ವೆಂಟಿಲೇಟರ್‌ ರಹಿತ ಆಂಬ್ಯುಲೆನ್ಸ್‌ ಪ್ರಾಣಕ್ಕೆ ಕಂಟಕ

ತುರ್ತು ಸಂದರ್ಭ ಆಸ್ಪತ್ರೆ ತಲುಪುವವರೆಗೆ ಜೀವಕ್ಕಿಲ್ಲ ರಕ್ಷಣೆಸರ್ಕಾರ ಹಣ ಖರ್ಚು ಮಾಡಿದರೂ ಸುಧಾರಿಸಿಲ್ಲ ಪರಿಸ್ಥಿತಿ

Team Udayavani, Dec 7, 2019, 11:42 AM IST

„ಶಶಿಕಾಂತ ಬಂಬುಳಗೆ
ಬೀದರ:
ಗಡಿ ಜಿಲ್ಲೆ ಬೀದರನಲ್ಲಿ ತುರ್ತು ಚಿಕಿತ್ಸೆಗಾಗಿ ನೆರವಾಗುವ ಆಂಬ್ಯುಲೆನ್ಸ್‌ಗಳು ವೆಂಟಿಲೇಟರ್‌ (ಕೃತಕ ಉಸಿರಾಟ)ಗಳ ವ್ಯವಸ್ಥೆ ಇಲ್ಲದೇ ಅಪಾಯಕಾರಿ ಸ್ಥಿತಿಯಲ್ಲಿವೆ. ಹಾಗಾಗಿ ರೋಗಿಗಳ ಜೀವಕ್ಕೆ ಕವಚ ಆಗಬೇಕಾದ ಅಂಬ್ಯುಲೆನ್ಸ್‌ಗಳೇ ಒಮ್ಮೊಮ್ಮೆ ಪ್ರಾಣಕ್ಕೆ ಕಂಟಕ ಆಗುತ್ತಿವೆ.

ಇದು ಆಶ್ಚರ್ಯ ಎನಿಸಿದರೂ ಸತ್ಯ. ಜಿಲ್ಲೆಯಲ್ಲಿ ತುರ್ತು ಸಂದರ್ಭದಲ್ಲಿ ಜೀವ ಉಳಿಸುವ ಅಂಬ್ಯುಲೆನ್ಸ್‌ ಗಳಲ್ಲಿ ಸಾಕಷ್ಟು ದೋಷಗಳು ಮಾತ್ರವಲ್ಲ ಕೃತಕ ಉಸಿರಾಟದ ವ್ಯವಸ್ಥೆ ಸಹ ಇಲ್ಲ. ಹಾಗಾಗಿ ರೋಗಿಗಳು ಆಸ್ಪತ್ರೆಗೆ ದಾಖಲು ಆಗುವವರೆಗೆ ಆಂಬ್ಯುಲೆನ್ಸ್‌ನಲ್ಲಿ ತಮ್ಮ ಜೀವ ಕೈಯಲ್ಲಿ ಹಿಡಿದು ಪ್ರಯಾಣಿಸುವಂತಾಗಿದೆ. ಆಂಬ್ಯುಲೆನ್ಸ್‌ಗಳ ನಿರ್ವಹಣೆಗಾಗಿ ಸರ್ಕಾರ ಸಾಕಷ್ಟು ಹಣ ಖರ್ಚು ಮಾಡುತ್ತಿದ್ದರೂ ಸಹ ಆಂಬ್ಯುಲೆನ್ಸ್‌ ಗಳ ಪರಿಸ್ಥಿತಿ ಮಾತ್ರ ಬದಲಾಯಿಸಿಲ್ಲ. ಈಗಲೂ ಓಬಿರಾಯನ ಕಾಲದ ವಾಹನಗಳ ಮೇಲೆ ಅವಲಂಬಿಸಿ ರೋಗಿಗಳಲ್ಲಿ ಆತಂಕ ಹೆಚ್ಚಿಸಿದೆ.

