ಶಿಕ್ಷಕರು ಸಾಹಿತ್ಯದ ಪರಿಚಾರಕರು: ಬಳಿಗಾರ

Team Udayavani, Sep 12, 2017, 11:39 AM IST

ಬೀದರ: ಸಾಹಿತಿಗಳ ಸಾಹಿತ್ಯವನ್ನು ಮಕ್ಕಳಿಗೆ ಪರಿಚಯಿಸುವ ಮೂಲಕ ಶಿಕ್ಷಕರು ಸಾಹಿತ್ಯದ ಪರಿಚಾಕರಾಗಿ ಸಾಹಿತ್ಯ ಸಂರಕ್ಷಿಸುತ್ತಿದ್ದಾರೆ ಎಂದು ಕನ್ನಡ ಸಾಹಿತ್ಯ ಪರಿಷತ್ತಿನ ಅಧ್ಯಕ್ಷ ಡಾ| ಮನು ಬಳಿಗಾರ ಹೇಳಿದರು.

ನಗರದ ಕರ್ನಾಟಕ ಕಾಲೇಜಿನಲ್ಲಿ ಜಿಲ್ಲಾ ಕನ್ನಡ ಸಾಹಿತ್ಯ ಪರಿಷತ್‌ ಆಯೋಜಿಸಿದ್ದ ಶಿಕ್ಷಕರ ದಿನಾಚರಣೆ ಹಾಗೂ ಕಸಾಪ ಸಂಸ್ಥಾಪನೆಯ 102ನೇ ವರ್ಷಾಚರಣೆ ಅಂಗವಾಗಿ, ಕಸಾಪ- 102 ಗ್ರಾಮ ಘಟಕಗಳ ಉದ್ಘಾಟನೆ ಸಮಾರಂಭ ಉದ್ಘಾಟಿಸಿ ಮಾತನಾಡಿದ ಅವರು, ಶಿಕ್ಷಕ-ಕೃಷಿಕ-ಸೇವಕ ಇವು ನಮ್ಮ ಸಮಾಜದ ಆಧಾರ ಸ್ತಂಭಗಳಾಗಿವೆ ಎಂದು ಬಣ್ಣಿಸಿದರು.

ಶಿಕ್ಷಕರದು ಒಂದು ಪವಿತ್ರ ವೃತ್ತಿ. ಶಿಕ್ಷಕರಾದವರು ಕೇವಲ ನಾಲ್ಕು ಗೋಡೆಗಳ ಮಧ್ಯ ಬೋಧನೆ ಮಾಡುವುದೇ ಅಲ್ಲ.
ದುಶ್ಚಟಗಳಿಂದ ದೂರವಿದ್ದು ಸ್ನೇಹಿತರಾಗಿ, ಮಾರ್ಗದರ್ಶಿಯಾಗಿ, ತತ್ವ ಜ್ಞಾನಿಯಾಗಿರಬೇಕು. ಅಂಥ ಶಿಕ್ಷಕ ದೇವರಿಗೆ ಸಮ ಅಂಥ ಶಿಕ್ಷಕರ ವೇತನ ಹೆಚ್ಚಾಗಬೇಕು. ಅದರಿಂದ ಅವರ ಮಾನಸಿಕ ನೆಮ್ಮದಿ ಸುಧಾರಿಸಿ ಉತ್ತಮ, ಗುಣಾತ್ಮಕ ಶಿಕ್ಷಣ ನೀಡಬಲ್ಲರು ಎಂದರು. 

