ಹತ್ಯಾಚಾರ ಖಂಡಿಸಿ ಆಲಮೇಲ ಬಂದ್

Team Udayavani, Dec 26, 2017, 12:03 PM IST

ಆಲಮೇಲ: ವಿಜಯಪುರದಲ್ಲಿ ನಡೆದ ಬಾಲಕಿ ಮೇಲಿನ ಅತ್ಯಾಚಾರ ಹಾಗೂ ಕೊಲೆ ಘಟನೆ ಖಂಡಿಸಿ ವಿವಿಧ ಸಂಘಟನೆಗಳು ಸೋಮವಾರ ಕರೆ ನೀಡಿದ್ದ ಆಲಮೇಲ ಬಂದ್‌ ಯಶಸ್ವಿಯಾಯಿತು. ಬಂದ್‌ ಕರೆ ಹಿನ್ನೆಲೆಯಲ್ಲಿ ಪಟ್ಟಣದ ಎಲ್ಲ ಅಂಗಡಿ ಮುಂಗಟ್ಟು, ಹೋಟೆಲ್‌ಗ‌ಳು ಮುಚ್ಚಿದ್ದವು.

ಸರಕಾರಿ ಬಸ್‌ ಹಾಗೂ ಖಾಸಗಿ ವಾಹನಗಳ ಸಂಚಾರದಲ್ಲಿ ವ್ಯತ್ಯಯವಾಗಿದ್ದು ಪ್ರಯಾಣಿಕರು ಪರದಾಡುವಂತಾಯಿತು. ಅಂಬಿಗರ ಚೌಡಯ್ಯ ವೃತ್ತದಿಂದ ವಿವಿಧ ಸಂಘಟನೆಗಳ ಸಹಯೋಗದಲ್ಲಿ ನಡೆದ ಪ್ರತಿಭಟನಾ ಮೆರವಣಿಗೆ ಪ್ರಮುಖ ಬೀದಿಗಳಲ್ಲಿ ಸಂಚರಿಸಿ ಅಂಬೇಡ್ಕರ್‌ ವೃತ್ತದಲ್ಲಿಬಹಿರಂಗ ಸಭೆಯಾಗಿ ಮಾರ್ಪಟ್ಟಿತು.

ಈ ವೇಳೆ ಸಂಘಟನೆಗಳ ಮುಖಂಡರಾದ ಚಂದ್ರಕಾಂತ ಸಿಂಗೆ, ಪರಶುರಾಮ ಕಾಂಬಳೆ, ವಿರುಪಾಕ್ಷ ಗುಬ್ಬೆವಾಡ, ಮಂಗಳಾ ಗುಡಿಮಠ ಸೇರಿದಂತೆ ಇತರರು ಮಾತನಾಡಿ, ಅತ್ಯಾಚಾರ ಎಸಗಿ ಕೊಲೆ ಮಾಡಿದ ಆರೋಪಿಗಳಿಗೆ ಸಾರ್ವಜನಿಕವಾಗಿ ಧರ್ಮದೇಟು ನೀಡಿ ಹತ್ಯೆ ಮಾಡಬೇಕು. ಆಗ ಕಾಮುಕರಿಗೆ ಭಯ ಹುಟ್ಟುತ್ತದೆ. ಕಾಮುಕರಿಗೆ ಕಾನೂನು ರೀತಿ ಶಿಕ್ಷೆಗಿಂತ ಸಾರ್ವಜನಿಕವಾಗಿ ಶಿಕ್ಷೆ ನೀಡಬೇಕು ಎಂದು ಆಕ್ರೋಶ ವ್ಯಕ್ತಪಡಿಸಿದರು.

