ಈ ವರ್ಷವೂ “ಬಿಎಸ್‌ಎಸ್‌ಕೆ’ ಆರಂಭ ಅನುಮಾನ

ಸಾಲದ ಸುಳಿಯಲ್ಲಿ ಸಿಲುಕಿ ಬಾಗಿಲು ಮುಚ್ಚಿಕೊಂಡ ಕಾರ್ಖಾನೆಗೆ ಸಿಗುವುದೇ ಪುನಶ್ಚೇತನ

Team Udayavani, Aug 20, 2021, 8:26 PM IST

ಈ ವರ್ಷವೂ “ಬಿಎಸ್‌ಎಸ್‌ಕೆ’ ಆರಂಭ ಅನುಮಾನ

ಹುಮನಾಬಾದ: ಸಾಲದ ಸುಳಿಯಲ್ಲಿ ಬಾಗಿಲು ಮುಚ್ಚಿಕೊಂಡ ಬೀದರ ಸಹಕಾರ ಸಕ್ಕರೆ ಕಾರ್ಖಾನೆಯ ಕಬ್ಬು ನುರಿಸುವ ಕಾರ್ಯಕ್ಕೆ ಸೂಕ್ತ ಅನುದಾನ ದೊರೆತಿಲ್ಲವಾದ್ದರಿಂದ ಈ ವರ್ಷವೂ ಕೂಡ ಕಾರ್ಖಾನೆ ಆರಂಭವಾಗುವುದು ಬಹುತೇಕ ಅನುಮಾನವಾಗಿದೆ.

ಸಕ್ಕರೆ ಕಾರ್ಖಾನೆ ಕಾರ್ಯ ಚಟುವಟಿಕೆಗಳು ಕಳೆದ ಎರಡು ವರ್ಷಗಳಿಂದ ಸಂಪೂರ್ಣ ಬಂದ್‌ ಆಗಿವೆ. ನಾಲ್ಕು ತಿಂಗಳ ಹಿಂದೆ ಚುನಾವಣೆ ಎದುರಿಸಿ ಬಂದ ಹೊಸ ಆಡಳಿತ ಮಂಡಳಿ ಕಾರ್ಖಾನೆ ಆರಂಭಿಸಲು ಅನುದಾನಕ್ಕಾಗಿ ಕಾತರದಿಂದ ಕಾಯುತ್ತಿದ್ದಾರೆ. ಸದ್ಯ ಕಾರ್ಖಾನೆಯಲ್ಲಿನ ಸಕ್ಕರೆ ಮಾರಾಟ ಮಾಡಲಾಗಿದ್ದು, ವಿದ್ಯುತ್‌ ಸಂಪರ್ಕ ಕಲ್ಪಿಸುವ ಕಾರ್ಯ ಮಾಡಿದ್ದಾರೆ. ಅನುದಾನಕ್ಕಾಗಿ ವಿವಿಧೆಡೆ ಭೇಟಿ ನೀಡುತ್ತಿರುವ ಆಡಳಿತ ಮಂಡಳಿಗೆ ಕಾರ್ಖಾನೆ ಮೇಲೆ ಹೆಚ್ಚಿದ ಸಾಲದ ಹೊರೆ ಹಾಗೂ ಬಂದ್‌ ಆಗಿದೆ ಎಂಬ ಕಾರಣಕ್ಕೆ ಹಿನ್ನಡೆ ಉಂಟಾಗುತ್ತಿದೆ.

ಕಾರ್ಖಾನೆ ಆರಂಭಿಸುವ ನಿಟ್ಟಿನಲ್ಲಿ ಜಿಲ್ಲೆಯ ಜನಪ್ರತಿನಿಧಿಗಳು ಸಹ ಉತ್ಸಾಹ ತೋರುತ್ತಿಲ್ಲ ಎಂಬ ಆರೋಪಗಳ ಮಧ್ಯೆಯೂ ರಾಜ್ಯ ಹಾಗೂ ಕೇಂದ್ರದಲ್ಲಿ ಬಿಜೆಪಿ ಸರ್ಕಾರ ಇರುವ ಕಾರಣ ಅನುದಾನ ತಂದು ಕಾರ್ಖಾನೆ ನಡೆಸುತ್ತೇವೆಂಬ ಸಜ್ಜಿನಲ್ಲಿದ್ದಾರೆ ಆಡಳಿತ ಮಂಡಳಿಯವರು.ಅದೂ ಅಲ್ಲದೇ ರಾಜ್ಯ ಕೈಗಾರಿಕಾ ಮತ್ತು ಮೂಲ ಸೌಲಭ್ಯ ನಿಗಮದ ಅಧ್ಯಕ್ಷ ಡಾ| ಶೈಲೇಂದ್ರ ಬೆಲ್ದಾಳೆ ಅವರು ಕಾರ್ಖಾನೆ ಉಪಾಧ್ಯಕ್ಷ ರಾಗಿದ್ದು, ಇದೀಗ ಆ ಸಂಸ್ಥೆಯಿಂದ ಅನುದಾನ ತರುವುದು ಸಾಧ್ಯವಿಲ್ಲ ಎನ್ನಲಾಗಿದೆ.

