ಸಂಚಾರಿ ನಿಯಮ ಜಾಗೃತಿ-ದಂಡ ವಸೂಲಿ

Team Udayavani, Sep 10, 2019, 2:48 PM IST

ಭಾಲ್ಕಿ: ಪೊಲೀಸ್‌ ಠಾಣೆ ಎದುರಿನ ಸಿಪಿಐ ಬಿ.ಅಮರೇಶ ಮತ್ತು ಪಿಎಸ್‌ಐ ಎಸ್‌.ಎಂ.ಮೇಟಿ ಅವರು ಸಂಚಾರಿ ನಿಯಮಗಳ ಕುರಿತು ಜಾಗೃತಿ ಮೂಡಿಸಿದರು.

ಭಾಲ್ಕಿ: ಪಟ್ಟಣದ ಹಲವು ರಸ್ತೆಗಳಲ್ಲಿ ಸೋಮವಾರ ಪೊಲೀಸ್‌ ಸಿಬ್ಬಂದಿ ವಾಹನ ಸವಾರರಿಗೆ ಜಾಗೃತಿ ಮೂಡಿಸುವುದರೊಂದಿಗೆ ಅನಧಿಕೃತ ವಾಹನವಾಗಿ ಚಲಾಯಿಸುವವರಿಂದ ದಂಡ ವಸೂಲಿ ಮಾಡಿದರು.

ದಂಡ ವಸೂಲಿ ಜಾಗೃತಿ ಕಾರ್ಯಕ್ರಮದಲ್ಲಿ ನಗರ ಪೊಲೀಸ್‌ ಠಾಣೆಯ ಸಿಪಿಐ ಬಿ.ಅಮರೇಶ ಮಾತನಾಡಿ, ಮೋಟಾರು ವಾಹನ ಕಾಯ್ದೆ ತಿದ್ದುಪಡಿ 2019ರಂತೆ ಸಂಚಾರ ನಯಮಗಳನ್ನು ಉಲ್ಲಂಘಿಸುವ ವಾಹನ ಚಾಲಕರಿಗೆ ವಿಧಿಸುವ ದಂಡದ ಮೊತ್ತವನ್ನು ಹೆಚ್ಚಿಸಲಾಗಿದೆ. ಕಾರಣ ವಾಹನ ಚಾಲಕರು ಸಂಚಾರಿ ನಿಯಮ ಪಾಲಿಸಿ, ಹಣ ಉಳಿಸಿ ಮತ್ತು ಜೀವ ರಕ್ಷಿಸಿ ಎಂದು ಹೇಳಿದರು.

ಪಿಎಸ್‌ಐ ಎಸ್‌.ಎಂ.ಮೇಟಿ ಮಾತನಾಡಿ, ಸಂಚಾರಿ ನಿಯಮ ಉಲ್ಲಂಘನೆಯಲ್ಲಿ ಹೆಲ್ಮೆಟ್ ಧರಿಸದೇ ವಾಹನ ಚಾಲನೆ ಮಾಡಿದರೆ ಮೊದಲು 100 ದಂಡವಿತ್ತು, ಈಗ 1000 ರೂ. ಮಾಡಲಾಗಿದೆ. ಹಾಗೆಯೇ ವಾಹನ ಚಾಲನೆ ಮಾಡುವಾಗ ಮೊಬೈಲ್ ಬಳಕೆ ಮಾಡಿದರೆ ಮೊದಲ ಅಪರಾಧಕ್ಕೆ 5000 ರೂ. ಮತ್ತು ಎರಡನೇ ಅಪರಾಧಕ್ಕೆ 10,000 ರೂ. ದಂಡ ವಸೂಲಿ ಮಾಡಲಾಗುವುದು. ಅದರಂತೆ ಡ್ರೈವಿಂಗ್‌ ಲೈಸನ್ಸ್‌ ಇಲ್ಲದೇ ನಡೆಸಿದರೆ 2000 ಮತ್ತು 4000 ರೂ., ದ್ವಿಚಕ್ರ ವಾಹನದಲ್ಲಿ ಮೂರುಜನ ಪ್ರಯಾಣಿಸಿದರೆ 1000 ರೂ. ಮದ್ಯಪಾನ ಮಾಡಿ ವಾಹನ ಚಾಲನೆ ಮಾಡಿದರೆ 10 ಸಾವಿರ ರೂ., ನಿಷೇಧಿತ ಸ್ಥಳದಲ್ಲಿ ವಾಹನ ನಿಲ್ಲಿಸಿದರೆ 1000 ರೂ., ಸೀಟ್ ಬೆಲ್r ಧರಿಸದೇ ವಾಹನ ಚಾಲನೆ ಮಾಡಿದರೆ 1000 ರೂ., ಅತಿವೇಗದ ಚಾಲನೆಗೆ 1000 ಮತ್ತು 2000 ರೂ., ಸಿಗ್ನಲ್ ಜಂಪ್‌ ಮಾಡಿದರೆ 1000ರೂ., ಅಪ್ರಾಪ್ತ ವಾಹನ ಚಾಲನೆಗೆ 25 ಸಾವಿರ ರೂ. ದಂಡ ಹಾಗು ಪೋಷಕರಿಗೆ 3 ವರ್ಷ ಜೈಲು ಮತ್ತು 12 ತಿಂಗಳು ಆರ್‌ಸಿ ರದ್ದು ಮಾಡಲಾಗುವುದು. ಸೈಡ್‌ ಮಿರರ್‌ ಇಲ್ಲದ ವಾಹನ ಚಾಲನೆಗೆ 500 ರೂ., ತುರ್ತು ವಾಹನಗಳಿಗೆ ದಾರಿಬಿಡದಿದ್ದರೆ 10 ಸಾವಿರ ರೂ., ಅಜಾಗರೂಕತೆಯಿಂದ ವಾಹನ ಚಲಾಯಿಸಿದರೆ 5000 ರೂ. ದಂಡ ವಸೂಲಿ ಮಾಡಲಾಗುವುದು. ಹೀಗಾಗಿ ಎಲ್ಲರೂ ಈ ಎಲ್ಲಾ ಕಾನೂನುಗಳನ್ನು ತಪ್ಪದೇ ಪಾಲಿಸಬೇಕು ಎಂದು ಸಲಹೆ ನೀಡಿದರು.

