ಗಡಿ ನಾಡು ಬೀದರ ಭಾಗಶಃ ಸ್ತಬ್ಧ!

ಓಲ್ಡ್‌ ಸಿಟಿ ಸೇರಿದಂತೆ ನಗರದ ಎಲ್ಲ ಮಾರುಕಟ್ಟೆ ಪ್ರದೇಶಗಳು ಬಿಕೋ ಎನ್ನುತ್ತಿವೆ.

Team Udayavani, Apr 23, 2021, 6:28 PM IST

Bidar

ಬೀದರ: ಎರಡನೇ ಅಲೆ ರೂಪದಲ್ಲಿ ಅಪ್ಪಳಿಸಿರುವ ಕೊರೊನಾ ಸೋಂಕು ನಿಯಂತ್ರಣಕ್ಕಾಗಿ ಸರ್ಕಾರ ಗುರುವಾರ ಕರುನಾಡು ಭಾಗಶಃ ಲಾಕ್‌ಡೌನ್‌ ಹೇರುವ ಮೂಲಕ ಶಾಕ್‌ ನೀಡಿದ್ದು, ಅದರಂತೆ ಗಡಿನಾಡು ಬೀದರ ಸಹ ಭಾಗಶಃ ಸ್ತಬ್ಧವಾಗಿದೆ. ಜಿಲ್ಲಾಡಳಿತ ಮತ್ತು ಜಿಲ್ಲಾ ಪೊಲೀಸ್‌ ಕೋವಿಡ್‌ ಕಠಿಣ ನಿಯಮ ಜಾರಿಗೊಳಿಸಿದ್ದು, ಕಳೆದ ಬಾರಿಯ ಲಾಕ್‌ಡೌನ್‌ ನೆನಪುಗಳು ಮರುಕಳಿಸಿದಂತಾಗಿದೆ.

ಕೋವಿಡ್‌ ಸಾವಿನ ರಣಕೇಕೆ ಜತೆಗೆ ಪಾಸಿಟಿವ್‌ ಪ್ರಕರಣಗಳ ಸಂಖ್ಯೆ ಹೆಚ್ಚುತ್ತಿರುವ ಹಿನ್ನೆಲೆ ಬೀದರನಲ್ಲಿ ಮೊದಲೇ ನೈಟ್‌ ಕರ್ಫ್ಯೂ ಜಾರಿಯಲ್ಲಿತ್ತು. ನಂತರ ಸೋಂಕಿನ ಆರ್ಭಟ ಅಧಿ ಕವಾಗುತ್ತಿದ್ದಂತೆ ಸರ್ಕಾರ ರಾಜ್ಯಾದ್ಯಂತ ಏ. 21ರಿಂದ ಮೇ 4ರವರೆಗೆ ನೈಟ್‌ ಕರ್ಫ್ಯೂ ಮತ್ತು ವೀಕೆಂಡ್‌ ಕರ್ಫ್ಯೂ ಜಾರಿಗೊಳಿಸಿ ಕಠಿಣ ನಿಯಮ ರೂಪಿಸಿತ್ತು. ಆದರೆ, ಗುರುವಾರ ಬೆಳಗ್ಗೆ ರಾಜ್ಯಕ್ಕೆ ಅನ್ವಯವಾಗುವಂತೆ ಮಾರ್ಗಸೂಚಿ ಪರಿಷ್ಕರಿಸಿ ಸರ್ಕಾರ ಆದೇಶಿಸುತ್ತಿದ್ದಂತೆ ಇತ್ತ ಖಾಕಿ ಪಡೆ ರಸ್ತೆಗಿಳಿದು ವ್ಯಾಪಾರ-ವಹಿವಾಟು ಬಂದ್‌ ಮಾಡಿಸಿದೆ.

