Udayavni Special

ಸಮಿತಿಗೆ ತಪ್ಪು ಮಾಹಿತಿ ನೀಡಿದರೆ ಕ್ರಮ

ಜಿಲ್ಲೆಯಲ್ಲಿ ಜಾಗೃತಿ ಮೂಡಿಸಿದರೂ ಜಿಲ್ಲೆಯಲ್ಲಿ ಶೇ.30 ಬಯಲು ಶೌಚಾಲಯ ಪದ್ಧತಿ ಜೀವಂತ

Team Udayavani, Feb 26, 2021, 7:00 PM IST

ಸಮಿತಿಗೆ ತಪ್ಪು ಮಾಹಿತಿ ನೀಡಿದರೆ ಕ್ರಮ

ವಿಜಯಪುರ: ಶುದ್ಧ ಕುಡಿವ ನೀರಿನ ಘಟಕ ಸ್ಥಾಪನೆ, ನಿರ್ವಹಣೆ ವಿಷಯದಲ್ಲಿ ಸಾಕಷ್ಟು ದೂರುಗಳಿವೆ. ಹೀಗಾಗಿ ವಾಸ್ತವಿಕ ಸ್ಥಿತಿಗತಿ ಅಧ್ಯಯನಕ್ಕಾಗಿ ಜಂಟಿ ಸದನ ಸಮಿತಿ ರಚಿಸಿದ್ದು, ಸದನ ಸಮಿತಿ ಜಿಲ್ಲೆಗೆ ಬಂದಾಗ ಅ ಧಿಕಾರಿಗಳು ನಿಖರ ಮಾಹಿತಿ ನೀಡಬೇಕು. ತಪ್ಪು ಮಾಹಿತಿ ನೀಡಿದರೆ ಅಧಿಕಾರಿಗಳೇ ನೇರ ಹೊಣೆ ಎಂದು ಗ್ರಾಮೀಣಾಭಿವೃದ್ಧಿ ಪಂಚಾಯತ್‌ ರಾಜ್‌ ಸಚಿವ ಕೆ.ಎಸ್‌. ಈಶ್ವರಪ್ಪ ಎಚ್ಚರಿಕೆ ನೀಡಿದರು.

ನಗರದ ಜಿಪಂ ಸಭಾಂಗಣದಲ್ಲಿ ಗುರುವಾರ ಜರುಗಿದ ಸಭೆಯಲ್ಲಿ ಅಧ್ಯಕ್ಷತೆ ವಹಿಸಿ ಇಲಾಖೆ ಪ್ರಗತಿ ಪರಿಶೀಲನೆ ನಡೆಸಿ ಅವರು ಮಾತನಾಡಿದರು. ರಾಜ್ಯದಲ್ಲಿ ಬಹುತೇಕ ಕುಡಿವ ನೀರಿನ ಯೋಜನೆಗಳ ನೀರು ಶುದ್ಧೀಕರಣ ಘಟಕಗಳು ರೋಗಗ್ರಸ್ತವಾಗಿವೆ. ಹೀಗಾಗಿ ಅಧಿ ಕಾರಿಗಳು ಜಂಟಿ ಸದನ ಸಮಿತಿ ಪರಿಶೀಲನೆಗೆ ಬಂದಾಗ ಆರ್‌ಒ ಪ್ಲಾಂಟ್‌ ಸರಿಯಾಗಿ ಕಾರ್ಯನಿರ್ವಹಿಸುತ್ತಿವೆ ಎಂದು ಹಾರಿಕೆ ಉತ್ತರ ನೀಡದೇ ಪ್ರತಿ ಘಟಕದ ನಿಖರ ಮಾಹಿತಿ ನೀಡಬೇಕು. ಹೀಗಾಗಿ ಖುದ್ದಾಗಿ ಸ್ಥಳ ಪರಿಶೀಲಿಸಿ ನೈಜ ಸ್ಥಿತಿಗತಿ ಕುರಿತು ಅಧಿ ಕಾರಿಗಳಿಂದ ವಾಸ್ತವ ವರದಿ ಪಡೆಯಬೇಕು ಎಂದು ವರದಿ ನೀಡಬೇಕು ಎಂದು ನಿರ್ದೇಶನ ನೀಡಿದರು.

