Udayavni Special

ರಾಸಾಯನಿಕ ಕಾರ್ಖಾನೆ ವಿರುದ್ಧ ಜನಾಕ್ರೋಶ

•ಕೊಳಾರ ಕೈಗಾರಿಕಾ ಪ್ರದೇಶದ ವಾಣಿ ಆಗ್ರ್ಯಾನಿಕ್ಸ್‌ ಕಾರ್ಖಾನೆಯಲ್ಲಿ ಸಾರ್ವಜನಿಕರ ಸಂಪರ್ಕ ಸಭೆ

Team Udayavani, Jul 23, 2019, 12:06 PM IST

bidar-tdy-2

ಬೀದರ: ಕೊಳಾರ ಕೈಗಾರಿಕಾ ಪ್ರದೇಶದ ವಾಣಿ ಆಗ್ರ್ಯಾನಿಕ್ಸ್‌ ಕಂಪನಿಯಲ್ಲಿ ಏರ್ಪಡಿಸಿದ್ದ ಪರಿಸರ ಪರಿಣಾಮಗಳ ಸಾರ್ವಜನಿಕರ ಸಂಪರ್ಕ ಸಭೆಯಲ್ಲಿ ಅಪರ ಡಿಸಿ ರುದ್ರೇಶ ಗಾಳಿ ಮಾತನಾಡಿದರು.

ಬೀದರ: ಬೀದರ ಕೈಗಾರಿಕಾ ಪ್ರದೇಶದ ರಾಸಾಯನಿಕ ಕಾರ್ಖಾನೆಗಳಿಂದ ವಿವಿಧ ಗ್ರಾಮಗಳಲ್ಲಿ ಪರಿಸರ ಮಾಲಿನ್ಯ ಉಂಟಾ ಗುತ್ತಿದ್ದರೂ ಕೂಡ ಅಧಿಕಾರಿಗಳು ಜೀವಗಳಿಗೆ ಬೆಲೆ ಕೊಡುತ್ತಿಲ್ಲ. ಅಧಿಕಾರಿಗಳು ಹಫ್ತಾ ಪಡೆಯಲು ಮಾತ್ರ ಸೀಮಿತರಾಗಿದ್ದಾರೆ ಎಂದು ಕೊಳಾರ, ನಿಜಾಮ್‌ಪುರ ಸೇರಿದಂತೆ ವಿವಿಧ ಗ್ರಾಮಸ್ಥರು ಪರಿಸರ ಮಾಲಿನ್ಯ ನಿಯಂತ್ರಣ ಅಧಿಕಾರಿಗಳ ವಿರುದ್ಧ ಆಕ್ರೋಶ ವ್ಯಕ್ತಪಡಿಸಿದ ಘಟನೆ ಸೋಮವಾರ ನಡೆಯಿತು.

ಕೊಳಾರ ಕೈಗಾರಿಕಾ ಪ್ರದೇಶದ ವಾಣಿ ಆಗ್ರ್ಯಾನಿಕ್ಸ್‌ ಕಂಪನಿಯಲ್ಲಿ ಏರ್ಪಡಿಸಿದ್ದ ಪರಿಸರ ಪರಿಣಾಮಗಳ ಕುರಿತ ಸಾರ್ವಜನಿಕ ಸಂಪರ್ಕ ಸಭೆಯಲ್ಲಿ ವಿವಿಧ ಗ್ರಾಮಸ್ಥರು ಅಧಿಕಾರಿಗಳ ವಿರುದ್ಧ ಕಿಡಿ ಕಾರಿದು.