ಜಿಲ್ಲಾಡಳಿತದ ನಿರ್ದೇಶನದಂತೆ ಬೀದರ ನಗರ ಮತ್ತು ತಾಲೂಕು ಕೇಂದ್ರಗಳಲ್ಲಿ ಪೊಲೀಸ್‌ ಇಲಾಖೆ ಬೆಳಗ್ಗೆಯಿಂದ ಕಾರ್ಯಾಚರಣೆ ನಡೆಸಿದೆ. ಕಿರಾಣಿ, ಹಾಲು, ತರಕಾರಿ ಮತ್ತು ಮೆಡಿಕಲ್‌ನಂಥ ತುರ್ತು ಸೇವೆ ಹೊರತುಪಡಿಸಿ ಎಲ್ಲ ಬಗೆಯ ಅಂಗಡಿ-ಮುಂಗಟ್ಟು ಬಂದ್‌ ಮಾಡಿಸಿದೆ. ಗಾಂಧಿ ಗಂಜ್‌, ಮೋಹನ್‌ ಮಾರ್ಕೆಟ್‌, ಅಂಬೇಡ್ಕರ್‌ ವೃತ್ತ, ನಾಂದೇಡ್‌ ರಸ್ತೆ ಮತ್ತು ಓಲ್ಡ್‌ ಸಿಟಿ ಸೇರಿದಂತೆ ನಗರದ ಎಲ್ಲ ಮಾರುಕಟ್ಟೆ ಪ್ರದೇಶಗಳು ಬಿಕೋ ಎನ್ನುತ್ತಿವೆ. ಹೋಟೆಲ್‌, ಬಾರ್‌- ರೆಸ್ಟೋರೆಂಟ್‌ಗಳಲ್ಲಿ ಪಾರ್ಸಲ್‌ಗೆ ಮಾತ್ರ ಅವಕಾಶ ಕೊಡಲಾಗಿದೆ. ನಗರದ ಎಲ್ಲ ದೇವಸ್ಥಾನಗಳು, ಮಸೀದಿ, ಚರ್ಚ್‌ ಮತ್ತು ಇತರ ಧಾರ್ಮಿಕ ಸ್ಥಳಗಳನ್ನು ಸಹ ಬಂದ್‌ ಮಾಡಲಾಗಿದ್ದು, ನಿತ್ಯ ಪೂಜೆ- ಪ್ರಾರ್ಥನೆಗಷ್ಟೇ ಅವಕಾಶ ನೀಡಲಾಗಿದೆ.

ಆಡಳಿತ ಟಫ್‌ ರೂಲ್ಸ್‌ ಜತೆಗೆ ಸೋಂಕಿನ ಭೀತಿಯಿಂದ ಸಾರ್ವಜನಕರ ಓಡಾಟ ಈಗ ತೀರ ಇಳಿಮುಖವಾಗಿದೆ. ಸಾರಿಗೆ ಬಸ್‌ಗಳ ಕಾರ್ಯಾಚರಣೆ ಹೊರತುಪಡಿಸಿದರೆ ಇತರ ವಾಹನಗಳ ಸಂಚಾರ ಕಡಿಮೆ ಇತ್ತು. ಹಾಗಾಗಿ ಅಘೋಷಿತ ಬಂದ್‌ ವಾತಾವರಣ ಕಂಡು ಬಂದಿದೆ. ಎಲ್ಲೆಡೆ ಪೊಲೀಸ್‌ ಮತ್ತು ಕೆಎಸ್‌ಆರ್‌ಪಿ ತುಕಡಿಗಳ ಗಸ್ತು ಹೆಚ್ಚಿಸಲಾಗಿದ್ದು, ವಿವಿಧೆಡೆ ಬ್ಯಾರಿಕೇಡ್‌ ಹಾಕಿ ಮಾರ್ಗಗಳನ್ನು ಮುಚ್ಚಿಸಲಾಗಿದೆ. ಆದರೆ, ಗ್ರಾಮೀಣ ಭಾಗದಲ್ಲಿ ಸೆಮಿ ಲಾಕ್‌ಡೌನ್‌ ಪರಿಣಾಮ ಇನ್ನೂ ಬೀರದಿರುವುದು ಕಂಡು ಬಂದಿದೆ.

ಕರ್ಫ್ಯೂ ಜಾರಿಯಲ್ಲಿದ್ದರೂ ಸಾರಿಗೆ ಬಸ್‌ ಸಂಚಾರವಿದೆ. ಬೀದರ ಜಿಲ್ಲೆಯಲ್ಲಿ ಗುರುವಾರ 300 ಬಸ್‌ಕಾರ್ಯಾಚರಣೆ ನಡೆದಿದೆ. ನಿತ್ಯ ಬಸ್‌ ಗಳಿಗೆ ಸ್ಯಾರಿಟೈಸರ್‌, ಸಿಬ್ಬಂದಿಗಳ ಆರೋಗ್ಯ ತಪಾಸಣೆ ಮಾಡಲಾಗುತ್ತಿದೆ. ಬಸ್‌ಗಳಲ್ಲಿ ಮಾಸ್ಕ್ ಕಡ್ಡಾಯದೊಂದಿಗೆ ಶೇ.50 ಪ್ರಯಾಣಿಕರಿಗೆ ಮಾತ್ರ ಅವಕಾಶ ನೀಡಲಾಗುತ್ತಿದೆ. ಪ್ರಯಾಣಿಕರ ಸಂಖ್ಯೆ ಇಳಿಮುಖ ಆಗಿರುವುದರಿಂದ ಶುಕ್ರವಾರ ಕಡಿಮೆ ಬಸ್‌ಗಳನ್ನು ಓಡಿಸಲಾಗುವುದು.
ಚಂದ್ರಕಾಂತ ಫುಲೇಕರ್‌,
ವಿಭಾಗೀಯ ನಿಯಂತ್ರಣಾಧಿ ಕಾರಿ, ಎನ್‌ಈಕೆಆರ್‌ಟಿಸಿ, ಬೀದರ

