Udayavni Special

ಬಿಜೆಪಿಗೆ ಕಾರ್ಯಕರ್ತರೇ ಜೀವಾಳ


Team Udayavani, Apr 6, 2021, 8:35 PM IST

ಹದ್ಗ್ಹಹಗಹಗ

ಇಂಡಿ: ಬಿಜೆಪಿ ದೇಶದಲ್ಲಿ ದೊಡ್ಡ ಪಕ್ಷವಾಗಿ ಬೆಳೆದಿದೆ. ಪಕ್ಷ ಬೆಳೆಯಲು ಮೂಲ ಕಾರಣವೇ ಕಾರ್ಯಕರ್ತರು. ಪಕ್ಷಕ್ಕೆ ಕಾರ್ಯಕರ್ತರೇ ಜೀವಾಳ. ಶೀಘ್ರದಲ್ಲೇ ಬರಲಿರುವ ತಾಲೂಕು ಪಂಚಾಯತ್‌, ಜಿಲ್ಲಾ ಪಂಚಾಯತ್‌ ಚುನಾವಣೆಗೆ ಕಾರ್ಯಕರ್ತರು ಈಗಿನಿಂದಲೇ ತಯಾರಿ ಮಾಡಿಕೊಂಡು ಬಿಜೆಪಿ ಧ್ವಜ ಹಾರಿಸಬೇಕು ಎಂದು ಸಂಸದ ರಮೇಶ ಜಿಗಜಿಣಗಿ ಹೇಳಿದರು.

ನಗರದ ಶುಭಂ ಮಂಗಲ ಕಾರ್ಯಾಲಯದಲ್ಲಿ ಬಿಜೆಪಿ ಇಂಡಿ ಮಂಡಲ ವತಿಯಿಂದ ಹಮ್ಮಿಕೊಂಡಿದ್ದ ಬಿಜೆಪಿ ಕಾರ್ಯಕಾರಿಣಿ ಸಭೆಯನ್ನು ಉದ್ಘಾಟಿಸಿ ಅವರು ಮಾತನಾಡಿದರು. ನಾನೇ ಆಗಲಿ, ಶಾಸಕ, ಜಿಪಂ ಸದಸ್ಯ ಯಾರೇ ಆಗಲಿ ಒಬ್ಬರೇ ಪ್ರಚಾರ ಮಾಡಿ ಗೆಲ್ಲಲು ಸಾಧ್ಯವಾಗಲ್ಲ. ಒಂದೇ ಸಮುದಾಯದಿಂದ ಚುನಾವಣೆ ಗೆಲ್ಲಲು ಸಾಧ್ಯವಿಲ್ಲ. ಎಲ್ಲ ಸಮಾಜದ ಜನರನ್ನು ಒಗ್ಗೂಡಿಸಿ ಚುನಾವಣೆಯಲ್ಲಿ ಪ್ರಚಾರ ಮಾಡಿ ನಾವು ಪಕ್ಷವನ್ನು ಗೆಲ್ಲಿಸಬೇಕಿದೆ ಎಂದರು.

ಕಾರ್ಯಕರ್ತರು ರಾಜ್ಯ ರಾಜಕಾರಣದ ಬಗ್ಗೆ ತಲೆ ಕೆಡಿಸಿಕೊಳ್ಳಬೇಡಿ. ನಮ್ಮ ತಾಲೂಕಿನಲ್ಲಿ ಪಕ್ಷ ಸಂಘಟನೆ ಮಾಡುವ ಗುರಿ ಒಂದೆ ತಲೆಯಲ್ಲಿ ಇಟ್ಟುಕೊಂಡು ಸಂಘಟನೆ ಮಾಡಿ. ನಾನು ನನ್ನ ಹತ್ತಿರ ಬಂದ ಪಕ್ಷದ ಕಾರ್ಯಕರ್ತರ ಕೆಲಸ ಮಾಡಿದ್ದೇನೆ. ಯಾರ ಮನಸ್ಸು ನೋಯಿಸುವ ಕೆಲಸ ಮಾಡಿಲ್ಲ. ಯಾರ ಮೇಲೂ ಇಂದಿಗೂ ಹರಿಹಾಯ್ದಿಲ್ಲ ಎಂದು ಹೇಳಿದರು.

