ಸಂಕ್ರಾಂತಿ ಯಿಂದ 14 ದಿನಗಳ ಕಾಲ ವೀರಭದ್ರೇಶ್ವರ ಜಾತ್ರೆ

Team Udayavani, Jan 5, 2018, 12:48 PM IST

ಹುಮನಾಬಾದ: ಸಂಕ್ರಾಂತಿಯಿಂದ 14 ದಿನಗಳ ಕಾಲ ನಡೆಯುವ ವೀರಭದ್ರೇಶ್ವರ ಜಾತ್ರೆ ನಿಮಿತ್ತ ಪಟ್ಟಣದ ಪುರಸಭೆಯಲ್ಲಿ ಗುರುವಾರ ವಿಶೇಷ ಸಭೆ ನಡೆಯಿತು. ಲಕ್ಷಾಂತರ ಭಕ್ತರು ಜಾತ್ರೆಗೆ ಆಗಮಿಸುವ ಹಿನ್ನೆಲೆಯಲ್ಲಿ ಸಾರ್ವಜನಿಕರಿಗೆ ಯಾವುದೇ ತೊಂದರೆಯಾಗದಂತೆ ಪೂರ್ವಸಿದ್ಧತೆ ಮಾಡಿಕೊಳ್ಳುವ ಕುರಿತು ಸಭೆಯಲ್ಲಿ ಚರ್ಚಿಸಲಾಯಿತು.

ಜಾತ್ರೆಗಾಗಿ ಸುಮಾರು 25 ಪೌರಕಾರ್ಮಿಕರನ್ನು ನೇಮಕ ಮಾಡಿಕೊಂಡು ಪಟ್ಟಣದಲ್ಲಿ ಸ್ವತ್ಛತೆಗೆ ಹೆಚ್ಚು ಆದ್ಯತೆ ನೀಡಬೇಕು. ಪಟ್ಟಣದ ನಿವಾಸಿಗಳಿಗೆ ಕುಡಿಯುವ ನೀರಿನ ಸಮಸ್ಯೆಯಾಗದಂತೆ ನೋಡಿಕೊಂಡು ಪ್ರತಿನಿತ್ಯ ನೀರು ಪೂರೈಕೆ ಮಾಡಬೇಕು. ಜಾತ್ರೆಯ ಪಲ್ಲಕಿ ಮೆರವಣಿಗೆ ವೇಳೆ ಮಹಿಳೆಯರು ರಂಗೋಲಿ ಹಾಕುವ ಸಂಪ್ರದಾಯವಿದ್ದು, ಈ ವರ್ಷ ಉತ್ತಮ ರಂಗೋಲಿಗೆ ಪುರಸಭೆಯಿಂದ ಬಹುಮಾನ ನೀಡುವ ಕುರಿತು ಚರ್ಚಿಸಲಾಯಿತು.

ಪ್ರಥಮ ಸ್ಥಾನಕ್ಕೆ 11 ಸಾವಿರ, ದ್ವಿತೀಯ ಸ್ಥಾನಕ್ಕೆ 8 ಸಾವಿರ, ಮೂರನೇ ಸ್ಥಾನಕ್ಕೆ 5 ಸಾವಿರ ಬಹುಮಾನ ನೀಡುವ ಕುರಿತು ಅನುಮೋದನೆ ಪಡೆಯಲಾಯಿತು. ಪಟ್ಟಣದ ವಿವಿಧೆಡೆ ಸಾರ್ವಜನಿಕ ಶೌಚಾಲಯ ಹಾಗೂ ಮೂಬೈಲ್‌ ಶೌಚಾಲಯಗಳನ್ನು ಅಳವಡಿಸಲು ಕೂಡ ಅನುಮೋದನೆ ಪಡೆಯಲಾಯಿತು. ಸಿಪಿಐ ಜೆ.ನ್ಯಾಮೆಗೌಡರ್‌ ಮಾತನಾಡಿ,
ಪಟ್ಟಣ ಹೊರವಲಯದ ರಾಷ್ಟ್ರಯ ಹೆದ್ದಾರಿ ಪಕ್ಕದಲ್ಲಿ ಸರ್ವಿಸ್‌ ರಸ್ತೆ ಇಲ್ಲದ ಕಾರಣ ಅನೇಕ ಅಡಚಣೆಗಳು ಉಂಟಾಗುತ್ತಿವೆ. ಚಿದ್ರಿ ಬೈಪಾಸ್‌ನಿಂದ ರಾಮ ಮತ್ತು ರಾಜ ಕಾಲೇಜು ವರೆಗೆ ಹೆದ್ದಾರಿ ಪಕ್ಕದಲ್ಲಿ ಸರ್ವಿಸ್‌ ರಸ್ತೆ ನಿರ್ಮಿಸುವಂತೆ ನಡುವಳಿ ಬರೆದು ಹೆದ್ದಾರಿ ಪ್ರಾಧಿಕಾರ ಅಧಿಕಾರಿಗಳ್ಳಿಗೆ ಸಲ್ಲಿಸಬೇಕು ಎಂದರು.

