ಸಿದ್ಧಾಂತ ಶಿಖಾಮಣಿ-ವಚನ ಸಾಹಿತ್ಯ; ಉಪನ್ಯಾಸ

Team Udayavani, Sep 8, 2018, 11:00 AM IST

ಬಸವಕಲ್ಯಾಣ: ಸಿದ್ಧಾಂತ ಶಿಖಾಮಣಿ ಹಾಗೂ ವಚನಗಳು ಧರ್ಮದ ಮಾರ್ಗ ತೋರುವ ಶ್ರೇಷ್ಠ ಸಾಹಿತ್ಯವಾಗಿವೆ ಎಂದು ಕಾಂಗ್ರೆಸ್‌ ಮುಖಂಡ ಅರ್ಜುನ ಕನಕ ಹೇಳಿದರು.

ನಗರದ ಗವಿಮಠದಲ್ಲಿ ಶ್ರಾವಣ ಮಾಸದ ಅಂಗವಾಗಿ ಹಮ್ಮಿಕೊಂಡಿದ್ದ ಸಿದ್ಧಾಂತ ಶಿಖಾಮಣಿ ಹಾಗೂ ವಚನ ಸಾಹಿತ್ಯ ಕುರಿತ ವಿಶೇಷ ಉಪನ್ಯಾಸ ಕಾರ್ಯಕ್ರಮದಲ್ಲಿ ಅವರು ಮಾತನಾಡಿದರು.

ಗವಿ ಮಠವು ಜಾತಿ ಮತ ಭೇದ ಮಾಡದೆ ಸಮಾನತೆ ಪಾಲಿಸುವ ಮಠವಾಗಿದೆ. ಅಭಿನವ ಶ್ರೀಗಳು ಚಿಕ್ಕವರಿದ್ದರೂ ಮಠವನ್ನು ಬಹಳ ಅಭಿವೃದ್ಧಿಪಡಿಸಿರುವುದು ಹೆಮ್ಮಯ ಸಂಗತಿಯಾಗಿದೆ ಎಂದು ನುಡಿದರು. 

ಎರೋನಾಟಿಕ್‌ ಇಂಜಿನಿಯರ್‌ ವಿಶ್ವನಾಥ ಎಸ್‌. ಚನ್ಮಲ್ಲೆ ಮಾತನಾಡಿ, ನಾನು ತ್ರಿಪುರಾಂತದವನು. ಚಿಕ್ಕವನಾಗಿದ್ದಾಗ ಸ್ನೇಹಿತರಾದ ಶರಣಪ್ಪ ಬಿರಾದಾರ ಜೊತೆ ಗವಿಮಠಕ್ಕೆ ಬಂದು, ಜಗದ್ಗುರು ಘನಲಿಂಗರಲ್ಲಿ ಶ್ರದ್ಧೆ ಭಕ್ತಿಯಿಟ್ಟು
ಗುಹೆಯಲ್ಲಿ ಕುಳಿತು ಅಭ್ಯಾಸ ಮಾಡಿದ್ದಕ್ಕೆ ಈ ಮಟ್ಟಕ್ಕೆ ಬೆಳೆಯಲು ಸಾಧ್ಯವಾಯಿತು ಎಂದು ಬಾಲ್ಯದ ಜೀವನ ಸ್ಮರಿಸಿದರು. ಸಾನ್ನಿಧ್ಯ ವಹಿಸಿದ್ದ ಮಠದ ಶ್ರೀಗಳು ಆಶೀರ್ವಚನ ನೀಡಿ, ಸಿದ್ಧಾಂತ ಶಿಖಾಮಣಿ ಹಾಗೂ ವಚನ
ಸಾಗಿತ್ಯವನ್ನು ಎಲ್ಲರೂ ಓದಿ ಜೀವನ ಸಾರ್ಥಕ ಮಾಡಿಕೊಳ್ಳಬೇಕು ಎಂದರು ಭಕ್ತಾದಿಗಳಿಗೆ ಸಂದೇಶ ನೀಡಿದರು. 

