಟೆ ಸಂಖ್ಯೆ 201ರಿಂದ 220, ಹಿರಿಯ ತೋಟಗಾರಿಕೆ ಅಧಿಕಾರಿ ಮತಗಟ್ಟೆ ಸಂಖ್ಯೆ 221ರಿಂದ 240, ಕೃಷಿ ಉತ್ಪನ ಮಾರುಕಟ್ಟೆ ಅಧಿಕಾರಿ ಮತಗಟ್ಟೆ ಸಂಖ್ಯೆ 241ರಿಂದ 248 ವರೆಗಿನ ಮತಗಟ್ಟೆಗಳ ಉಸ್ತುವಾರಿ ವಹಿಸಲಿದ್ದಾರೆ.

ದುರ್ಯೋಧನ ಹೂಗಾರ

ಟಾಪ್ ನ್ಯೂಸ್

1-aa

ಇಬ್ರಾಹಿಂ ನನ್ನ ಆತ್ಮೀಯ ಸ್ನೇಹಿತರು, ಯಾವಾಗ ಜ್ಞಾನೋದಯ ಆಗುತ್ತದೋ ಗೊತ್ತಿಲ್ಲ

ಉಪ್ಪಿನಂಗಡಿ: ರಸ್ತೆಬದಿಯ ತಡೆಗೋಡೆಗೆ ಢಿಕ್ಕಿ ಹೊಡೆದ  ಲಾರಿ; ಚಾಲಕ ಸಾವು

ಉಪ್ಪಿನಂಗಡಿ: ರಸ್ತೆಬದಿಯ ತಡೆಗೋಡೆಗೆ ಢಿಕ್ಕಿ ಹೊಡೆದ ಲಾರಿ; ಚಾಲಕ ಸಾವು

12aa

ರೈತ ಪ್ರತಿಭಟನೆಯಲ್ಲಿ ಕ್ರಿಮಿನಲ್ ಗಳು ಸೇರಿ ತಾಲಿಬಾನ್ ವರ್ತನೆ: ಬಿಜೆಪಿ

ಭಾರತದಲ್ಲಿ ಕಳೆದ 24ಗಂಟೆಗಳಲ್ಲಿ 15,981 ಕೋವಿಡ್ ಪ್ರಕರಣ ಪತ್ತೆ, 166 ಮಂದಿ ಸಾವು

ಭಾರತದಲ್ಲಿ ಕಳೆದ 24ಗಂಟೆಗಳಲ್ಲಿ 15,981 ಕೋವಿಡ್ ಪ್ರಕರಣ ಪತ್ತೆ, 166 ಮಂದಿ ಸಾವು

michael vaughan on rahul dravid

‘ಹುಷಾರಾಗಿರಿ…’: ದ್ರಾವಿಡ್ ನೇಮಕದ ಸುದ್ದಿ ಕೇಳಿ ವಿಶ್ವ ಕ್ರಿಕೆಟ್ ಗೆ ಎಚ್ಚರಿಸಿದ ವಾನ್!

ಇದು 14ನೇ ಬಾರಿಯ ಏರಿಕೆ; ಮುಂಬೈನಲ್ಲಿ ಪೆಟ್ರೋಲ್‌ ಲೀಟರ್‌ಗೆ 111.09 ರೂ.

ಇದು 14ನೇ ಬಾರಿಯ ಏರಿಕೆ; ಮುಂಬೈನಲ್ಲಿ ಪೆಟ್ರೋಲ್‌ ಲೀಟರ್‌ಗೆ 111.09 ರೂ.

1-aaa

‘ಜಿಲ್ಲಾಧಿಕಾರಿ ನಡೆ ಹಳ್ಳಿ ಕಡೆ’ ಕಾರ್ಯಕ್ರಮಕ್ಕೆ ಮರು ಚಾಲನೆ ನೀಡಿದ ಸಿಎಂ

ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು

9

ಶರಣರ ವೈಚಾರಿಕತೆ ವೈಜ್ಞಾನಿಕ ಕಾಂತ್ರಿಗೆ ಪೂರಕ: ಅಗಸರ

8

ಪ್ರಜಾಪ್ರಭುತ್ವಕ್ಕೆ ಅಡಿಪಾಯ ಹಾಕಿದ ನೆಲ ಕಲ್ಯಾಣ

7

ಬುದ್ಧನ ಕಂಚಿನ ಮೂರ್ತಿ ಪ್ರತಿಷ್ಠಾಪನೆ

6

ಕೋವಿಡ್‌ನಿಂದ ಮೃತ ಕುಟುಂಬಕ್ಕೆ ಪರಿಹಾರ ನೀಡಿ

5

ಮೀಸಲು ಸೌಲಭ್ಯದ ಮೇಲೆ ಶೂನ್ಯ ಸವಾರಿ!

