ಅಡಕತ್ತರಿಯಲ್ಲಿ ಕೇಂದ್ರೀಯ ವಿದ್ಯಾಲಯ ಮಕ್ಕಳ ಭವಿಷ್ಯ!


Team Udayavani, Oct 27, 2021, 11:30 AM IST

7school

ರಾಯಚೂರು: ಕೇಂದ್ರ ಸರ್ಕಾರ ನಡೆಸಿದ ವರ್ಗಾವಣೆ ಪ್ರಕ್ರಿಯೆಯಿಂದ ಕೇಂದ್ರೀಯ ವಿದ್ಯಾಲಯಗಳು ಶಿಕ್ಷಕರ ಕೊರತೆ ಎದುರಿಸುವಂತಾಗಿದ್ದು, ವಿದ್ಯಾರ್ಥಿಗಳ ಭವಿಷ್ಯ ಅಡಕತ್ತರಿಗೆ ಸಿಲುಕಿದಂತಾಗಿದೆ.

ಈಚೆಗೆ ದೇಶಾದ್ಯಂತ ಸಾವಿರಾರು ಶಿಕ್ಷಕರ ವರ್ಗಾವಣೆ ಪ್ರಕ್ರಿಯೆ ನಡೆದಿದ್ದು, ಅದರಲ್ಲಿ ರಾಯಚೂರು ಕೇಂದ್ರೀಯ ವಿದ್ಯಾಲಯದ 15ರಲ್ಲಿ 13 ಶಿಕ್ಷಕರು, ಹಟ್ಟಿ ಚಿನ್ನದ ಗಣಿ ಶಾಲೆಯಲ್ಲಿ 11ರಲ್ಲಿ ಆರು ಶಿಕ್ಷಕರು ವರ್ಗಾವಣೆಗೊಂಡಿದ್ದಾರೆ.

ಇಲ್ಲಿ ಮಾತ್ರವಲ್ಲದೇ ರಾಜ್ಯದ ಬಹುತೇಕ ಕೇಂದ್ರೀಯ ವಿದ್ಯಾಲಯಗಳಲ್ಲೂ ಇದೇ ರೀತಿಯಾಗಿದ್ದು, ಶಿಕ್ಷಕರಿಲ್ಲದೇ ಶಾಲೆಗಳು ಖಾಲಿಯಾಗಿವೆ ಎನ್ನುವ ಮಾಹಿತಿ ಲಭ್ಯವಾಗಿದೆ. ಸಿಬಿಎಸ್‌ಸಿ ಪಠ್ಯಾಧಾರಿತ ಈ ಶಾಲೆಗಳಲ್ಲಿ ದೇಶಾದ್ಯಂತ ಏಕರೂಪದ ಶಿಕ್ಷಣವಿರುತ್ತದೆ. ಅಲ್ಲದೇ, ಮಕ್ಕಳಿಗೆ ಪಠ್ಯೇತರ ಚಟುವಟಿಕೆ, ಸ್ಮಾರ್ಟ್‌ ಕ್ಲಾಸ್‌ಗಳು, ಕ್ರೀಡೆ, ಸಂಗೀತ, ಚಿತ್ರಕಲೆ ಹೀಗೆ ಪ್ರತಿಯೊಂದನ್ನೂ ಕಲಿಸುವ ನಿಟ್ಟಿನಲ್ಲಿ ಎಲ್ಲ ರೀತಿಯ ಸೌಲಭ್ಯ ನೀಡಲಾಗಿರುತ್ತದೆ. ಆದರೆ, ಮುಖ್ಯವಾಗಿ ಇದನ್ನೆಲ್ಲ ಕಲಿಸಲು ಬೇಕಾದ ಶಿಕ್ಷಕರೇ ಶಾಲೆಗಳಲಿಲ್ಲ ಎನ್ನುವುದು ಮಕ್ಕಳ ಭವಿಷ್ಯಕ್ಕೆ ಮಾರಕವಾಗಿದೆ.

