ಶೈಕ್ಷಣಿಕ ಕ್ಷೇತ್ರದಲ್ಲಿ ಮಹಿಳೆಯರ ಸಾಧನೆ: ತಾರಾ

Team Udayavani, Feb 19, 2019, 8:26 AM IST

ಬೀದರ: ಮಹಿಳೆಯರಲ್ಲಿ ತಾಳ್ಮೆ ಹಾಗೂ ಸಹನ ಶಕ್ತಿ ಇರುವುದರಿಂದ ಶೈಕ್ಷಣಿಕ ಕ್ಷೇತ್ರದಲ್ಲಿ ಮಹಿಳೆಯರು ಸಾಧನೆ ಮಾಡುತ್ತಿದ್ದಾರೆ. ಮಹಿಳೆಯರು ಮೊದಲನೇ ಸ್ಥಾನದಲ್ಲಿದ್ದಾರೆ ಎಂದು ಚಿತ್ರ ನಟಿ ತಾರಾ ಹೇಳಿದರು. ನಗರದ ಬಸವಗಿರಿಯಲ್ಲಿ ಸೋಮವಾರ ನಡೆದ 16ನೇ ವಚನ ವಿಜಯೋತ್ಸವದ ಮಹಿಳಾ ಜಾಗೃತಿ ಸಮಾವೇಶದಲ್ಲಿ ವೀರಮಾತೆ ಅಕ್ಕ ನಾಗಲಾಂಬಿಕೆ ಪುರಸ್ಕಾರ ಹಾಗೂ ಪ್ರಶಸ್ತಿ ಸ್ವೀಕರಿಸಿ ಅವರು ಮಾತನಾಡಿದರು.

ಹೆಣ್ಣಿಗೆ ಹೆಣ್ಣೇ ಶತ್ರು ಎಂದು ಹೇಳುತ್ತಾರೆ. ಆದರೆ, ಅದು ಸರಿಯಲ್ಲ ಎಂದ ಅವರು, ಕೊಲೆ, ಸುಲಿಗೆ, ವಂಚನೆ, ದರೋಡೆ ಕೃತ್ಯಗಳಲ್ಲಿ ಮಹಿಳೆಯರ ಪಾತ್ರ ತೀರಾ ಕಡಿಮೆ ಇದೆ. ಭಾರತ ದೇಶದಲ್ಲಿ ಮಹಿಳೆಗೆ ಪೂಜ್ಯನೀಯ ಸ್ಥಾನ ನೀಡಲಾಗಿದೆ. ಭಾರತ ಭೂಮಿಗೆ ಹಾಗೂ ಅನೇಕ ನದಿಗಳಿಗೆ ಮಹಿಳೆಯರ ಹೆಸರು ಇಡಲಾಗಿದೆ ಎಂದು ವಿವರಿಸಿದರು. ಮನೆಯಲ್ಲಿ ಉತ್ತಮ ವಾತಾವರಣ ನಿರ್ಮಾಣಕ್ಕೆ ಮಹಿಳೆಯರ ಪಾತ್ರ ಮುಖ್ಯವಾಗಿದೆ. ಸಮಸ್ಯೆಗಳ ಸಂದರ್ಭದಲ್ಲಿ ಕೂಡ ಸೂಕ್ತ ಸಲಹೆ ನೀಡುವ ಮೂಲಕ ಎಲ್ಲಾ ಪರಿಹಾರಕ್ಕೆ ಮಹಿಳೆ ಶ್ರಮಿಸುತ್ತಾಳೆ ಎಂದರು. ವೀರಮಾತೆ ಅಕ್ಕ ನಾಗಲಾಂಬಿಕೆ ಚಿತ್ರ ಮಾಡಿದರೆ ಅದರಲ್ಲಿ ನಾನು ಅಕ್ಕ ನಾಗಮ್ಮನ ಪಾತ್ರದಲ್ಲಿ ನಟಿಸುತ್ತೇನೆ ಎಂದರು.