ಕುಡಿವ ನೀರಿನ ಶುದ್ಧೀಕರಣ ಘಟಕಗಳು ನೆಪಕ್ಕೆ ಮಾತ್ರ ಇವೆ. ಶೇ.50 ಘಟಕಗಳೂ ಕಾರ್ಯ ನಿರ್ವಹಿಸುತ್ತಿಲ್ಲ. ಹೀಗಾಗಿ ಜನಪ್ರತಿನಿಧಿಗಳ ಫೋಟೋ ಅಳವಡಿಕೆಯ ಈ ಘಟಕಗಳು ಬಟ್ಟೆ ತೊಳೆಯುವ ಘಟಕಗಳಂತೆ ಪತಿವರ್ತನೆ ಆಗಿವೆ ಎಂದು ಜಿಪಂ ಉಪಾಧ್ಯಕ್ಷ ಪ್ರಭುಗೌಡ ದೇಸಾಯಿ, ಸದಸ್ಯ ಗುರುರಾಜಗೌಡ ಪಾಟೀಲ ದೂರಿದರು.

ಇದಕ್ಕೆ ದನಿಗೂಡಿಸಿದ ಇಲಾಖೆ ಪ್ರಧಾನ ಕಾರ್ಯದರ್ಶಿ ಎಲ್‌.ಕೆ. ಅತೀಕ್‌ ಬೇರೆ ಜಿಲ್ಲೆಗಳಿಗೆ ಹೋಲಿಸಿದರೆ ವಿಜಯಪುರ ಜಿಲ್ಲೆಯಲ್ಲಿ ಕುಡಿವ ನೀರಿನ ಶುದ್ಧೀಕರಣ ಘಟಕಗಳು ಹೆಚ್ಚಿನ ಪ್ರಮಾಣದಲ್ಲಿ ಹಾಳಾಗಿದ್ದು, ನಿರ್ವಹಣೆ ಮಾಡುತ್ತಿಲ್ಲ ಎಂದರು.

ಬಹುಹಳ್ಳಿ ಕುಡಿವ ನೀರು ಯೋಜನೆಯಿಂದ ಶುದ್ಧ ನೀರು ಸಿಗುತ್ತಿರುವ ಕಾರಣ ನೀರು ಶುದ್ಧೀಕರಣ ಘಟಕಗಳ ದುರಸ್ತಿಗೆ ಅನಗತ್ಯ ಹಣ ವೆಚ್ಚ ಮಾಡದೇ
ಸದರಿ ಯೋಜನೆಯನ್ನೇ ರದ್ದು ಮಾಡಿ ಎಂದು ಜಿಪಂ ಸದಸ್ಯೆ ಪ್ರತಿಭಾ ಪಾಟೀಲ ಸಲಹೆ ನೀಡಿದರು. ಕೇಂದ್ರ ಸರ್ಕಾರದ ಜಲಜೀವನ ಮಿಷನ್‌ ಯೋಜನೆ ಅನುಷ್ಠಾನ ತ್ವರಿತಗೊಳ್ಳಬೇಕು. ಕಾಮಗಾರಿ  ಆರಂಭಿಸುವಲ್ಲಿ ವಿಳಂಬ ತೋರಿದ ಗುತ್ತಿಗೆದಾರರನ್ನು ನಿರ್ದಾಕ್ಷಿಣ್ಯವಾಗಿ ಕಪ್ಪು ಪಟ್ಟಿಗೆ ಸೇರಿಸಿ ಎಂದು ನಿರ್ದೇಶನ ನೀಡಿದ ಸಚಿವರು, ಯೋಜನೆ ಅನುಷ್ಠಾನಕ್ಕೆ ಕೋವಿಡ್‌ ನೆಪ ಹೇಳಲು ಮುಂದಾದ ಅಧಿ ಕಾರಿಗಳನ್ನು ತರಾಟೆಗೆ ತೆಗೆದುಕೊಂಡರು. ಯೋಜನೆ ಅನುಷ್ಠಾನದ ವಿಷಯದಲ್ಲಿ ಸ್ಪಂದಿಸದ ಗುತ್ತಿಗೆದಾರರನ್ನು ಯಾವ ಒತ್ತಡಕ್ಕೂ ಮಣಿಯದೇ ಕಪ್ಪು ಪಟ್ಟಿಗೆ ಸೇರಿಸಿ. ಅಗತ್ಯ ಬಿದ್ದರೆ ಕ್ರಿಮಿನಲ್‌ ಕೇಸ್‌ ಹಾಕಿ ಎಂದು ತಾಕೀತು ಮಾಡಿದರು.