ಟಾಪ್ ನ್ಯೂಸ್

ಮಿಸ್ ಇಂಡಿಯಾ ಕಿರೀಟ ಗೆದ್ದ ಉಡುಪಿಯ ಸಿನಿ ಶೆಟ್ಟಿ

ಮಿಸ್ ಇಂಡಿಯಾ ಕಿರೀಟ ಗೆದ್ದ ಉಡುಪಿಯ ಸಿನಿ ಶೆಟ್ಟಿ

ಮುಂದುವರಿದ ಮಳೆ: ಬೆಳ್ತಂಗಡಿ ತಾಲೂಕಿನ ಶಾಲೆಗಳಿಗೆ ರಜೆ ಘೊಷಣೆ

ಮುಂದುವರಿದ ಮಳೆ: ಬೆಳ್ತಂಗಡಿ ತಾಲೂಕಿನ ಶಾಲೆಗಳಿಗೆ ರಜೆ ಘೊಷಣೆ

ಅನುದಾನದ ಕೊರತೆ: ಚೇತರಿಕೆ ಕಾಣದ ಸ್ಟಡಿ ಸರ್ಕಲ್‌

ಅನುದಾನದ ಕೊರತೆ: ಚೇತರಿಕೆ ಕಾಣದ ಸ್ಟಡಿ ಸರ್ಕಲ್‌

ಪಾದೂರು ತೈಲಾಗಾರ ವಿಸ್ತರಣೆಗೆ 6,000 ಕೋ.ರೂ.: ಶಾಸಕ ಲಾಲಾಜಿ ಆರ್‌. ಮೆಂಡನ್‌

ಪಾದೂರು ತೈಲಾಗಾರ ವಿಸ್ತರಣೆಗೆ 6,000 ಕೋ.ರೂ.: ಶಾಸಕ ಲಾಲಾಜಿ ಆರ್‌. ಮೆಂಡನ್‌

ಮೊದಲ ಬಾರಿಗೆ ಮೈನ್‌ಲೈನ್‌ ಕಂಟೈನರ್‌ ಹಡಗು ಆಗಮನ

ಮೊದಲ ಬಾರಿಗೆ ಮೈನ್‌ಲೈನ್‌ ಕಂಟೈನರ್‌ ಹಡಗು ಆಗಮನ

ಸಚಿವ ಸಂಪುಟ ವಿಸ್ತರಣೆ: ಈಗ ಯಾರಿಗೂ ಬೇಡ ಸ್ಥಾನ!

ಸಚಿವ ಸಂಪುಟ ವಿಸ್ತರಣೆ: ಈಗ ಯಾರಿಗೂ ಬೇಡ ಸ್ಥಾನ!

thumb 2 godra

ಗೋಧ್ರಾ ರೈಲು ಹತ್ಯಾಕಾಂಡದ ರೂವಾರಿ ರಫೀಕ್‌ಗೆ ಜೀವಾವಧಿ ಶಿಕ್ಷೆಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು

18protest

ಸದಾಶಿವ ವರದಿ ಜಾರಿಗೆ ಆಗ್ರಹಿಸಿ ಪ್ರತಿಭಟನೆ

17office

ಸೌಲಭ್ಯಗಳಿಲ್ಲಿ, ಕಾಯಂ ಅಧಿಕಾರಿಯೂ ಇಲ್ಲ

15women

ಸ್ತ್ರೀ ದೌರ್ಜನ್ಯದ ವಿರುದ್ದ ಜಾಗೃತಿ ಅವಶ್ಯ

1—dsfsfs

ಹುಮನಾಬಾದ್: ಸದಾಶಿವ ವರದಿ ಜಾರಿಗೆ ಪ್ರತಿಭಟನೆ; ಹೆದ್ದಾರಿ ತಡೆಗೆ ಯತ್ನ

ಸೋಯಾ ಅವರೆ ಬೆಳೆಗೆ ಬಸವನ ಹುಳುವಿನ ಕಾಟ

ಸೋಯಾ ಅವರೆ ಬೆಳೆಗೆ ಬಸವನ ಹುಳುವಿನ ಕಾಟ

MUST WATCH

udayavani youtube

ಇಬ್ಬರು ಶಸ್ತ್ರ ಸಜ್ಜಿತ ಲಷ್ಕರ್ ಉಗ್ರರನ್ನು ಹಿಡಿದು ಕೊಟ್ಟ ಕಾಶ್ಮೀರದ ಗ್ರಾಮಸ್ಥರು

udayavani youtube

ಜಿಂಕೆಯನ್ನು ನುಂಗಿದ್ದ 80 ಕೆ.ಜಿ. ತೂಕದ 14 ಅಡಿ ಉದ್ದದ ಹೆಬ್ಬಾವು!

udayavani youtube

ವಿಟ್ಲದ ಈ ವಿದ್ಯಾರ್ಥಿನಿಯ ಕಾರ್ಯಕ್ಕೊಂದು ಮೆಚ್ಚುಗೆ ಇರಲಿ…

udayavani youtube

ಕೊಪ್ಪಳ : ರೌಡಿಶೀಟರ್ ಗಳಿಗೆ ಖಡಕ್ ವಾರ್ನಿಂಗ್ ನೀಡಿದ ಎಸ್ಪಿ

udayavani youtube

ಮದ್ರಸಾದಿಂದ ಮನೆಗೆ ಬರುತ್ತಿದ್ದ ವಿದ್ಯಾರ್ಥಿ ಮೇಲೆ ಹಲ್ಲೆ ಪ್ರಕರಣಕ್ಕೆ ಬಿಗ್ ಟ್ವಿಸ್ಟ್…

ಹೊಸ ಸೇರ್ಪಡೆ

ಮಿಸ್ ಇಂಡಿಯಾ ಕಿರೀಟ ಗೆದ್ದ ಉಡುಪಿಯ ಸಿನಿ ಶೆಟ್ಟಿ

ಮಿಸ್ ಇಂಡಿಯಾ ಕಿರೀಟ ಗೆದ್ದ ಉಡುಪಿಯ ಸಿನಿ ಶೆಟ್ಟಿ

ಮುಂದುವರಿದ ಮಳೆ: ಬೆಳ್ತಂಗಡಿ ತಾಲೂಕಿನ ಶಾಲೆಗಳಿಗೆ ರಜೆ ಘೊಷಣೆ

ಮುಂದುವರಿದ ಮಳೆ: ಬೆಳ್ತಂಗಡಿ ತಾಲೂಕಿನ ಶಾಲೆಗಳಿಗೆ ರಜೆ ಘೊಷಣೆ

ಅನುದಾನದ ಕೊರತೆ: ಚೇತರಿಕೆ ಕಾಣದ ಸ್ಟಡಿ ಸರ್ಕಲ್‌

ಅನುದಾನದ ಕೊರತೆ: ಚೇತರಿಕೆ ಕಾಣದ ಸ್ಟಡಿ ಸರ್ಕಲ್‌

ಪಾದೂರು ತೈಲಾಗಾರ ವಿಸ್ತರಣೆಗೆ 6,000 ಕೋ.ರೂ.: ಶಾಸಕ ಲಾಲಾಜಿ ಆರ್‌. ಮೆಂಡನ್‌

ಪಾದೂರು ತೈಲಾಗಾರ ವಿಸ್ತರಣೆಗೆ 6,000 ಕೋ.ರೂ.: ಶಾಸಕ ಲಾಲಾಜಿ ಆರ್‌. ಮೆಂಡನ್‌

ಮೊದಲ ಬಾರಿಗೆ ಮೈನ್‌ಲೈನ್‌ ಕಂಟೈನರ್‌ ಹಡಗು ಆಗಮನ

ಮೊದಲ ಬಾರಿಗೆ ಮೈನ್‌ಲೈನ್‌ ಕಂಟೈನರ್‌ ಹಡಗು ಆಗಮನ

Thanks for visiting Udayavani

You seem to have an Ad Blocker on.
To continue reading, please turn it off or whitelist Udayavani.