Udayavni Special

ಸಕ್ಕರೆ ಕಾರ್ಖಾನೆ ಎನ್‌ಎಸ್‌ಎಸ್‌ಕೆ ಮಾರ್ಗ ಅನುಸರಿಸಲಿವೆ : ಸಚಿವ ಚವ್ಹಾ ಣ ವಿಶ್ವಾಸ


Team Udayavani, Jun 7, 2021, 5:21 PM IST

bcsandhgfbds

ಬೀದರ: ಜಿಲ್ಲೆಯಲ್ಲಿರುವ ಎಲ್ಲ ಸಕ್ಕರೆ ಕಾರ್ಖಾನೆಗಳು ಎನ್‌ಎಸ್‌ಎಸ್‌ ಕೆ ಮಾದರಿಯಲ್ಲಿ ರೈತರ ಪರವಾದ ನಿಲುವು ಪ್ರಕಟಿಸುವ ವಿಶ್ವಾಸವಿದೆ ಎಂದು ಪಶು ಸಂಗೋಪನೆ ಹಾಗೂ ಜಿಲ್ಲಾ ಉಸ್ತುವಾರಿ ಸಚಿವ ಪ್ರಭು.ಬಿ ಚವ್ಹಾಣ ತಿಳಿಸಿದ್ದಾರೆ.

ದಿ| ಗುರುಪಾದಪ್ಪ ನಾಗಮಾರಪಳ್ಳಿಯವರು ಹಾಗೂ ಅವರ ಮಗ ಉಮಾಕಾಂತ್‌ ನಾಗಮಾರಪಳ್ಳಿ ಅವರು ಯಾವಾಗಲೂ ರೈತರ ಪರವಾದ ನಿಲುವು ಹೊಂದಿದ್ದರು. 2019-20ರಲ್ಲಿ ಉಮಾಕಾಂತ ಅವರು ಎನ್‌ಎಸ್‌ ಎಸ್‌ಕೆ ಅಧ್ಯಕ್ಷರಾಗಿದ್ದ ಅವ ಧಿಯಲ್ಲಿ ಜನಪ್ರತಿನಿ ಧಿಗಳು ಹಾಗೂ ರೈತರ ಅಭಿಪ್ರಾಯದಂತೆ ಪ್ರತಿ ಟನ್‌ ಕಬ್ಬಿಗೆ 2,250 ನಿಗದಿ ಮಾಡಲಾಗಿತ್ತು. ಅದನ್ನು ತಾವು ಒಪ್ಪಿದರಲ್ಲದೆ ಮುಂದಾಳತ್ವ ವಹಿಸಿ ಎಲ್ಲ ಕಾರ್ಖಾನೆಗಳು ಒಪ್ಪಿಗೆ ನೀಡುವಂತೆ ಮನವೊಲಿಕೆ ಮಾಡಿಸಿದ್ದರು.

ಎಲ್ಲ ಕಾರ್ಖಾನೆಗಳು ಸಭೆಯ ನಿರ್ಣಯದಂತೆ ರೈತರಿಗೆ ಸಕಾಲದಲ್ಲಿ ಹಣ ಪಾವತಿ ಮಾಡಿದ್ದವು. 2020-21ನೇ ಸಾಲಿಗೆ 2,400 ಬೆಲೆ ನಿಗದಿ ಮಾಡಲಾಗಿತ್ತು. ಆದರೆ ಇದುವೆರೆಗೂ ಯಾವ ಸಕ್ಕರೆ ಕಾರ್ಖಾನೆಯೂ ರೈತರಿಗೆ ಪಾವತಿ ಮಾಡಿರಲಿಲ್ಲ. ಈ ಕುರಿತಂತೆ ನಿರ್ಧಾರ ತೆಗೆದುಕೊಳ್ಳಲು ಕರೆದ ಸಭೆಗೂ ಎನ್‌ಎಸ್‌ಎಸ್‌ಕೆ ಅಧ್ಯಕ್ಷರಾದ ಡಿ.ಕೆ.ಸಿದ್ರಾಮ ಅವರನ್ನು ಹೊರತುಪಡಿಸಿ ಇತರೆ ಅಧ್ಯಕ್ಷರು ಖುದ್ದು ಹಾಜರಿರಲಿಲ್ಲ. ಸಭೆಯಲ್ಲಿ ಸಕ್ಕರೆ ಕಾರ್ಖಾನೆ ಅಧ್ಯಕ್ಷರನ್ನುದ್ದೇಶಿಸಿ ಮಾತನಾಡುವ ಸಂದರ್ಭದಲ್ಲಿ ಸಚಿವರು ಉಮಾಕಾಂತ ನಾಗಮಾರಪಳ್ಳಿಯವರು ದಿ| ಗುರುಪಾದಪ್ಪ ನಾಗಮಾರಪಳ್ಳಿ ಅವರಂತೆ ರೈತಪರ ತೆಗೆದುಕೊಂಡ ಸಭೆಯ ನಿರ್ಣಯವನ್ನು ಸಾಕಾರಗೊಳಿಸಿ ತಮಗಿರುವ ರೈತಪರ ವ್ಯಕ್ತಪಡಿಸಿದ್ದನ್ನು ಸಚಿವರು ಕೊಂಡಾಡಿದ್ದರು.

