ಬೀದರ: ಹಳ್ಳ ದಾಟಲು ಹೋಗಿ ನೀರಿನಲ್ಲಿ ಕೊಚ್ಚಿ ಹೋದ ಮಹಿಳೆ
Team Udayavani, Jul 6, 2022, 2:36 PM IST
ಬೀದರ್: ಹಳ್ಳ ದಾಟಲು ಹೋಗಿ ಮಹಿಳೆಯೊಬ್ಬಳು ನೀರಿನಲ್ಲಿ ಕೊಚ್ಚಿ ಹೋಗಿರುವ ಘಟನೆ ಔರಾದ ತಾಲೂಕಿನ ನಾಗೂರ (ಬಿ) ಗ್ರಾಮದಲ್ಲಿ ನಡೆದಿದೆ.
ಗ್ರಾಮದ ಸುಮನ್‌ಬಾಯಿ ಬಾಬುರೆಡ್ಡಿ ಖಂದಾಡೆ (48) ನೀರು ಪಾಲಾಗಿರುವ ಮಹಿಳೆ. ಮಂಗಳವಾರ ಸಂಜೆ ಹೊಲದಿಂದ ಮನೆಗೆ ಬರುವಾಗ ಹಳ್ಳದಲ್ಲಿ ಕೊಚ್ಚಿ ಹೋಗಿದ್ದಾರೆ ಎಂದು ಮಹಿಳೆಯ ಪತಿ ಬಾಬುರೆಡ್ಡಿ ಸಂತಪುರ ಠಾಣೆ ಪೊಲೀಸರಿಗೆ ದೂರು ನೀಡಿದ್ದಾರೆ.
ನನ್ನ ಪತ್ನಿ ಮಂಗಳವಾರ ಮಸ್ಕಲ್ ಪ್ರದೇಶದಲ್ಲಿರುವ ಹೊಲಕ್ಕೆ ಹೋಗಿದ್ದರು. ಮಧ್ಯಾಹ್ನ ಮಳೆ ಅಬ್ಬರಿಸಿ ಗ್ರಾಮದ ಮಧ್ಯದಲ್ಲಿರುವ ಹಳ್ಳಕ್ಕೆ ಪ್ರವಾಹ ಬಂದಿದೆ. ಹಳ್ಳ ದಾಟುವಾಗ ನೀರಿನಲ್ಲಿ ಕೊಚ್ಚಿಕೊಂಡು ಹೋಗಿದ್ದಾರೆ. ಹಳ್ಳದ ಸುತ್ತಲೂ ಸಾಕಷ್ಟು ಹುಡುಕಾಡಿದರೂ ಪತ್ತೆಯಾಗಿಲ್ಲ ಎಂದು ದೂರಿನಲ್ಲಿ ತಿಳಿಸಿದ್ದಾರೆ.