Udayavni Special

ವೀರಭದ್ರೇಶ್ವರ ರಥೋತ್ಸವ ಸಂಭ್ರಮ; ಜ.26ರ ರಾತ್ರಿ ರಥ ಎಳೆದ ಭಕ್ತರು

ದೇವಸ್ಥಾನದಿಂದ ತೆರಳಿದ ದೇವರ ಮೆರವಣಿಗೆ ನೇರವಾಗಿ ತೇರು ಮೈದಾನಕ್ಕೆ ಆಗಮಿಸಿತ್ತು.

Team Udayavani, Jan 28, 2021, 3:43 PM IST

ವೀರಭದ್ರೇಶ್ವರ ರಥೋತ್ಸವ ಸಂಭ್ರಮ; ಜ.26ರ ರಾತ್ರಿ ರಥ ಎಳೆದ ಭಕ್ತರು

ಹುಮನಾಬಾದ: ವೀರಭದ್ರೇಶ್ವರ ಜಾತ್ರಾ ಮಹೋತ್ಸವ ನಿಮಿತ್ತ ಮಂಗಳವಾರ ಭಕ್ತರ ಝೇಂಕಾರ, ಸಾಂಸ್ಕೃತಿಕ ಕಲಾ ತಂಡಗಳ ಮೆರಗಿನಲ್ಲಿ ಸಾವಿರಾರು ಭಕ್ತರ ಮಧ್ಯೆ ವೀರಭದ್ರಸ್ವಾಮಿಯ ಅದ್ಧೂರಿ ರಥೋತ್ಸವ ಜರುಗಿತು. ರಾಜ್ಯದ ವಿವಿಧ ಜಿಲ್ಲೆಗಳ, ನೇರೆ ರಾಜ್ಯ ಆಂಧ್ರ, ತೆಲಂಗಾಣ, ಮಹಾರಾಷ್ಟ್ರ, ತಮಿಳುನಾಡು ಸೇರಿದಂತೆ ಇತರೆ ರಾಜ್ಯಗಳಿಂದ ಜಾತ್ರೆಗೆ ಬಂದಿದ್ದ ಭಕ್ತರು ರಥೋತ್ಸವದ ವೈಭವವನ್ನು ಕಣ್ತುಂಬಿಕೊಂಡು ಕೃತಾರ್ಥ ಭಾವ ಮೆರೆದರು.

ರಥೋತ್ಸವ ನಿಮಿತ್ತ ಮಂಗಳವಾರ ರಾತ್ರಿ 8:30ಗಂಟೆಗೆ ದೇವಸ್ಥಾನದಿಂದ ಹೊರಟ ವೀರಭದ್ರ ಸ್ವಾಮಿಯ ಉತ್ಸವ ಮೂರ್ತಿ ಮೆರವಣಿಗೆ 10:30ಕ್ಕೆ ತೇರು ಮೈದಾನಕ್ಕೆ ತಲುಪಿತ್ತು. ಒಂದು ಕಿ.ಮೀ. ಉದ್ದದ ವರೆಗೆ ಭಕ್ತರು ದೂರದಲ್ಲಿ ನಿಂತು ವೀರಭದ್ರಸ್ವಾಮಿಯ ದರ್ಶನ ಪಡೆದರು.

ಇತಿಹಾಸ ಮರು ಸೃಷ್ಟಿ: ಕಳೆದ ನಾಲ್ಕು ದಶಕಗಳ ಹಿಂದೆ ವೀರಭದ್ರೇಶ್ವರ ರಥೋತ್ಸವ ಜನವರಿ 26ರಂದು ನಡೆಯುತ್ತಿತ್ತು. ಭಕ್ತ ಸಂಖ್ಯೆ ಹೆಚ್ಚಾದಂತೆ ವಿಳಂಬ ಆಗಲು ಆರಂಭಿಸಿತ್ತು. ಕೆಲ ವರ್ಷಗಳ ಇತಿಹಾಸ ನೋಡಿದರೆ ಜ.26ರಂದು 8ಗಂಟೆಗೆ ದೇವಸ್ಥಾನದಿಂದ ಹೊರಟ ಪಲ್ಲಕ್ಕಿ ಉತ್ಸವ ಒಂದು ಕಿ.ಮೀ. ಕ್ರಮಿಸಲು 13 ಗಂಟೆ ಸಮಯ ತೆಗೆದುಕೊಂಡಿತ್ತು. ಆ.27ರಂದು ಮಧ್ಯಾಹ್ನ ಅದ್ಧೂರಿ ರಥೋತ್ಸವ ನಡೆಯುತ್ತಿತ್ತು. ಆದರೆ, ಈ ವರ್ಷ ಕೊರೊನಾ ಹಿನ್ನೆಲೆಯಲ್ಲಿ ದೇವರಿಗೆ ಶಾಲು ಹೊದಿಸುವ ಕಾರ್ಯಕ್ಕೆ ನಿಷೇಧ ಹಾಕಿದ ಹಿನ್ನೆಲೆಯಲ್ಲಿ ದೇವಸ್ಥಾನದಿಂದ ತೆರಳಿದ ದೇವರ ಮೆರವಣಿಗೆ ನೇರವಾಗಿ ತೇರು ಮೈದಾನಕ್ಕೆ ಆಗಮಿಸಿತ್ತು. ಒಂದು ಗಂಟೆಗಳ ಕಾಲ ತೇರು ಎಳೆಯುವ ಕಾರ್ಯಕ್ರಮ ಜರುಗಿತು.