ಕರ್ನಾಟಕ ಸಾಹಿತ್ಯ ಅಕಾಡೆಮಿಯ ನೂತನ ಸದಸ್ಯೆ ಡಾ| ಶಿವಗಂಗಾ ರುಮ್ಮಾ ಅವರು ಸನ್ಮಾನ ಸ್ವಿಕರಿಸಿ ಮಾತನಾಡಿ,
ಸ್ವಾತಂತ್ರ್ಯಾ ಹೋರಾಟದಲ್ಲಿ ಶಿಕ್ಷಕರ ಪಾತ್ರ ಮಹತ್ವದಾಗಿದ್ದು, ಬದಲಾದ ಕಾಲಗತಿಯ ಶಿಕ್ಷಕರ ಮನೋಭಾವವೂ ಬದಲಾಗಿದೆ. ಶಿಕ್ಷಣ ವ್ಯವಸ್ಥೆ, ಮೌಡ್ಯ, ಭ್ರಷ್ಟಾಚಾರ ಮುಕ್ತವಾಗಬೇಕು. ಕಳೆದ ಇಪ್ಪತ್ತು ವರ್ಷಗಳಲ್ಲಿ ದೇವಾಲಯಗಳ ಸಂಖ್ಯೆ ಹೆಚ್ಚಾಗಿರುವುದು ದುರಂತದ ಸಂಗತಿಯಾಗಿದೆ ಎಂದು ಹೇಳಿದರು. 

ಸಂಸದ ಭಗವಂತ ಖೂಬಾ ಮಾತನಾಡಿ, ನಡೆನುಡಿ ಒಂದಾದ ಉತ್ತಮ ಸಮಸಮಾಜ ನಿರ್ಮಾಣವಾಗಬೇಕು. ಅದರಲ್ಲಿ ಶಿಕ್ಷಕರ ಪಾಲು ಮಹತ್ವದ್ದಿದೆ. ಸ್ವಾತಂತ್ರ್ತ್ಯೋ 70 ವರ್ಷಗಳಲ್ಲಿ ಭ್ರಷ್ಟಾಚಾರ ನಿರಂತರವಾಗಿರುವುದು ಉತ್ತಮ ಬೆಳವಣಿಗೆ ಅಲ್ಲ. ಬಡತನ ಮುಕ್ತ, ಭ್ರಷ್ಟಾಚಾರ ರಹಿತ ದೇಶ ಕಟ್ಟಲು ಎಲ್ಲರೂ ಕಂಕಣ ಬದ್ಧರಾಗಬೇಕು ಎಂದು ಕರೆ ನೀಡಿದರು.

ಜಿಲ್ಲಾ ಕಸಾಪ ಅಧ್ಯಕ್ಷ ಸುರೇಶ ಚನ್ನಶೆಟ್ಟಿ ಅಧ್ಯಕ್ಷತೆ ವಹಿಸಿ ಮಾತನಾಡಿ, ಕಸಾಪ ಸಾಹಿತ್ಯ- ಸಾಂಸ್ಕೃತಿಕ ಚಟುವಟಿಕೆಗಳ ಜೊತೆಗೆ ಶಿಕ್ಷಣ ವಿಕಾಸಕ್ಕೂ ದುಡಿಯಲು ಸಿದ್ಧವಾಗಿದೆ. ಸಮಾಜಮುಖೀಯಾದ ಕೆಲಸಗಳಿಗೆ ಶಿಕ್ಷಕರು ಕೈ ಜೋಡಿಸಿದರೆ ಉತ್ತಮ ಸಮಾಜ ಕಟ್ಟಲು ಸಾಧ್ಯ ಎಂದು ಹೇಳಿದರು. ರಾಷ್ಟ್ರೀಯ ಪ್ರಶಸ್ತಿ ಪುರಸ್ಕೃತ ಶಿಕ್ಷಕ ಪಂಡಿತ ಬಾಳೂರೆ, ರಾಜ್ಯ ಪ್ರಶಸ್ತಿ ಪುರಸ್ಕೃತ ಶಿಕ್ಷಕ ನರಸಪ್ಪ ಕವಿ ಹಾಗೂ ಜಿಲ್ಲೆಯ ಉತ್ತಮ ಶಿಕ್ಷಕರನ್ನು ಇದೇ ವೇಳೆ ಸನ್ಮಾನಿಸಲಾಯಿತು. 