ಬೇರೆ ಉದ್ದೇಶಕ್ಕೆ ಶೌಚಾಲಯ ಬಳಕೆ ಆಗುತ್ತಿವೆ ಎಂದಾದರೆ ಜನರಲ್ಲಿ ಜಾಗೃತಿ ಕೊರತೆ ಇದೆ ಎಂದರ್ಥ. ಹಲವೆಡೆ ಶೌಚಾಲಯಗಳೇ ನಿರ್ಮಾಣಗೊಂಡಿಲ್ಲ ಎಂದು ಜಿಪಂ ಅಧ್ಯಕ್ಷೆ ಸುಜಾತಾ ಕಳ್ಳಿಮನಿ ಸಭೆಯಲ್ಲಿ ಗಮನ ಸೆಳೆದಾಗ, ಜಿಲ್ಲೆಯಲ್ಲಿ ಜಾಗೃತಿ ಮೂಡಿಸಿದರೂ ಜಿಲ್ಲೆಯಲ್ಲಿ ಶೇ.30 ಬಯಲು ಶೌಚಾಲಯ ಪದ್ಧತಿ ಜೀವಂತವಿದೆ ಎಂದು ಅಧಿಕಾರಿಗಳು ಸಭೆಯ ಗಮನಕ್ಕೆ ತಂದರು.

ಸರ್ಕಾರ ಕೋಟ್ಯಂತರ ರೂ. ವೆಚ್ಚ ಮಾಡಿ ನಿರ್ಮಿಸಿದ ಶೌಚಾಲಯ ಬಳಕೆ ಆಗುತ್ತಿಲ್ಲ ಎಂದಾದರೆ ಹೇಗೆ?. ಶೌಚಾಲಯ ಬಳಕೆ ವಿಷಯದಲ್ಲಿ ಜನರಲ್ಲಿ ಜಾಗೃತಿ ಮೂಡಿಸಲು ಮಾಧ್ಯಮಗಳನ್ನು ಬಳಸಿಕೊಳ್ಳಬೇಕು. ಜೊತೆಗೆ ಗ್ರಾಪಂ ನೂತನ ಸದಸ್ಯರ ಮೂಲಕ ಜನರಲ್ಲಿ ಜಾಗೃತಿ ಮೂಡಿಸಲು ಕ್ರಮ ಕೈಗೊಳ್ಳಿ ಎಂದು ಸಲಹೆ ನೀಡಿದರು. ಈ ಸಂದರ್ಭದಲ್ಲಿ ನಾಗಠಾಣ ಶಾಸಕ ದೇವಾನಂದ ಚವ್ಹಾಣ, ಜಿಪಂ ಅಧ್ಯಕ್ಷೆ ಸುಜಾತಾ ಕಳ್ಳಿಮನಿ, ಕರ್ನಾಟಕ ಲಿಂಬೆ ಅಭಿವೃದ್ಧಿ ಮಂಡಳಿ ಅಧ್ಯಕ್ಷ ಅಶೋಕ ಅಲ್ಲಾಪುರ, ಜಿಪಂ ಸಿಇಒ ಗೋವಿಂದರೆಡ್ಡಿ ಸೇರಿದಂತೆ ಇತರರು ಇದ್ದರು.