ರಾಜ್ಯದಲ್ಲಿ ಅಲ್ಪಸಂಖ್ಯಾತ ಮತ್ತು ದಲಿತ ಮಹಿಳಿಯರಿಗೆ ರಕ್ಷಣೆ ಇಲ್ಲದಂತಾಗಿದೆ. ಸರಕಾರ ಕಾಮುಕರಿಗೆ ಕಠಿಣ ಶಿಕ್ಷೆ ನೀಡಬೇಕು. ಆರೋಪಿಗಳಿಗೆ ವಿಜಯಪುರ ಜಿಲ್ಲೆಯ ಕೆಲ ರಾಜಕಾರಣಿಗಳು ಬೆಂಬಲ ಇದೆ ಎಂದು ಹೇಳಲಾಗುತ್ತಿದ್ದು ಅತ್ಯಾಚಾರ ಎಸಗುವುದಕ್ಕಿಂತ ಬೆಂಬಲ ನೀಡುವುದು ದೊಡ್ಡ ತಪ್ಪು ಎಂದರು. 

ಹೆಣ್ಣು ಮಕ್ಕಳು ಸಾರ್ವಜನಿಕ ಸ್ಥಳಗಳಲ್ಲಿ ತಿರಗಾಡಬೇಕಾದರೆ ಭಯದಲ್ಲಿ ಇರಬೇಕಾಗಿದೆ. ಮೈ ಮುಟ್ಟಲು ಮುಂದಾದರೆ ರಾಣಿ ಚನ್ನಮ್ಮಳಂತೆ ಕಾಮುಕರಿಗೆ ಅಲ್ಲೆ ಅಂತ್ಯ ಕಾಣಿಸಬೇಕು. ಹೆಣ್ಣು ಮಕ್ಕಳು ಹೇಡಿಗಳಲ್ಲ ಎಂದು ತೋರಿಸಲು ಮುಂದಾಗಬೇಕು. ಆಗ ಕಾಮುಕರಿಗೆ ಭಯ ಹುಟ್ಟುತ್ತದೆ ಎಂದರು.

ಪ್ರತಿಭಟನೆಯಲ್ಲಿ ಚಂದ್ರಶೇಖರ ಶಿವಾಚಾರ್ಯರು, ವಿರಕ್ತಮಠದ ಸ್ವಾಮಿಗಳು, ಡಾ| ಸಂದೀಪ ಪಾಟಿಲ, ಬಿ.ಆರ್‌. ಯಂಟಮಾನ, ಚಂದ್ರಕಾಂತ ಸಿಂಗೆ, ವಿದ್ಯಾವತಿ ಗೌರ, ಸೋಮುನಾಥ ಮೇಲಿನಮನಿ, ಅಕºರ್‌ ಮುಲ್ಲಾ, ಪ್ರದೀಪ ಯಂಟಮಾನ, ಭರತಕುಮಾರ ಯಂಟಮಾನ, ಹನುಮಂತ ಹೂಗಾರ, ಶಿವುಕುಮಾರ ಮೇಲಿನಮನಿ, ಶ್ರೀಕಾಂತ ಸೋಮಜಾಳ, ಶರಣು ಸಿಂಧೆ, ರಮೇಶ ಭಂಟನೂರ, ದೇವಪ್ಪ ಗುಣಾರಿ, ಹರೀಶ ಯಂಟಮಾನ, ಜೈಭೀಮ ನಾಯ್ಕೋಡಿ, ಹುಸೇನ್‌ ತಾಂಬೋಳಿ, ಶಶಿಧರ ಗಣಿಯಾರ, ಶಿವರಾಜ್‌ ಬೋರನಾಯಕ, ವಿಶ್ವನಾಥ ಹಿರೆಮಠ, ಅಮೃತ ಕೊಟ್ಟಳಗಿ, ರಾಜು ಮೇತ್ರಿ, ಹನುಮಂತ ಪೂಜಾರಿ ಸೇರಿದಂತೆ ಅನೇಕರು ಭಾಗಿಯಾಗಿದ್ದರು.

