ಜಾನುವಾರು ಆರೋಗ್ಯ ಕಾಪಾಡಲು ತಡಲಗಿ ಸಲಹೆ


Team Udayavani, Sep 30, 2020, 5:00 PM IST

ಜಾನುವಾರು ಆರೋಗ್ಯ ಕಾಪಾಡಲು ತಡಲಗಿ ಸಲಹೆ

ಸಿಂದಗಿ: ಜಾನುವಾರುಗಳ ಆರೋಗ್ಯ ಕಾಪಾಡುವುದು ಪ್ರತಿ ರೈತರ ಕರ್ತವ್ಯ ಎಂದು ಸಿಂದಗಿ ಪಶು ಆಸ್ಪತ್ರೆ ಹಿರಿಯ ವೈದ್ಯಾಧಿಕಾರಿ ಡಾ| ಮಾರುತಿ ತಡಲಗಿ ಹೇಳಿದರು.

ತಾಲೂಕಿನ ಸಾಸಾಬಾಳ ಗ್ರಾಮದಲ್ಲಿ ಜಿಪಂ, ಪಶು ಪಾಲನಾ ಮತ್ತು ಪಶು ವೈದ್ಯಕೀಯ ಇಲಾಖೆ ಸಿಂದಗಿ ಸಂಯುಕ್ತಾಶ್ರಯದಲ್ಲಿ ನಡೆದ ಬರಡು ದನಗಳ ಚಿಕಿತ್ಸಾ ಶಿಬಿರ ಮತ್ತು ಕಿಸಾನ್‌ ಸಂಪರ್ಕ ಸಭೆಯ ಅಧ್ಯಕ್ಷತೆ ವಹಿಸಿ ಜಾನುವಾರಗಳಿಗೆ ಚಿಕಿತ್ಸೆ ನೀಡಿ ಅವರು ಮಾತನಾಡಿದರು.

ಜಾನುವಾರುಗಳ ಮೂಕ ಪ್ರಾಣಿಗಳಾಗಿದ್ದರಿಂದ ಆರೋಗ್ಯದ ಕಡೆಗೆ ಹೆಚ್ಚು ಗಮನ ನೀಡಬೇಕು. ಇತ್ತೀಚೆಗೆ ರಾಜ್ಯದಲ್ಲಿ ಲಿಂಪಿ ಸ್ಕಿನ್‌ಡಿಸಿಸ್‌ ಪಕ್ಕದ ಕಲಬುರಗಿ ಜಿಲ್ಲೆ  ಸೇರಿದಂತೆ ಕೆಲವು ಜಿಲ್ಲೆಗಳಲ್ಲಿ ಕಂಡು ಬಂದಿದೆ. ಸಿಂದಗಿ ತಾಲೂಕು ಕಲಬುರಗಿ ಜಿಲ್ಲೆಗೆ ಹೊಂದಿಕೊಂಡಿರುವುದರಿಂದ ಜಾನುವಾರು ಹೊಂದಿದ ರೈತರು ಜಾಗೃತರಾಗಿರಬೇಕು ಎಂದು ಹೇಳಿದರು.

ಕ್ಯುಲೆಕ್ಸ್‌ ಮತ್ತು ಏಡಿಸ್‌ ಸೊಳ್ಳೆಗಳಿಂದ, ಕಚ್ಚುವ ನೋಣಗಳಿಂದ, ಉಣ್ಣೆಗಳಿಂದ,ರೋಗಗ್ರಸ್ತ ಜಾಣುವಾರುಗಳಿಂದ ಲಿಂಪಿ ಸ್ಕಿನ್‌ ಡಿಸಿಸ್‌ ಹರಡುತ್ತದೆ. ಆದ್ದರಿಂದ ಈ ರೋಗ ಲಕ್ಷಣಗಳನ್ನು ಕಂಡು ಬಂದಲ್ಲಿ ರೋಗಗ್ರಸ್ತ ಜಾನುವಾರುಗಳನ್ನು ಪ್ರತ್ಯೇಕವಾಗಿ ಕಟ್ಟಬೇಕು. ಪ್ರತ್ಯೇಕವಾಗಿ ನೀರು, ಮೇವು ನೀಡಬೇಕು. ಆಗ ರೋಗಗ್ರಸ್ತ ಜಾನುವಾರುಗಳು ಗುಣಮುಖವಾಗುತ್ತವೆ. ಅಲ್ಲದೆ ಬೇರೆ ಜಾನುವಾರುಗಳಿಗೆ ರೋಗ ಹರಡುವುದಿಲ್ಲ. ಈ ರೋಗದಿಂದ ಜಾನುವಾರುಗಳಿಗೆ ಯಾವುದೇ ಅಪಾಯವಿಲ್ಲ. ರೈತರು ಗಾಬರಿಯಾಗುವ ಅವಶ್ಯಕತೆಯಿಲ್ಲ ಎಂದು ಹೇಳಿದರು.