ಟಾಪ್ ನ್ಯೂಸ್

ವಿರಾರ್ ನ ಕೋವಿಡ್ ಆಸ್ಪತ್ರೆಯಲ್ಲಿ ಅಗ್ನಿ ದುರಂತ: 13 ಸೋಂಕಿತರ ದುರ್ಮರಣ!

ವಿರಾರ್ ನ ಕೋವಿಡ್ ಆಸ್ಪತ್ರೆಯಲ್ಲಿ ಅಗ್ನಿ ದುರಂತ: 13 ಸೋಂಕಿತರ ದುರ್ಮರಣ!

ಈ ರಾಶಿಯವರಿಗಿಂದು ಸಾರ್ವಜನಿಕ ಕಾರ್ಯದಲ್ಲಿ ಅವಮಾನ ಅಪಮಾನ ಪ್ರಸಂಗ ಎದುರಾಗಬಹುದು!

ಈ ರಾಶಿಯವರಿಗಿಂದು ಸಾರ್ವಜನಿಕ ಕಾರ್ಯದಲ್ಲಿ ಅವಮಾನ ಅಪಮಾನ ಪ್ರಸಂಗ ಎದುರಾಗಬಹುದು!

ಲಸಿಕೆ ನೀಡಲು 30,000 ಕೋಟಿ ಬೇಕು

ಲಸಿಕೆ ನೀಡಲು 30,000 ಕೋಟಿ ಬೇಕು

ರಾಷ್ಟ್ರೀಯ ತುರ್ತು ಪರಿಸ್ಥಿತಿಯಂತಿದೆ

ರಾಷ್ಟ್ರೀಯ ತುರ್ತು ಪರಿಸ್ಥಿತಿಯಂತಿದೆ

ದೇಶದಲ್ಲಿ ಆರೋಗ್ಯ ತುರ್ತು ಪರಿಸ್ಥಿತಿ?

ದೇಶದಲ್ಲಿ ಆರೋಗ್ಯ ತುರ್ತು ಪರಿಸ್ಥಿತಿ?

ಮೇಯಲ್ಲಿ ಹೆಚ್ಚು ಕೇಸ್‌!

ಮೇಯಲ್ಲಿ ಹೆಚ್ಚು ಕೇಸ್‌!

ರಾಜಕೀಯ ಪಥ ಬದಲಿಸಿದ ಅಣ್ಣಾ ಆಂದೋಲನಕ್ಕೆ ದಶಕ

ರಾಜಕೀಯ ಪಥ ಬದಲಿಸಿದ ಅಣ್ಣಾ ಆಂದೋಲನಕ್ಕೆ ದಶಕಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು

Nemaka

ಕೋವಿಡ್‌ ಸೋಂಕಿತರ ಸಾವಿನ ಪ್ರಮಾಣ ತಗ್ಗಿಸಿ

mb-patil

ಜಿಂದಾಲ್ ಆಕ್ಸಿಜನ್ ಮಹಾರಾಷ್ಟ್ರಕ್ಕೆ ಕಳುಹಿಸುವುದಕ್ಕೆ ಎಂ.ಬಿ.ಪಾಟೀಲ ಆಕ್ಷೇಪ

್ರ45ತಯಗಹವ್ರತಗ

ಕಾಂಗ್ರೆಸ್‌ ನಿಂದ ಮಾತ್ರ ಅಭಿವೃದ್ಧಿ : ತಾಂಬೋಳಿ

ಹಗ್ರದೆಡ

 ಕೋವಿಡ್‌ ನಿಯಮ ಪಾಲಿಸಿ ದೃಢತೆಯಿಂದ ಪರೀಕ್ಷೆ ಎದುರಿಸಿ

ವಿಜಯಪುರ : 22ರಿಂದ  ಬ್ಯಾಂಕ್ ವ್ಯವಹಾರ ಸಮಯ ಬದಲಾವಣೆ

ವಿಜಯಪುರ : 22ರಿಂದ  ಬ್ಯಾಂಕ್ ವ್ಯವಹಾರ ಸಮಯ ಬದಲಾವಣೆ

MUST WATCH

udayavani youtube

ಬೈಕ್ ಗೆ ನಾಯಿಯನ್ನು ಕಟ್ಟಿ ಹೆದ್ದಾರಿಯಲ್ಲೇ ಎಳೆದುಕೊಂಡು ಹೋದ ಸವಾರರು ! |

udayavani youtube

ಅಘೋಷಿತ ಲಾಕ್ ಡೌನ್ ವಿರುದ್ಧ ಮಾಜಿ ಸಿಎಂ ಕುಮಾರ ಸ್ವಾಮಿ ಕೆಂಡಾಮಂಡಲ

udayavani youtube

ಮಂಗಳೂರಿನ ಮಾರುಕಟ್ಟೆ ಸುಧಾರಣೆ ಕುರಿತು ಉದಯವಾಣಿ ಫೋನ್ ಇನ್

udayavani youtube

ಕೊರೊನಾ 1 ವರುಷ !

udayavani youtube

ಆಕ್ಸಿಜನ್ ಮಹಾರಾಷ್ಟ್ರಕ್ಕೆ ಕಳುಹಿಸುವುದಕ್ಕೆ ಎಂ.ಬಿ.ಪಾಟೀಲ ಆಕ್ಷೇಪ

ಹೊಸ ಸೇರ್ಪಡೆ

ವಿರಾರ್ ನ ಕೋವಿಡ್ ಆಸ್ಪತ್ರೆಯಲ್ಲಿ ಅಗ್ನಿ ದುರಂತ: 13 ಸೋಂಕಿತರ ದುರ್ಮರಣ!

ವಿರಾರ್ ನ ಕೋವಿಡ್ ಆಸ್ಪತ್ರೆಯಲ್ಲಿ ಅಗ್ನಿ ದುರಂತ: 13 ಸೋಂಕಿತರ ದುರ್ಮರಣ!

ಈ ರಾಶಿಯವರಿಗಿಂದು ಸಾರ್ವಜನಿಕ ಕಾರ್ಯದಲ್ಲಿ ಅವಮಾನ ಅಪಮಾನ ಪ್ರಸಂಗ ಎದುರಾಗಬಹುದು!

ಈ ರಾಶಿಯವರಿಗಿಂದು ಸಾರ್ವಜನಿಕ ಕಾರ್ಯದಲ್ಲಿ ಅವಮಾನ ಅಪಮಾನ ಪ್ರಸಂಗ ಎದುರಾಗಬಹುದು!

ಕರಾವಳಿಯಲ್ಲೂ ಆಕ್ಸಿಜನ್‌ಗೆ ಹೆಚ್ಚಿದ ಬೇಡಿಕೆ!

ಕರಾವಳಿಯಲ್ಲೂ ಆಕ್ಸಿಜನ್‌ಗೆ ಹೆಚ್ಚಿದ ಬೇಡಿಕೆ!

ಲಸಿಕೆ ನೀಡಲು 30,000 ಕೋಟಿ ಬೇಕು

ಲಸಿಕೆ ನೀಡಲು 30,000 ಕೋಟಿ ಬೇಕು

ರಾಷ್ಟ್ರೀಯ ತುರ್ತು ಪರಿಸ್ಥಿತಿಯಂತಿದೆ

ರಾಷ್ಟ್ರೀಯ ತುರ್ತು ಪರಿಸ್ಥಿತಿಯಂತಿದೆ

Thanks for visiting Udayavani

You seem to have an Ad Blocker on.
To continue reading, please turn it off or whitelist Udayavani.