ಹೊರ್ತಿಯಲ್ಲಿ ರಾಷ್ಟ್ರೀಯ ಹೆದ್ದಾರಿ ತಡೆದು ಆಕ್ರೋಶ ಇಂಚಗೇರಿ: ವಿಜಯಪುರ ನಗರದಲ್ಲಿ ಬಾಲಕಿ ಮೇಲೆ ನಡೆದ ಅತ್ಯಾಚಾರ ಮತ್ತು ಕೊಲೆ ಖಂಡಿಸಿ ಡಿಎಸ್ಸೆಸ್‌ ಹಾಗೂ ವಿವಿಧ ಸಂಘಟನೆ ಕಾರ್ಯಕರ್ತರು ಸೋಮವಾರ ರಾಷ್ಟ್ರೀಯ ಹೆದ್ದಾರಿ ತಡೆದು ಟೈರ್‌ಗೆ ಬೆಂಕಿ ಹಚ್ಚಿ ಪ್ರತಿಭಟನೆ ನಡೆಸಿದರು. 

ಹೊರ್ತಿ ಗ್ರಾಮದ ರೇವಣಸಿದ್ದೇಶ್ವರ ಆವರಣದಲ್ಲಿ ಸೇರಿದ ಪ್ರತಿಭಟನಾಕಾರರು ಅತ್ಯಾಚಾರಿಗಳ ವಿರುದ್ಧ ಘೋಷಣೆ ಕೂಗುತ್ತ ಗ್ರಾಮದ ಪ್ರಮುಖ ದಾರಿಗಳಲ್ಲಿ ಸಾಗಿ ಮಧ್ಯಾಹ್ನ 11ಕ್ಕೆ ರಾಷ್ಟ್ರೀಯ ಹೆದ್ದಾರಿ ತಡೆದರು. ಈ ಸಂದರ್ಭದಲ್ಲಿ ಗ್ರಾಮದಲ್ಲಿನ ಸಾರ್ವಜನಿಕರು ಅಂಗಡಿ ಮುಂಗಟ್ಟು ಬಂದ್‌ ಮಾಡುವ ಮೂಲಕ ಪ್ರತಿಭಟನೆಗೆ ಬೆಂಬಲಿಸಿದರು.

ಈ ವೇಳೆ ಡಿಎಸ್ಸೆಸ್‌ ಜಿಲ್ಲಾ ಸಂಚಾಲಕ ವಿನಾಯಕ ಗುಣಸಾಗರ ಮಾತನಾಡಿ, ರಾಜ್ಯದಲ್ಲಿ ದಲಿತರ ಹಾಗೂ ವಿದ್ಯಾರ್ಥಿಗಳ ಮೇಲೆ ಮೇಲಿಂದ ಮೇಲೆ ದೌರ್ಜನ್ಯಗಳು ನಡೆಯುತ್ತಿರುವದು ಅಮಾನವೀಯ ಸಂಗತಿ. ಕೂಡಲೇ ಸರ್ಕಾರ ಅಪರಾಧಿಗಳನ್ನು ಬಂಧಿಸಿ ಗಲ್ಲು ಶಿಕ್ಷ ವಿ ಧಿಸಿಲು ಕ್ರಮ ಕೈಗೊಳ್ಳಬೇಕು ಎಂದರು.

ಮುಖಂಡರಾದ ಶ್ರೀಶೈಲಗೌಡ ಬಿರಾದಾರ, ಅಣ್ಣಪ್ಪ ಖೈನೂರ, ದಯಾಸಾಗರ ಪಾಟೀಲ, ಬಿ.ಡಿ. ಪಾಟೀಲ, ತಾಪಂ ಸದಸ್ಯ ಗಣಪತಿ ಬಾಣಿಕೋಲ, ಶ್ರೀನಿವಾಸ ಕಂದಗಲ್‌ ಮಾತನಾಡಿ, ರಾಜ್ಯದಲ್ಲಿ ಇಂತಹ ಘಟನೆಗಳು ನಡೆಯಲು ಸರ್ಕಾರ ಕುಮ್ಮಕ್ಕು ನೀಡದೇ ಅತ್ಯಾಚಾರ ಮತ್ತು ಕೊಲೆ ಪ್ರಕರಣದ ಕುರಿತು ಶೀಘ್ರವಾಗಿ ತನಿಖೆ ನಡೆಸಿ ಮೃತಳ ಕುಟುಂಬಕ್ಕೆ ನ್ಯಾಯ ಒದಗಿಸಬೇಕು. ಕಾನೂನು ಸುವ್ಯವಸ್ಥೆ ಹದಗೆಟ್ಟಿದ್ದು ರಾಜ್ಯದಲ್ಲಿ ಇಂತಹ ಘಟನೆಗಳು ಮರುಕಳಿಸುತ್ತಿವೆ. ರಾಜ್ಯ ಸರ್ಕಾರ ಅತ್ಯಾಚಾರಿಗಳ ವಿರುದ್ಧ ಕಠಿಣ ಕಾನೂನು ರೂಪಿಸಿಬೇಕು ಎಂದರು.

