ಯುಜಿಡಿ ಕಾಮಗಾರಿ ತನಿಖೆ ನಡೆಯುತ್ತಾ?
ಕಾಮಗಾರಿಯನ್ನು ಪುರಸಭೆ ಅಧಿಕಾರಿಗಳು ಹಸ್ತಾಂತರಿಸಿಕೊಂಡಿಲ್ಲ
Team Udayavani, Mar 1, 2021, 6:24 PM IST
ಹುಮನಾಬಾದ: ಕರ್ನಾಟಕ ಪೌರ ಸುಧಾರಣಾ ಯೋಜನೆಯಡಿ ಹುಮನಾಬಾದ ಪಟ್ಟಣದಲ್ಲಿ ಬಹುಕೋಟಿ ವೆಚ್ಚದಲ್ಲಿ ಅನುಷ್ಠಾನಗೊಂಡಿರುವ ಒಳಚರಂಡಿ ವ್ಯವಸ್ಥೆ ಕಾಮಗಾರಿ(ಯುಜಿಡಿ)ಗೆ ಸಂಬಂಧಿ ಸಿದಂತೆ ಸಮಗ್ರ ದಾಖಲೆಗಳು ಹಾಗೂ ಯೋಜನೆಯ ಪೂರ್ಣ ಮಾಹಿತಿ ಸಲ್ಲಿಸುವಂತೆ ಜಿಲ್ಲಾಡಳಿತ ತಾಲೂಕು ಆಡಳಿತಕ್ಕೆ ಸೂಚಿಸಿದೆ.
ಯುಜಿಡಿ ಕಾಮಗಾರಿ ಕುರಿತು “ಉದಯವಾಣಿ’ ವಿಶೇಷ ವರದಿ ಪ್ರಕಟಗೊಂಡ ಹಿನ್ನೆಲೆಯಲ್ಲಿ ಇತ್ತೀಚೆಗೆ ಅಧಿಕಾರಿಗಳ ಜತೆಗೆ ಜಿಲ್ಲಾಧಿಕಾರಿಗಳು ವಿಡಿಯೋ ಕಾನ್ಫ್ ರೆನ್ಸ್ ನಡೆಸಿದ್ದು, ಆ ಸಭೆಯಲ್ಲಿ ಹುಮನಾಬಾದ ಪಟ್ಟಣದಲ್ಲಿ ನಡೆದ ಯುಜಿಡಿ ಕಾಮಗಾರಿ ಕುರಿತು ಮಾಹಿತಿ ಕೇಳಿದ್ದಾರೆಂದು ಅಧಿಕಾರಿಗಳು ಮಾಹಿತಿ ನೀಡಿದ್ದಾರೆ. ಅಲ್ಲದೆ ಈ ಕುರಿತು ತಹಶೀಲ್ದಾರ್ ನಾಗಯ್ನಾ ಹಿರೇಮಠ ಅವರು ಖುದ್ದು ವಿವಿಧೆಡೆ ಭೇಟಿ ನೀಡಿ ಮಾಹಿತಿ ಸಲ್ಲಿಸುವಂತೆ ತಿಳಿಸಿದ್ದಾರೆ.
ಅಲ್ಲದೆ ಕಾಮಗಾರಿಗೆ ಸಂಬಂಧಿಸಿದಂತೆ ಪುರಸಭೆ ಮುಖ್ಯಾಧಿಕಾರಿಗೆ ಪತ್ರ ಬರೆದು ಸಂಬಂಧಿಸಿದ ಅ ಧಿಕಾರಿಗಳು ಹಾಗೂ ಗುತ್ತಿಗೆದಾರರಿಗೆ ನೋಟಿಸ್ ನೀಡಿ ದಾಖಲೆಗಳು ತರಿಸಿಕೊಳ್ಳುವಂತೆ ಸೂಚಿಸಿದ್ದಾರೆಂದು ಅಧಿ ಕಾರಿಗಳು ಮಾಹಿತಿ ನೀಡಿದ್ದಾರೆ.