Disclaimer:The views expressed in comments section published on Udayavani.com are those of comment writers alone. They do not represent the views or opinions of Udayavani.com, its staff or The Manipal Group, or any entity associated with The Manipal Group. Udayavani.com reserves rights to remove a comment or all the comments any time.

To report any comment you can email us at udayavani.response@manipalgroup.info. We will review the request and delete the comments.


ಈ ವಿಭಾಗದಿಂದ ಇನ್ನಷ್ಟು

  • ಬೀದರ: ಶುಕ್ಲತೀರ್ಥ ಝರಿ ಸೇರಿದಂತೆ ಇಲ್ಲಿಯ ಮಡಿವಾಳೇಶ್ವರ ಮಂದಿರದ ಸಮಗ್ರ ಅಭಿವೃದ್ಧಿಗೆ ಜಿಲ್ಲಾಡಳಿತ ಬದ್ಧವಾಗಿದೆ ಎಂದು ಅಪರ ಜಿಲ್ಲಾಧಿಕಾರಿ ರುದ್ರೇಶ ಘಾಳಿ...

  • •ಜಯರಾಜ ದಾಬಶೆಟ್ಟಿ ಭಾಲ್ಕಿ: ನಿಟ್ಟೂರ(ಬಿ) ಹೋಬಳಿ ಗ್ರಾಪಂ ವ್ಯಾಪ್ತಿಗೆ ಒಳಪಟ್ಟ ಹಜನಾಳ ಗ್ರಾಮದ ಸಂಪರ್ಕ ರಸ್ತೆ ತೀರಾ ಹದಗೆಟ್ಟಿದ್ದು, ಸಂಚಾರಕ್ಕೆ ಸಂಚಕಾರ...

  • •ರವೀಂದ್ರ ಮುಕ್ತೇದಾರ ಔರಾದ: ಔರಾದ ಪಟ್ಟಣ ತಾಲೂಕು ಕೇಂದ್ರವಾಗಿ ದಶಕಗಳು ಕಳೆದರೂ ತಾಲೂಕು ಕೇಂದ್ರದಲ್ಲಿ ಸಣ್ಣ ನೀರಾವರಿ ಇಲಾಖೆಯ ಕಚೇರಿ ಇಲ್ಲದೇ ತಾಲೂಕಿನ ಜನರು...

  • ಬೀದರ: ಚಿಕ್ಕಪೇಟ್‌ನಲ್ಲಿ ಶುಕ್ರವಾರ ಮೊಹರಂ ಹಬ್ಬ ನಿಮಿತ್ತ ಪೀರ್‌ಗಳ ಮೆರವಣಿಗೆ ನಡೆಯಿತು. ಗ್ರಾಮದ ಎಲ್ಲ ಸಮುದಾಯದ ಜನರು ಕಾರ್ಯಕ್ರಮದಲ್ಲಿ ಭಾಗವಹಿಸಿದ್ದರು....

  • ಬಸವಕಲ್ಯಾಣ: ವಿಕ್ರಮ ವಿಸಾಜಿ ಅವರು ಭಾಲ್ಕಿ ಮತ್ತು ಕಲ್ಯಾಣ ನೆಲದ ಅನನ್ಯ ಪ್ರತಿಭೆ. ಅವರ ಬರಹಗಳು ಅಕಾಡೆಮಿಕ್‌ ಆಗಿ ಮತ್ತು ಸಾಮಾನ್ಯರಿಗಾಗಿ ಅತ್ಯಂತ ಆಪ್ತವಾಗಿವೆ....

ಹೊಸ ಸೇರ್ಪಡೆ