ಅಕಾಲಿಕ ಮಳೆಗೆ 700 ಹೆಕ್ಟೇರ್‌ ಬೆಳೆ ನಷ್ಟ

ಕೃಷಿ-ಕಂದಾಯ ಇಲಾಖೆಯಿಂದ ಜಂಟಿ ಸಮೀಕ್ಷೆ

Team Udayavani, Apr 22, 2020, 1:11 PM IST

22-April-13

ಸುರಪುರ: ಕೃಷಿ ಅಧಿಕಾರಿ ಭೀಮರಾಯ ನಾಯಕ, ಕಂದಾಯ ಇಲಾಖೆಯ ದುಶ್ಯಂತ ಬೆಳೆ ನಷ್ಟ ಸಮೀಕ್ಷೆ ಮಾಡಿದರು.

ಸುರಪುರ: ತಾಲೂಕಿನಲ್ಲಿ ಶನಿವಾರ ಸುರಿದ ಅಕಾಲಿಕ ಮಳೆಗೆ ಭತ್ತ, ಸಜ್ಜೆ, ಮೆಣಸಿನಕಾಯಿ, ಪಪ್ಪಾಯಿ, ಬಾಳೆ ಸೇರಿ ಅಂದಾಜಿ ಏಳು ನೂರು ಹೆಕ್ಟೇರ್‌ ಬೆಳೆ ನಷ್ಟವಾಗಿದೆ. ಕೆಲ ಕಡೆ ಗುಡುಗು ಸಿಡಿಲಿಗೆ ಜಾನುವಾರುಗಳು ಬಲಿಯಾಗಿವೆ.

ತಾಲೂಕಿನಲ್ಲಿ ಶೇ. 35ರಿಂದ 40ರಷ್ಟು ಭತ್ತ ಕೊಯ್ಲು ಹಂತದಲ್ಲಿತ್ತು. ಸಜ್ಜೆ ಕೊಯ್ಲು ಹಂತಕ್ಕೆ ತಲುಪಿತ್ತು. ಸುರಪುರ, ಕೆಂಭಾವಿ, ಕಕ್ಕೇರಾ ಮತ್ತು ಹುಣಸಗಿ, ಕೊಡೇಕಲ್‌ ವಲಯಗಳಲ್ಲಿ ಕೊಯ್ಲು ಹಂತಕ್ಕೆ ತಲುಪಿದ್ದ ವಾಣಿಜ್ಯ ಬೆಳೆಗಳಾದ ಭತ್ತ, ಸಜ್ಜೆ, ಮೆಣಸಿನಕಾಯಿ ಮತ್ತು ಪಪ್ಪಾಯಿ, ಚಿಕ್ಕು, ದಾಳಿಂಬೆ, ಬಾಳೆ ಬೆಳೆಗಳು ಸಂಪೂರ್ಣ ನೆಲಕ್ಕೆ ಉದುರಿವೆ.

ತಾಲೂಕಿನ ಕಾಗರಾಳ, ಹಾವಿನಾಳ, ಶೆಳ್ಳಗಿ, ಮುಷ್ಠಳ್ಳಿ, ಬೇವಿನಾಳ, ಹೆಮ್ಮಡಗಿ ಸೂಗೂರ ಚೌಡೇಶ್ವರಿಹಾಳ, ಕರ್ನಾಳ, ಹೆಮನೂರ ಸೇರಿದಂತೆ ಇತರೆ ಗ್ರಾಮಗಳಲಿ ಭತ್ತ, ಸಜ್ಜೆ ಬೆಳೆಗಳು ನಷ್ಟವಾಗಿದ್ದರೆ ಹಂದ್ರಾಳ, ಆಲ್ದಾಳ, ದೇವಾಪುರ ಸೇರಿದಂತೆ ಇತರೆ ಗ್ರಾಮಗಳಲ್ಲಿ ಮೆಣಸಿನಕಾಯಿ ಬೆಳೆ ಹಾಳಾಗಿದೆ. ತಾಲೂಕಿನ ಬಿಜಾಸ್ಪೂರ, ನಗನೂರ, ಸೂಗೂರ ಕವಡಿಮಟ್ಟಿ ಗ್ರಾಮಗಳಲ್ಲಿ ಬೆಳೆದಿದ್ದ ಪಪ್ಪಾಯಿ, ಚಿಕ್ಕು, ಬಾಳೆ ಬೆಳೆಗಳು ನೆಲಕ್ಕೆ ಉದುರಿ ಬಿದ್ದಿವೆ.