ಅಮೃತರಾವ್‌ ನಾವದಗಿ ಕೊಳಾರ ಮಾತನಾಡಿ, ಜಿಲ್ಲೆಯಲ್ಲಿ ಪ್ರತಿವರ್ಷ ಔಷಧ ಹಾಗೂ ರಾಸಾಯನಿಕ ಕಾರ್ಖಾನೆಗಳು ಹೆಚ್ಚುತ್ತಿದ್ದು, ಸುತ್ತಲಿನ ಪ್ರದೇಶದ ವಿವಿಧ ಗ್ರಾಮಗಳಲ್ಲಿ ಅನೇಕ ಸಮಸ್ಯೆಗಳು ಉಂಟಾ ಗುತ್ತಿವೆ. ವಿವಿಧ ಗ್ರಾಮಗಳಲ್ಲಿನ ಅಂತರ್ಜಲ ಹಾಳಾಗಿದೆ. ಮಳೆಗಾಲ ಬಂದರೆ ಸಾಕು ಕಲ್ಮಶ ಎಲ್ಲಾ ಕಡೆಗಳಲ್ಲಿ ಹರಿದಾಡುತ್ತಿದೆ. ಇಲ್ಲಿನ ಕಾರ್ಖಾನೆಗಳು ಸರ್ಕಾರದ ನಿಯಮ ಗಳಂತೆ ಕಾರ್ಯ ನಿರ್ವಹಿಸುತ್ತಿಲ್ಲ ಎಂದು ಆರೋಪಿಸಿದರು.

ಚಂದ್ರಶೇಖರ ಗೌಡಪನೊರ್‌ ಮಾತನಾಡಿ, ಅಧಿಕಾರಿಗಳು ಎಸಿ ವಾಹನದಲ್ಲಿ ಸಂಚರಿಸಿ ಕರ್ತವ್ಯ ನಿರ್ವಹಿಸಿದರೆ ಹೇಗೆ? ವಾಸ್ತವದಲ್ಲಿ ಯಾವ ಕಾರ್ಖಾನೆಗಳು ಯಾವ ಕಾನೂನು ಮೀರುತ್ತಿವೆ ಎಂದು ಯಾರು ಪರಿಶೀಲಿಸಬೇಕು ಎಂದು ಪ್ರಶ್ನಿಸಿದರು. ಕೈಗಾರಿಕಾ ಪ್ರದೇಶದಲ್ಲಿನ ಕಾರ್ಮಿಕರ ಜೀವಗಳಿಗೆ ಕಾರ್ಖಾನೆಗಳ ಮಾಲೀಕರು ಬೆಲೆ ನೀಡುತ್ತಿಲ್ಲ. ಅಧಿಕಾರಿಗಳು ಕಂಪೆನಿಗಳ ಜೊತೆಗೆ ಶಾಮೀಲಾಗಿದ್ದಾರೆ. ಇಲ್ಲಿನ ಅವ್ಯವಸ್ಥೆಗಳ ಕುರಿತು ಅನೇಕ ಬಾರಿ ಮನವಿ ಸಲ್ಲಿಸಿದರೂ ಕೂಡ ಯಾವ ಅಧಿಕಾರಿಗಳೂ ಸ್ಪಂದಿಸಿಲ್ಲ. ಜನರ ಸಂಕಷ್ಟಗಳಿಗೆ ಯಾರೂ ಸ್ಪಂದಿಸುತ್ತಿಲ್ಲ ಎಂದು ಆರೋಪಿಸಿದರು. ಈ ಮಧ್ಯೆ ಅಪರ ಜಿಲ್ಲಾಧಿಕಾರಿ ರುದ್ರೇಶ ಗಾಳಿ ವಾಣಿ ಕಾರ್ಖಾನೆ ಕುರಿತು ಮಾತನಾಡಿ, ಈ ಕಾರ್ಖಾನೆಯಿಂದ ಪರಿಸರ ಸಮಸ್ಯೆ ಬಗ್ಗೆ ಅನಿಸಿಕೆ ತಿಳಿಸಿ ಹೊರತು ಇಲ್ಲಸಲ್ಲದ ಆರೋಪ ಮಾಡುವುದು ಸರಿ ಅಲ್ಲ. ಸರ್ಕಾರಿ ಅಧಿಕಾರಿಗಳು ಜನರ ಕೆಲಸಕ್ಕೆ ಇರುತ್ತಾರೆ. ನಿಮ್ಮ ಸಮಸ್ಯೆಗಳ ಕುರಿತು ಕಚೇರಿಗೆ ಬಂದು ಭೇಟಿ ಮಾಡಿ ಎಂದು ತರಾಟೆಗೆ ತೆಗೆದುಕೊಂಡರು.