ಇಂಡಿ ತಾಲೂಕಿನ ಬಹುತೇಕ ಹಳ್ಳಿಗಳಿಗೆ ಕುಡಿಯುವ ನೀರಿನ ಬವಣೆ ತಪ್ಪಿಸಲು ನಾನು ಕೇಂದ್ರ ಸಚಿವನಾಗಿದ್ದಾಗ 110 ಕೋಟಿ ರೂ. ಕೊಟ್ಟಿದ್ದೇನೆ. 104 ಕೋಟಿ ರೂ. ವೆಚ್ಚದಲ್ಲಿ ಅಥರ್ಗಾ, ತಡವಲಗಾ, ಹಂಜಗಿ ಕೆರೆ ತುಂಬಿಸಲು ಕೆಲಸ ಮಾಡಿದ್ದೇನೆ ಎಂದರು. ಹಿಂದೆ ನಮ್ಮನ್ನಾಳಿದ ಕೇಂದ್ರ ಸರಕಾರಗಳು ದೇಶದಲ್ಲಿ ಅಭಿವೃದ್ಧಿ ಕೆಲಸ ಮಾಡಿದ್ದರೆ ಇಂದು ದೇಶದ ಚಿತ್ರಣವೇ ಬೇರೆ ಇರುತ್ತಿತ್ತು. ದೇಶದ ಅಭಿವೃದ್ಧಿಗಾಗಿ ಮೋದಿ ಅವರೇ ಬೇಕಾಯಿತು ಎಂದು ಹೇಳಿದರು.

ಬಿಜೆಪಿ ಜಿಲ್ಲಾಧ್ಯಕ್ಷ ಆರ್‌. ಎಸ್‌. ಪಾಟೀಲ ಕೂಚಬಾಳ, ಮಂಡಲ ಅಧ್ಯಕ್ಷ ಮಲ್ಲಿಕಾರ್ಜುನ ಕಿವುಡೆ ಮಾತನಾಡಿದರು. ಚಂದ್ರಶೇಖರ ಕವಟಗಿ, ವಿವೇಕಾನಂದ ಡಬ್ಬಿ, ಮಲ್ಲಿಕಾರ್ಜುನ ಹೂಗಾರ, ಬಸವರಾಜ ಬಿರಾದಾರ, ಚಿದಾನಂದ ಚಲವಾದಿ, ದಯಾಸಾಗರ ಪಾಟೀಲ, ಕಾಸುಗೌಡ ಬಿರಾದಾರ, ರವಿಕಾಂತ ಬಗಲಿ, ಶೀಲವಂತ ಉಮರಾಣಿ, ಅನಿಲ ಜಮಾದಾರ, ಸಿದ್ದಲಿಂಗ ಹಂಜಗಿ, ಯಲ್ಲಪ್ಪ ಹದರಿ, ರವಿ ವಗ್ಗೆ, ಅನಿಲಗೌಡ ಬಿರಾದಾರ, ಲಾಯಪ್ಪ ದೊಡಮನಿ, ಗಣಪತಿ ಬಾಣಿಕೋಲ, ಶಾಂತು ಕಂಬಾರ, ಶಿವಾನಂದ ಕಲಶೆಟ್ಟಿ, ವಿಜಯಲಕ್ಷಿ$¾à ರೂಗಿಮಠ, ರಾಜಶೇಖರ ಯರಗಲ್ಲ, ಶರಣಗೌಡ ಬಂಡಿ, ಶಿವರುದ್ರ ಪಾಟೀಲ, ಶ್ರೀಶೈಲ ಮದರಿ, ರವಿ ರೋಡಗಿ, ಬೊಗೇಶ ಕಲಶೆಟ್ಟಿ, ಸುರೇಶ ಕುಲಕರ್ಣಿ, ವಿಠuಲ ಮೋರೆ, ಮಲ್ಲು ಪಡನೂರ, ದತ್ತಾ ಬಂಡೇನವರ, ಸಚಿನ ಬೊಳೆಗಾಂವ, ಅಂಬಣ್ಣ ಕವಟಗಿ ಸಭೆಯಲ್ಲಿ ಇದ್ದರು.

ಟಾಪ್ ನ್ಯೂಸ್

ಹದ್ಗ್ಸ

ಸಾರಿಗೆ ನೌಕರರ ಕರ್ತವ್ಯಕ್ಕೆ ಅಡ್ಡಿ ಪರಿಸಿದರೆ ಕಾನೂನು ಕ್ರಮ : ಸವದಿ

ಬ್ಗಜಹಹಗಗ

ಬಸವ ನೆಲದಲ್ಲಿ ಸುಳ್ಳು ಹೇಳಲ್ಲ, 3 ಕ್ಷೇತ್ರದಲ್ಲಿ ಬಿಜೆಪಿಗೆ ಜಯಭೇರಿ : ಯಡಿಯೂರಪ್ಪ

Ugadi 2021 Chandramana Ugadi Celebration

ಬೇವು ಬೆಲ್ಲದ ಯುಗಾದಿ : ಚಾಂದ್ರಮಾನ ಯುಗಾದಿಯ ಆಚರಣೆ ಹೇಗೆ..?