ಅಕ್ಕಅನ್ನಪೂರ್ಣ, ಡಾ| ಗಂಗಾಂಬಿಕೆ, ಚೆನ್ನಮ್ಮ ಹಳ್ಳಿಕೇರಿ, ಪ್ರೊ| ಕಲ್ಯಾಣಮ್ಮ ಲಂಗೋಟಿ, ಶೋಭಾ ಎಚ್‌.ಜಿ., ಸವಿತಾ ಸಿದ್ರಾಮಪ್ಪ ನಡಕಟ್ಟಿ, ಶರಣೆ ಸುಮಂಗಲಾ ಅಂಗಡಿ, ಶೃತಿ ಶಂಕರ ಗುಡಸ್‌, ನೀಲಮ್ಮ ರೂಗನ್‌, ಶಾಲಿನಿ ಚಿಂತಾಮಣಿ, ಡಾ| ಗೀತಾ ಆರ್‌.ಎಂ., ಶರಣೆ ಡಾ| ಇಂದುಮತಿ ಪಾಟೀಲ, ಉಜ್ವಲಾ ಪ್ರಕಾಶ ಟೊಣ್ಣೆ, ಶರಣೆ ಡಾ| ಜಯಶ್ರೀ ಸ್ವಾಮಿ, ಸುಧಾ ಕಣಜೆ, ರೂಪಾ ಶಿವಲಿಂಗ, ಮಹಾದೇವಮ್ಮ ಚಿದ್ರೆ, ಎನ್‌.ಎಸ್‌. ಭಾಗ್ಯ, ಮಂಗಲಾ ಪಾಟೀಲ, ಕಸ್ತೂರಿಬಾಯಿ ತಾಳಂಪಳ್ಳಿ ಹಳ್ಳಿಖೇಡ, ಸಂಗೀತಾ ಬಿರಾದಾರ, ತಾರಾ ಎನ್‌. ಕುಂಬಾರ, ಜ್ಯೋತಿ ಬೊಮ್ಮಾ, ಡಾ| ಜಗದೇವಿ ತೇಲಿ ಇದ್ದರು.

Disclaimer:The views expressed in comments section published on Udayavani.com are those of comment writers alone. They do not represent the views or opinions of Udayavani.com, its staff or The Manipal Group, or any entity associated with The Manipal Group. Udayavani.com reserves rights to remove a comment or all the comments any time.

To report any comment you can email us at udayavani.response@manipalgroup.info. We will review the request and delete the comments.


ಈ ವಿಭಾಗದಿಂದ ಇನ್ನಷ್ಟು

  • ಹುಮನಾಬಾದ: ಪಟ್ಟಣ ಹೊರ ವಲಯದ ಕೈಗಾರಿಕಾ ಪ್ರದೇಶದ ಕಾರ್ಖಾನೆಯೊಂದರಲ್ಲಿ ಅಗ್ನಿ ದುರಂತದ ಸಂಭವಿಸಿದೆ ಕೋಟ್ಯಂತರ ರೂಪಾಯಿ ಮೌಲ್ಯದ ಆಸ್ತಿ ಹಾನಿಯಾದ ಘಟನೆ ಸೋಮವಾರ...

  • ಬೀದರ: ನಗರದಲ್ಲಿ ನಾಗರಿಕ ವಿಮಾನಯಾನ ಸೇವೆ ಪ್ರಾರಂಭಿಸುವ ನಿಟ್ಟಿನಲ್ಲಿ 13 ವರ್ಷಗಳ ಹಿಂದೆ ಸುಮಾರು 4 ಕೋಟಿ ರೂ. ವೆಚ್ಚದಲ್ಲಿ ನಿರ್ಮಾಣಗೊಂಡಿರುವ ಟರ್ಮಿನಲ್ ಸಂಪೂರ್ಣ...

  • ಭಾಲ್ಕಿ: ಅಪಘಾತಕ್ಕೀಡಾದ ವ್ಯಕ್ತಿಗಳಿಗೆ ಹಾಗೂ ಗರ್ಭಿಣಿಯರಿಗೆ ತುರ್ತಾಗಿ ರಕ್ತದ ಅವಶ್ಯಕತೆ ಇರುವುದರಿಂದ ಹೆಣ್ಣು-ಗಂಡೆಂಬ ಭೇದವಿಲ್ಲದೆ 18ರಿಂದ 60 ವರ್ಷದ ಒಳಗಿರುವ...

  • ಹುಮನಾಬಾದ: ಸ್ವಚ್ಛತೆ ಬಗೆಗಿನ ಸಿಬ್ಬಂದಿಯ ನಿರ್ಲಕ್ಷ್ಯವನ್ನು ಯಾವುದೇ ಕಾರಣಕ್ಕೂ ಸಹಿಸಲಾಗದು ಎಂದು ಆರೋಗ್ಯ ಇಲಾಖೆ ಲಕ್ಷ್ಯ ಕಾರ್ಯಕ್ರಮದ ರಾಜ್ಯ ನಿರ್ದೇಶಕ...

  • ಬೀದರ: ನೌಬಾದ್‌ ಹತ್ತಿರದ ಕೆಐಎಡಿಬಿ ಹೌಸಿಂಗ್‌ ಲೇಔಟ್‌ನ ಹನುಮಾನ ಮಂದಿರದಲ್ಲಿ ಅಲೆಮಾರಿ ಸಮುದಾಯದವರ ಮಕ್ಕಳಿಗಾಗಿ ತಾತ್ಕಾಲಿಕವಾಗಿ ಆರಂಭಿಸಲಾದ ಅಂಗನವಾಡಿ...

ಹೊಸ ಸೇರ್ಪಡೆ