ಇದನ್ನೂ ಓದಿ:ಅಫ್ಘಾನ್ ನಲ್ಲಿರುವ ಕನ್ನಡಿಗರ ರಕ್ಷಣೆಗೆ ರಾಜ್ಯ ಸರ್ಕಾರಕ್ಕೆ ಒತ್ತಾಯಿಸಿದ ದಿನೇಶ್ ಗುಂಡೂರಾವ್

ಈಡೇರದ ಭರವಸೆ: 2018ರ ವಿಧಾನಸಭೆ ಚುನಾವಣೆ ಮುನ್ನ ಕೇಂದ್ರ ಸಚಿವ ಅಮಿತ್‌ ಶಾ, ಮಾಜಿ ಮುಖ್ಯಮಂತ್ರಿ ಬಿ.ಎಸ್‌. ಯಡಿಯೂರಪ್ಪ
ಹಾಗೂ ಕುಮಾರಸ್ವಾಮಿ ಅವರು ಇಲ್ಲಿಗೆ ಭೇಟಿ ನೀಡಿದ ಸಂದರ್ಭದಲ್ಲಿ ಬೀದರ ಸಹಕಾರ ಸಕ್ಕರೆ ಕಾರ್ಖಾನೆಗೆ ಸೂಕ್ತ ಅನುದಾನ ಕಲ್ಪಿಸುವ ಮೂಲಕ ಕಾರ್ಖಾನೆ ಪುನಶ್ಚೇತನಗೊಳಿಸುವ ಭರವಸೆ ನೀಡಿದ್ದರು. ಕುಮಾರಸ್ವಾಮಿ ಮುಖ್ಯಮಂತ್ರಿ ಇರುವ ಅವಧಿಯಲ್ಲಿ 20 ಕೋಟಿ ಅನುದಾನ ತಂದು ಕಾರ್ಖಾನೆ ಆರಂಭಿಸಲಾಗಿತ್ತು. ನಂತರ ಕಾರ್ಖಾನೆಗೆ ಸೂಕ್ತ ಅನುದಾನ ಇಲ್ಲದೆ ಬಾಗಿಲು ಮುಚ್ಚಿಕೊಂಡಿದೆ. ಬಾಗಿಲು ತೆರೆಯುವ ಕಾರ್ಯವನ್ನು ಮಾತ್ರ ಯಾವ ರಾಜಕಾರಣಿಗಳೂ ಮಾಡುತ್ತಿಲ್ಲವೆಂದು ರೈತರು ದೂರಿದ್ದಾರೆ.