ಇಷ್ಟಕ್ಕೆಲ್ಲ ಕಾರಣ ಏನು?: 2013ರಿಂದ ಪಟ್ಟಣದ ವಿವಿಧ ಬಡಾವಣೆಯಲ್ಲಿ ಒಳಚರಂಡಿ (ಯುಜಿಡಿ) ಕಾಮಗಾರಿ ಮಾಡಲಾಗಿದೆ. ಸುಮಾರು 28 ಕೋಟಿ ರೂ.ಗೂ ಅ ಧಿಕ ಮೊತ್ತದ ಕಾಮಗಾರಿಗೆ ಸಂಬಂಧಿಸಿದ ದಾಖಲೆಗಳು ಪುರಸಭೆಯಲ್ಲಿ ಲಭ್ಯವಾಗುತ್ತಿಲ್ಲ. ಗುತ್ತಿಗೆ ಪಡೆದ ಕಂಪನಿಯವರು ನೇರವಾಗಿ ಕಾಮಗಾರಿ ವಿವರನ್ನು ಕರ್ನಾಟಕ ನಗರ ಮೂಲಸೌಕರ್ಯ ಅಭಿವೃದ್ಧಿ ಮತ್ತು ಹಣಕಾಸು ನಿಗಮ ನಿಯಮಿತ (ಕೆಯುಐಡಿಎಫ್‌ಸಿ) ಸಲ್ಲಿಸಿ ಪೂರ್ಣಗೊಂಡ ಪ್ರಮಾಣ ಪತ್ರ ಪಡೆದಿದ್ದಾರೆಂದು ಅಧಿಕಾರಿಗಳೇ ಹೇಳುತ್ತಿದ್ದಾರೆ.
ಈ ಮಧ್ಯೆ ಪುರಸಭೆ ಮುಖ್ಯಾಧಿಕಾರಿ ಶಂಭುಲಿಂಗ ದೇಸಾಯಿ ಅವರು 2019ರಲ್ಲಿ ವಿವಿಧಡೆ ಭೇಟಿ ನೀಡಿ ಕಾಮಗಾರಿ ಕುರಿತು ಪರಿಶೀಲನೆ ನಡೆಸಿದ ಚಿತ್ರಗಳು ದುರ್ಬಳಕೆ ಮಾಡಿಕೊಂಡು ಕಾಮಗಾರಿ ಪೂರ್ಣಗೊಂಡ ವಿವರಕ್ಕೆ ಲಗತ್ತಿಸಿದ್ದಾರೆಂದು ಆರೋಪಿಸಿದ್ದಾರೆ. ಅಲ್ಲದೆ ಈ ಕುರಿತು ಮುಖ್ಯಾಧಿಕಾರಿ ಮೇಲಧಿಕಾರಿಗಳಿಗೆ ಪತ್ರ ಬರೆದಿರುವುದು ಇಲ್ಲಿ ಸ್ಮರಿಸಬಹುದಾಗಿದೆ.
ಹಸ್ತಾಂತರಗೊಂಡಿಲ್ಲ: ಗುತ್ತಿಗೆದಾರರ ಪ್ರಕಾರ 2019ರಲ್ಲಿ ಕಾಮಗಾರಿ ಪೂರ್ಣಗೊಂಡಿದ್ದು, ಒಂದು ವರ್ಷದ ದುರಸ್ತಿ ಅವಧಿ ಕೂಡ ಮುಗಿದಿದೆ ಎಂದು ದಾಖಲೆಗಳ ಪ್ರಕಾರ ತಿಳಿದು ಬಂದಿದೆ. ಈವರೆಗೂ ಪೂರ್ಣಗೊಂಡ ಕಾಮಗಾರಿ ಬಗ್ಗೆ ಯಾವುದೇ ದಾಖಲೆಗಳು ಗುತ್ತಿಗೆ ಪಡೆದ ಕಂಪನಿಯವರು ಪುರಸಭೆಗೆ ಸಲ್ಲಿಸಿಲ್ಲ. ಕಾಮಗಾರಿಯನ್ನು ಪುರಸಭೆ ಅಧಿಕಾರಿಗಳು ಹಸ್ತಾಂತರಿಸಿಕೊಂಡಿಲ್ಲ ಎಂದು ಮುಖ್ಯಾಧಿಕಾರಿ ಮಾಹಿತಿ ನೀಡಿದ್ದಾರೆ. ಸದ್ಯ ಯುಜಿಡಿ ಕಾಮಗಾರಿ ವಿಷಯ ಪುರಸಭೆ ಅಧಿಕಾರಿಗಳಿಗೆ ತಲೆನೋವುಂಟು ಮಾಡಿದ್ದು, ಮುಂದಿನ ದಿನಗಳಲ್ಲಿ ಯಾವ ಹಂತಕ್ಕೆ ತಲುಪುತ್ತದೆ ಎಂಬುಂದು ಕಾಯ್ದು ನೋಡಬೇಕಿದೆ.