ಸ್ಥಳೀಯ ನಿವಾಸಿ ಶರಣಪ್ಪ ಮಾತನಾಡಿ, ಕೊಳಾರ ಕೈಗಾರಿಕಾ ಪ್ರದೇಶದ ಸುತ್ತಲ್ಲಿನ ಪ್ರದೇಶದಲ್ಲಿ ಉತ್ತಮ ಪರಿಸರ ಕಾಪಾಡುವಲ್ಲಿ ಪರಿಸರ ಇಲಾಖೆ ಅಧಿಕಾರಿಗಳು ವಿಫಲರಾಗಿದ್ದಾರೆ.ಅಧಿಕಾರಿಗಳು ಸೂಕ್ತ ಸಮಯದಲ್ಲಿ ಸೂಕ್ತ ನಿರ್ಧಾರಗಳನ್ನು ತೆಗೆದುಕೊಂಡಿದರೆ ಇಂದು ವಿವಿಧ ಗ್ರಾಮಗಳಲ್ಲಿ ಪರಿಸರ ಹಾನಿ ಉಂಟಾಗುತ್ತಿದ್ದಿಲ್ಲ ಎಂದರು.

ದಲಿತ ಸಂಘಟನೆಯ ರಾಜು ಕಾಂಬಳೆ ಮಾತನಾಡಿ, ಕೈಗಾರಿಕಾ ಪ್ರದೇಶದಲ್ಲಿನ ವಿವಿಧ ಕಾರ್ಖಾನೆಗಳು ತೆಲಂಗಾಣ ಭಾಗದ ಜನರಿಗೆ ಉಧ್ದೋಗ ನೀಡುತ್ತಿದ್ದಾರೆ. ಜಿಲ್ಲೆಯ ಜನರಿಗೆ ಉನ್ನತ ಹುದ್ದೆಗಳನ್ನು ನೀಡುತ್ತಿಲ್ಲ. ನಿಯಮ ಅನುಸಾರ ಕಾರ್ಖಾನೆಗಳನ್ನು ನಡೆಸುವ ಜತೆಗೆ ಸ್ಥಳೀಯರಿಗೆ ಉದ್ಯೋಗ ಕಲ್ಪಿಸಬೇಕು ಎಂದು ಒತ್ತಾಯಿಸಿದರು.

ಇದಕ್ಕೆ ಪ್ರತಿಕ್ರಿಯಿಸಿದ ಅಪರ ಜಿಲ್ಲಾಧಿಕಾರಿ ರುದ್ರೇಶ ಗಾಳಿ, ವಾಣಿ ಆಗ್ರ್ಯಾನಿಕ್ಸ್‌ ಕಂಪನಿಯು ಹೆಚ್ಚು ಉತ್ಪಾದನೆ ಮಾಡಲು ಬಯಸಿದ್ದು, ಸಾರ್ವಜನಿಕರ ಸಮಸ್ಯೆ ಆಲಿಸುವ ನಿಟ್ಟಿನಲ್ಲಿ ಸಭೆ ಕರೆಯಲಾಗಿದೆ. ಸಭೆಯಲ್ಲಿ ಮಾತನಾಡಿದ ಪ್ರತಿಯೊಬ್ಬರ ವಿಡಿಯೋ ಚಿತ್ರೀಕರಣ ಮಾಡಿದ್ದು, ಜನರ ಅನಿಸಿಕೆಗಳನ್ನು ನೇರವಾಗಿ ಸರ್ಕಾರದ ಗಮನಕ್ಕೆ ತರಲಾಗುವುದು ಎಂದರು.

