Udayavni Special

72 ಹಳ್ಳಿಗಳಿಗೆ ಕಾಡಲಿದೆ ನೀರಿನ ಸಮಸ್ಯೆ


Team Udayavani, Apr 21, 2021, 7:27 PM IST

mnbvcxsza

ಬೀದರ : ಹೆಮ್ಮಾರಿ ಕೋವಿಡ್‌-19 ಆರ್ಭಟದ ನಡುವೆ ಸೂರ್ಯಾಘಾತದಿಂದ ತಲ್ಲಣ ಎದುರಿಸುತ್ತಿರುವ ಗಡಿ ನಾಡು ಬೀದರಗೆ ಈಗ ಜೀವ ಜಲದ ಕಂಟಕದ ಆತಂಕ ಶುರುವಾಗಿದೆ. ಮೇ ತಿಂಗಳ ಆರಂಭದಲ್ಲಿ ನೀರಿನ ಅಭಾವ ತಲೆದೋರಲಿರುವ ಜಿಲ್ಲೆಯ 70ಕ್ಕೂ ಅಧಿಕ ಗ್ರಾಮಗಳ ಪಟ್ಟಿಯನ್ನು ಜಿಲ್ಲಾಡಳಿತ ಮತ್ತು ಜಿಪಂ ಸಿದ್ಧಪಡಿಸಿದ್ದು, ಅಗತ್ಯ ಸಿದ್ಧತೆಗೆ ಮುಂದಾಗಿದೆ.

ಕೊರೊನಾ ಸೋಂಕಿನ ಕರಾಳ ಮುಖ ಅನಾವರಣದಿಂದ ನಗರ ಮಾತ್ರವಲ್ಲ ಗ್ರಾಮೀಣ ಪ್ರದೇಶವೂ ನಲುಗಿ ಹೋಗುತ್ತಿದೆ. ಈ ವರ್ಷ ಉತ್ತಮ ಮಳೆಯಿಂದಾಗಿ ಅಂತರ್ಜಲ ಮಟ್ಟ ಹೆಚ್ಚಿದ್ದರೂ ಜಿಲ್ಲೆಯ ಕೆಲ ಗ್ರಾಮಗಳಲ್ಲಿ ಕುಡಿಯುವ ನೀರಿನ ಸಮಸ್ಯೆ ಉಲ್ಬಣಗೊಳ್ಳಲಿದೆ. ಗ್ರಾಮೀಣ ಕುಡಿಯುವ ನೀರು ಮತ್ತು ನೈರ್ಮಲ್ಯ ಇಲಾಖೆ (RDWSD) ಪ್ರಕಾರ ಮೇ ಮೊದಲ ವಾರದಿಂದ ಜಿಲ್ಲೆಯ 72 ಗ್ರಾಮಗಳಲ್ಲಿ ನೀರಿನ ಕೊರತೆ ಎದುರಾಗಬಹುದೆಂದು ಅಂದಾಜಿಸಲಾಗಿದೆ.