ಪಟ್ಟಣದ ಹಿರೇಮಠ ಸಂಸ್ಥಾನದ ರೇಣುಕ ವೀರ ಗಂಗಾಧರ ಸ್ವಾಮಿಗಳನ್ನು ರಥದಲ್ಲಿ ಕೂರಿಸಿ, ಶಾಸಕ ರಾಜಶೇಖರ ಪಾಟೀಲ, ವಿಧಾನ ಪರಿಷತ್‌ ಸದಸ್ಯ ಡಾ| ಚಂದ್ರಶೇಖರ ಪಾಟೀಲ, ಜಿಪಂ ಮಾಜಿ ಸದಸ್ಯ ವೀರಣ್ಣಾ ಪಾಟೀಲ, ತಹಶೀಲ್ದಾರ್‌ ನಾಗಯ್ನಾ ಹಿರೇಮಠ, ಡಿಸಿಸಿ ಬ್ಯಾಂಕ್‌ ಉಪಾಧ್ಯಕ್ಷ ಭೀಮರಾವ ಪಾಟೀಲ, ಬಸವರಾಜ ಆರ್ಯ, ಮಹಾಂತಯ್ನಾ ತೀರ್ಥಾ ಸೇರಿದಂತೆ ಇತರೆ ಗಣ್ಯರು ರಥ ಎಳೆಯುಲು ಚಾಲನೆ ನೀಡಿದರು.

ನಂತರ ಭಕ್ತ ಮಂಡಳಿ ರಥವನ್ನು ಬಸವಣ್ಣ ಕಟ್ಟೆಯ ವೆರೆಗೆ ಎಳೆದರು. ನಂತರ ರಥದಲ್ಲಿದ್ದ ಗಂಗಾಧರ ಶಿವಾಚಾರ್ಯರು ಬಾಳೆ ಹಣ್ಣು, ದುಡ್ಡು, ಖಾರಿಕಗಳು ಭಕ್ತರ ಕಡೆಗೆ ಎಸೆದು ಆಶೀರ್ವದಿಸಿದರು. ಜಾತ್ರೆಯಲ್ಲಿ ಯಾವುದೇ ಅಹಿತಕರ ಘಟನೆ ಘಟಿಸದಂತೆ ಡಿವೈಎಸ್‌ಪಿ ಶೀವಲಿಂಗ ಕುಂಬಾರ, ಸಿಪಿಐ ಮಲ್ಲಿಕಾರ್ಜುನ ಯಾತನೂರ್‌, ಪಿಎಸ್‌ಐ ರವಿಕುಮಾರ ನೇತೃತ್ವದಲ್ಲಿ ಬಿಗಿ ಪೊಲೀಸ್‌ ಬಂದೋಬಸ್ತ್ ಮಾಡಲಾಗಿತ್ತು.

ಟಾಪ್ ನ್ಯೂಸ್

Jio pours cold water on tariff hike hopes

ಬೆಲೆ ಏರಿಕೆಯ ನಿರೀಕ್ಷೆಯ ಮೇಲೆ ತಣ್ಣೀರೆರೆದ ಜಿಯೋ..!

ಕಾರ್ಮಿಕರ ಜೊತೆ ಚಹಾ ಎಲೆ ಬಿಡಿಸಿದ ಪ್ರಿಯಾಂಕಾ : ವಿಡಿಯೋ ನೋಡಿ!

Indian Americans are divided about India’s future, but still broadly support Modi, finds survey

ಅನಿವಾಸಿ ಭಾರತೀಯರಲ್ಲಿ ಮೋದಿ ಬಗ್ಗೆ ಮಿಶ್ರ ಅಭಿಪ್ರಾಯ : ಅಧ್ಯಯನ ವರದಿ

ಪ್ರಯಾಣದ ವೇಳೆ ವಿಮಾನದಲ್ಲೇ ಪ್ರಯಾಣಿಕ ನಿಧನ; ಕರಾಚಿಯಲ್ಲಿ ವಿಮಾನ ತುರ್ತು ಲ್ಯಾಂಡಿಂಗ್

ಪ್ರಯಾಣದ ವೇಳೆ ವಿಮಾನದಲ್ಲೇ ಪ್ರಯಾಣಿಕ ನಿಧನ; ಕರಾಚಿಯಲ್ಲಿ ವಿಮಾನ ತುರ್ತು ಲ್ಯಾಂಡಿಂಗ್

Untitled-2

ಅವಕಾಶ ಸಿಕ್ಕರೆ ಖಂಡಿತ ಬಿಗ್ ಬಾಸ್ ನಲ್ಲಿ ಭಾಗವಹಿಸುತ್ತೇನೆ : ಎಚ್‌. ವಿಶ್ವನಾಥ್

ಭರ್ಜರಿ ಟ್ರೋಲ್ ಆಗುತ್ತಿದೆ ರೋಹಿತ್ ಶರ್ಮಾರ ಈ ಫೋಟೋ..!