ನಗರ ಸೇರಿದಂತೆ ಗ್ರಾಮೀಣ ಪ್ರದೇಶದಲ್ಲಿ ರೋಗಿಗಳಿಗೆ ತುರ್ತು ಚಿಕಿತ್ಸಾ ಸೌಲಭ್ಯ ಕಲ್ಪಿಸಲು ರಾಜ್ಯ ಸರ್ಕಾರ 2008ರಲ್ಲಿ “ಆರೋಗ್ಯ ಕವಚ- 108′ ಯೋಜನೆ ಆರಂಭಿಸಿದೆ. ಅದರಂತೆ ಒಡಂಬಡಿಕೆ ಮಾಡಿಕೊಂಡಿರುವ ಜಿವಿಕೆ ಸಂಸ್ಥೆ ಜಿಲ್ಲೆಯಲ್ಲಿ 19 ಆರೋಗ್ಯ ಕವಚನ- 108 ವಾಹನಗಳನ್ನು ಓಡಿಸುತ್ತಿದೆ. ಇನ್ನೂ ಆರೋಗ್ಯ ಇಲಾಖೆಯಿಂದ ಜಿಲ್ಲೆಯ ವಿವಿಧ ಜಿಲ್ಲಾ ಮತ್ತು ತಾಲೂಕು ಆಸ್ಪತ್ರೆ, ಪ್ರಾಥಮಿಕ ಆರೋಗ್ಯ ಕೇಂದ್ರಗಳಲ್ಲಿ ಒಟ್ಟು ಒಟ್ಟು 41 ಆಂಬ್ಯುಲೆನ್ಸ್‌ಗಳು ಸೇವೆ ಸಲ್ಲಿಸುತ್ತಿವೆ. ಇವುಗಳಲ್ಲಿ ಕೆಲವು ವಾಹನಗಳು ಕೆಟ್ಟು ನಿಂತಿದ್ದು, ದುರಸ್ಥಿಗಾಗಿ ಕಾದು ಕುಳಿತಿವೆ.

ಜಿವಿಕೆ ಸಂಸ್ಥೆ ಉಸ್ತುವಾರಿ ಅ ಧಿಕಾರಿ ಮಾಹಿತಿಯಂತೆ ಒಟ್ಟು 19 ಅಂಬುಲೆನ್ಸ್‌ಗಳ ಪೈಕಿ 5 ವಾಹನಗಳಲ್ಲಿ ವೆಂಟಿಲೇಟರ್‌ ಅಳವಡಿಸಲಾಗಿದ್ದರೂ ಬಳಕೆ ಸ್ಥಿತಿಯಲ್ಲಿ ಇಲ್ಲ. ಇನ್ನೂ ಆರೋಗ್ಯ ಇಲಾಖೆಯ ಕೇವಲ ಮೂರು ಆಂಬುಲೆನ್ಸ್‌ಗಳಲ್ಲಿ (ಬ್ರಿಮ್ಸ್‌, ಮನ್ನಾಎಖ್ಖೆಳ್ಳಿ, ಹುಮನಾಬಾದ್‌) ಕೃತಕ ಉಸಿರಾಟದ ವ್ಯವಸ್ಥೆ ಇದೆ ಎಂದು ತಿಳಿಸಿದ್ದಾರೆ. ಆದರೆ, ಆ ವಾಹನದಲ್ಲಿಯೂ ಸೂಕ್ತ ವ್ಯವಸ್ಥೆ ಮತ್ತು ತಜ್ಞರ ಕೊರತೆ ಇದೆ ಎಂಬ ಆರೋಪ ಹೆಚ್ಚಿವೆ.

ರಾಷ್ಟ್ರೀಯ ಹೆದ್ದಾರಿ-9ಕ್ಕೆ ಹೊಂದಿಕೊಂಡಿರುವುದರಿಂದ ಜಿಲ್ಲೆಯಲ್ಲಿ ರಸ್ತೆ ಅಪಘಾತಗಳ ಸಂಖ್ಯೆ ಹೆಚ್ಚಿದೆ. ರೋಗಿಗಳನ್ನು ಚಿಕಿತ್ಸೆಗಾಗಿ ಆಸ್ಪತ್ರೆಗೆ ಸಾಗಿಸುವಾಗ ಉಸಿರಾಟದ ತೊಂದರೆ ಸಹಜ. ಪ್ರಥಮ ಚಿಕಿತ್ಸೆ ವೇಳೆ ಅಂಬುಲೆನ್ಸ್‌ಗಳಲ್ಲಿ ವೆಂಟಿಲೇಟರ್‌ ಅಗತ್ಯವಾಗಿದೆ. ಅಷ್ಟೇ ಅಲ್ಲ, ಹಾವು ಕಡಿತಕ್ಕೆ ಒಳಗಾದವರು ಮತ್ತು ಹೆರಿಗೆಗಾಗಿ ಗರ್ಭಿಣಿಯರನ್ನು ಆಸ್ಪತ್ರೆಗೆ ದಾಖಲು ಮಾಡುವಾಗ ಕೃತಕ ಉಸಿರಾಟ ಬೇಕು. ಆದರೆ, ಬಹುತೇಕ ವಾಹನಗಳಲ್ಲಿ ಈ ವ್ಯವಸ್ಥೆ ಕೊರತೆಯಿಂದ ರೋಗಿಗಳು ಮಾರ್ಗ ಮಧ್ಯೆಯೇ ಜೀವ ಕಳೆದುಕೊಳ್ಳುವಂತಾಗಿದೆ.