ಆದರೆ, ಈ ಸಂಖ್ಯೆ ಹೆಚ್ಚುವ ಸಾಧ್ಯತೆಯೂ ಅಧಿಕವಾಗಿದೆ. ಜಿಲ್ಲೆಯ ಜೀವನಾಡಿ ಆಗಿರುವ ಕಾರಂಜಾ ಜಲಾಶಯದಿಂದ ಬೀದರ ನಗರ ಮತ್ತು 18 ಹಳ್ಳಿಗಳು, ಚಿಟಗುಪ್ಪ ಪಟ್ಟಣ ಮತ್ತು 8 ಹಳ್ಳಿ ಹಾಗೂ ಹುಮನಾಬಾದ್‌ ಪಟ್ಟಣಕ್ಕೆ ನೀರು ಪೂರೈಕೆ ಇದೆ. ಡ್ಯಾಂನಲ್ಲಿ 5.737 ಟಿಎಂಸಿ ನೀರಿನ ಲಭ್ಯತೆ ಇದೆ. ಇನ್ನೂ ಗ್ರಾಮೀಣ ಭಾಗದಲ್ಲಿ ಒಟ್ಟು 17 ಬಹು ಗ್ರಾಮ ಯೋಜನೆಗಳ ಪೈಕಿ 8 ಯೋಜನೆಗಳು ಮಾತ್ರ ಚಾಲ್ತಿಯಲ್ಲಿದ್ದು, 55 ಗ್ರಾಮಗಳಿಗೆ ನೀರಿನ ಸಂಪರ್ಕದ ವ್ಯವಸ್ಥೆಗಳಿವೆ. ಉಳಿದ ಗ್ರಾಮಗಳು ಕೆರೆ, ಕೊಳವೆಬಾವಿಗಳ ಮೇಲೆ ಅವಲಂಬಿತವಾಗಿವೆ. ಬೀದರ ಜಿಲ್ಲೆಯಲ್ಲಿ ಸಣ್ಣ ನೀರಾವರಿ ವಿಭಾಗ ವ್ಯಾಪ್ತಿಯಲ್ಲಿ ಒಟ್ಟು 124 ಕೆರೆಗಳಿದ್ದು, 2,864 ಎಂಸಿಎಫ್‌ ಟಿ  ಗರಿಷ್ಠ ನೀರಿನ ಸಾಮರ್ಥ್ಯ ಇದೆ. ಏ. 1ರವರೆಗೆ ಒಂದು ಕೆರೆಯೂ ಪೂರ್ಣ ಪ್ರಮಾಣದಲ್ಲಿ ತುಂಬಿಲ್ಲ. ಇಲಾಖೆಯ ಅಂಕಿ ಅಂಶಗಳ ಪ್ರಕಾರ ಒಟ್ಟು ಕೆರೆಗಳ ಪೈಕಿ 16 ಕೆರೆಗಳು ತುಂಬದೇ ಖಾಲಿ ಇದ್ದರೆ, ಶೇ. 1ರಿಂದ ಶೇ. 30 ತುಂಬಿದ ಕೆರೆ 40, ಶೇ. 31ರಿಂದ ಶೇ. 50 ತುಂಬಿದ ಕೆರೆ 41 ಹಾಗೂ ಶೇ. 51ರಿಂದ ಶೇ. 99ರಷ್ಟು 27 ಕೆರೆಗಳು ಭರ್ತಿಯಾಗಿವೆ. ಸಧ್ಯ ಹೆಚ್ಚಿನ ನೀರಿನ ಸಮಸ್ಯೆ ಇಲ್ಲವಾದರೂ ಬಿರು ಬಿಸಿಲಿಗೆ ಸಾಕ್ಷಿಯಾಗುವ ಮೇ ತಿಂಗಳಲ್ಲಿ ಅಭಾವ ಸೃಷ್ಟಿಯಾಗಲಿದ್ದು, ಈಗಾಗಲೇ ಎಚ್ಚೆತ್ತುಕೊಂಡಿರುವ ಜಿಲ್ಲಾಡಳಿತ ಮತ್ತು ಜಿ.ಪಂ ನೀರಿನ ಸಮಸ್ಯಾತ್ಮಕ ಪಟ್ಟಿಯನ್ನು ಪಡೆದಿದೆ.

ಗ್ರಾಮ ಲೆಕ್ಕಿಗ, ಪಂಚಾಯತ್‌ ಅಭಿವೃದ್ಧಿ ಅಧಿಕಾರಿಗಳ ನೇತೃತ್ವದಲ್ಲಿ ಸರ್ವೇ ನಡೆಸಿ, ನೀರಿನ ಸೆಲೆ ಕಡಿಮೆಯಾದಲ್ಲಿ ಸುತ್ತಲಿನ ಬಾವಿ, ಬೊರ್‌ವೆಲ್‌ಗ‌ಳ ಮೂಲಕ ನೀರು ಪೂರೈಸಲು ಅಗತ್ಯ ಸಿದ್ಧತೆ ಮಾಡಿಕೊಳ್ಳಲಾಗುತ್ತಿದೆ. ಟ್ಯಾಂಕರ್‌ ಮೂಲಕ ನೀರು ಪೂರೈಸುವ ಸ್ಥಿತಿ ಎದುರಾಗದಿದ್ದರೂ ಮುನ್ನೆಚ್ಚರಿಕೆ ವಹಿಸಲಾಗುತ್ತಿದೆ.