ಬಸವರಾಜ ಬಿರಾದಾರ್‌, ಶರಣಬಸಪ್ಪಾ ಬಿರಾದಾರ, ಸಂಸ್ಥೆಯ ಮಹಿಳಾ ಘಟಕದ ಅಧ್ಯಕ್ಷೆ ಸವೀತಾ ರಮೇಶ, ವೀರಣ್ಣಾ ಶೀಲವಂತ ಸೇರಿದಂತೆ ಮತ್ತಿತರರು ಇದ್ದರು. ಜಗದ್ಗುರು ಶ್ರೀ ಘನಲಿಂಗ ರುದ್ರಮುನಿ ಶಿವಾಚಾರ್ಯ
ಟ್ರಸ್ಟ್‌, ಶ್ರೀ ಮದ್ವೀರಶೈವ ಸದೊಧನ ಸಂಸ್ಥೆ ಮತ್ತು ವೀರಶೈವ ಲಿಂಗಾಯತ ಸಂಘಟನಾ ವೇದಿಕೆ ಸಂಯುಕ್ತಾಶ್ರಯದಲ್ಲಿ ಕಾರ್ಯಕ್ರಮ ಆಯೋಜಿಸಲಾಗಿತ್ತು.


ಈ ವಿಭಾಗದಿಂದ ಇನ್ನಷ್ಟು

  • ಬೀದರ: ಪದವೀಧರರ ಪ್ರಾಥಮಿಕ ಶಾಲಾ ಶಿಕ್ಷಕ (6ರಿಂದ 8ನೇ ತರಗತಿ) ವೃಂದದ ಹುದ್ದೆಗಳ ನೇರ ನೇಮಕಾತಿಗಾಗಿ ಜಿಲ್ಲೆಯ ವಿವಿಧ ಪರೀಕ್ಷಾ ಕೇಂದ್ರಗಳಲ್ಲಿ ಮೇ 25, 26 ಹಾಗೂ ಜೂನ್‌...

  • ಬೀದರ: ನಗರದ ಜಿಲ್ಲಾ ಸರ್ಕಾರಿ ಆಸ್ಪತ್ರೆಯ ವಾರ್ಡ್‌-46ರ ತುರ್ತು ನಿಗಾ ಘಟಕದಲ್ಲಿ ಹವಾನಿಯಂತ್ರಿತ (ಎಸಿ) ಯಂತ್ರಗಳ ದುರಸ್ತಿ ಕಾರ್ಯ ಬುಧವಾರ ಆರಂಭವಾಗಿದೆ. ಅನೇಕ...

  • ಹುಮನಾಬಾದ: ಪಟ್ಟಣದ ಪಂಚಾಯತ್‌ ರಾಜ್‌ ಎಂಜಿನಿಯರಿಂಗ್‌ ಕಚೇರಿ ಪ್ರಾಂಗಣದಲ್ಲಿ ಸಿಬ್ಬಂದಿ ಸ್ವಯಂ ಪ್ರೇರಣೆಯಿಂದ ನಿರ್ಮಿಸಿರುವ ಕಿರು ಉದ್ಯಾನ ಬಿಸಿಲ ಬೇಗೆಯಿಂದ...

  • ಬಸವಕಲ್ಯಾಣ: ತಮ್ಮ ಮಕ್ಕಳನ್ನೂ ಆಂಗ್ಲ ಮಾಧ್ಯಮ ಮತ್ತು ಸಿಬಿಎಸ್‌ಸಿ ಶಾಲೆಗೆ ಸೇರಿಸಬೇಕು ಎಂಬ ಪೋಷಕರಿಗೆ ಸರ್ಕಾರ ಸಿಹಿ ಸುದ್ದಿ ನೀಡಿದೆ. ಪ್ರಸಕ್ತ ಶೈಕ್ಷಣಿಕ...

  • ಬೀದರ: ಜಿದ್ದಾಜಿದ್ದಿನ ಕಣವಾಗಿ ಮಾರ್ಪಟ್ಟ ಬೀದರ್‌ ಲೋಕಸಭೆ ಕ್ಷೇತ್ರದ ಫಲಿತಾಂಶ ಇಂದು ಅಧಿಕೃತ ಪ್ರಕಟಗೊಳ್ಳಲ್ಲಿದ್ದು, ರಾಜಕೀಯ ಪಕ್ಷಗಳ ಮುಖಂಡರಲ್ಲಿ ತಳಮಳ...

ಹೊಸ ಸೇರ್ಪಡೆ