ಶ್ರದ್ದಾ-ಭಕ್ತಿಯಿಂದ ಶ್ರೀ ಕೃಷ್ಣ ಜನ್ಮಾಷ್ಟಮಿ ಆಚರಣೆ

Team Udayavani, Aug 15, 2017, 12:29 PM IST

ಬೀದರ: ನಗರದ ವಿವಿಧೆಡೆ ಸೋಮವಾರ ಶ್ರೀ ಕೃಷ್ಣ ಜನ್ಮಾಷ್ಮಮಿಯನ್ನು ಶ್ರದ್ಧಾ, ಭಕ್ತಿಯಿಂದ ಆಚರಿಸಲಾಯಿತು. ವಿವಿಧ ಶಾಲೆಗಳಲ್ಲಿ
ವೇಷಧಾರಿ ಮಕ್ಕಳು ಗಮನ ಸೆಳೆದರು, ಕೃಷ್ಣನ ಬಾಲ ಲೀಲೆಗಳ ಪ್ರದರ್ಶಿಸಿ ರಂಜಿಸಿದರು. ಮೊಸರು ಗಡಿಗೆ ಒಡೆಯುವ ಕಾರ್ಯಕ್ರಮ,
ಕೋಲಾಟ ಕಣ್ಮನ ಸೆಳೆಯಿತು. ಸರಸ್ವತಿ ಶಿಕ್ಷಣ ವಿಕಾಸ ಸಮಿತಿ: ನಗರದಲ್ಲಿ ಸರಸ್ವತಿ ಶಿಕ್ಷಣ ವಿಕಾಸ ಸಮಿತಿ ವತಿಯಿಂದ ಗಿರಿಜಾ ಸಭಾ ಮಂಟಪದಲ್ಲಿ ಶ್ರೀ ಕೃಷ್ಣ ಜನ್ಮಾಷ್ಠಮಿ ಆಚರಿಸಲಾಯಿತು. ಮುದ್ದಣ ಡಿ.ಇಡಿ ಕಾಲೇಜಿನ ಪ್ರಾಚಾರ್ಯ ವಿದ್ಯಾವತಿ ಬಲ್ಲೂರ ಮಾತನಾಡಿ, ಕಂಸನಿಗೆ ತನ್ನ ಸಾವು ತಂಗಿಯ ಮಗುವಿನಿಂದಲೆ ಎಂದು ಖಚಿತವಾದಾಗ ಕಂಸನು ತನ್ನ ತಂಗಿ ಮತ್ತು
ವಾಸುದೇವನನ್ನು ಕಾರಾಗೃಹದಲ್ಲಿ ಹಾಕಿರುತ್ತಾನೆ. ಅವರಿಗೆ ಹುಟ್ಟಿದ 7 ಮಕ್ಕಳನ್ನು ಕಂಸನು ಕೊಂದು ಬೀಡುತ್ತಾನೆ. ಎಂಟನೇ ಮಗುವಾಗಿ ಹುಟ್ಟಿದ ಶ್ರೀಕೃಷ್ಣನನ್ನು ವಾಸುದೇವನು ಯಮುನಾ ನದಿಯನ್ನು ದಾಟಿ ಗೋಕುಲದಲ್ಲಿ ಬಿಟ್ಟು ಬರುತ್ತಾನೆ. ಶ್ರೀಕೃಷ್ಣ ಬಾಲ್ಯದಲ್ಲಿ ಅನೇಕ ಲೀಲೆಗಳನ್ನು ಹಾಗೂ ದೊಡ್ಡವನಾದ ಮೇಲೆ ಕಂಸನ ಸಂಹಾರ ಮಾಡುತ್ತಾನೆ ಎಂದು ಹೇಳಿದರು. ಸಂಸ್ಥೆಯ ಅಧ್ಯಕ್ಷ ಪ್ರೊ| ಎಸ್‌.ಬಿ. ಬಿರಾದಾರ ಮಾತನಾಡಿ, ಮಹಾಭಾರತದ ಯುದ್ಧದಲ್ಲಿ ಅರ್ಜುನ ತನ್ನ ಸಹೋದರರ ವಿರುದ್ಧ ನಾನು