ಹಸನಾಪುರ ಗ್ರಾಮದಲಿ ಸಿಡಿಲು ಬಡಿದು ಹೋರಿ ಅಸುನಿಗಿದ್ದರೆ ಚಂದ್ಲಾಪುರ ಗ್ರಾಮದಲ್ಲಿ ಸೊಪ್ಪಿ ಬಣವೆ ಭಸ್ಮವಾಗಿದೆ. ಬೆಳೆ ನಷ್ಟ ಕುರಿತು ಈಗಾಗಲೆ ಕೃಷಿ ಮತ್ತು ಕಂದಾಯ ಇಲಾಖೆಯಿಂದ ಬೆಳೆ ನಷ್ಟ ಕುರಿತು ಜಂಟಿ ಸರ್ವೆ ಕಾರ್ಯ ಭರದಿಂದ ನಡೆದಿದ್ದು, ಅಂತಿಮ ವರದಿ ಸರಕಾರಕ್ಕೆ ಸಲ್ಲಿಸಬೇಕಿದೆ ಎಂದು ಕೃಷಿ ಅಧಿಕಾರಿಗಳು ತಿಳಿದ್ದಾರೆ.

ಅಕಾಲಿಕ ಮಳೆಗೆ ತಾಲೂಕಿನಲ್ಲಿ ಭತ್ತ, ಸಜ್ಜೆ ಸೇರಿ ಇತರೆ ಬೆಳೆಗಳು ಒಟ್ಟು 7 ನೂರು ಹೆಕ್ಟೇರ್‌ ಗಿಂತಲೂ ಹೆಚ್ಚಿನ ಪ್ರಮಾಣದಲ್ಲಿ ನಷ್ಟವಾಗಿವೆ. ಈ ಕುರಿತು ಈಗಾಗಲೇ ಕಂದಾಯ ಮತ್ತು ಕೃಷಿ ಇಲಾಖೆ ಸೇರಿ ಜಂಟಿಯಾಗಿ ಸರ್ವೆ ಮಾಡಿದ್ದು, ಶೀಘ್ರವೇ ಸರಕಾರಕ್ಕೆ ವರದಿ ಸಲ್ಲಿಸಲಾಗುವುದು.
ಧಾನಪ್ಪ ಕತ್ನಳ್ಳಿ,
ಸಹಾಯಕ ಕೃಷಿ ನಿರ್ದೇಶಕ ಸುರಪುರ

ಬಹುತೇಕ ಭತ್ತ ಕೊಯ್ಲು ಮಾಡಲಾಗಿದೆ ಶೇ. 40ರಷ್ಟು ಕೊಯ್ಲು ಮಾಡಬೇಕಿತ್ತು.ಆದರೆ ಅಕಾಲಿಕ ಮಳಗೆ ಕೊಯ್ಲು ಹಂತ್ತದಲ್ಲಿದ್ದ ಭತ್ತ ಮತ್ತು ಸಜ್ಜೆ ನೆಲಕ್ಕಚಿದೆ. ಈ ಕುರಿತು ಸರ್ವೇ ಮಾಡಿದ್ದು, ಮೇಲಾಧಿ ಕಾರಿಗಳಿಗೆ ವರದಿ ಸಲ್ಲಿಸಲಾಗಿದೆ.
ಭೀಮರಾಯ ನಾಯಕ,
ಕೃಷಿ ಅಧಿಕಾರಿ