ಈ ಸಂದರ್ಭದಲ್ಲಿ ಪರಿಸರ ಇಲಾಖೆಯ ಅಧಿಕಾರಿ ಮಂಜಪ್ಪ ಮಾತನಾಡಿ, ಕೈಗಾರಿಕಾ ಪ್ರದೇಶದಿಂದ ಉಂಟಾಗುತ್ತಿರುವ ಪರಿಸರ ಮಾಲಿನ್ಯ ನಿಯಂತ್ರಣಕ್ಕೆ ಸೂಕ್ತ ಕ್ರಮ ವಹಿಸುವುದಾಗಿ ತಿಳಿಸಿದರು.

ಟಾಪ್ ನ್ಯೂಸ್

ಚಿಕ್ಕಮಗಳೂರು: ಮನೆಗೆ ಬಂದ ಸೋಂಕಿತ ಅಣ್ಣನನ್ನೇ ಭೀಕರವಾಗಿ ಕೊಲೆಗೈದ ತಮ್ಮ

ಚಿಕ್ಕಮಗಳೂರು: ಮನೆಗೆ ಬಂದ ಸೋಂಕಿತ ಅಣ್ಣನನ್ನೇ ಭೀಕರವಾಗಿ ಕೊಲೆಗೈದ ತಮ್ಮ

Donated Covid Kits By Hukkery Mutt Swamiji to Belagavi DC

ಜಿಲ್ಲಾಧಿಕಾರಿಗಳಿಗೆ  ಹುಕ್ಕೇರಿ ಹಿರೇಮಠದಿಂದ ಕೋವಿಡ್ ಕಿಟ್ ಗಳ ಹಸ್ತಾಂತರ             

Reliance jio offers discounts to retain users during corona pandemic

ಕೋವಿಡ್ 19 : ಗ್ರಾಹಕ ಸ್ನೇಹಿ ಯೋಜನೆಯೊಂದನ್ನು ಘೋಷಿಸಿದ ಜಿಯೋ

ಕಾಪು ಬಳಿ ಅಪಘಾತಕ್ಕೀಡಾದ ವೆಸೆಲ್ ಟಗ್ :ಇನ್ನೂ ಆರಂಭಗೊಳ್ಳದ ರಕ್ಷಣಾ ಕಾರ್ಯಾಚರಣೆ !

ಕಾಪು ಬಳಿ ಅಪಘಾತಕ್ಕೀಡಾದ ವೆಸೆಲ್ ಟಗ್ :ಇನ್ನೂ ಆರಂಭಗೊಳ್ಳದ ರಕ್ಷಣಾ ಕಾರ್ಯಾಚರಣೆ !

covid effect at chikkamagalore

ಚಿಕ್ಕಮಗಳೂರು : ನಿಯಮ ಉಲ್ಲಂಘಿಸಿ ಅಂತ್ಯಸಂಸ್ಕಾರಕ್ಕೆ ಹೋದವರಿಗೆ ಕೋವಿಡ್ ದೃಢ

cats

ಫೇಸ್ ಬುಕ್ ಸ್ನೇಹಿತನಿಂದ ಹೀನ ಕೃತ್ಯ : ಮಹಿಳೆ ಮೇಲೆ 25 ಕಾಮುಕರಿಂದ ಅತ್ಯಾಚಾರ

cats

ದೆಹಲಿಯಲ್ಲಿ ಮತ್ತೆ ಒಂದು ವಾರ ಲಾಕ್ ಡೌನ್ ಮುಂದುವರಿಕೆಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು

ಮಹಾಮಾನವತಾವಾದಿ ಬಸವಣ್ಣನ ಮೂರ್ತಿಗೆ ನಮನ

ಮಹಾಮಾನವತಾವಾದಿ ಬಸವಣ್ಣನ ಮೂರ್ತಿಗೆ ನಮನ

ಸೋಂಕಿತರ ಸಂಖ್ಯೆ ಇಳಿಕೆ; ಚೇತರಿಕೆ ಏರಿಕೆ

ಸೋಂಕಿತರ ಸಂಖ್ಯೆ ಇಳಿಕೆ; ಚೇತರಿಕೆ ಏರಿಕೆ

ytregfdkjfghnvmcsjk

ಬ್ರಿಡ್ಜ್ ಕಾಮಗಾರಿ ಸ್ಥಳಕ್ಕೆ ಶಾಸಕರ ಭೇಟಿ

ytre

ಹಳ್ಳಿಗಳಲ್ಲಿ ಕೋವಿಡ್‌ ಮುಂಜಾಗ್ರತೆಗೆ ಸೂಚನೆ

rrrrrrrrrrrrrrrrrrrrrrrrrrrr

“ಕೈ ಮುಗಿಯುವೆ, ಅನಗತ್ಯ ಸಂಚರಿಸಬೇಡಿ’

MUST WATCH

udayavani youtube

ಪುತ್ತೂರು ಮಹಾಲಿಂಗೇಶ್ವರ ದೇಗುಲದ ಸಭಾಂಗಣ ಸದ್ಯಕ್ಕೆ COVID CARE CENTRE

udayavani youtube

ಕನ್ನಡ ಶಾಲೆಯ ವಿಭಿನ್ನ ಇಂಗ್ಲೀಷ್ ಕ್ಲಾಸ್

udayavani youtube

ದೆಹಲಿಯಲ್ಲಿ ಕೋವಿಡ್ 19 ಲಾಕ್ ಡೌನ್ ಮತ್ತೆ ವಿಸ್ತರಿಸಬೇಡಿ

udayavani youtube

ರಾಯಚೂರು ; ಫುಲ್ ಲಾಕ್ ಡೌನ್ ಹಿನ್ನೆಲೆ ಎಣ್ಣೆ ಖರೀದಿಗೆ ಮುಗಿಬಿದ್ದ ಮದ್ಯಪ್ರಿಯರು

udayavani youtube

Oxygen ನಮಗೆ ಬೇಕಿರುವುದಕ್ಕಿಂತ ಜಾಸ್ತಿನೇ ಇದೆ

ಹೊಸ ಸೇರ್ಪಡೆ

ಪುಂಜಾಲಕಟ್ಟೆ ಕರ್ನಾಟಕ ಪಬ್ಲಿಕ್ ಸ್ಕೂಲ್ ಮೇಲ್ಛಾವಣಿ ಕುಸಿತ

ಪುಂಜಾಲಕಟ್ಟೆ ಕರ್ನಾಟಕ ಪಬ್ಲಿಕ್ ಸ್ಕೂಲ್ ಮೇಲ್ಛಾವಣಿ ಕುಸಿತ

ಚಿಕ್ಕಮಗಳೂರು: ಮನೆಗೆ ಬಂದ ಸೋಂಕಿತ ಅಣ್ಣನನ್ನೇ ಭೀಕರವಾಗಿ ಕೊಲೆಗೈದ ತಮ್ಮ

ಚಿಕ್ಕಮಗಳೂರು: ಮನೆಗೆ ಬಂದ ಸೋಂಕಿತ ಅಣ್ಣನನ್ನೇ ಭೀಕರವಾಗಿ ಕೊಲೆಗೈದ ತಮ್ಮ

Hypertension in young people

ಯುವ ಜನತೆಯಲ್ಲಿ  ಅಧಿಕ ರಕ್ತದೊತ್ತಡ

Donated Covid Kits By Hukkery Mutt Swamiji to Belagavi DC

ಜಿಲ್ಲಾಧಿಕಾರಿಗಳಿಗೆ  ಹುಕ್ಕೇರಿ ಹಿರೇಮಠದಿಂದ ಕೋವಿಡ್ ಕಿಟ್ ಗಳ ಹಸ್ತಾಂತರ             

Types of medical examination of the kidneys

ಮೂತ್ರಪಿಂಡಗಳ ವೈದ್ಯಕೀಯ ಪರೀಕ್ಷಾ  ವಿಧಗಳು ಮತ್ತು ವಿಧಾನಗಳು

Thanks for visiting Udayavani

You seem to have an Ad Blocker on.
To continue reading, please turn it off or whitelist Udayavani.