ಪ್ರತಿಭಟನೆಯಲ್ಲಿ ವಿವಿಧ ಸಂಘಟನೆಗಳ ಕಾರ್ಯಕರ್ತರಾದ ಸಂತೋಷ ತಳಕೇರಿ, ಕ್ಲಲಪ್ಪ ಅಂಜುಟಗಿ, ಮಹಾದೇವ ಬನಸೋಡೆ, ಸತೀಶ ಸಾವಳಸಂಗ, ಮಹಾದೇವ ಸಾವಳಸಂಗ, ದುಂಡಪ್ಪ ವಾಘಮೋಡೆ, ಪರುಶುರಾಮ ಕನ್ನೊಳ್ಳಿ, ಶ್ರೀಶೈಲ ವಟಾರೆ, ಸಿದ್ದಪ್ಪ ತಳಕೇರಿ, ಮಲ್ಲೇಶ ಬನಸೋಡೆ, ರಮೇಶ ನಿಂಬಾಳಕರ, ಸಾವಳಪ್ಪ ಕಿಣಗಿ, ಅಶೋಕ ತಳಕೇರಿ, ರೇವಣಸಿದ್ದ ಘೋಡಕೆ, ಶರಣು ಡೊಣಗಿ, ಶಿವಾನಂದ ಅಲಕೋಡೆ, ಬಸಪ್ಪ ಬಸನಾಳ, ಸಂಗಪ್ಪ ಭೋಸಗಿ, ಶ್ರೀಮಂತ ಪೂಜಾರಿ, ಶಿವಪುತ್ರ ತಳಕೇರಿ ಸೇರಿದಂತೆ ಅನೇಕರು ಪಾಲ್ಗೊಂಡಿದ್ದರು. 

ಶ್ರೀ ಅಷ್ಠ ಲಕ್ಷ್ಮೀ ಜೋತಿಷ್ಯ ಮಂದಿರ,
ಉದ್ಯೋಗ, ಮದುವೆ ವಿಳಂಬ, ಸತಿ-ಪತಿ ಕಲಹ, ಶತ್ರುಪೀಡೆ, ಅತ್ತೆ-ಸೊಸೆ ಕಲಹ, ವಶೀಕರಣ, ವ್ಯವಹಾರದಲ್ಲಿ ನಷ್ಟ, ನಿಮ್ಮ ಸಮಸ್ಯೆ ಯಾವುದೇ ಇರಲಿ, ಎಷ್ಟೇ ಕಠಿಣವಾಗಿರಲಿ ಶಾಶ್ವತ ಪರಿಹಾರ ಶತಃಸಿದ್ಧ. ನಿಮ್ಮ ಯಾವುದೇ ಇಷ್ಟಾರ್ಥ ಕಾರ್ಯಗಳಿದ್ದರೂ ಕೇವಲ ೫ ದಿನಗಳಲ್ಲಿ ನೆರವೇರಿಸಿ ಕೊಡುತ್ತಾರೆ. ಇಂದೇ ಭೇಟಿ ನೀಡಿ.
ಶ್ರೀ ಶ್ರೀ ಬಿ ಹೆಚ್ ಆಚಾರ್ಯ ಗುರೂಜಿ
ಜಯನಗರ ಬೆಂಗಳೂರು, ಮೋ- 8884889444

ಈ ವಿಭಾಗದಿಂದ ಇನ್ನಷ್ಟು

ಹೊಸ ಸೇರ್ಪಡೆ