ಉದ್ಯಾನದಲ್ಲಿ ಟೌನ್‌ಹಾಲ್‌ ನಿರ್ಮಾಣ!


Team Udayavani, Mar 13, 2018, 1:11 PM IST

kal.jpg

ಹುಮನಾಬಾದ: ಉದ್ಯಾನಕ್ಕಾಗಿ ಕಾಯ್ದಿರಿಸಿದ ಭೂಮಿಯಲ್ಲಿ ವಿವಿಧ ಸರ್ಕಾರಿ ಯೋಜನೆಗಳ ದೊಡ್ಡ ಪ್ರಮಾಣದ ಕಟ್ಟಡಗಳನ್ನು ನಿರ್ಮಿಸಲು ಮುಂದಾಗಿದ್ದು, ಈ ಮೂಲಕ ಉದ್ಯಾನ ಪರಿಕಲ್ಪನೆಗೆ ಧಕ್ಕೆ ಉಂಟುಮಾಡುವ ಕೆಲಸ ನಡೆಯುತ್ತಿದೆ.

“ನೆಮ್ಮದಿ ಊರು’ ಯೋಜನೆಯಡಿ ಪಟ್ಟಣದ ಉದ್ಯಾನದಲ್ಲಿ ಟೌನ್‌ ಹಾಲ್‌ ನಿರ್ಮಾಣಕ್ಕೆ ಅಧಿಕಾರಿಗಳು ಮುಂದಾಗಿದ್ದು, ಮಾ.10ರಂದು ಶಾಸಕ ರಾಜಶೇಖರ ಪಾಟೀಲ ಅವರು ಶಂಕುಸ್ಥಾಪನೆ ನೆರವೇರಿಸಿದ್ದಾರೆ. ಸುಮಾರು 11 ಸಾವಿರ
ಚದರ ಅಡಿಗೂ ಅಧಿಕ ಪ್ರದೇಶದಲ್ಲಿ ಸುಮಾರು 1.93 ಕೋಟಿ ವೆಚ್ಚದಲ್ಲಿ ಟೌನ್‌ ಹಾಲ್‌ ನಿರ್ಮಾಣ ಕಾರ್ಯ ನಡೆಯಲಿದ್ದು, ಇದರಿಂದ ಉದ್ಯಾನವನ ಪರಿಕಲ್ಪನೆಗೆ ಧಕ್ಕೆಯಾಗಲಿದೆ ಎಂಬುದು ಸಾರ್ವಜನನಿಕರ ಮಾತು.

ಈ ಹಿಂದೆ ಉದ್ಯಾನದಲ್ಲಿ ಸಮುದಾಯ ಭವನವೊಂದು ನಿರ್ಮಾಣಕ್ಕೆ ಮುಂದಾದ ಸಂದರ್ಭದಲ್ಲಿ ಅಂದಿನ ಜಿಲ್ಲಾಧಿಕಾರಿ ಶಮೀರ್‌ ಶುಕ್ಲಾ ಖುದ್ದು ಭೇಟಿ ನೀಡಿ ಉದ್ಯಾನದಲ್ಲಿ ಯಾವುದೇ ಕಟ್ಟಡ ನಿರ್ಮಿಸದಂತೆ ಅಧಿಕಾರಿಗಳಿಗೆ ಸೂಚಿಸಿದ್ದನ್ನು ಇಲ್ಲಿ ಸ್ಮರಿಸಬಹುದಾಗಿದೆ. ಸುಮಾರು 7 ಎರಕೆ ಪ್ರದೇಶದ ಉದ್ಯಾನವದಲ್ಲಿ ಈಗಾಗಲೇ ಅಂಗನವಾಡಿ ಕಟ್ಟಡ, ಶುದ್ಧ ಕುಡಿಯುವ ನೀರಿನ ಘಟಕಗಳು ಕಾರ್ಯ ನಿರ್ವಹಿಸುತ್ತಿವೆ. ಅಲ್ಲದೇ ಉದ್ಯಾನದ ಸುತ್ತಲಿನ ಸುತ್ತುಗೋಡೆ ಒಡೆದು ಸಂಚರಿಸುವ ರಸ್ತೆಯನ್ನಾಗಿ ನಿರ್ಮಿಸಿಕೊಂಡಿದ್ದರೂ ಅಧಿಕಾರಿಗಳು ಆ ಕಡಗೆ ಗಮನ ಹರಿಸುತ್ತಿಲ್ಲ.