ಎಲ್ಲೆಲ್ಲಿವೆ ಅಂಬುಲೆನ್ಸ್‌ಗಳು ಆರೋಗ್ಯ ಇಲಾಖೆಯಿಂದ ಬೀದರ ಜಿಲ್ಲೆಯಲ್ಲಿ ಒಟ್ಟು 41 ಅಂಬುಲೆನ್ಸ್‌ಗಳು ಕಾರ್ಯ ನಿರ್ವಹಿಸುತ್ತಿದ್ದು, ಈ ಪೈಕಿ ಹುಮನಾಬಾದ ತಾಲೂಕು 13, ಔರಾದ 11, ಭಾಲ್ಕಿ 8, ಬಸವಕಲ್ಯಾಣ 5 ಮತ್ತು ಬೀದರ 4 ವಾಹನಗಳು ಸೇರಿವೆ. ಇನ್ನೂ ಆರೋಗ್ಯ ಕವಚ ಆಂಬ್ಯುಲೆನ್ಸ್‌ಗಳು ಬೀದರ ತಾಲೂಕಿನಲ್ಲಿ 4 ಸೇರಿದಂತೆ ಜಿಲ್ಲೆಯಲ್ಲಿ 19 ವಾಹನಗಳು ಇವೆ.

ಆಧುನಿಕ ಅಂಬ್ಯುಲೆನ್ಸ್‌ಗಳಿಗೆ ಪ್ರಸ್ತಾವನೆ ಬೀದರ ಜಿಲ್ಲೆಯಲ್ಲಿ ಕಾರ್ಯ ನಿರ್ವಹಿಸುತ್ತಿರುವ ಆಂಬ್ಯುಲೆನ್ಸ್‌ಗಳು ಹಳೆ ಕಾಲದ್ದಾಗಿದ್ದು, ವೆಂಟಿಲೇಟರ್‌ ವ್ಯವಸ್ಥೆ ಅಳವಡಿಸಲಾಗಿಲ್ಲ. ಬ್ರಿಮ್ಸ್‌ ಆಸ್ಪತ್ರೆ ವಾಹನದಲ್ಲಿ ಕೃತಕ ಉಸಿರಾಟದ ವ್ಯವಸ್ಥೆ ಇದೆ. ಜಿಲ್ಲೆಯ ಪ್ರತಿ ತಾಲೂಕಿಗೊಂದು ಅತ್ಯಾಧುನಿಕ ಆಂಬ್ಯುಲೆನ್ಸ್‌ಗಳನ್ನು ಖರೀದಿಸಲು ಕಲ್ಯಾಣ ಕರ್ನಾಟಕ ಪ್ರದೇಶಾಭಿವೃದ್ಧಿ ಮಂಡಳಿಗೆ ಪ್ರಸ್ತಾವನೆ ಸಲ್ಲಿಸಲಾಗಿದ್ದು, ಶೀಘ್ರದಲ್ಲಿ ಮಂಜೂರಾಗಲಿದೆ.
ಡಾ| ವಿ.ಜಿ ರೆಡ್ಡಿ,
 ಡಿಎಚ್‌ಒ, ಬೀದರ

ಶ್ರೀ ಅಷ್ಠ ಲಕ್ಷ್ಮೀ ಜೋತಿಷ್ಯ ಮಂದಿರ,
ಉದ್ಯೋಗ, ಮದುವೆ ವಿಳಂಬ, ಸತಿ-ಪತಿ ಕಲಹ, ಶತ್ರುಪೀಡೆ, ಅತ್ತೆ-ಸೊಸೆ ಕಲಹ, ವಶೀಕರಣ, ವ್ಯವಹಾರದಲ್ಲಿ ನಷ್ಟ, ಇನ್ನೂ ನಿಮ್ಮಸಮಸ್ಯೆ ಯಾವುದೇ ಇರಲಿ, ಎಷ್ಟೇ ಕಠಿಣವಾಗಿರಲಿ ಶಾಶ್ವತ ಪರಿಹಾರ ಶತಃ ಶಿದ್ದ , ನಿಮ್ಮ ಯಾವುದೇ ಇಷ್ಟಾರ್ಥ ಕಾರ್ಯಗಳಿದ್ದರೂ ಕೇವಲ 5 ದಿನಗಳಲ್ಲಿ ನೇರವೆರಿಸಿ ಕೋಡುತ್ತಾರೇ.
ಶ್ರೀ ಶ್ರೀ ಬಿ ಹೆಚ್ ಆಚಾರ್ಯ ಗೂರುಜೀ
ಜಯನಗರ ಬೆಂಗಳೂರು, ಮೋ- 8884889444

ಈ ವಿಭಾಗದಿಂದ ಇನ್ನಷ್ಟು

ಹೊಸ ಸೇರ್ಪಡೆ