ಜಾನುವಾರುಗಳ ಕೊಟ್ಟಿಗೆ, ನೀರು ಕುಡಿಸುವ ದಾವಣಿ ಸ್ವತ್ಛತೆಯಿಂದ ಕಾಪಾಡಬೇಕು. ಜಾನುವಾರುಗಳಲ್ಲಿ ಜ್ವರ, ಚರ್ಮದಲ್ಲಿ ಗಂಟು, ಕಾಲುಗಳಲ್ಲಿ ಊತ, ಜೊಲ್ಲು ಸೋರುವುದು, ಎದೆಯಲ್ಲಿ ಬಾವು ಮುಂತಾದ ಲಕ್ಷಣಗಳು ಕಂಡು ಬಂದಲ್ಲಿ ತಕ್ಷಣವೆ ಪಶು ವೈದ್ಯರನ್ನು ಸಂಪರ್ಕಿಸಿ ಚಿಕಿತ್ಸೆ ಪಡೆಯಬೇಕು ಎಂದು ಸಲಹೆ ನೀಡಿದರು. ಶಿಬಿರದಲ್ಲಿ ವಿವಿಧ ರೋಗಗಳಿಂದ ಬಳಲುತ್ತಿರುವ ನೂರಕ್ಕು ಹೆಚ್ಚು ಜಾನುವಾರುಗಳಿಗೆ ಮತ್ತು 30ಕ್ಕೂ ಹೆಚ್ಚು ಲಿಂಪಿ ಸ್ಕಿನ್‌ ಡಿಸಿಸ್‌ ರೋಗದಿಂದ ಬಳಲುತ್ತಿರುವ ಜಾನುವಾರುಗಳಿಗೆ ಚಿಕಿತ್ಸೆ ನೀಡಿದರು. ನಂತರ ಗ್ರಾಮದ ಸುತ್ತಲಿನಿ ಹೊಲಗಳಿಗೆ ಹೋಗಿ ಅಲ್ಲಿ ರೋಗಗಳಿಂದ ಬಳಲುತ್ತಿರುವ ಜಾನುವಾರುಗಳಿಗೆ ಚಿಕಿತ್ಸೆ ನೀಡಿದರು.

ಈ ಸಂದರ್ಭದಲ್ಲಿ ಪಶು ವೈದ್ಯಕೀಯ ಪರೀಕ್ಷಕ ಡಾ| ಆರ್‌.ಎಂ. ಕುಬಕಡ್ಡಿ ಚಿಕಿತ್ಸೆ ನೀಡಿದರು. ರೈತರಾದ ಕುಮಾರಗೌಡ ಬಿರಾದಾರ, ಮುತ್ತು ಪೊಲಾಸಿ, ಗೋಲ್ಲಾಳಪ್ಪ ಪಟ್ಟಣದ, ಮಲ್ಲು ಯಾಳಗಿ, ಶಿವಣ್ಣ ಪೊಲಾಸಿ, ಸಕ್ರೆಪ್ಪ ಕೋರಿ, ಹನುಮಂತ್ರಾಯಗೌಡ ಬಿರಾದಾರ, ದಾವಲಸಾಬ ಯಡ್ರಾಮಿ,ನಿಂಗಪ್ಪ ಪೊಲಾಸಿ, ಮಲ್ಲಪ್ಪ ಪೊಲಾಸಿ, ಅಪ್ಪಾಸಾಹೇಬ ಚನ್ನೂರ, ಭೀಮಣ್ಣ ಚನ್ನೂರ, ಮುದಕಪ್ಪ ಮೂಲಿಮನಿ, ನಾನಾಗೌಡ ಬಿರಾದಾರ, ಗುರುಬಸಪ್ಪ ಹಿರೆಗೋಗಿ ಸೇರಿದಂತೆ ರೈತರು ಕಾರ್ಯಕ್ರಮದಲ್ಲಿ ಭಾಗವಹಿಸಿದ್ದರು