ಕೋವಿಡ್ ಪ್ರಕರಣ ತೀವ್ರ ಹೆಚ್ಚಳ; ಬ್ರೆಜಿಲ್ ಹಿಂದಿಕ್ಕಿ ಎರಡನೇ ಸ್ಥಾನಕ್ಕೆ ಜಿಗಿದ ಭಾರತ

ಕೋವಿಡ್ ಪ್ರಕರಣ ತೀವ್ರ ಹೆಚ್ಚಳ; ಬ್ರೆಜಿಲ್ ಹಿಂದಿಕ್ಕಿ ಎರಡನೇ ಸ್ಥಾನಕ್ಕೆ ಜಿಗಿದ ಭಾರತ

sdfgsfdggdfgg

ನಳೀನ್ ಕುಮಾರ್ ಕಟೀಲ್ ಒಬ್ಬ ಜೋಕರ್ : ಸಿದ್ದರಾಮಯ್ಯ

ಸದವದ್

ರಾಜ್ಯದಲ್ಲಿಂದು 9579 ಮಂದಿಗೆ ಕೋವಿಡ್ : 52 ಬಲಿ

ಗಜಹ್ದ

ಸಿಡಿಲು ಬಡಿದು ದನಗಾಯಿ ಮಹಿಳೆ ಸಾವು
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು

ಗಜಹ್ದ

ಸಿಡಿಲು ಬಡಿದು ದನಗಾಯಿ ಮಹಿಳೆ ಸಾವು

ಜಹ್ಜುಹದ್ಗದ್ಸ

ಟ್ರ್ಯಾಕ್ಟರ್ ಕಂಪನಿಯ ಕಿರುಕುಳ : ದಯಾಮರಣ ಕೋರಿ ರೈತರಿಂದ ಅರ್ಜಿ

hfghfg

ಪಕ್ಷಿ ಸಂಕುಲ ಉಳಿಸಲು ನೂತನ ಅಭಿಯಾನ

bnfdfg

ವಿಜಯಪುರ: ಸಾರಿಗೆ ನೌಕರರ ಪ್ರತಿಭಟನೆ ; 4 ದಿನದಲ್ಲಿ 2.37 ಕೋಟಿ ರೂ. ನಷ್ಟ ­

zdfgfdgfsda

ಫುಟ್‌ ಪಾತ್‌ ಕಾಮಗಾರಿ ವಿರುದ್ಧ ಆಕ್ರೋಶ

MUST WATCH

udayavani youtube

ಹೆದ್ದಾರಿ ದರೋಡೆ ಸಂಚು ತಡೆದ ಮಂಗಳೂರು ಪೊಲೀಸರು: ಕುಖ್ಯಾತ T.B ಗ್ಯಾಂಗ್ ನ 8 ಆರೋಪಿಗಳ ಬಂಧನ

udayavani youtube

ಸಾವಿರ ಮಂದಿಗೆ ಕೇವಲ 2 ಫ್ಯಾನ್!

udayavani youtube

ಸಾರಿಗೆ ನೌಕರರ ಕುಟುಂಬದ ಸದಸ್ಯರಿಂದ ತಟ್ಟೆ, ಲೋಟ ಪ್ರತಿಭಟನೆ

udayavani youtube

ಇಲ್ಲಿ ಮನುಷ್ಯರಂತೆ ಕೋಣಗಳಿಗೂ ಇದೆ Swimming Pool

udayavani youtube

ಮೇ ಮೊದಲ ವಾರದಲ್ಲಿ ಸೋಂಕಿತರ ಸಂಖ್ಯೆ ಹೆಚ್ಚಾಗಬಹುದು: ಸುಧಾಕರ್

ಹೊಸ ಸೇರ್ಪಡೆ

ಹದ್ಗ್ಸ

ಸಾರಿಗೆ ನೌಕರರ ಕರ್ತವ್ಯಕ್ಕೆ ಅಡ್ಡಿ ಪರಿಸಿದರೆ ಕಾನೂನು ಕ್ರಮ : ಸವದಿ

ಆಳಂದ: ಕೋವಿಡ್ ಲಸಿಕೆ ಪಡೆಯಲು ಜನರ ನಿರುತ್ಸಾಹ

ಬ್ಗಜಹಹಗಗ

ಬಸವ ನೆಲದಲ್ಲಿ ಸುಳ್ಳು ಹೇಳಲ್ಲ, 3 ಕ್ಷೇತ್ರದಲ್ಲಿ ಬಿಜೆಪಿಗೆ ಜಯಭೇರಿ : ಯಡಿಯೂರಪ್ಪ

ಕಾಯಕದಲ್ಲಿ ನಿರತರಾಗಿ ವಿಚಾರ ಪ್ರಚುರಪಡಿಸಿದ ಶರಣರು

ಕಾಯಕದಲ್ಲಿ ನಿರತರಾಗಿ ವಿಚಾರ ಪ್ರಚುರಪಡಿಸಿದ ಶರಣರು

Ugadi 2021 Chandramana Ugadi Celebration

ಬೇವು ಬೆಲ್ಲದ ಯುಗಾದಿ : ಚಾಂದ್ರಮಾನ ಯುಗಾದಿಯ ಆಚರಣೆ ಹೇಗೆ..?

Thanks for visiting Udayavani

You seem to have an Ad Blocker on.
To continue reading, please turn it off or whitelist Udayavani.