ಜಿಲ್ಲೆಗೊಂದರಂತೆ ರಾಜ್ಯದ ಬಹುತೇಕ ಕಡೆ ಕೇಂದ್ರೀಯ ವಿದ್ಯಾಲಯ ತೆರೆಯಲಾಗಿದೆ. ಕೆಲವೆಡೆ ಹೆಚ್ಚುವರಿ ಶಾಲೆಗಳನ್ನು ತೆರೆದಿದ್ದರೆ ಇನ್ನೂ ಅನೇಕ ಕಡೆ ಪ್ರಸ್ತಾವನೆಗಳಿವೆ. ಆದರೆ, ಇಲ್ಲಿಗೆ ಕೇಂದ್ರ ಸರ್ಕಾರವೇ ಕಾಯಂ ಶಿಕ್ಷಕರನ್ನು ನೇಮಕ ಮಾಡುತ್ತಿದ್ದು, ಬಹುತೇಕ ಉತ್ತರ ಭಾರತ ಭಾಗದವರನ್ನೇ ನಿಯೋಜಿಸಲಾಗಿದೆ. ಆ ಭಾಗದವರು ಹೆಚ್ಚು ದಿನ ಇರಲಾರದೇ ವರ್ಗಾವಣೆಗಾಗಿ ಕಾದು ಕೂಡುತ್ತಿದ್ದಾರೆ. ಈ ಪೈಕಿ ಬಹುತೇಕರು ವರ್ಗಾವಣೆ ಪಡೆದು ಹೋಗಿದ್ದಾರೆ. ಮಾಹಿತಿ ಪ್ರಕಾರ ರಾಜ್ಯದ ವಿಜಯಪುರ, ಬಳ್ಳಾರಿ, ಹುಬ್ಬಳ್ಳಿ, ತುಮಕೂರು ಹೀಗೆ ನಾನಾ ಜಿಲ್ಲೆಗಳಲ್ಲೂ ಸಮಸ್ಯೆಯಾಗಿದೆ.

ಜ್ಯೇಷ್ಠತಾ ಆಧಾರದಡಿ ವರ್ಗ

ಕೇಂದ್ರ ಸರ್ಕಾರ ವರ್ಗಾವಣೆ ಪ್ರಕ್ರಿಯೆ ಸಂಪೂರ್ಣ ಆನ್‌ ಲೈನ್‌ ಮೂಲಕವೇ ನಡೆಸುತ್ತದೆ. ವರ್ಗಾವಣೆ ಬೇಕಾದವರು ತಮಗೆ ಬೇಕಾದ ರಾಜ್ಯ-ಶಾಲೆಗಳನ್ನು ಆಯ್ಕೆ ಮಾಡಿಕೊಂಡು ಅರ್ಜಿ ಹಾಕಿದರೆ ಜ್ಯೇಷ್ಠತಾ ಆಧಾರದಡಿ ಅರ್ಹತೆ ಇದ್ದರೆ ನೇರವಾಗಿ ವರ್ಗಾವಣೆ ಆದೇಶ ಸಿಕ್ಕು ಬಿಡುತ್ತದೆ. ಇದಾದ ಕೂಡಲೇ ತಮ್ಮ ಊರುಗಳತ್ತ ಮುಖ ಮಾಡುವ ಶಿಕ್ಷಕರು, ತಾವಿದ್ದ ಶಾಲೆ ಪರಿಸ್ಥಿತಿ ಏನು ಎತ್ತ ಎಂಬ ಬಗ್ಗೆ ಹೇಳುವವರು ಕೇಳುವವರೇ ಇಲ್ಲದಾಗಿದೆ.