MUST WATCH

udayavani youtube

ರಾಮನ ಹೆಸರಲ್ಲಿ ಅಧಿಕಾರಕ್ಕೆ ಬಂದವರಿಗೆ ಕುತ್ತು? ಮೈಲಾರಸ್ವಾಮಿ ಕಾರ್ಣಿಕ ನುಡಿ ಏನು ಗೊತ್ತಾ?

udayavani youtube

ಹುಮನಾಬಾದ್ ನಲ್ಲಿ ವಿಜಯ ದಶಮಿ ಸಂಭ್ರಮ : ನೋಡುಗರ ಗಮನ ಸೆಳೆದ ರಾವಣನ ಪ್ರತಿಕೃತಿ

udayavani youtube

ಯಾರಿಗೆ ಒಲಿಯುತ್ತೆ IPL ಟ್ರೋಫಿ|UDAYAVANI NEWS BULLETIN|15/10/2021

udayavani youtube

ನವರಾತ್ರಿ ಸಂಭ್ರಮ: ಶಿರಸಿ ಮಾರಿಕಾಂಬಾ ದೇವಸ್ಥಾನಕ್ಕೆ ಭಕ್ತರ ದಂಡು

udayavani youtube

ಅಂಬಾರಿ ಹೊರುವ ಅಭಿಮನ್ಯುಗೆ ಮತ್ತು ದಸರಾ ಗಜಪಡೆಗೆ ಬಣ್ಣದ ಅಲಂಕಾರ..

ಹೊಸ ಸೇರ್ಪಡೆ

1-aa

ಇಬ್ರಾಹಿಂ ನನ್ನ ಆತ್ಮೀಯ ಸ್ನೇಹಿತರು, ಯಾವಾಗ ಜ್ಞಾನೋದಯ ಆಗುತ್ತದೋ ಗೊತ್ತಿಲ್ಲ

ಉಪ್ಪಿನಂಗಡಿ: ರಸ್ತೆಬದಿಯ ತಡೆಗೋಡೆಗೆ ಢಿಕ್ಕಿ ಹೊಡೆದ  ಲಾರಿ; ಚಾಲಕ ಸಾವು

ಉಪ್ಪಿನಂಗಡಿ: ರಸ್ತೆಬದಿಯ ತಡೆಗೋಡೆಗೆ ಢಿಕ್ಕಿ ಹೊಡೆದ ಲಾರಿ; ಚಾಲಕ ಸಾವು

ದಸರಾ copy

ಅರಮನೆಯಲ್ಲಿ ಧಾರ್ಮಿಕ ಪೂಜಾ ವಿಧಿವಿಧಾನ

ಸೆಲಿ ತೆಗೆದುಕೊಳ್ಳುತ್ತಿದ್ದ ಯುವಕ ನೀರು ಪಾಲು

ಸೆಲ್ಫಿ ತೆಗೆದುಕೊಳ್ಳುತ್ತಿದ್ದ ಯುವಕ ನೀರು ಪಾಲು

ಜಿಲ್ಲಾಧಿಕಾರಿಗಳ ನಡೆ ಹಳ್ಳಿ ಕಡೆ: ಕವಲಗೇರಿ ಗ್ರಾಮ ವೀಕ್ಷಣೆ ಮಾಡಿದ ಧಾರವಾಡ ಡಿಸಿ

‘ಜಿಲ್ಲಾಧಿಕಾರಿಗಳ ನಡೆ ಹಳ್ಳಿ ಕಡೆ’: ಕವಲಗೇರಿ ಗ್ರಾಮ ವೀಕ್ಷಣೆ ಮಾಡಿದ ಧಾರವಾಡ ಡಿಸಿ

Thanks for visiting Udayavani

You seem to have an Ad Blocker on.
To continue reading, please turn it off or whitelist Udayavani.