ಹತ್ರಾಸ್ ಲೈಂಗಿಕ ಕಿರುಕುಳ ಕೇಸ್: ಮಗಳ ಎದುರಲ್ಲೇ ತಂದೆಯನ್ನು ಹತ್ಯೆಗೈದ ಆರೋಪಿ

ಹತ್ರಾಸ್ ಲೈಂಗಿಕ ಕಿರುಕುಳ ಕೇಸ್: ಮಗಳ ಎದುರಲ್ಲೇ ತಂದೆಯನ್ನು ಹತ್ಯೆಗೈದ ಆರೋಪಿ


ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು

ಯುಜಿಡಿ ಕಾಮಗಾರಿ ತನಿಖೆ ನಡೆಯುತ್ತಾ

ಯುಜಿಡಿ ಕಾಮಗಾರಿ ತನಿಖೆ ನಡೆಯುತ್ತಾ?

ಭೂ ತಾಯಿಯಂತೆ ಮಾತೃಭಾಷೆ ಶ್ರೇಷ್ಠ

ಭೂ ತಾಯಿಯಂತೆ ಮಾತೃಭಾಷೆ ಶ್ರೇಷ್ಠ

Shale

ಶಾಲಾ ಪ್ರಗತಿಯಲ್ಲಿ ರಾಜಕೀಯ ಸಲ್ಲ: ಹಣಮಂತರಾಯ

ಅಧಿಕಾರಿಗಳಿಗೆ ಸೈಬರ್‌ ದಾಳಿಯ ಅರಿವಿರಲಿ

ಅಧಿಕಾರಿಗಳಿಗೆ ಸೈಬರ್‌ ದಾಳಿಯ ಅರಿವಿರಲಿ

ಬಿಎಸ್‌ಎಸ್‌ಕೆ ಸಕ್ಕರೆ ಕಾರ್ಖಾನೆಗೆ ಶಾಶ್ವತ ಬೀಗ

ಬಿಎಸ್‌ಎಸ್‌ಕೆ ಸಕ್ಕರೆ ಕಾರ್ಖಾನೆಗೆ ಶಾಶ್ವತ ಬೀಗ!

MUST WATCH

udayavani youtube

ಹಳೆಯ ವೃತ್ತ ಪತ್ರಿಕೆಯಿಂದ ಶಿವಾಜಿ ಮಹಾರಾಜರ ಕಲಾಕೃತಿ:

udayavani youtube

ಚಿಟ್ ಚಾಟ್ ವಿಥ್ ಸಿಂಗರ್ ಶ್ರೀ ಹರ್ಷ | Interview with Shree Harsha | Harshadhwani

udayavani youtube

FRIDGE ನೀರು ದೇಹದ ಮೇಲೆ ಯಾವ ರೀತಿಯ ಪ್ರಭಾವವನ್ನು ಬೀರುತ್ತದೆ?

udayavani youtube

ನಾನು ಕೆಲವು ಜನರನ್ನು ನಂಬಿ ಮೋಸ ಹೋದೆ – ಡಾ| ಬಿ.ಆರ್‌.ಶೆಟ್ಟಿ

udayavani youtube

30 ನಿಮಿಷದಲ್ಲಿಯೇ ಕೊರೊನಾ ಲಸಿಕೆ ಸಂಪೂರ್ಣ ಪ್ರಕ್ರಿಯೆ ಪೂರ್ಣಗೊಳಿಸಿದರು

ಹೊಸ ಸೇರ್ಪಡೆ

ನರಗುಂದ ಬೆಟ್ಟಕ್ಕೆ ಪ್ರವಾಸಿ ತಾಣ ಮೆರುಗು

ನರಗುಂದ ಬೆಟ್ಟಕ್ಕೆ ಪ್ರವಾಸಿ ತಾಣ ಮೆರುಗು

Jio pours cold water on tariff hike hopes

ಬೆಲೆ ಏರಿಕೆಯ ನಿರೀಕ್ಷೆಯ ಮೇಲೆ ತಣ್ಣೀರೆರೆದ ಜಿಯೋ..!

ಧರ್ಮ ಅರಿತವ ಪರಿಪೂರ್ಣ ವ್ಯಕ್ತಿ

ಧರ್ಮ ಅರಿತವ ಪರಿಪೂರ್ಣ ವ್ಯಕ್ತಿ

ಈ ಬಾರಿಯಾದರೂ ಈಡೇರುವವೇ ಬೇಡಿಕೆ?

ಈ ಬಾರಿಯಾದರೂ ಈಡೇರುವವೇ ಬೇಡಿಕೆ?

ಕಾರ್ಮಿಕರ ಜೊತೆ ಚಹಾ ಎಲೆ ಬಿಡಿಸಿದ ಪ್ರಿಯಾಂಕಾ : ವಿಡಿಯೋ ನೋಡಿ!

Thanks for visiting Udayavani

You seem to have an Ad Blocker on.
To continue reading, please turn it off or whitelist Udayavani.