ಕರ್ನಾಟಕ ಕಾಲೇಜಿನ ಪ್ರಾಚಾರ್ಯ ಡಾ| ಬಿ.ಎಸ್‌.ಬಿರಾದಾರ, ಜಿಲ್ಲಾ ಎನ್‌ಜಿಒ ಗೃಹ ನಿರ್ಮಾಣ ಅಧ್ಯಕ್ಷ ಬಾಲಾಜಿ ಬಿರಾದಾರ, ಶಿಕ್ಷಕರ ಸಂಘದ ಉಪಾಧ್ಯಕ್ಷ ಗಣಪತಿ ಭಕ್ತ ಮೊದಲಾದವರು ವೇದಿಕೆಯಲ್ಲಿದ್ದರು. ಡಾ| ಬಸವರಾಜ ಬಲ್ಲೂರ ನಿರೂಪಿಸಿದರು ಟಿ.ಎಂ.ಮಚ್ಚೆ ಸ್ವಾಗತಿಸಿದರು. ಜಗನ್ನಾಥ ಕಮಲಾಪುರೆ ವಂದಿಸಿದರು.


ಈ ವಿಭಾಗದಿಂದ ಇನ್ನಷ್ಟು

  • ಬೀದರ: ಪದವೀಧರರ ಪ್ರಾಥಮಿಕ ಶಾಲಾ ಶಿಕ್ಷಕ (6ರಿಂದ 8ನೇ ತರಗತಿ) ವೃಂದದ ಹುದ್ದೆಗಳ ನೇರ ನೇಮಕಾತಿಗಾಗಿ ಜಿಲ್ಲೆಯ ವಿವಿಧ ಪರೀಕ್ಷಾ ಕೇಂದ್ರಗಳಲ್ಲಿ ಮೇ 25, 26 ಹಾಗೂ ಜೂನ್‌...

  • ಬೀದರ: ನಗರದ ಜಿಲ್ಲಾ ಸರ್ಕಾರಿ ಆಸ್ಪತ್ರೆಯ ವಾರ್ಡ್‌-46ರ ತುರ್ತು ನಿಗಾ ಘಟಕದಲ್ಲಿ ಹವಾನಿಯಂತ್ರಿತ (ಎಸಿ) ಯಂತ್ರಗಳ ದುರಸ್ತಿ ಕಾರ್ಯ ಬುಧವಾರ ಆರಂಭವಾಗಿದೆ. ಅನೇಕ...

  • ಹುಮನಾಬಾದ: ಪಟ್ಟಣದ ಪಂಚಾಯತ್‌ ರಾಜ್‌ ಎಂಜಿನಿಯರಿಂಗ್‌ ಕಚೇರಿ ಪ್ರಾಂಗಣದಲ್ಲಿ ಸಿಬ್ಬಂದಿ ಸ್ವಯಂ ಪ್ರೇರಣೆಯಿಂದ ನಿರ್ಮಿಸಿರುವ ಕಿರು ಉದ್ಯಾನ ಬಿಸಿಲ ಬೇಗೆಯಿಂದ...

  • ಬಸವಕಲ್ಯಾಣ: ತಮ್ಮ ಮಕ್ಕಳನ್ನೂ ಆಂಗ್ಲ ಮಾಧ್ಯಮ ಮತ್ತು ಸಿಬಿಎಸ್‌ಸಿ ಶಾಲೆಗೆ ಸೇರಿಸಬೇಕು ಎಂಬ ಪೋಷಕರಿಗೆ ಸರ್ಕಾರ ಸಿಹಿ ಸುದ್ದಿ ನೀಡಿದೆ. ಪ್ರಸಕ್ತ ಶೈಕ್ಷಣಿಕ...

  • ಬೀದರ: ಜಿದ್ದಾಜಿದ್ದಿನ ಕಣವಾಗಿ ಮಾರ್ಪಟ್ಟ ಬೀದರ್‌ ಲೋಕಸಭೆ ಕ್ಷೇತ್ರದ ಫಲಿತಾಂಶ ಇಂದು ಅಧಿಕೃತ ಪ್ರಕಟಗೊಳ್ಳಲ್ಲಿದ್ದು, ರಾಜಕೀಯ ಪಕ್ಷಗಳ ಮುಖಂಡರಲ್ಲಿ ತಳಮಳ...

ಹೊಸ ಸೇರ್ಪಡೆ