ಟಾಪ್ ನ್ಯೂಸ್

ಅಕ್ರಮ ಮರಳು ಗಣಿಗಾರಿಕೆ ಪ್ರದೇಶಕ್ಕೆ ಗಣಿ ಅಧಿಕಾರಿ ದಾಳಿ : ಮೂರು ದೋಣಿಗಳು ವಶಕ್ಕೆ

ಅಕ್ರಮ ಮರಳು ಗಣಿಗಾರಿಕೆ ಪ್ರದೇಶಕ್ಕೆ ಗಣಿ ಅಧಿಕಾರಿ ದಾಳಿ : ಮೂರು ದೋಣಿಗಳು ವಶಕ್ಕೆ

akhilesh

ಪಾಕಿಸ್ಥಾನದ ಪರ ಅಖಿಲೇಶ್ ಅನುಕಂಪದ ಮಾತು : ಬಿಜೆಪಿ ಆಕ್ರೋಶ

1-ae2

ವಿ.ವಿ.ಗಳಲ್ಲಿ ಸುಗಮ ಪರೀಕ್ಷಾ ವ್ಯವಸ್ಥೆಗೆ ತಂತ್ರಾಂಶ; ‘ಇ-ಸಹಮತಿ’ಗೆ ಹಸಿರು ನಿಶಾನೆ

ನಿಂತ ನೀರಾಗಿರುವ ಚಾ.ನಗರ ಅಭಿವೃದ್ಧಿಗೆ ಹರಿಯೋ ನೀರಾಗುವರೇ ಸೋಮಣ್ಣ?

ನಿಂತ ನೀರಾಗಿರುವ ಚಾ.ನಗರ ಅಭಿವೃದ್ಧಿಗೆ ಹರಿಯೋ ನೀರಾಗುವರೇ ಸೋಮಣ್ಣ?

1ahan

ಯುಎಇ: ಭಾರತೀಯ ವಿದ್ಯಾರ್ಥಿ ಅಹಾನ್ ಶೆಟ್ಟಿ, SAT ನಲ್ಲಿ ಇತಿಹಾಸ

1-gaa

‘ವೈ ಐ ಕಿಲ್ಡ್ ಗಾಂಧಿ’ ಸಿನಿಮಾ ಬ್ಯಾನ್ ಮಾಡಲು ಕಾಂಗ್ರೆಸ್ ಮನವಿ

ಸವದತ್ತಿ ಮಹಿಳಾ ಪೇದೆ ಈಗ ಪಿಎಸೈ : ಸೇವಾನಿರತ ಮೀಸಲಾತಿಯಡಿ ರಾಜ್ಯಕ್ಕೆ ಪ್ರಥಮ ಸ್ಥಾನ

ಸವದತ್ತಿಯ ಮಹಿಳಾ ಪೇದೆ ಈಗ ಪಿಎಸ್‍ಐ : ಸೇವಾನಿರತ ಮೀಸಲಾತಿಯಡಿ ರಾಜ್ಯಕ್ಕೆ ಪ್ರಥಮ ಸ್ಥಾನಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು

27childrens

ಮಕ್ಕಳ ಹಕ್ಕು ರಕ್ಷಣೆ ಪ್ರತಿಯೊಬ್ಬರ ಆದ್ಯ ಕರ್ತವ್ಯ: ಡಿಸೋಜಾ

26madari

ದಾಸೋಹ ಪದ್ದತಿ ಪಾಲಿಸಲು ಮದರಿ ಸಲಹೆ

25joshi

ಜೋಶಿ ಆಸ್ಪತ್ರೆಯಲ್ಲಿ ಉಚಿತ ಶಸ್ತ್ರ ಚಿಕಿತ್ಸೆ

24service

ಫಲಾಪೇಕ್ಷೆ ಇಲ್ಲದೇ ಮಾಡುವ ಸೇವೆ ದೇವಾರ್ಪಿತ

ಲಿಂಗಾಯತರು ಶರಣರ ನಿಜಾಚರಣೆ ಅರಿತು ಆಚರಿಸಬೇಕು : ಇಮಾಮುದ್ದಿನ ಅತ್ತಾರ

ಲಿಂಗಾಯತರು ಶರಣರ ನಿಜಾಚರಣೆ ಅರಿತು ಆಚರಿಸಬೇಕು : ಇಮಾಮುದ್ದಿನ ಅತ್ತಾರ

MUST WATCH

udayavani youtube

₹500 ವಿಷಯದಲ್ಲಿ ಜಡೆ ಎಳೆದು ಜಗಳವಾಡಿದ ಆರೋಗ್ಯ ಕಾರ್ಯಕರ್ತೆಯರು

udayavani youtube

ಪ್ರಕೃತಿಯನ್ನು ಲೂಟಿ ಮಾಡಿದ ಪರಿಣಾಮ ಹೀಗೆಲ್ಲ ಆಗಿದೆ !!

udayavani youtube

ಒಂದೇ ವಾಹನಕ್ಕೆ ಒಂದು ತಿಂಗಳ ಅಂತರದಲ್ಲಿ ಪೊಲೀಸರಿಂದ 16 ನೋಟಿಸ್

udayavani youtube

ರಾಷ್ಟ್ರೀಯ ಬಾಲ ಪುರಸ್ಕಾರ : ಪ್ರಧಾನಿ ಜೊತೆ ಮಂಗಳೂರಿನ ರೆಮೋನಾ ಪರೇರಾ ಮಾತುಕತೆ

udayavani youtube

ಬೆಳ್ಳಂಬೆಳಗ್ಗೆ ಟ್ರಾಫಿಕ್ ಜಾಮ್ ! ಕೆಲಸಕ್ಕೆ ಹೋಗುವವರ ಪರದಾಟ ಹೇಳತೀರದು…

ಹೊಸ ಸೇರ್ಪಡೆ

ದೋಟಿಹಾಳ : ಆಶ್ರಯ ಮನೆ ಹಂಚಿಕೆ ವೇಳೆ ಗಲಾಟೆ : ಠಾಣಾಗೆ ದೂರು

ದೋಟಿಹಾಳ : ಆಶ್ರಯ ಮನೆ ಹಂಚಿಕೆ ವೇಳೆ ನಡೆದ ಗಲಾಟೆ ಪೊಲೀಸ್ ಠಾಣೆಯ ಮೆಟ್ಟಿಲೇರಿತು

1-ddsd

ಯಲ್ಲಾಪುರ: ಇದೇನು ಪಾಳುಬಿದ್ದ ಕಟ್ಟಡವೇ?  ಯಾರೂ ದಾತಾರರು ಇಲ್ಲವೇ?

1-sddds

ನೀರಾವರಿ ವಿಷಯದಲ್ಲಿ ರಾಜಕೀಯ ಸಲ್ಲ: ರಾಯರಡ್ಡಿ ಆಕ್ಷೇಪಕ್ಕೆ ಸಂಗಣ್ಣ ಕರಡಿ ತಿರುಗೇಟು

1-sasass

ಉಡುಪಿ: ಪ್ರೌಢಶಾಲಾ ಶಿಕ್ಷಕರ ವರ್ಗಾವಣೆ ಕೌನ್ಸಿಲಿಂಗ್ :ವೇಳಾಪಟ್ಟಿ ಪ್ರಕಟ

ಅಕ್ರಮ ಮರಳು ಗಣಿಗಾರಿಕೆ ಪ್ರದೇಶಕ್ಕೆ ಗಣಿ ಅಧಿಕಾರಿ ದಾಳಿ : ಮೂರು ದೋಣಿಗಳು ವಶಕ್ಕೆ

ಅಕ್ರಮ ಮರಳು ಗಣಿಗಾರಿಕೆ ಪ್ರದೇಶಕ್ಕೆ ಗಣಿ ಅಧಿಕಾರಿ ದಾಳಿ : ಮೂರು ದೋಣಿಗಳು ವಶಕ್ಕೆ

Thanks for visiting Udayavani

You seem to have an Ad Blocker on.
To continue reading, please turn it off or whitelist Udayavani.