ಹೇಗೆ ಯುದ್ಧ ಮಾಡಲಿ ಎಂದು ಕೇಳಿದಾಗ ಶ್ರೀ ಕೃಷ್ಣನು ಅರ್ಜುನನಿಗೆ ನೀನು ನಿನ್ನ ಕರ್ತವ್ಯವನ್ನು ಮಾಡು ಎಂದು ತಿಳಿಸಿ ಹೇಳುತ್ತಾರೆ. ಧರ್ಮ ನಾಶವಾಗಿ ಅಧರ್ಮ ಹೆಚ್ಚಾದಾಗ ನಾನು ಪದೇ ಪದೇ ಈ ಭೂಮಿಯಲ್ಲಿ ಜನ್ಮ ತಾಳುತ್ತೇನೆ. ಧರ್ಮದ ರಕ್ಷಣೆಗಾಗಿ ನಾನ್ನು ಹುಟ್ಟಿ ಬರುತ್ತೇನೆ ಎಂದು ಹೇಳಿದರು. ಆಶಾ ಸ್ವಾಗತಿಸಿದರು. ಗೋದಾವರಿ ನಿರೂಪಿಸಿ ಜ್ಯೋತಿ ವಂದಿಸಿದರು. ಕನ್ಯಿಕಾ ಪರಮೇಶ್ವರಿ ಶಾಲೆ: ನಗರದ ಕನ್ನಿಕಾ ಪರಮೇಶ್ವರಿ ಶಾಲೆಯಲ್ಲಿ ಶ್ರೀ ಕೃಷ್ಣ ಜನ್ಮಾಷ್ಠಮಿ ಆಚರಿಸಲಾಯಿತು. ಸಂಸ್ಥೆಯ ಅಧ್ಯಕ್ಷ ಬಾಬು ವಾಲಿ ಗೋ ಮಾತೆಗೆ ಪೂಜೆ ಮಾಡುವ ಮೂಲಕ ಚಾಲನೆ ನೀಡಿದರು. ಕೃಷ್ಣನ ಬಾಲ್ಯ ಲೀಲೆಗಳಿಂದ ಮಕ್ಕಳು ಬಹಳ ಪ್ರಭಾವಕೊಳಗಾಗುತ್ತಾರೆ. ಮಹಾ ಪುರುಷರ ಜಯಂತಿಗಳನ್ನು ಮಕ್ಕಳ ಜೀವನದ ಮೇಲೆ ಪ್ರಭಾವ ಬೀರುವ ರೀತಿಯಲ್ಲಿ ಆಚರಿಸಬೇಕು ಎಂದು ಹೇಳಿದರು. ಮುಖ್ಯಗುರು ವಿಜಯಕುಮಾರ ಪಾಟೀಲ ಯರನಳ್ಳಿ, ಸುಲೋಚನಾ ಪಾಟೀಲ, ಮುಖ್ಯನಿರ್ವಾಹಕ ಗುರು ಪಾಟೀಲ ಇದ್ದರು.
ಕೋಲಿ ಸಮಾಜ: ನಗರದ ಜಿಲ್ಲಾ ಟೋಕರೆ, ಕೋಲಿ, ಕಬ್ಬಲಿಗ ಸಮಾಜದ ಕಚೇರಿಯಲ್ಲಿ ಶ್ರೀ ಕೃಷ್ಣ ಜನ್ಮಾಷ್ಟಮಿ ಕಾರ್ಯಕ್ರಮ ನಡೆಯಿತು. ಸಮಾಜದ ಜಿಲ್ಲಾಧ್ಯಕ್ಷ ಜಗನ್ನಾಥ ಜಮಾದಾರ ಮಾತನಾಡಿ, ಶ್ರೀಕೃಷ್ಣ ಪರಮಾತ್ಮ ದುಷ್ಟ ಕಂಸನ ಸಂಹಾರ ಮಾಡಿ ಧರ್ಮ ಉಳಿಸಿರುವನು. ಮಹಾಭಾರತದಲ್ಲಿ ಅರ್ಜುನನಿಗೆ ಭಗವತ್‌ ಗೀತಾ ಬೋಧನೆ ಮಾಡಿದ್ದನು. ಗೀತೋಪದೇಶದಂತೆ ನಡೆದರೆ ಜನ್ಮ ಪಾವನವಾಗುತ್ತದೆ ಎಂದು ಹೇಳಿದರು. ತಾಲೂಕು ಅಧ್ಯಕ್ಷ ಶಿವರಾಜ ಜಮಾದಾರ ಮಾತನಾಡಿದರು. ಪತ್ರಕರ್ತ ನಾಗಶೆಟ್ಟಿ
ಧರಂಪುರ, ಬಸವರಾಜ ಖಾಶೆಂಪುರ, ಶರಣಪ್ಪ ಖಾಶೆಂಪುರ, ಬಲವಂತ ಕೋಳಿ, ಅಶೋಕ ಜಮಾದಾರ ಮತ್ತು ಸುರೇಶ ಪೂಜಾರಿ
ಮತ್ತಿತರರು ಇದ್ದರು.