ಟಾಪ್ ನ್ಯೂಸ್

ಕನ್ನಡ ಸಂಘಟನೆಗಳು ಏನು ಮಾಡುತ್ತಿವೆ: ಡಿಕೆಶಿ ಪ್ರಶ್ನೆ

ಕನ್ನಡ ಸಂಘಟನೆಗಳು ಏನು ಮಾಡುತ್ತಿವೆ: ಡಿಕೆಶಿ ಪ್ರಶ್ನೆ

ವನಿತಾ ಟಿ20 ಚಾಲೆಂಜ್‌: ಸೂಪರ್‌ ನೋವಾ -ವೆಲಾಸಿಟಿ ಫೈನಲ್‌

ವನಿತಾ ಟಿ20 ಚಾಲೆಂಜ್‌: ಸೂಪರ್‌ ನೋವಾ -ವೆಲಾಸಿಟಿ ಫೈನಲ್‌

ರಾಷ್ಟ್ರೀಯ ಸರ್ಫಿಂಗ್‌: ಮೊದಲ ದಿನ ತಮಿಳುನಾಡು ಪ್ರಾಬಲ್ಯ

ರಾಷ್ಟ್ರೀಯ ಸರ್ಫಿಂಗ್‌: ಮೊದಲ ದಿನ ತಮಿಳುನಾಡು ಪ್ರಾಬಲ್ಯ

ಮೆಲ್ಟ್ ವಾಟರ್‌ ಚೆಸ್‌ : ಪ್ರಗ್ನಾನಂದ ಪ್ರಯತ್ನ ವಿಫ‌ಲ

ಮೆಲ್ಟ್ ವಾಟರ್‌ ಚೆಸ್‌ : ಪ್ರಗ್ನಾನಂದ ಪ್ರಯತ್ನ ವಿಫ‌ಲ

ಐಪಿಎಲ್‌ 2022: ಜಾಸ್‌ ಬಟ್ಲರ್‌ ಶತಕದ ಜೋಶ್‌; ಆರ್‌ಸಿಬಿ ಔಟ್‌

ಐಪಿಎಲ್‌ 2022: ಜಾಸ್‌ ಬಟ್ಲರ್‌ ಶತಕದ ಜೋಶ್‌; ಆರ್‌ಸಿಬಿ ಔಟ್‌

ಕೋವಿಡ್‌ ಲಸಿಕೆ ಪಡೆದ ತತ್‌ಕ್ಷಣ ಪ್ರಮಾಣಪತ್ರ: ಕೇಂದ್ರ ಸರಕಾರ

ಕೋವಿಡ್‌ ಲಸಿಕೆ ಪಡೆದ ತತ್‌ಕ್ಷಣ ಪ್ರಮಾಣಪತ್ರ: ಕೇಂದ್ರ ಸರಕಾರ

ನಾರಾವಿಯಲ್ಲಿ ಮುರಿದುಬಿತ್ತು ಅದ್ದೂರಿ ಮದುವೆ

ನಾರಾವಿಯಲ್ಲಿ ಮುರಿದುಬಿತ್ತು ಅದ್ದೂರಿ ಮದುವೆಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು

16releif

ಪರಿಹಾರ ಧನ ಸದ್ಬಳಕೆಗೆ ಶಾಸಕ ಖಂಡ್ರೆ ಸಲಹೆ

ವಡಗಾಂವದಲ್ಲಿ ಸಚಿವ ಅಶೋಕ್ ಗ್ರಾಮವಾಸ್ತವ್ಯ: ಮೆರವಣಿಗೆ ಮೂಲಕ ಸ್ವಾಗತ

ವಡಗಾಂವದಲ್ಲಿ ಸಚಿವ ಅಶೋಕ್ ಗ್ರಾಮವಾಸ್ತವ್ಯ: ಮೆರವಣಿಗೆ ಮೂಲಕ ಸ್ವಾಗತ

21releft

ಜಲಕ್ಷಾಮ: ಪರಿಹಾರಕ್ಕೆ ಆಗ್ರಹಿಸಿ ಸಭೆ ಬಹಿಷ್ಕಾರ

19arrest

ಕ್ಷುಲ್ಲಕ ಕಾರಣಕ್ಕೆ ಕೊಲೆಗೈದ ಸೈಕೋ ಕಿಲ್ಲರ್‌ ಬಂಧನ

1-dfdffds

ಬಿಜೆಪಿ ನಿಷ್ಠಾವಂತನಾದ ನನ್ನ ಸಚಿವ ಸ್ಥಾನ ಭದ್ರ: ಸಚಿವ ಪ್ರಭು ಚವ್ಹಾಣ್

MUST WATCH

udayavani youtube

ಲಕ್ಷಾಂತರ ಭಕ್ತರ ಸಮ್ಮುಖದಲ್ಲಿ ಶ್ರೀ ಹುಲಿಗೆಮ್ಮ ದೇವಿಯ ಮಹಾರಥೋತ್ಸವ

udayavani youtube

ಶಂಕರನಾರಾಯಣ : ವಾರಾಹಿ ನದಿಯಲ್ಲಿ ಮುಳುಗಿ ರೈತ ಸಾವು

udayavani youtube

ಚಿತ್ರದುರ್ಗದ ಐತಿಹಾಸಿಕ ಮುರುಘಾ ಮಠದ ಉತ್ತರಾಧಿಕಾರಿಯಾಗಿ ಬಸವಾದಿತ್ಯ ಶ್ರೀ ಆಯ್ಕೆ

udayavani youtube

ಉಸಿರಾಟದ ಸಮಸ್ಯೆ: ಕೇದಾರನಾಥದಲ್ಲಿ ಮತ್ತೆ ನಾಲ್ವರು ಯಾತ್ರಾರ್ಥಿಗಳ ಸಾವು

udayavani youtube

ಮಳಲಿ ಮಸೀದಿಯ ಸರ್ವೇ ನಡೆಯಲಿ ಜನರು ಸತ್ಯ ತಿಳಿಯಲಿ : ಡಾ ಸುರೇಂದ್ರ ಕುಮಾರ್ ಜೈನ್

ಹೊಸ ಸೇರ್ಪಡೆ

ಕನ್ನಡ ಸಂಘಟನೆಗಳು ಏನು ಮಾಡುತ್ತಿವೆ: ಡಿಕೆಶಿ ಪ್ರಶ್ನೆ

ಕನ್ನಡ ಸಂಘಟನೆಗಳು ಏನು ಮಾಡುತ್ತಿವೆ: ಡಿಕೆಶಿ ಪ್ರಶ್ನೆ

ವನಿತಾ ಟಿ20 ಚಾಲೆಂಜ್‌: ಸೂಪರ್‌ ನೋವಾ -ವೆಲಾಸಿಟಿ ಫೈನಲ್‌

ವನಿತಾ ಟಿ20 ಚಾಲೆಂಜ್‌: ಸೂಪರ್‌ ನೋವಾ -ವೆಲಾಸಿಟಿ ಫೈನಲ್‌

ರಾಷ್ಟ್ರೀಯ ಸರ್ಫಿಂಗ್‌: ಮೊದಲ ದಿನ ತಮಿಳುನಾಡು ಪ್ರಾಬಲ್ಯ

ರಾಷ್ಟ್ರೀಯ ಸರ್ಫಿಂಗ್‌: ಮೊದಲ ದಿನ ತಮಿಳುನಾಡು ಪ್ರಾಬಲ್ಯ

ಮೆಲ್ಟ್ ವಾಟರ್‌ ಚೆಸ್‌ : ಪ್ರಗ್ನಾನಂದ ಪ್ರಯತ್ನ ವಿಫ‌ಲ

ಮೆಲ್ಟ್ ವಾಟರ್‌ ಚೆಸ್‌ : ಪ್ರಗ್ನಾನಂದ ಪ್ರಯತ್ನ ವಿಫ‌ಲ

ಐಪಿಎಲ್‌ 2022: ಜಾಸ್‌ ಬಟ್ಲರ್‌ ಶತಕದ ಜೋಶ್‌; ಆರ್‌ಸಿಬಿ ಔಟ್‌

ಐಪಿಎಲ್‌ 2022: ಜಾಸ್‌ ಬಟ್ಲರ್‌ ಶತಕದ ಜೋಶ್‌; ಆರ್‌ಸಿಬಿ ಔಟ್‌

Thanks for visiting Udayavani

You seem to have an Ad Blocker on.
To continue reading, please turn it off or whitelist Udayavani.