ಉದ್ಯಾನ ಪ್ರತಿಯೊಂದು ನಗರ-ಪಟ್ಟಣಗಳಲ್ಲಿರಬೇಕಾದ ಮೂಲ ಸೌಲಭ್ಯಗಳಲ್ಲಿ ಒಂದು. ಉದ್ಯಾನಗಳು ಮಕ್ಕಳ ಮತ್ತು ವಿವಿಧ ವಯೋಮಾನದವರ ನೆಚ್ಚಿನ ಸ್ಥಳವೂ ಹೌದು. ಪಾರ್ಕ್‌ಗಳು ಮಕ್ಕಳಿಗೆ ಒಂದಷ್ಟು ಆಟವಾಡುವ ತಾಣಗಳಾದರೆ, ಹಿರಿಯರಿಗೆ ಸುಖ-ದುಃಖ ಹಂಚಿಕೊಳ್ಳಲು, ಹರಟೆ ಹೊಡೆಯುವ ಸ್ಥಳ. ಇನ್ನು ಕೆಲವರಿಗೆ ಯೋಗ, ವ್ಯಾಯಾಮ, ವಿಹಾರ ಮಾಡಲು ಅನುಕೂಲ ಸ್ಥಳ. ಹೀಗಾಗಿ ಉದ್ಯಾನ ಜನರ ನಿತ್ಯ ಜೀವನದ ಅವಿಭಾಜ್ಯ ಅಂಗವಾಗಿದೆ. ಪಟ್ಟಣದ ಸೌಂದರ್ಯಕ್ಕೂ ಉದ್ಯಾನಗಳ ಅಗತ್ಯ ಹೆಚ್ಚಿದ್ದು, ಉದ್ಯಾನದಲ್ಲಿ ಟೌನ್‌ಹಾಲ್‌ ನಿರ್ಮಾಣಗೊಂಡರೆ ಜನರ ಶಾಂತಿಗೆ ಧಕ್ಕೆ ಬರುತ್ತದೆ. ಅಲ್ಲದೇ ವಿವಿಧ ಸಮಸ್ಯೆಗಳು ಕೂಡ ಎದುರಾಗುವ ಸಾಧ್ಯತೆಗಳು ಇವೆ. ಕಾರಣ ಚುನಾಯಿತ ಜನಪ್ರತಿನಿಧಿಗಳು ಹಾಗೂ ಅಧಿಕಾರಿಗಳು ಪಾಳುಬಿದ್ದ ಉದ್ಯಾನ ಅಭಿವೃದ್ಧಿಗೆ ಹೆಚ್ಚು ಆದ್ಯತೆ ನೀಡಬೇಕೆ ಹೊರತು ಅಲ್ಲಿ ಕಟ್ಟಡಗಳನ್ನು ನಿರ್ಮಿಸಕೂಡದು ಎಂಬುದು ಪರಿಸರವಾದಿಗಳ ಮಾತು.

ಈಡೇರದ ಭರವಸೆ: ಬಹು ವರ್ಷಗಳಿಂದ ಪಟ್ಟಣದಲ್ಲಿ ಉತ್ತಮ ಉದ್ಯಾನವೊಂದು ನಿರ್ಮಾಣಗೊಳ್ಳುವುದು. ಈ ಮೂಲಕ ಸ್ವತ್ಛಂದವಾಗಿ ವಿಹರಿಸಿ ಪರಿಸರ ಸವಿಯುವ ಭಾಗ್ಯ ಕಲ್ಪಿಸುವುದಾಗಿ ಹೇಳಿದ ಜನ ಪ್ರತಿನಿಧಿಗಳು ಹಾಗೂ ಅಧಿಕಾರಿಗಳ ಭರವಸೆ ಇಂದಿಗೂ ಈಡೇರಿಲ್ಲ. ಐವತ್ತು ಸಾವಿರಕ್ಕೂ ಅಧಿಕ ಜನಸಂಖ್ಯೆ ಇರುವ ಪಟ್ಟಣದಲ್ಲಿ ಸಾರ್ವಜನಿಕರು ವಿಹರಿಸುವಂತಹ ಉದ್ಯಾನವನ ಕಾಣಲು ಕೂಡ ಸಿಗದ ಸ್ಥಿತಿ ಇದೆ.