Disclaimer:The views expressed in comments section published on Udayavani.com are those of comment writers alone. They do not represent the views or opinions of Udayavani.com, its staff or The Manipal Group, or any entity associated with The Manipal Group. Udayavani.com reserves rights to remove a comment or all the comments any time.

To report any comment you can email us at udayavani.response@manipalgroup.info. We will review the request and delete the comments.


ಈ ವಿಭಾಗದಿಂದ ಇನ್ನಷ್ಟು

ಹೊಸ ಸೇರ್ಪಡೆ

  • ಹೊಸದಿಲ್ಲಿ/ಮುಂಬಯಿ: ಲೋಕಸಭೆ ಚುನಾವಣೆ ಬಳಿಕ ನಡೆಯುತ್ತಿರುವ ಮಹಾರಾಷ್ಟ್ರ ಮತ್ತು ಹರಿಯಾಣ ರಾಜ್ಯಗಳ ವಿಧಾನಸಭೆ ಚುನಾವಣೆಗೆ ಕ್ಷಣಗಣನೆ ಶುರುವಾಗಿದೆ. ಸೋಮವಾರ...

  • ಬೆಂಗಳೂರು: ಪೊಲೀಸ್‌ ಇಲಾಖೆಯ ಅಧಿಕಾರಿ ಹಾಗೂ ಸಿಬಂದಿ ವರ್ಗದ ವೇತನ ಹೆಚ್ಚಳ ಮಾಡುವ ಮೂಲಕ ರಾಜ್ಯ ಸರಕಾರ ಭರ್ಜರಿ ದೀಪಾವಳಿ ಕೊಡುಗೆ ನೀಡಿದೆ. ಪೊಲೀಸ್‌ ಅಧಿಕಾರಿ,...

  • ಗಂಗಾವತಿ: ಪ್ರವಾಹದಿಂದಾಗಿ ವಿರೂಪಾಪುರ ಗಡ್ಡಿಯಲ್ಲಿ ಸಿಲುಕಿಕೊಂಡಿದ್ದ 350ಕ್ಕೂ ಹೆಚ್ಚು ಟೆಕ್ಕಿಗಳನ್ನು ರಕ್ಷಿಸಲಾಗಿದೆ. ತುಂಗಭದ್ರಾ ಜಲಾನಯನ ಪ್ರದೇಶದಲ್ಲಿ...

  • ಇನ್ನೇನು, ಗಂಟೆ 8 ಹೊಡೆ ಯುವ ಮೊದಲೇ ನಾನು ನನ್ನ ಸಂಶೋಧನಾಲಯದ ಬಾಗಿಲಲ್ಲಿ ಇರುತ್ತೇನೆ. ಮತ್ತಿನ್ನೇನು ಮಾಡಲಿ? ನನ್ನ ಮನೆಯಲ್ಲಿಯೇ ಇದ್ದು, ನನ್ನ ಮೃತ್ಯುವಿಗೆ ಕಾಯುತ್ತಾ...

  • ಕೊಲ್ಲೂರು: ಮಹಾತ್ಮಾ ಗಾಂಧಿ ಜಯಂತಿಯ 150ನೇ ವರ್ಷದ ಅಂಗವಾಗಿ ಸ್ವದೇಶಿ, ಸ್ವರಾಜ್‌, ಸ್ವಾವಲಂಬಿ ಮತ್ತು ಸ್ವಚ್ಛ ಭಾರತ ಸಾಕಾರಕ್ಕಾಗಿ ಸಂಸದ ಬಿ.ವೈ. ರಾಘವೇಂದ್ರ ಅವರ...