ಪಾರಂಪರಿಕ ನಗರಿಗೆ ಲಗ್ಗೆ ಇಟ್ಟ ಪ್ರವಾಸಿಗರು

Team Udayavani, Jan 16, 2018, 11:34 AM IST

ಬೀದರ: ಅಂತಾರಾಷ್ಟ್ರೀಯ ಮಟ್ಟದಲ್ಲಿ ಗುರುತಿಸಿಕೊಂಡಿರುವ ಪಾರಂಪರಿಕ ಜಿಲ್ಲೆ ಬೀದರಗೆ ಪ್ರವಾಸಿಗರು ಬರುವ ಸಂಖ್ಯೆ ಕೆಲ ವರ್ಷಗಳಿಂದ ಹೆಚ್ಚುತ್ತಿದೆ. ಸಧ್ಯ ಸಂಕ್ರಾಂತಿ ಹಬ್ಬ ಸೇರಿ ಸಾಲು ಸಾಲು ರಜೆ ಬಂದಿರುವುದರಿಂದ ಸ್ಮಾರಕಗಳ ಖಣಿ ಖ್ಯಾತಿಯ ಬೀದರನಲ್ಲಿ ಪ್ರವಾಸಿಗರ ಸಂಖ್ಯೆ ದುಪ್ಪಟ್ಟಾಗಿದೆ. ಜನರು ಐತಿಹಾಸಿಕ ತಾಣಗಳಲ್ಲಿ ಸುತ್ತಾಡಿ ರಜೆಯ ಮಜಾ ಪಡೆಯುತ್ತಿದ್ದಾರೆ.

ಸೋಮವಾರ ಸಂಕ್ರಾಂತಿ ಹಬ್ಬದ ಹಿನ್ನೆಲೆಯಲ್ಲಿ ಸರ್ಕಾರಿ ರಜೆ ಜತೆಗೆ ಶನಿವಾರ, ರವಿವಾರವೂ ರಜೆ ಒಟ್ಟೊಟ್ಟಿಗೆ 3 ದಿನ ರಜೆ ಸಿಕ್ಕಿವೆ. ಹಾಗಾಗಿ ನೌಕರರು ತಮ್ಮ ಕುಟುಂಬ ಸಮೇತ ಪ್ರವಾಸ ಕೈಗೊಂಡಿದ್ದಾರೆ. ಇದರಿಂದ ಬೀದರ ನಗರ ಮಾತ್ರವಲ್ಲ ಜಿಲ್ಲೆಯ ಪ್ರವಾಸಿ ತಾಣಗಳು ಪ್ರವಾಸಿಗರಿಂದ ತುಂಬಿ ತುಳುಕುತ್ತಿವೆ. ಮಸೀದಿ- ಚರ್ಚ್‌ನಲ್ಲಿ ಹಬ್ಬದ ಸಂಭ್ರಮವಿದ್ದರೆ ಐತಿಹಾಸಿಕ ತಾಣಗಳಲ್ಲಿ ನಿಸರ್ಗದ ವೈಭವ. ಹಾಗಾಗಿ ಜನಜಂಗುಳಿ ಸೇರಿದೆ. ಈ ಬಾರಿ ಹೊರ ರಾಜ್ಯದ ಪ್ರವಾಸಿಗರು ಅಧಿಕವಾಗಿ ಭೇಟಿ ನೀಡಿರುವುದು ವಿಶೇಷವಾಗಿದೆ.