ಪಟ್ಟಣದ ಮಧ್ಯಭಾಗದಲ್ಲಿಯೇ ದೊಡ್ಡ ಪ್ರದೇಶದಲ್ಲಿ ಉದ್ಯಾನದ ಭೂಮಿಯಿದೆ. ಒಂದು ದಶಕಕ್ಕೂ ಅಧಿಕ ಕಾಲದಿಂದ ಸೂಕ್ತ ನಿರ್ವಹಣೆ ಇಲ್ಲದೆ ಇಂದು ಉದ್ಯಾನದಲ್ಲಿ ಬರಿ ಒಣಗಿದ ಗಿಡ-ಮರಗಳು ಕಾಣುತ್ತಿವೆ. ಮಕ್ಕಳ ಆಟಿಕೆಗಳು
ಮುರಿದು ಚಲ್ಲಾಪಿಲಿಯಾಗಿದ್ದು, ಈ ಉದ್ಯಾನಕ್ಕಾಗಿ ಅಂದಾಜು ಕೋಟಿಗೂ ಅಧಿಕ ಖರ್ಚು ಮಾಡಲಾಗಿದೆ. ಯಾರೊಬ್ಬರೂ ಉದ್ಯಾನಕ್ಕೆ ಹೊಗಬೇಕೆಂಬ ಮನಸು ಮಾಡದ ಸ್ಥಿತಿ ಇಲ್ಲಿ ನಿರ್ಮಾಣವಾಗಿದೆ ಎಂದು ಅನೇಕ ಕುಟುಂಬಗಳು ಜನಪ್ರತಿನಿಧಿಗಳಿಗೆ ಹಾಗೂ ಅಧಿಕಾರಿಗಳಿಗೆ ಹಿಡಿ ಶಾಪ ಹಾಕುತ್ತಿದ್ದಾರೆ.

ದುರ್ಯೋಧನ ಹೂಗಾರ

ಟಾಪ್ ನ್ಯೂಸ್

2-rain

Rain: ಉಡುಪಿ ಜಿಲ್ಲೆಗೆ ತಂಪೆರೆದ ಮಳೆರಾಯ, ಜಿಲ್ಲಾದ್ಯಂತ ಗುಡುಗು ಸಹಿತ ಧಾರಾಕಾರ ಮಳೆ

1-24-saturday

Daily Horoscope: ಉದ್ಯೋಗ ಸ್ಥಾನದಲ್ಲಿ ನೆಮ್ಮದಿಯ ವಾತಾವರಣ, ಅಕಸ್ಮಾತ್‌ ಧನಪ್ರಾಪ್ತಿ

Heavy Rain; ದುಬಾೖ ಪ್ರಯಾಣ ಬೇಡ: ಸಲಹೆ

Heavy Rain; ದುಬಾೖ ಪ್ರಯಾಣ ಬೇಡ: ಸಲಹೆ

ಇಂದು ಚಿಕ್ಕಬಳ್ಳಾಪುರ, ಬೆಂಗಳೂರಲ್ಲಿ ಮೋದಿ ಗರ್ಜನೆ: ಒಂದೂವರೆ ಲಕ್ಷ ಜನ ಸೇರುವ ನಿರೀಕ್ಷೆ

ಇಂದು ಚಿಕ್ಕಬಳ್ಳಾಪುರ, ಬೆಂಗಳೂರಲ್ಲಿ ಮೋದಿ ಗರ್ಜನೆ: ಒಂದೂವರೆ ಲಕ್ಷ ಜನ ಸೇರುವ ನಿರೀಕ್ಷೆ

voter

Vote ಮಾಡದಿದ್ದರೆ ಬ್ಯಾಂಕ್‌ ಖಾತೆಯಿಂದ 350 ರೂ. ಕಡಿತ?

