ಖಾಸಗಿ ವಾಹನ ದರ್ಬಾರ್ ಗೆ ಜನ ಸುಸ್ತು
ಪರ್ಯಾಯ ವ್ಯವಸ್ಥೆಯಾಗಿ ಖಾಸಗಿ ವಾಹನ ರಸ್ತೆಗಿಳಿಸಿದೆ.
Team Udayavani, Apr 10, 2021, 6:43 PM IST
ಬೀದರ: ಆರನೇ ವೇತನ ಆಯೋಗ ಶಿಫಾರಸು ಜಾರಿಗೆ ಒತ್ತಾಯಿಸಿ ಸಾರಿಗೆ ನೌಕರರು ನಡೆಸುತ್ತಿರುವ ಅನಿರ್ದಿಷ್ಟಾವಧಿ ಸಾರಿಗೆ ಮುಷ್ಕರ ಶುಕ್ರವಾರ ಮೂರನೇ ದಿನಕ್ಕೆ ಕಾಲಿಟ್ಟಿದ್ದು, ಜಿಲ್ಲೆಯ 12 ಮಾರ್ಗದಲ್ಲಿ ಕಾರ್ಯಾಚರಣೆ ಹೊರತುಪಡಿಸಿದರೆ ಜಿಲ್ಲಾದ್ಯಂತ ಸರ್ಕಾರಿ ಬಸ್ ಸಂಚಾರ ಸ್ತಬ್ಧವಾಗಿತ್ತು. ಹಾಗಾಗಿ ಎಲ್ಲೆಡೆ ಖಾಸಗಿ ವಾಹನಗಳ ದರ್ಬಾರ್ ಮುಂದುವರಿದಿದ್ದು, ಪ್ರಯಾಣಿಕರ ಪರದಾಟ ಮಾತ್ರ ನಿಂತಿಲ್ಲ.
ಮುಷ್ಕರದ ಮೂರನೇ ದಿನವೂ ಎನ್‌ಈಕೆಆರ್ ಟಿಸಿ ಮೇಲಾಧಿಕಾರಿಗಳು ಮನವೊಲಿಸುವ ಪ್ರಯತ್ನ ಮಾಡಿದರಾದರೂ ನೌಕರರು ಕಿವಿಗೊಡಲಿಲ್ಲ. ಬೇಡಿಕೆ
ಈಡೇರಿಸುವವರೆಗೆ ಬಸ್‌ಗಳನ್ನು ರಸ್ತೆಗಿಳಿಸಲ್ಲ ಎಂದು ಪಟ್ಟು ಹಿಡಿದರು. ಆದರೆ, ಕೆಲವು ನೌಕರರು ಅಧಿಕಾರಿಗಳ ಕೋರಿಕೆ ಮೇರೆಗೆ ಜಿಲ್ಲೆಯ 9 ಮಾರ್ಗಗಳಲ್ಲಿ
ಬಸ್‌ಗಳನ್ನು ಕಾರ್ಯಾಚರಣೆ ನಡೆಸಿದರು. ಗುರುವಾರ 9 ರೂಟ್‌ಗಳಲ್ಲಿ ಬಸ್ ಸಂಚಾರ ಆಗಿದೆ. ಸುಮಾರು 2 ಸಾವಿರಕ್ಕೂ ಹೆಚ್ಚು ಚಾಲಕ ಮತ್ತು ನಿರ್ವಾಹಕರು ಸೇರಿ ಇತರ ಸಾರಿಗೆ ಸಿಬ್ಬಂದಿ ಕರ್ತವ್ಯಕ್ಕೆ ಗೈರು ಹಾಜರಾಗುವ ಮೂಲಕ ಪ್ರತಿಭಟನೆಗೆ ಸಾಥ್ ನೀಡಿದ್ದರು. ಮುಷ್ಕರ ಶಾಂತಿಯುತವಾಗಿದ್ದರೂ ಮುಂಜಾಗ್ರತಾ ಕ್ರಮವಾಗಿ ಪೊಲೀಸ್ ಭದ್ರತೆ ನಡುವೆ ಬಸ್‌ಗಳನ್ನು ಕಾರ್ಯಾಚರಣೆ ಮಾಡಲಾಯಿತು.