ಕೋವಿಡ್‌ ಆತಂಕದ ಮಧ್ಯ ಬಿರು ಬಿಸಿಲಿನಲ್ಲಿ ಕುಡಿಯುವ ನೀರಿಗೆ ಹಾಹಾಕಾರ ಶುರುವಾದರೆ ಜನರ ಪರದಾಟ ಹೆಚ್ಚಲಿದೆ. ಮಕ್ಕಳಿಂದ ಹಿಡಿದು ವಯಸ್ಕರವರೆಗೆ ಮೈಲಿಗಟ್ಟಲೆ ಕ್ರಮಿಸಿ ಹೊರವಲಯದ ತೋಟಗಳಲ್ಲಿನ ನೀರು ತರುವ ಅನಿವಾರ್ಯತೆ ಸೃಷ್ಟಿಯಾಗಲಿದ್ದು, ಸಮಸ್ಯೆ ತೀವ್ರವಾಗದಂತೆ ಆಡಳಿತ ಕ್ರಮ ವಹಿಸುವುದು ಅಗತ್ಯವಿದೆ.

 

 

ಟಾಪ್ ನ್ಯೂಸ್

ಚಿಕ್ಕಮಗಳೂರು: ಮನೆಗೆ ಬಂದ ಸೋಂಕಿತ ಅಣ್ಣನನ್ನೇ ಭೀಕರವಾಗಿ ಕೊಲೆಗೈದ ತಮ್ಮ

ಚಿಕ್ಕಮಗಳೂರು: ಮನೆಗೆ ಬಂದ ಸೋಂಕಿತ ಅಣ್ಣನನ್ನೇ ಭೀಕರವಾಗಿ ಕೊಲೆಗೈದ ತಮ್ಮ

Donated Covid Kits By Hukkery Mutt Swamiji to Belagavi DC

ಜಿಲ್ಲಾಧಿಕಾರಿಗಳಿಗೆ  ಹುಕ್ಕೇರಿ ಹಿರೇಮಠದಿಂದ ಕೋವಿಡ್ ಕಿಟ್ ಗಳ ಹಸ್ತಾಂತರ             

Reliance jio offers discounts to retain users during corona pandemic

ಕೋವಿಡ್ 19 : ಗ್ರಾಹಕ ಸ್ನೇಹಿ ಯೋಜನೆಯೊಂದನ್ನು ಘೋಷಿಸಿದ ಜಿಯೋ

ಕಾಪು ಬಳಿ ಅಪಘಾತಕ್ಕೀಡಾದ ವೆಸೆಲ್ ಟಗ್ :ಇನ್ನೂ ಆರಂಭಗೊಳ್ಳದ ರಕ್ಷಣಾ ಕಾರ್ಯಾಚರಣೆ !

ಕಾಪು ಬಳಿ ಅಪಘಾತಕ್ಕೀಡಾದ ವೆಸೆಲ್ ಟಗ್ :ಇನ್ನೂ ಆರಂಭಗೊಳ್ಳದ ರಕ್ಷಣಾ ಕಾರ್ಯಾಚರಣೆ !

covid effect at chikkamagalore

ಚಿಕ್ಕಮಗಳೂರು : ನಿಯಮ ಉಲ್ಲಂಘಿಸಿ ಅಂತ್ಯಸಂಸ್ಕಾರಕ್ಕೆ ಹೋದವರಿಗೆ ಕೋವಿಡ್ ದೃಢ

cats

ಫೇಸ್ ಬುಕ್ ಸ್ನೇಹಿತನಿಂದ ಹೀನ ಕೃತ್ಯ : ಮಹಿಳೆ ಮೇಲೆ 25 ಕಾಮುಕರಿಂದ ಅತ್ಯಾಚಾರ

cats

ದೆಹಲಿಯಲ್ಲಿ ಮತ್ತೆ ಒಂದು ವಾರ ಲಾಕ್ ಡೌನ್ ಮುಂದುವರಿಕೆಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು

ಮಹಾಮಾನವತಾವಾದಿ ಬಸವಣ್ಣನ ಮೂರ್ತಿಗೆ ನಮನ

ಮಹಾಮಾನವತಾವಾದಿ ಬಸವಣ್ಣನ ಮೂರ್ತಿಗೆ ನಮನ

ಸೋಂಕಿತರ ಸಂಖ್ಯೆ ಇಳಿಕೆ; ಚೇತರಿಕೆ ಏರಿಕೆ

ಸೋಂಕಿತರ ಸಂಖ್ಯೆ ಇಳಿಕೆ; ಚೇತರಿಕೆ ಏರಿಕೆ

ytregfdkjfghnvmcsjk

ಬ್ರಿಡ್ಜ್ ಕಾಮಗಾರಿ ಸ್ಥಳಕ್ಕೆ ಶಾಸಕರ ಭೇಟಿ

ytre

ಹಳ್ಳಿಗಳಲ್ಲಿ ಕೋವಿಡ್‌ ಮುಂಜಾಗ್ರತೆಗೆ ಸೂಚನೆ

rrrrrrrrrrrrrrrrrrrrrrrrrrrr

“ಕೈ ಮುಗಿಯುವೆ, ಅನಗತ್ಯ ಸಂಚರಿಸಬೇಡಿ’

MUST WATCH

udayavani youtube

ಪುತ್ತೂರು ಮಹಾಲಿಂಗೇಶ್ವರ ದೇಗುಲದ ಸಭಾಂಗಣ ಸದ್ಯಕ್ಕೆ COVID CARE CENTRE

udayavani youtube

ಕನ್ನಡ ಶಾಲೆಯ ವಿಭಿನ್ನ ಇಂಗ್ಲೀಷ್ ಕ್ಲಾಸ್

udayavani youtube

ದೆಹಲಿಯಲ್ಲಿ ಕೋವಿಡ್ 19 ಲಾಕ್ ಡೌನ್ ಮತ್ತೆ ವಿಸ್ತರಿಸಬೇಡಿ

udayavani youtube

ರಾಯಚೂರು ; ಫುಲ್ ಲಾಕ್ ಡೌನ್ ಹಿನ್ನೆಲೆ ಎಣ್ಣೆ ಖರೀದಿಗೆ ಮುಗಿಬಿದ್ದ ಮದ್ಯಪ್ರಿಯರು

udayavani youtube

Oxygen ನಮಗೆ ಬೇಕಿರುವುದಕ್ಕಿಂತ ಜಾಸ್ತಿನೇ ಇದೆ

ಹೊಸ ಸೇರ್ಪಡೆ

ಚಿಕ್ಕಮಗಳೂರು: ಮನೆಗೆ ಬಂದ ಸೋಂಕಿತ ಅಣ್ಣನನ್ನೇ ಭೀಕರವಾಗಿ ಕೊಲೆಗೈದ ತಮ್ಮ

ಚಿಕ್ಕಮಗಳೂರು: ಮನೆಗೆ ಬಂದ ಸೋಂಕಿತ ಅಣ್ಣನನ್ನೇ ಭೀಕರವಾಗಿ ಕೊಲೆಗೈದ ತಮ್ಮ

Hypertension in young people

ಯುವ ಜನತೆಯಲ್ಲಿ  ಅಧಿಕ ರಕ್ತದೊತ್ತಡ

Donated Covid Kits By Hukkery Mutt Swamiji to Belagavi DC

ಜಿಲ್ಲಾಧಿಕಾರಿಗಳಿಗೆ  ಹುಕ್ಕೇರಿ ಹಿರೇಮಠದಿಂದ ಕೋವಿಡ್ ಕಿಟ್ ಗಳ ಹಸ್ತಾಂತರ             

Types of medical examination of the kidneys

ಮೂತ್ರಪಿಂಡಗಳ ವೈದ್ಯಕೀಯ ಪರೀಕ್ಷಾ  ವಿಧಗಳು ಮತ್ತು ವಿಧಾನಗಳು

Reliance jio offers discounts to retain users during corona pandemic

ಕೋವಿಡ್ 19 : ಗ್ರಾಹಕ ಸ್ನೇಹಿ ಯೋಜನೆಯೊಂದನ್ನು ಘೋಷಿಸಿದ ಜಿಯೋ

Thanks for visiting Udayavani

You seem to have an Ad Blocker on.
To continue reading, please turn it off or whitelist Udayavani.