2019-20ನೇ ಸಾಲಿನ ಕಬ್ಬಿನ ಬೆಲೆ ನಿಗದಿ ಮಾಡುವ ಸಭೆಯ ನಿರ್ಣಯವನ್ನು ಎತ್ತಿ ಹಿಡಿದು ರೈತರಿಗೆ ಹಣ ಪಾವತಿ ಮಾಡುವಲ್ಲಿ ಉಮಾಕಾಂತ ನಾಗಮಾರಪಳ್ಳಿಯವರ ಪಾತ್ರ ಹಿರಿದೆಂದು ಬಣ್ಣಿಸಿದರು. ಲಾಕ್‌ಡೌನ್‌ನಿಂದಾಗಿ ರೈತರು ತೀವ್ರ ಆರ್ಥಿಕ ಸಂಕಷ್ಟಕ್ಕೆ ಸಿಲುಕಿದ್ದಾರೆ. ಇಂತಹ ಸಂದರ್ಭದಲ್ಲಿ ನಾವೆಲ್ಲರೂ ರೈತರೊಂದಿಗೆ ನಿಲ್ಲಬೇಕಿದೆ. ನಾನು ಸದಾ ರೈತರೊಂದಿಗೆ ಇದ್ದು, ಸರ್ಕಾರವೂ ರೈತರ ಪರವಾಗಿದೆ ಎಂದು ಹೇಳಿದ್ದು, ಉಳಿದ ಸಕ್ಕರೆ ಕಾರ್ಖಾನೆಗಳು ರೈತರ ಬಾಕಿ ಹಣ ಪಾವತಿಸುವ ಬಗ್ಗೆ ಸ್ಪಷ್ಟಪಡಿಸದೇ ಇದ್ದಲ್ಲಿ ಕಠಿಣ ಕ್ರಮ ಎದುರಿಸಬೇಕಾಗುತ್ತದೆ ಎಂದು ಜಿಲ್ಲೆಯ ಸಕ್ಕರೆ ಕಾರ್ಖಾನೆಗಳ ಮುಖ್ಯಸ್ಥರಿಗೆ ಸಚಿವರು ಎಚ್ಚರಿಸಿದ್ದಾರೆ.