6ನೇ ವೇತನ ನೀಡುವವರೆಗೆ ಕರ್ತವ್ಯಕ್ಕೆ ಹಾಜರಾಗುವುದಿಲ್ಲ ಎಂದು ನೌಕರರು ಹಠ ಹಿಡಿದಿದ್ದರೆ, ಇತ್ತ ಸರ್ಕಾರ ಸಿಬ್ಬಂದಿ ಮಣಿಸಲು ಅಸ್ತ್ರಗಳನ್ನು ಪ್ರಯೋಗಿಸುತ್ತಲೇ ಇದೇ. ಪರ್ಯಾಯ ವ್ಯವಸ್ಥೆಯಾಗಿ ಖಾಸಗಿ ವಾಹನ ರಸ್ತೆಗಿಳಿಸಿದೆ. ಇನ್ನೊಂದೆಡೆ ಶುಕ್ರವಾರ ಎನ್‌ಈಕೆಆರ್‌ಟಿಸಿಯಿಂದ ತರಬೇತಿ ನಿರತ ನೌಕರರಿಗೆ ನೋಟಿಸ್ ಹೊರಡಿಸಿ, ತಕ್ಷಣ ವರದಿ ಮಾಡಿಕೊಳ್ಳಬೇಕು, ಇಲ್ಲವಾದರೆ ಕ್ರಮ ವಹಿಸಬೇಕಾಗುತ್ತದೆ ಎಂದು ಸೂಚಿಸಲಾಗಿದೆ.
ಹಾಗಾಗಿ ಒಟ್ಟು 13 ಜನ ತರಬೇತಿ ಸಿಬ್ಬಂದಿ ಪೈಕಿ 2 ಸಿಬ್ಬಂದಿ ವರದಿ ಮಾಡಿಕೊಂಡಿದ್ದಾರೆ. ಬೀದರ ಕೇಂದ್ರ ಬಸ್ ನಿಲ್ದಾಣ ಸೇರಿದಂತೆ ಜಿಲ್ಲೆಯ ತಾಲೂಕು ಕೇಂದ್ರಗಳ ಡಿಪೋದಿಂದ ಖಾಸಗಿ ಬಸ್‌ಗಳು ಮತ್ತು 116 ಟ್ರಾಕ್ಸ್‌ಗಳು ಸಂಚಾರಕ್ಕೆ ಅವಕಾಶ ಮಾಡಿಕೊಡಲಾಗಿದೆ. ಇದರಿಂದ ಪ್ರಯಾಣಿಕರಿಗೆ ದೊಡ್ಡ ಪ್ರಮಾಣದಲ್ಲಿ ಪರದಾಡುವ ಸ್ಥಿತಿ ಎದುರಾಗದಿದ್ದರೂ ಪ್ರಯಾಣಿಕರಿಗೆ ದುಪ್ಪಟ್ಟು ಹಣ ವಸೂಲಿಗೆ ಇಳಿದಿರುವುದು ಪ್ರಯಾಣಿಕರಿಗೆ ಹೊರೆ ಆಗುತ್ತಿದೆ. ಶುಕ್ರವಾರ ಸಹ ಬೀದರನಿಂದ ನಿತ್ಯ ಸಂಚರಿಸುವ ಮಹಾರಾಷ್ಟ್ರ ಮತ್ತು ತೆಲಂಗಾಣದ ಬಸ್‌ಗಳ ಸಂಖ್ಯೆ ಹೆಚ್ಚಿಸಿ ಪ್ರಯಾಣಿಕರಿಗೆ ಅನುಕೂಲ ಮಾಡಿಕೊಡಲಾಗಿತ್ತು.
