ಬೀದರ್ ನಲ್ಲಿ ಹೆಚ್ಚುತ್ತಿದೆ ತಬ್ಲಿಘಿ ಕಂಟಕ: ಮತ್ತೆರಡು ಸೋಂಕು ಪ್ರಕರಣ ಪತ್ತೆ
Team Udayavani, May 11, 2020, 12:37 PM IST
ಬೀದರ್: ಗಡಿ ಜಿಲ್ಲೆ ಬೀದರನಲ್ಲಿ ದೆಹಲಿಯ ತಬ್ಲಿಘಿ ಕಂಟಕ ಹೆಚ್ಚುತ್ತಿದ್ದು, ಸೋಮವಾರ ಮತ್ತೆ ಎರಡು ಕೋವಿಡ್-19 ಪಾಸಿಟಿವ್ ಪ್ರಕರಣಗಳು ದೃಢಪಟ್ಟಿವೆ. ಇದರಿಂದ ಜಿಲ್ಲೆಯಲ್ಲಿ ಸೋಂಕಿತರ ಸಂಖ್ಯೆ ಈಗ 28 ಕ್ಕೆ ಏರಿಕೆಯಾಗಿದೆ.
ರಾಜ್ಯ ಆರೋಗ್ಯ ಇಲಾಖೆ ಮಧ್ಯಾಹ್ನದ ಹೆಲ್ತ್ ಬುಲೇಟಿನ್ ಬಿಡುಗಡೆ ಮಾಡಿದೆ. 50 ವರ್ಷದ 857 ಸಂಖ್ಯೆಯ ರೋಗಿ ಮತ್ತು 27 ವರ್ಷದ 858 ಸಂಖ್ಯೆಯ ರೋಗಿಯಲ್ಲಿ ಕೋವಿಡ್-19 ಸೋಂಕು ಇರುವುದು ದೃಢಪಡಿಸಿದೆ. ಈ ಇಬ್ಬರು ಸೋಂಕಿತರು ರೋಗಿ ಸಂಖ್ಯೆ 644ರ ಸಂಪರ್ಕಕ್ಕೆ ಬಂದಿದ್ದು, ಈ ಸೋಂಕಿತ ವ್ಯಕ್ತಿ ದೆಹಲಿಯ ಜಮಾತ್ ಗೆ ಹೋಗಿ ಬಂದಿದ್ದಾನೆ.
ಈ ಇಬ್ಬರು ಸೋಂಕಿತರು ಕೋವಿಡ್ ಆಸ್ಪತ್ರೆ ಡಿ ಗ್ರೂಪ್ ಮಹಿಳಾ ನೌಕರನ ಪತಿ ಮತ್ತು ಮಗ ಆಗಿದ್ದಾರೆ ಎಂದೆನ್ನಲಾಗಿದೆ.
ಬೀದರ ಜಿಲ್ಲೆಯಲ್ಲಿ ಈಗ ಒಟ್ಟಾರೆ ಪಾಸಿಟಿವ್ ಸಂಖ್ಯೆ 28 ಆಗಿದ್ದು, ಅದರಲ್ಲಿ 14 ಜನರು ಗುಣಮುಖರಾಗಿ ಆಸ್ಪತ್ರೆಯಿಂದ ಡಿಸ್ಚಾರ್ಜ್ ಆಗಿದ್ದಾರೆ. ಇನ್ನು 13 ಸಕ್ರೀಯ ಪ್ರಕರಣಗಳಾಗಿವೆ.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
B.S.Yediyurappa: ಶಾಸಕ ಪ್ರಭು ಚವ್ಹಾಣ ಹೆಸರು ಹೇಳುತ್ತಿದ್ದಂತೆ ಬಿಎಸ್ವೈ ಗರಂ
BJP; ಖೂಬಾ ಮತ್ತೊಮ್ಮೆ ಸಚಿವರಾಗ್ತಾರೆ : ಔರಾದ್ ನಲ್ಲಿ ಯಡಿಯೂರಪ್ಪ ಘೋಷಣೆ
Bidar; ನೇಹಾ ಪ್ರಕರಣದಲ್ಲಿ ಬಿಜೆಪಿ ರಾಜಕೀಯ ಮಾಡುವುದು ಸರಿಯಲ್ಲ: ಸಿಎಂ ಸಿದ್ಧರಾಮಯ್ಯ
Lok Sabha Election: ಸೀನಿಯರ್ ಖೂಬಾಗೆ ಜ್ಯೂನಿಯರ್ ಖಂಡ್ರೆ ಸವಾಲು
ನೀತಿ ಸಂಹಿತೆ ನಡುವೆಯೂ ರಾಜ್ಯಕ್ಕೆ ನೆರವು ಎನ್ನುವ ಬಿಜೆಪಿಗೆ ನಾಚಿಕೆ ಇಲ್ಲವೇ? – ಖಂಡ್ರೆ