gold

Gold 10 ಗ್ರಾಂ ಬೆಲೆ 74,100 ರೂ.: ಇದು ನೂತನ ದಾಖಲೆ

1-aqweq

Delhi ತವರಿಗೆ ಮರಳಿದ ಖುಷಿಯಲ್ಲಿ: ಕೋಟ್ಲಾದಲ್ಲಿ ಹೈದರಾಬಾದ್‌ ವಿರುದ್ಧ ಮುಖಾಮುಖಿ


ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು

Minchu

Bidar; ಬಿರುಗಾಳಿ‌ ಸಹಿತ ಭಾರಿ ಮಳೆ :ಸಿಡಿಲು ಬಡಿದು‌ ರೈತ ಸಾವು

Bidar; ನಾಮಪತ್ರ ಸಲ್ಲಿಸಲು ಓಡೋಡಿ ಬಂದ ಖೂಬಾ

Bidar; ನಾಮಪತ್ರ ಸಲ್ಲಿಸಲು ಓಡೋಡಿ ಬಂದ ಖೂಬಾ

Bidar ಬಿಜೆಪಿಯ ಹಿರಿಯ ಮುಖಂಡ, ಮಾಜಿ ಶಾಸಕ ರಮೇಶ ಕುಮಾರ್ ಪಾಂಡೆ ನಿಧನ

Bidar ಬಿಜೆಪಿಯ ಹಿರಿಯ ಮುಖಂಡ, ಮಾಜಿ ಶಾಸಕ ರಮೇಶ ಕುಮಾರ್ ಪಾಂಡೆ ನಿಧನ

UPSC Result: ಬೀದರ್ ನ ಮೊಹಮ್ಮದ್ ಅಸೀಮ್‌ ಮುಜತೇಬಾಗೆ 481ನೇ ರ‍್ಯಾಂಕ್‌

UPSC Result: ಬೀದರ್ ನ ಮೊಹಮ್ಮದ್ ಅಸೀಮ್‌ ಮುಜತೇಬಾಗೆ 481ನೇ ರ‍್ಯಾಂಕ್‌

1-eqwewqeqwe

Bidar; ಬಿಜೆಪಿಗೆ ನಾಗಮಾರಪಳ್ಳಿ ಕುಟುಂಬದ ಬೆಂಬಲ

MUST WATCH

udayavani youtube

‘ಕಸಿ’ ಕಟ್ಟುವ ಸುಲಭ ವಿಧಾನ

udayavani youtube

ಬೇಸಿಗೆಯಲ್ಲಿ ನಮ್ಮನ್ನು ಕಾಡುವ Heat Illnessಏನಿದು ಸಮಸ್ಯೆ ? ಪರಿಹಾರವೇನು ?

udayavani youtube

ದ್ವಾರಕೀಶ್ ನಿಧನಕ್ಕೆ ನಟ ಶಿವರಾಜ್ ಕುಮಾರ್ ಸಂತಾಪ

udayavani youtube

ದೇವೇಗೌಡರಿದ್ದ ವೇದಿಕೆಗೆ ನುಗ್ಗಿದ ಕಾಂಗ್ರೆಸ್‌ ಕಾರ್ಯಕರ್ತೆಯರು

udayavani youtube

ಮಂಗಳೂರಿನಲ್ಲಿ ಪ್ರಧಾನಿ ಶ್ರೀ Narendra Modi ಅವರ ಬೃಹತ್‌ ರೋಡ್‌ ಶೋ

ಹೊಸ ಸೇರ್ಪಡೆ

2-rain

Rain: ಉಡುಪಿ ಜಿಲ್ಲೆಗೆ ತಂಪೆರೆದ ಮಳೆರಾಯ, ಜಿಲ್ಲಾದ್ಯಂತ ಗುಡುಗು ಸಹಿತ ಧಾರಾಕಾರ ಮಳೆ

1-24-saturday

Daily Horoscope: ಉದ್ಯೋಗ ಸ್ಥಾನದಲ್ಲಿ ನೆಮ್ಮದಿಯ ವಾತಾವರಣ, ಅಕಸ್ಮಾತ್‌ ಧನಪ್ರಾಪ್ತಿ

Heavy Rain; ದುಬಾೖ ಪ್ರಯಾಣ ಬೇಡ: ಸಲಹೆ

Heavy Rain; ದುಬಾೖ ಪ್ರಯಾಣ ಬೇಡ: ಸಲಹೆ

1-qweqwqe

Ban in Singapore; ಎವರೆಸ್ಟ್‌ ಮಸಾಲಾದಲ್ಲಿ ಕ್ರಿಮಿನಾಶಕ ಅಂಶ?

ಇಂದು ಚಿಕ್ಕಬಳ್ಳಾಪುರ, ಬೆಂಗಳೂರಲ್ಲಿ ಮೋದಿ ಗರ್ಜನೆ: ಒಂದೂವರೆ ಲಕ್ಷ ಜನ ಸೇರುವ ನಿರೀಕ್ಷೆ

ಇಂದು ಚಿಕ್ಕಬಳ್ಳಾಪುರ, ಬೆಂಗಳೂರಲ್ಲಿ ಮೋದಿ ಗರ್ಜನೆ: ಒಂದೂವರೆ ಲಕ್ಷ ಜನ ಸೇರುವ ನಿರೀಕ್ಷೆ

Thanks for visiting Udayavani

You seem to have an Ad Blocker on.
To continue reading, please turn it off or whitelist Udayavani.