ಮುಷ್ಕರ ನಿರತ ಸಾರಿಗೆ ಸಿಬ್ಬಂದಿ ಆತ್ಮಹತ್ಯೆ ಮಾಡಿಕೊಂಡಿದ್ದು ಸಾಲದ ವಿಚಾರವಾಗಿ ಹೊರತು ಅಧಿಕಾರಿಗಳ ಕಿರುಕುಳದಿಂದ ಅಲ್ಲ. ಸಾಲದಿಂದಾಗಿ ಆತ ಹಲವು ದಿನಗಳಿಂದ ಖನ್ನತೆಗೆ ಒಳಗಾಗಿದ್ದ. ಆದರೆ ಸಾರಿಗೆ ಸಿಬ್ಬಂದಿಗಳು ಅಧಿಕಾರಿಗಳ ಕಿರುಕುಳ ಎಂದು ಆರೋಪಿಸಿ ಇಲಾಖೆ ಮೇಲೆ ಕೆಟ್ಟ ಹೆಸರು ತರುವ ಯತ್ನ ನಡೆಸಿದ್ದಾರೆ. ಸಾರಿಗೆ ಸಿಬ್ಬಂದಿಗಳು ಕರ್ತವ್ಯಕ್ಕೆ ಹಾಜರಾಗಲು ಸಿದ್ಧರಿದ್ದಾರೆ. ತಮಗೆ ಸಂಬಳ ಹೆಚ್ಚಿಸಿದರೆ ಸಾಕು ಎನ್ನುತ್ತಿದ್ದಾರೆ. ಆದರೆ, ಮುಷ್ಕರ ನಿರತ ಸಾರಿಗೆ ನೌಕರರು ನಮ್ಮ ಸಿಬ್ಬಂದಿಗೆ ಬೆದರಿಕೆ ಹಾಕುತ್ತಿದ್ದಾರೆ. ಕರ್ತವ್ಯಕ್ಕೆ ಹಾಜರಾಗದಂತೆ ತಡೆಯುತ್ತಿದ್ದಾರೆ.
*ಲಕ್ಷ್ಮಣ ಸವದಿ, ಸಾರಿಗೆ ಸಚಿವರು
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
MUST WATCH
ಹೊಸ ಸೇರ್ಪಡೆ
ಬಂಟ್ವಾಳ: ಶೆಡ್ ಮೇಲೆ ಗುಡ್ಡ ಕುಸಿದು ಗಾಯಗೊಂಡಿದ್ದ ಮತ್ತಿಬ್ಬರು ಸಾವು
ತನ್ನದೇ ದೇಶದ ಬಿಗ್ ಬಾಶ್ ತ್ಯಜಿಸುತ್ತಾರಾ ಡೇವಿಡ್ ವಾರ್ನರ್?
ಮುಂದುವರಿದ ಮಳೆ: ಶಿವಮೊಗ್ಗ ಜಿಲ್ಲೆಯ ಪ್ರಾಥಮಿಕ-ಪ್ರೌಢ ಶಾಲೆಗಳಿಗೆ ರಜೆ ಘೋಷಣೆ
ಮಂಗಳೂರು : ಹುಟ್ಟುವಾಗಲೇ ನವಜಾತ ಶಿಶುವಿನಲ್ಲಿ ಹಲ್ಲು! ವೈದ್ಯರು ಹೇಳಿದ್ದೇನು ಗೊತ್ತೆ ?
10 ಲಕ್ಷ ಮಕ್ಕಳಿಗಿಲ್ಲ ಶಿಕ್ಷಣ: ಕೋವಿಡ್ ತಂದಿಟ್ಟ ಆಘಾತ ಸಮೀಕ್ಷೆ ವಿವರ ಹೈಕೋರ್ಟ್ಗೆ