 ತಾಣಗಳಿಗೆ ಪ್ರವಾಸಿಗರ ಲಗ್ಗೆ: ನಗರದ ಐತಿಹಾಸಿಕ ಬಹುಮನಿ ಕೋಟೆ, ಗವಾನ ಮದರಸಾ, ಗುರುನಾನಕ ದೇವಸ್ಥಾನ, ನರಸಿಂಹ ಝರಣಾ, ಅಷ್ಟೂರಿನ ಗುಂಬಜ್‌ಗಳು, ಬಸವಕಲ್ಯಾಣದ ಬಸವಾದಿ ಶರಣರ ಸ್ಮಾರಕಗಳು, ನಾರಾಯಣಪೂರ ಮಂದಿರ, ಉಮಾಪೂರ ಮತ್ತು ಜಲಸಂಗಿ ದೇವಸ್ಥಾನ ಸೇರಿದಂತೆ ಅನೇಕ ಸ್ಮಾರಕಗಳನ್ನು ಹೊಂದಿರುವ ಬೀದರ ಜಿಲ್ಲೆಗೆ ಪ್ರವಾಸಿಗರು ಲಗ್ಗೆ ಇಟ್ಟಿದ್ದಾರೆ. ಒತ್ತಡದ ಬದುಕಿನಿಂದ ಬೇಸತ್ತವರು ತಮ್ಮ ಕುಟುಂಬ ಸಮೇತ ಕಣ್ಮನ ಸೆಳೆಯುವ ತಾಣಗಳನ್ನು ವೀಕ್ಷಿಸಿ ಆನಂದಿಸುತ್ತಿದ್ದಾರೆ.

ಪ್ರವಾಸಿ ತಾಣಗಳಿಗೆ ಸಾಮಾನ್ಯ ದಿನಗಳಲ್ಲಿ 500ರಿಂದ 600ರ ವರೆಗೆ ಪ್ರವಾಸಿಗರು ಬರುತ್ತಿದ್ದರು. ಆದರೆ, ಸತತ ನಾಲ್ಕು ದಿನಗಳ ರಜೆ ಹಿನ್ನೆಲೆಯಲ್ಲಿ ಪ್ರವಾಸಿಗರ ಸಂಖ್ಯೆ 2 ಸಾವಿರದ ವಗೆರೆ ಏರಿಕೆಯಾಗಿತ್ತು. ಕಳೆದು ಐದು ವರ್ಷಗಳಿಗೆ ಹೋಲಿಸಿದರೆ ಪ್ರವಾಸಿಗರ ಸಂಖ್ಯೆ ಅತ್ಯಧಿಕ ಎನ್ನಬಹುದು. ಸಾಲು ರಜೆಗಳಿದ್ದರೆ ಈ ಸಂಖ್ಯೆ 1ಸಾವಿರದ ವರೆಗೆ ಇರುತಿತ್ತು. ಬಸವಕಲ್ಯಾಣ ಹೊರತುಪಡಿಸಿದರೆ ಉಳಿದ ತಾಣಗಳೆಲ್ಲವೂ ಒಂದಕ್ಕೊಂದು ಸಮೀಪದಲ್ಲಿಯೇ ಇರುವುದು ಯಾತ್ರಿಗಳಿಗೆ ಹೆಚ್ಚು ಅನುಕೂಲ.

ಐತಿಹಾಸಿಕ ಕೋಟೆ: ಪಾರಂಪರಿಕ ಬಹುಮನಿ ಕೋಟೆ, ಜಲಸಂಗಿ, ನಾರಾಯಣಪೂರ ದೇವಸ್ಥಾನಗಳಿಗೆ ರಜೆಯ ಪ್ರತಿ ದಿನ ಸಾವಿರಾರು ಪ್ರಯಾಣಿಕರು ಬಂದು ದಶ್ಯ ವೈಭವ ಕಣ್ತುಂಬಿಸಿಕೊಂಡರು. ರಾಜ್ಯದ ವಿವಿಧ ಜಿಲ್ಲೆ ಸೇರಿದಂತೆ ಮಹಾರಾಷ್ಟ್ರ, ತೆಲಂಗಾಣ, ಪಂಜಾಬ್‌ ಮತ್ತಿತರ ಹೊರ ರಾಜ್ಯಗಳ ಯಾತ್ರಿಗಳು ಐತಿಹಾಸಿಕ ಕೋಟೆಯ ವಿವಿಧ ಸ್ಥಳ ಮತ್ತು ಸ್ಮಾರಕಗಳನ್ನು ವೀಕ್ಷಿಸಿದರು. ಗೈಡ್‌ಗಳ ಕೊರತೆ ಜನರಲ್ಲಿ ನಿರಾಸೆಯನ್ನುಂಟು ಮಾಡಿತು. ವಸತಿ ಗೃಹ, ಹೊಟೇಲ್‌ ಗಳು ತುಂಬಿರುತ್ತಿವೆ