ಟಾಪ್ ನ್ಯೂಸ್

09

ವಿಜಯಪುರ : ಸಲಾದಹಳ್ಳಿಯಲ್ಲಿ ಪ್ರೇಮಿಗಳ ಮರ್ಯಾದಾ ಹತ್ಯೆ

ಮತ್ತೆ ರೆಕ್ಕೆ ಬಿಚ್ಚಲಿದೆ ಜೆಟ್‌ ಏರ್‌ ವೇಸ್ : ವಿಮಾನಯಾನ ಕಂಪನಿಯಲ್ಲಿ ಹೊಸ ಆಶಾಕಿರಣ

ಮತ್ತೆ ರೆಕ್ಕೆ ಬಿಚ್ಚಲಿದೆ ಜೆಟ್‌ ಏರ್‌ ವೇಸ್ : ವಿಮಾನಯಾನ ಕಂಪನಿಯಲ್ಲಿ ಹೊಸ ಆಶಾಕಿರಣ

ಅಲ್ಪಸಂಖ್ಯಾತರ ಆಯೋಗದ ವರದಿ ಸದನದಲ್ಲಿ ಮಂಡಿಸಿದ ವಿವರ ಕೇಳಿದ ಹೈಕೋರ್ಟ್‌

08

ಕೋವಿಡ್: 8111 ಸೋಂಕಿತರು ಗುಣಮುಖ, 3709 ಹೊಸ ಪ್ರಕರಣ ಪತ್ತೆ

ತಿಮ್ಮಪ್ಪನ ದರ್ಶನಕ್ಕೆ ಟಿಕೆಟ್‌ ಕಡ್ಡಾಯ : ಪ್ರತಿ ಟಿಕೆಟ್‌ಗೆ 300 ರೂ. ನಿಗದಿ

ತಿಮ್ಮಪ್ಪನ ದರ್ಶನಕ್ಕೆ ಟಿಕೆಟ್‌ ಕಡ್ಡಾಯ : ಪ್ರತಿ ಟಿಕೆಟ್‌ಗೆ 300 ರೂ. ನಿಗದಿ

06

ಪ್ರಾಣಿ ಕಲ್ಯಾಣ ಸಹಾಯವಾಣಿ ನಾಳೆ(ಜೂನ್ 23) ಲೋಕಾರ್ಪಣೆ : ಸಚಿವ ಪ್ರಭು ಚವ್ಹಾಣ್

ಜಾರಕಿಹೊಲಿ ಸಿಡಿ ಪ್ರಕರಣ : ಸಂತ್ರಸ್ತೆ ಯುವತಿ ತಂದೆ ಸಲ್ಲಿಸಿದ ಅರ್ಜಿ ವಜಾ

ಜಾರಕಿಹೊಳಿ ಸಿಡಿ ಪ್ರಕರಣ : ಸಂತ್ರಸ್ತೆ ಯುವತಿ ತಂದೆ ಸಲ್ಲಿಸಿದ ಅರ್ಜಿ ವಜಾಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು

Khndre

ಶಾಸಕ ಈಶ್ವರ ಖಂಡ್ರೆಗೆ ಶ್ರೀಗಳಿಂದ ಸನ್ಮಾನ

Online

ಹಣ್ಣು ತೋಟಗಳು ಸಮೃದ್ಧಿಯ ಪ್ರತೀಕ

Bidar

ಬೀದರ: ಬಹುತೇಕ ಚಟುವಟಿಕೆ ಪುನರಾರಂಭ

zxdcfghgfdsdfgh

ಸೋಯಾ ಬೀಜಕ್ಕೆ ಅನ್ನದಾತರ ಅಲೆದಾಟ!

bidar news

ಗಡಿ ಭಾಗದಲ್ಲಿ ನೀಲಗಾಯ್ ಹಿಂಡು ಪತ್ತೆ

MUST WATCH

udayavani youtube

ಅಬ್ಬಾ Unlock ಆಯ್ತು | ಈಗ ಹೇಗಿದೆ ಬದುಕು ?

udayavani youtube

Chiffon ಸೀರೆಗಳು | ಮೊದಲು ತಿಳಿಯಿರಿ ನಂತ್ರ ಖರೀದಿಸಿ

udayavani youtube

ದಿಲ್ಲಿಯ ಮೆಟ್ರೋ ರೈಲಿನಲ್ಲಿ ಕೋತಿಯ ಜಾಲಿ ರೈಡ್‌

udayavani youtube

ಗೋವಾ ಬೆಳಗಾವಿ ಸಂಪರ್ಕ ಸೇತುವೆ: ಚೋರ್ಲಾ ಘಾಟ್‍ನಲ್ಲಿ ಗುಡ್ಡ ಕುಸಿತ

udayavani youtube

ಅಕ್ರಮ ಗೋಸಾಗಾಟಕ್ಕೆ ಅರಣ್ಯ ಇಲಾಖೆ ಸಿಬ್ಬಂದಿಗಳೇ ಸಾಥ್..!

ಹೊಸ ಸೇರ್ಪಡೆ

09

ವಿಜಯಪುರ : ಸಲಾದಹಳ್ಳಿಯಲ್ಲಿ ಪ್ರೇಮಿಗಳ ಮರ್ಯಾದಾ ಹತ್ಯೆ

yoga day

ಯೋಗದಿಂದ ರೋಗಗಳು ನಿವಾರಣೆ: ಸಂಸದ

hasana news

ಮೆಗಾಡೇರಿ ನಿರ್ಮಾಣ ಕಾಮಗಾರಿಗೆ ಚಾಲನೆ

covid vaccination

ಕೋವಿಡ್‌ ಲಸಿಕೆ ಪಡೆದು ಸೋಂಕಿನಿಂದ ಮುಕ್ತರಾಗಿ

drone-experiment-successful

ಡ್ರೋಣ್‌ ಪ್ರಯೋಗ ಯಶಸ್ವಿ

Thanks for visiting Udayavani

You seem to have an Ad Blocker on.
To continue reading, please turn it off or whitelist Udayavani.