ಇದನ್ನೂ ಓದಿ: ವ್ಯಕ್ತಿಗೆ ಪೊಲೀಸರಿಂದ ಥಳಿತ-ಆರೋಪ

ಮಕ್ಕಳ ಕಲಿಕೆಗೆ ಕಂಟಕ

ರಾಯಚೂರಿನ ಕೇಂದ್ರೀಯ ವಿದ್ಯಾಲಯದಲ್ಲಿ 435 ವಿದ್ಯಾರ್ಥಿಗಳು ವ್ಯಾಸಂಗ ಮಾಡುತ್ತಿದ್ದಾರೆ. ಇಲ್ಲಿ ಪ್ರಧಾನ ವಿಷಯಗಳಾಗಿ ಹಿಂದಿ, ಇಂಗ್ಲಿಷ್‌, ಸಂಸ್ಕೃತ, ಗಣಿತ, ವಿಜ್ಞಾನ, ಸಮಾಜ ವಿಜ್ಞಾನ ಕಲಿಯಬೇಕಿದೆ. ಅದರ ಜತೆಗೆ ಕಂಪ್ಯೂಟರ್‌, ಸಂಗೀತ, ಚಿತ್ರಕಲೆ ಸೇರಿದಂತೆ ಕೆಲವೊಂದು ಪಠ್ಯೇತರ ಚಟುವಟಿಕೆಗಳ ಕಲಿಕೆ ಕೂಡ ಕಡ್ಡಾಯ. ಈಗ ಕೇವಲ ಮೂವರು ಅತಿಥಿ ಶಿಕ್ಷಕ ಮೇಲೆ ಬೋಧನೆ ನಡೆಯುತ್ತಿದೆ. ಚಿತ್ರಕಲೆ ಶಿಕ್ಷಕರಿಗೆ ಅರ್ಹತೆ ಆಧಾರದ ಮೇಲೆ ಪ್ರಾಚಾರ್ಯ ಹುದ್ದೆ ನೀಡಲಾಗಿದೆ. ವಿಪರ್ಯಾಸವೆಂದರೆ ಕಳೆದ ಮೂರ್‍ನಾಲ್ಕು ವರ್ಷಗಳಿಂದ ಈ ಶಾಲೆಗೆ ಕಾಯಂ ಪ್ರಾಚಾರ್ಯರು ಕೂಡ ಇಲ್ಲ.

ಮೇಲಿಂದಲೇ ನಿಯಂತ್ರಣ

ಶಂಖದಿಂದ ಬಂದರೆ ತೀರ್ಥ ಎನ್ನುವಂತೆ ಸಣ್ಣ ವಿಚಾರ ನಿರ್ಧರಿಸಬೇಕಾದರೂ ಈ ಶಾಲೆಗಳು ಕೇಂದ್ರ ಕಚೇರಿಯನ್ನೇ ಸಂಪರ್ಕಿಸಬೇಕು. ಈಗ ಅತಿಥಿ ಶಿಕ್ಷಕರನ್ನು ನೇಮಿಸಿಕೊಳ್ಳಲು ಕೂಡ ಸಂಸ್ಥೆ ಮುಖ್ಯಸ್ಥರಾದ ಡಿಸಿಯವರು ಅನುಮತಿ ಪಡೆಯಲೇಬೇಕು. ಆದರೆ, ಅವರು ಕೇಂದ್ರೀಯ ವಿದ್ಯಾಲಯಗಳ ನಿಯಮಾನುಸಾರ ಅತಿಥಿ ಶಿಕ್ಷಕರನ್ನು ಪರೀಕ್ಷೆಗೆ ಒಳಪಡಿಸಿಯೇ ಆಯ್ಕೆ ಮಾಡುವಂತೆ ಸೂಚಿಸುತ್ತಾರೆ. ಇದರಿಂದ ಸಾಕಷ್ಟು ಶಿಕ್ಷಕರು ಅರ್ಹತೆ ಪಡೆಯುವಲ್ಲಿ ವಿಫಲ ಹೊಂದುತ್ತಾರೆ. ಒಟ್ಟಾರೆ ಮಕ್ಕಳ ಭವಿಷ್ಯ ರೂಪಿಸಲು ಮಹತ್ವ ಪಾತ್ರ ವಹಿಸಬೇಕಾದ ಕೇಂದ್ರೀಯ ವಿದ್ಯಾಲಯಗಳು ಮಕ್ಕಳಿಗೆ ಭವಿಷ್ಯಕ್ಕೆ ಮಾರಕವಾಗಿರುವುದು ವಿಪರ್ಯಾಸ.

ಕೇಂದ್ರ ಸರ್ಕಾರ ನಡೆಸಿದ ವರ್ಗಾವಣೆ ಪ್ರಕ್ರಿಯೆಯಿಂದ ರಾಯಚೂರು ಹಾಗೂ ಹಟ್ಟಿ ಕೇಂದ್ರೀಯ ವಿದ್ಯಾಲಯಗಳು ಖಾಲಿಯಾಗಿವೆ. ಈ ಸಮಸ್ಯೆ ಕೂಡಲೇ ಗಮನಕ್ಕೆ ತರುವಂತೆ ಸಂಸದರಿಗೂ ಮನವಿ ಮಾಡಿದ್ದು, ಸಂಬಂಧಿಸಿದ ಇಲಾಖೆಗೂ ಪತ್ರ ಬರೆಯಲಾಗುವುದು. ಒಂದು ವಾರದೊಳಗೆ ಅತಿಥಿ ಶಿಕ್ಷಕರ ನೇಮಕಕ್ಕೆ ಅನುಮತಿ ನೀಡಲಾಗಿದೆ. ಈಗಿರುವ ಪ್ರಾಚಾರ್ಯರ ವರ್ಗಾವಣೆಯಾಗಿದ್ದು, ಅವರನ್ನು ಬಿಡುಗಡೆ ಮಾಡದೆ ತಡೆ ಹಿಡಿಯಲಾಗಿದೆ. -ಸಂತೋಷ್‌ ಕಾಮಗೌಡ, ಶಾಲೆ ಪ್ರಭಾರ ಮುಖ್ಯಸ್ಥ

