ಕೋವಿಡ್ 19 : ಬೀದರನಲ್ಲಿ ಇಂದು 33 ಹೊಸ ಪ್ರಕರಣಗಳು ಪತ್ತೆ
Team Udayavani, Mar 15, 2021, 9:20 PM IST
ಬೀದರ: ಗಡಿನಾಡು ಬೀದರ ಜಿಲ್ಲೆಯಲ್ಲಿ ಕೋವಿಡ್- 19 ಸೋಂಕು ನಿಧಾನವಾಗಿ ಹಬ್ಬಲಾರಂಭಿಸಿದ್ದು, ಸೋಮವಾರ ಒಂದೇ ದಿನ 33 ಪಾಸಿಟಿವ್ ಪ್ರಕರಣಗಳು ವರದಿಯಾಗಿದ್ದರೆ, ಒಬ್ಬ ಸೋಂಕಿತನ ಸಾವು ಸಂಭವಿಸಿದೆ.
ಜಿಲ್ಲೆಯಲ್ಲಿ ಕುಗ್ಗಿದ್ದ ಕೋವಿಡ್ ಮತ್ತೆ ಅಟ್ಟಹಾಸ ಮೆರೆಯುತ್ತಿರುವುದು ಜನರಲ್ಲಿ ಆತಂಕ ಹೆಚ್ಚಿಸಿದೆ. ಇಂದು 33 ಹೊಸ ಪ್ರಕರಣಗಳೊಂದಿಗೆ ಪಾಸಿಟಿವ್ ಕೇಸ್ ಗಳ ಸಂಖ್ಯೆ ಈಗ 7766ಗೆ ತಲುಪಿದ್ದರೆ, ಮೃತರ ಸಂಖ್ಯೆ 175ಕ್ಕೆ ಏರಿಕೆ ಆಗಿದೆ.
ಜಿಲ್ಲೆಯಲ್ಲಿ ಈವರೆಗೆ 7469 ಜನರು ಚಿಕಿತ್ಸೆಯಿಂದ ಗುಣಮುಖರಾಗಿದ್ದು, ಇನ್ನೂ 118 ಸಕ್ರಿಯ ಪಾಸಿಟಿವ್ ಪ್ರಕರಣಗಳಿವೆ.