ಪಟ್ಟಣದಲ್ಲಿ ನಡೆದ ಯುಜಿಡಿ ಕಾಮಗಾರಿ ಪುರಸಭೆಗೆ ಹಸ್ತಾಂತರಗೊಂಡಿಲ್ಲ ಎಂದು ಅಧಿಕಾರಿ ಮಾಹಿತಿ ನೀಡಿದ್ದಾರೆ. ಕೆಲ ದಿನಗಳ ಹಿಂದೆ ನಡೆದ ಕೆಡಿಪಿ ಸಭೆಯಲ್ಲಿ ಯುಜಿಡಿ ಕಾಮಗಾರಿ ಕುರಿತು ಗಮನ ಸೆಳೆದಿದ್ದು, ಕಾಮಗಾರಿ ಕುರಿತು ಖುದ್ದು ಜಿಲ್ಲಾಧಿಕಾರಿಗಳು ಭೇಟಿ ನೀಡಿ ಸಮಗ್ರ ಮಾಹಿತಿ ಪಡೆದು ತನಿಖೆ ನಡೆಸುವಂತೆ ಸಭೆಯಲ್ಲಿ ಒತ್ತಾಯಿಸಿದ್ದೇನೆ. ಬೆಂಗಳೂರಿನ ನುರಿತ ತಜ್ಞರಿಂದ ಯೋಜನೆಯ ತನಿಖೆ ನಡೆಸುವಂತೆ ಸರ್ಕಾರದ ಗಮನ
ಸೆಳೆಯಲಾಗುವುದು.
ರಾಜಶೇಖರ ಪಾಟೀಲ,
ಶಾಸಕ ಹುಮನಾಬಾದ್
ದುರ್ಯೋಧನ ಹೂಗಾರ
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
MUST WATCH
ಹೊಸ ಸೇರ್ಪಡೆ
ವರ್ಷಾಂತ್ಯವರೆಗೂ ಸೋಂಕು ; ವೈರಸ್ನೊಂದಿಗೆ ಚೆಸ್, ಗೆಲುವು ಯಾರಿಗೆ: ಡಾ| ಗುಲೇರಿಯಾ
ಅಮಾಸೆಬೈಲಿಗೆ ಇಸಿಜಿ ಯಂತ್ರ ಕೊಡುಗೆಯ ಭರವಸೆ ನೀಡಿದ ಹೃದ್ರೋಗ ತಜ್ಞ ಡಾ| ಪದ್ಮನಾಭ ಕಾಮತ್
ದೇಶದಲ್ಲಿ 44 ಲಕ್ಷ ಡೋಸ್ ಲಸಿಕೆ ವ್ಯರ್ಥ: ತಮಿಳುನಾಡು ಪ್ರಥಮ
ಯಾರಿಂದಲೂ ತಾನು “ಅಸಮರ್ಥ ಎನಿಸಿಕೊಳ್ಳಲು ಇಚ್ಛಿಸುವುದಿಲ್ಲ’ : ಧೋನಿ
ಮೇ 1ರಿಂದ 18 ವರ್ಷ ಮೇಲ್ಪಟ್ಟವರಿಗೆ ಲಸಿಕೆ : ವ್ಯಾಕ್ಸಿನೇಶನ್ ಡ್ರೈವ್ ನೋಂದಣಿ ಹೇಗೆ?