ಬೀದರ ಕೋಟೆ ಆಕರ್ಷಣೀಯ ಹೈದ್ರಾಬಾದನ ಗೋಲ್ಕೊಂಡ ಕೋಟೆ ಸೇರಿದಂತೆ ಪ್ರವಾಸಿ ತಾಣಗಳನ್ನು ಸಾಕಷ್ಟು ಬಾರಿ ವೀಕ್ಷಿಸಿದ್ದೇವೆ. ಬೀದರನ ಕೋಟೆ ಸಹ ಹೈದ್ರಾಬಾದನಂತೆ ನೋಡುಗರನ್ನು ಆಕರ್ಷಿಸುತ್ತಿದೆ. ಸರಿಯಾಗಿ ಪೋಷಣೆ ಮಾಡಿರುವುದೂ ಖುಷಿ ತಂದಿದೆ. ಜಿಲ್ಲೆಯ ವಿವಿಧ ತಾಣಗಳನ್ನು ವೀಕ್ಷಿಸುತ್ತ ಬಂದಿದ್ದು, ಮನಸ್ಸಿಗೆ ಆನಂದ ತಂದಿದೆ.
 ವಿನಾಯಕ, ಪ್ರವಾಸಿ ಹೈದ್ರಾದರಾಬಾದ

ನೋಡಬೇಕೆನ್ನುವ ತಾಣಗಳು ಸಂಕ್ರಾಂತಿ ಹಬ್ಬದಿಂದಾಗಿ ಸಾಲು ಸಾಲು ರಜೆ ಸಿಕ್ಕಿವೆ. ಹಾಗಾಗಿ ಮಕ್ಕಳೊಂದಿಗೆ ಸಮಯ ಕಳೆಯಲು ಇದೊಂದು ಅವಕಾಶ. ಐತಿಹಾಸಿಕ ಕೋಟೆಯನ್ನು ಕಣ್ತುಂಬಿಕೊಳ್ಳಲು ಗೆಳೆಯರ ತಂಡದೊಂದಿಗೆ ಬಂದಿರುವೆ. ಇಲ್ಲಿನ ಸ್ಮಾರಕಗಳನ್ನು ಎಷ್ಟು ಬಾರಿ ನೋಡಿದರೂ ನೋಡಬೇಕೆನ್ನಿಸುತ್ತದೆ. 
 ಬಸವರಾಜ, ಪ್ರವಾಸಿ ಔರಾದ

„ಶಶಿಕಾಂತ ಬಂಬುಳಗೆ

ಶ್ರೀ ಅಷ್ಠ ಲಕ್ಷ್ಮೀ ಜೋತಿಷ್ಯ ಮಂದಿರ,
ಉದ್ಯೋಗ, ಮದುವೆ ವಿಳಂಬ, ಸತಿ-ಪತಿ ಕಲಹ, ಶತ್ರುಪೀಡೆ, ಅತ್ತೆ-ಸೊಸೆ ಕಲಹ, ವಶೀಕರಣ, ವ್ಯವಹಾರದಲ್ಲಿ ನಷ್ಟ, ಇನ್ನೂ ನಿಮ್ಮಸಮಸ್ಯೆ ಯಾವುದೇ ಇರಲಿ, ಎಷ್ಟೇ ಕಠಿಣವಾಗಿರಲಿ ಶಾಶ್ವತ ಪರಿಹಾರ ಶತಃ ಶಿದ್ದ , ನಿಮ್ಮ ಯಾವುದೇ ಇಷ್ಟಾರ್ಥ ಕಾರ್ಯಗಳಿದ್ದರೂ ಕೇವಲ 5 ದಿನಗಳಲ್ಲಿ ನೇರವೆರಿಸಿ ಕೋಡುತ್ತಾರೇ. ಇಂದೇ ಭೇಟಿ ನೀಡಿ.
ಶ್ರೀ ಶ್ರೀ ಬಿ ಹೆಚ್ ಆಚಾರ್ಯ ಗೂರುಜೀ
ಜಯನಗರ ಬೆಂಗಳೂರು, ಮೋ- 8884889444

ಈ ವಿಭಾಗದಿಂದ ಇನ್ನಷ್ಟು

ಹೊಸ ಸೇರ್ಪಡೆ