ಮತ್ತೆ ಹೊಸ ಭರವಸೆ: ಬಿಎಸ್‌ಎಸ್‌ಕೆ ಕಾರ್ಖಾನೆಗೆ ಇತ್ತೀಚೆಗೆ ಭೇಟಿ ನೀಡಿದ ಕೇಂದ್ರ ಸಚಿವ, ಜಿಲ್ಲಾ ಸಂಸದ ಭಗವಂತ ಖೂಬಾ ಕಾರ್ಖಾನೆ ಆರಂಭಿಸುವ ನಿಟ್ಟಿನಲ್ಲಿ ಪ್ರಾಮಾಣಿಕ ಪ್ರಯತ್ನ ನಡೆಸುವುದಾಗಿ ಹೊಸ ಭರವಸೆ ನೀಡಿದ್ದಾರೆ. ಈ ಕುರಿತು ಮುಖ್ಯಮಂತ್ರಿಗಳನ್ನು ಭೇಟಿ ಮಾಡಿ ಮನವರಿಕೆ ಮಾಡುತ್ತೇನೆ. ಕಬ್ಬು ಬೆಳೆಗಾರರ ಸಂಕಷ್ಟಕ್ಕೆ ಸ್ಪಂದಿಸುವ ಕಾರ್ಯ ಮಾಡುತ್ತೇನೆಂದು ತಿಳಿಸಿದ್ದಾರೆ.ಅನುದಾನ ಸಿಗದಿದ್ದರೆ ಖಾಸಗಿ ವ್ಯಕ್ತಿಗಳಿಗೆ ಲೀಸ್‌ ಆಧಾರದಲ್ಲಿ ನೀಡುವ ಚಿಂತನೆ ನಡೆಸುತ್ತಿದೆ. ಕಾರ್ಖಾನೆಯಲ್ಲಿನ ಚಟುವಟಿಕೆಗಳ ಕುರಿತು ಅಧ್ಯಕ್ಷರು ಗೌಪ್ಯತೆ ಕಾಪಾಡಿ ಕೊಳ್ಳುತ್ತಿದ್ದಾರೆ. ಹೇಗಾದರೂ ಮಾಡಿ ರೈತರ ಉಳಿವಿಗಾಗಿ ಈ ವರ್ಷ ಕಾರ್ಖಾನೆ ಆರಂಭ ಮಾಡಲೇಬೇಕೆಂದು ರೈತ ಸಂಘದ ಮುಖಂಡ ಸತೀಶ ನನೂರೆ ಒತ್ತಾಯಿಸಿದ್ದಾರೆ.

-ದುರ್ಯೋಧನ ಹೂಗಾರ

ಟಾಪ್ ನ್ಯೂಸ್

ಕಾಮನ್ವೆಲ್ತ್‌ಗೆ ಮರಳಿತು ಶೂಟಿಂಗ್‌; ಭಾರತಕ್ಕೆ ಮಿಶ್ರ ಅನುಭವ

ಕಾಮನ್ವೆಲ್ತ್‌ಗೆ ಮರಳಿತು ಶೂಟಿಂಗ್‌; ಭಾರತಕ್ಕೆ ಮಿಶ್ರ ಅನುಭವ

1-asdadad

ಹಲವು ದಶಕಗಳ ನಂತರ ಮತ್ತೆ ಕಾಶ್ಮೀರದಲ್ಲಿ ನೆಲೆಸಳಿದ್ದಾಳೆ ಶಾರದೆ

ಪಿಎಫ್ಐ ಜತೆಗೆ ನಂಟು ಪೊಲೀಸ್‌ ಅಧಿಕಾರಿ ಸಸ್ಪೆಂಡ್‌

ಪಿಎಫ್ಐ ಜತೆಗೆ ನಂಟು ಪೊಲೀಸ್‌ ಅಧಿಕಾರಿ ಸಸ್ಪೆಂಡ್‌

ಪ್ರಸಿದ್ಧ ವಾಹಿನಿಗಳಾಗಿರುವ ಜೀ-ಸೋನಿ ವಿಲೀನಕ್ಕೆ ಸಿಸಿಐ ಒಪ್ಪಿಗೆ

ಪ್ರಸಿದ್ಧ ವಾಹಿನಿಗಳಾಗಿರುವ ಜೀ-ಸೋನಿ ವಿಲೀನಕ್ಕೆ ಸಿಸಿಐ ಒಪ್ಪಿಗೆ

1-sadasdd

ಸಿಎಂ ಯೋಗಿ ಚಿರತೆ ಮರಿಗೆ ಹಾಲುಣಿಸುವ ವಿಡಿಯೋ ವೈರಲ್

ಆರ್‌ಟಿಇ ಶುಲ್ಕ ಮರು ಪಾವತಿಗೆ ಕ್ರಿಯಾ ಯೋಜನೆ ರೂಪಿಸಿದ ಶಿಕ್ಷಣ ಇಲಾಖೆ

ಆರ್‌ಟಿಇ ಶುಲ್ಕ ಮರು ಪಾವತಿಗೆ ಕ್ರಿಯಾ ಯೋಜನೆ ರೂಪಿಸಿದ ಶಿಕ್ಷಣ ಇಲಾಖೆ

1-a-dsd-s

ಮೈಸೂರಿನಲ್ಲಿ ಟೂರಿಸಂ ಸರ್ಕಿಟ್: ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು

10

ಪಿಎಫ್ಐ. -ಆರ್.ಎಸ್.ಎಸ್. ಸಂಘಟನೆಗಳ ಹೋಲಿಕೆ ಮಾಡುವುದು ಸರಿ ಅಲ್ಲ: ಬಿ.ವೈ ವಿಜಯೇಂದ್ರ

9

ವಿದ್ಯಾರ್ಥಿಗಳು ಜೀವನದಲ್ಲಿ ಗುರಿ ಇಟ್ಟುಕೊಂಡು ಸಾಧನೆ ಮಾಡಬೇಕು: ಬಿ.ವೈ. ವಿಜಯೇಂದ್ರ

2

ಹುಮನಾಬಾದ: ಬೆಳ್ಳಂ ಬೆಳಿಗ್ಗೆ ಆರ್.ಟಿ.ಓ ಕಚೇರಿ ಮೇಲೆ ಲೋಕಾಯುಕ್ತ ದಾಳಿ

11

ಹುಮನಾಬಾದ: ಪಿ.ಎಫ್.ಐ., ಎಸ್.ಡಿ‌‌‌.ಪಿ.ಐ.ಗೆ ಸಂಬಂಧಿಸಿದ ಮನೆ ಹಾಗೂ ಕಚೇರಿ ಮೇಲೆ ದಾಳಿ

arun-singh

ಪೇಸಿಎಂ ಎಂಬುದು ಸಜ್ಜನ, ಸಾಮಾನ್ಯರ ಸಿಎಂ ಗೆ ಮಾಡುವ ಅಪಮಾನ: ಅರುಣ್ ಸಿಂಗ್

MUST WATCH

udayavani youtube

ಉಚ್ಚಿಲ‌ ದಸರಾ‌ 2022 : ಶೋಭಾಯಾತ್ರೆ ಗೆ ಅಂತಿಮ ಹಂತದ ಸಿದ್ಧತೆ

udayavani youtube

ಭಾರತ್ ಜೋಡೋ : ಮಳೆಯಲ್ಲಿ ನೆನೆಯುತ್ತಾ ಭಾಷಣ ಮಾಡಿದ ರಾಹುಲ್

udayavani youtube

ದಿನ8 | ಮಹಾಗೌರಿ |ಮಹಾಗೌರಿಯ ಆರಾಧನೆಯನ್ನು ಯಾಕಾಗಿ ಮಾಡಬೇಕು ??

udayavani youtube

ಅಶಕ್ತರ ನೆರವಿಗಾಗಿ ಪ್ರೇತವಾದ ದೇವದಾಸ್..! ಇವರ ಕಾರ್ಯಕ್ಕೊಂದು ಮೆಚ್ಚುಗೆ ಇರಲಿ

udayavani youtube

ದಿನ7 | ಕಾಳರಾತ್ರಿ ದೇವಿ

ಹೊಸ ಸೇರ್ಪಡೆ

ಕಾಮನ್ವೆಲ್ತ್‌ಗೆ ಮರಳಿತು ಶೂಟಿಂಗ್‌; ಭಾರತಕ್ಕೆ ಮಿಶ್ರ ಅನುಭವ

ಕಾಮನ್ವೆಲ್ತ್‌ಗೆ ಮರಳಿತು ಶೂಟಿಂಗ್‌; ಭಾರತಕ್ಕೆ ಮಿಶ್ರ ಅನುಭವ

1-asdasdasd

ವಾಡಿ: ದೇವಿಯ ಮುಂದೆ ಬೃಹತ್ ರಾವಣ ಪ್ರತಿಕೃತಿ ದಹನ

1–dsadasd

ಹುಣಸೂರು: ಹಾಡು ಹಗಲೇ ಮನೆ ಮುಂದೆ ಚಿರತೆ ಪ್ರತ್ಯಕ್ಷ; ಜನರಲ್ಲಿಆತಂಕ

1-qwwqewe

ರಾಷ್ಟ್ರೀಯ ಭೂ ಸ್ವಾಧೀನ ಅಧಿಕಾರಿಯ ಸೋಗಿನಲ್ಲಿ ವಂಚನೆ: ಆರೋಪಿ ಬಂಧನ

1-sdsdad

ಕೊರಟಗೆರೆಯ ಈ ಕುಗ್ರಾಮ  ಮೂಲಭೂತ ಸೌಕರ್ಯ ವಂಚಿತವಾಗಿದೆ

Thanks for visiting Udayavani

You seem to have an Ad Blocker on.
To continue reading, please turn it off or whitelist Udayavani.