ಪಟ್ಟಣದ ತೇರು ಮೈದಾನದ ತೇರು ಸಾಗುವ ರಸ್ತೆ ದುರಸ್ಥಿ ಹಾಗೂ ಟೆಂಡರ್‌ ಕರೆದು ಪಟ್ಟಣದಲ್ಲಿ ವಿದ್ಯುತ್‌ ದೀಪ
ಅಳವಡಿಸಲು ಅನುಮೋದನೆ ನೀಡಲಾಯಿತು. ಪುರಸಭೆ ಅಧ್ಯಕ್ಷೆ ರಾಧಾ ಮಾಳಪ್ಪ, ಉಪಾಧ್ಯಕ್ಷೆ ಪಾವರ್ತಿ ಶೇರಿಕಾರ್‌, ಪುರಸಭೆ ಸದಸ್ಯರಾದ ಮಹೇಶ ಅಗಡಿ, ಅಫರ್‌ ಮಿಯ್ನಾ, ಕಲಿಮೂಲಾ, ನಾಸೀರ್‌, ವಿನಾಯಕ ಯಾದವ, ತಿರುಮಲ ರೆಡ್ಡಿ, ಪ್ರಭುರೆಡ್ಡಿ, ಆಜಾಮ್‌, ಇಸ್ಮಾಯಿಲ್‌, ಪುರಸಭೆ ಪ್ರಭಾರಿ ಮುಖ್ಯಾಧಿಕಾರಿ ಮೀನಾಕುಮಾರಿ ಬೊರಳಕರ್‌ ಇದ್ದರು.

ಶ್ರೀ ಅಷ್ಠ ಲಕ್ಷ್ಮೀ ಜೋತಿಷ್ಯ ಮಂದಿರ,
ಉದ್ಯೋಗ, ಮದುವೆ ವಿಳಂಬ, ಸತಿ-ಪತಿ ಕಲಹ, ಶತ್ರುಪೀಡೆ, ಅತ್ತೆ-ಸೊಸೆ ಕಲಹ, ವಶೀಕರಣ, ವ್ಯವಹಾರದಲ್ಲಿ ನಷ್ಟ, ಇನ್ನೂ ನಿಮ್ಮಸಮಸ್ಯೆ ಯಾವುದೇ ಇರಲಿ, ಎಷ್ಟೇ ಕಠಿಣವಾಗಿರಲಿ ಶಾಶ್ವತ ಪರಿಹಾರ ಶತಃ ಶಿದ್ದ , ನಿಮ್ಮ ಯಾವುದೇ ಇಷ್ಟಾರ್ಥ ಕಾರ್ಯಗಳಿದ್ದರೂ ಕೇವಲ 5 ದಿನಗಳಲ್ಲಿ ನೇರವೆರಿಸಿ ಕೋಡುತ್ತಾರೇ. ಇಂದೇ ಭೇಟಿ ನೀಡಿ.
ಶ್ರೀ ಶ್ರೀ ಬಿ ಹೆಚ್ ಆಚಾರ್ಯ ಗೂರುಜೀ
ಜಯನಗರ ಬೆಂಗಳೂರು, ಮೋ- 8884889444

ಈ ವಿಭಾಗದಿಂದ ಇನ್ನಷ್ಟು

ಹೊಸ ಸೇರ್ಪಡೆ