-ಸಿದ್ಧಯ್ಯಸ್ವಾಮಿ ಕುಕನೂರು

ಟಾಪ್ ನ್ಯೂಸ್

ವಿಶ್ವ ಚಾಂಪಿಯನ್‌ಶಿಪ್‌: ಮೊದಲ ಬಾರಿ ಸೈನಾ ನೆಹ್ವಾಲ್‌ ಗೈರು

ವಿಶ್ವ ಚಾಂಪಿಯನ್‌ಶಿಪ್‌: ಮೊದಲ ಬಾರಿ ಸೈನಾ ನೆಹ್ವಾಲ್‌ ಗೈರು

ಜೂನಿಯರ್‌ ವಿಶ್ವಕಪ್‌ ಹಾಕಿ: ಭಾರತ ಸೆಮಿಫೈನಲ್‌ಗೆ ಲಗ್ಗೆ

ಜೂನಿಯರ್‌ ವಿಶ್ವಕಪ್‌ ಹಾಕಿ: ಭಾರತ ಸೆಮಿಫೈನಲ್‌ಗೆ ಲಗ್ಗೆ

ನವೆಂಬರ್‌ ಜಿಎಸ್‌ಟಿ ಸಂಗ್ರಹ 1.31 ಲಕ್ಷ ಕೋ.ರೂ.

ನವೆಂಬರ್‌ ಜಿಎಸ್‌ಟಿ ಸಂಗ್ರಹ 1.31 ಲಕ್ಷ ಕೋ.ರೂ.

ವಾಣಿಜ್ಯ ಎಲ್‌ಪಿಜಿ ಸಿಲಿಂಡರ್‌100 ರೂ. ಏರಿಕೆ

ವಾಣಿಜ್ಯ ಎಲ್‌ಪಿಜಿ ಸಿಲಿಂಡರ್‌100 ರೂ. ಏರಿಕೆ

ಕತ್ರಿನಾ-ವಿಕ್ಕಿ ಮದುವೆ ಆಹ್ವಾನಿತರಿಗೆ ಇದೆಯಂತೆ ಟಫ್ ರೂಲ್ಸ್‌

ಕತ್ರಿನಾ-ವಿಕ್ಕಿ ಮದುವೆ ಆಹ್ವಾನಿತರಿಗೆ ಇದೆಯಂತೆ ಟಫ್ ರೂಲ್ಸ್‌

ವೃದ್ಧರೇ ಅಂತರಾಷ್ಟ್ರೀಯ ಪ್ರಯಾಣ ಮುಂದೂಡಿ : ವಿಶ್ವ ಆರೋಗ್ಯ ಸಂಸ್ಥೆಯಿಂದಲೇ ಎಚ್ಚರಿಕೆ

ವೃದ್ಧರೇ ಅಂತರಾಷ್ಟ್ರೀಯ ಪ್ರಯಾಣ ಮುಂದೂಡಿ : ವಿಶ್ವ ಆರೋಗ್ಯ ಸಂಸ್ಥೆಯಿಂದಲೇ ಎಚ್ಚರಿಕೆ

ಬಿಹಾರದ ದೇಗುಲಗಳಿಗೆ ಶೇ. 4 ತೆರಿಗೆ! ರಾಜ್ಯ ಸರ್ಕಾರದ ನಿರ್ಧಾರ

ಬಿಹಾರದ ದೇಗುಲಗಳಿಗೆ ಶೇ. 4 ತೆರಿಗೆ! ರಾಜ್ಯ ಸರ್ಕಾರದ ನಿರ್ಧಾರಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು

Untitled-2

ಬೀದರ್: ಬಿಸಿಯೂಟದಲ್ಲಿ ಮೊಟ್ಟೆ: ಯೋಜನೆ ಕೈಬಿಡಲು ಆಗ್ರಹ

15DC

ಬ್ರಿಮ್ಸ್‌ ಕಟ್ಟಡ ವೀಕ್ಷಿಸಿದ ಡಿಸಿ

14road

ರಸ್ತೆಯಲ್ಲಿನ ಗುಂಡಿ ಮುಚ್ಚುವುದೇ ಸಚಿವರಿಬ್ಬರ ಸಾಧನೆ

13work

ಕಾಮಗಾರಿ ಪರಿಶೀಲಿಸಿದ ಮಡೋಳಪ್ಪ

18yoga

ರೋಗಮುಕ್ತ ಜೀವನಕ್ಕೆ ಯೋಗ ಅವಶ್ಯ

MUST WATCH

udayavani youtube

ಜಡೇಜಾಗಾಗಿ ಮೊದಲ ಸ್ಥಾನವನ್ನೇ ಬಿಟ್ಟುಕೊಟ್ಟ ಮಾಹಿ

udayavani youtube

ನಾಪತ್ತೆಯಾಗಿದ್ದ ವ್ಯಕ್ತಿಯ ಶವ ಕಾಡಿನಲ್ಲಿ ಹೂತಿಟ್ಟ ರೀತಿಯಲ್ಲಿ ಪತ್ತೆ, ಕೊಲೆ ಶಂಕೆ

udayavani youtube

ತುಂಗಭದ್ರಾ ನದಿಯಿಂದ ಹಳ್ಳಗಳಿಗೆ ಬಂದ ಮೊಸಳೆ! ಜನರಲ್ಲಿ ಆತಂಕ

udayavani youtube

ದಾಂಡೇಲಿ :ತಹಶೀಲ್ದಾರ್ ಕಚೇರಿ ಆವರಣದಲ್ಲಿ ಎರಡು ತಂಡಗಳ ನಡುವೆ ಹೊಡೆದಾಟ

udayavani youtube

ಮನೆ ಮಂದಿ ಬರುವಿಕೆಗಾಗಿ ದಾಂಡೇಲಿಯ ಬಸ್ ನಿಲ್ದಾಣದಲ್ಲಿ ಕಾಯುತ್ತಿರುವ ವಯೋವೃದ್ದೆ

ಹೊಸ ಸೇರ್ಪಡೆ

ವಿಶ್ವ ಚಾಂಪಿಯನ್‌ಶಿಪ್‌: ಮೊದಲ ಬಾರಿ ಸೈನಾ ನೆಹ್ವಾಲ್‌ ಗೈರು

ವಿಶ್ವ ಚಾಂಪಿಯನ್‌ಶಿಪ್‌: ಮೊದಲ ಬಾರಿ ಸೈನಾ ನೆಹ್ವಾಲ್‌ ಗೈರು

ಜೂನಿಯರ್‌ ವಿಶ್ವಕಪ್‌ ಹಾಕಿ: ಭಾರತ ಸೆಮಿಫೈನಲ್‌ಗೆ ಲಗ್ಗೆ

ಜೂನಿಯರ್‌ ವಿಶ್ವಕಪ್‌ ಹಾಕಿ: ಭಾರತ ಸೆಮಿಫೈನಲ್‌ಗೆ ಲಗ್ಗೆ

ನವೆಂಬರ್‌ ಜಿಎಸ್‌ಟಿ ಸಂಗ್ರಹ 1.31 ಲಕ್ಷ ಕೋ.ರೂ.

ನವೆಂಬರ್‌ ಜಿಎಸ್‌ಟಿ ಸಂಗ್ರಹ 1.31 ಲಕ್ಷ ಕೋ.ರೂ.

ವಾಣಿಜ್ಯ ಎಲ್‌ಪಿಜಿ ಸಿಲಿಂಡರ್‌100 ರೂ. ಏರಿಕೆ

ವಾಣಿಜ್ಯ ಎಲ್‌ಪಿಜಿ ಸಿಲಿಂಡರ್‌100 ರೂ. ಏರಿಕೆ

ಕತ್ರಿನಾ-ವಿಕ್ಕಿ ಮದುವೆ ಆಹ್ವಾನಿತರಿಗೆ ಇದೆಯಂತೆ ಟಫ್ ರೂಲ್ಸ್‌

ಕತ್ರಿನಾ-ವಿಕ್ಕಿ ಮದುವೆ ಆಹ್ವಾನಿತರಿಗೆ ಇದೆಯಂತೆ ಟಫ್ ರೂಲ್ಸ್‌

Thanks for visiting Udayavani

You seem to have an Ad Blocker on.
To continue reading, please turn it off or whitelist Udayavani.