ಆಲಮಟ್ಟಿ ಕೃಷ್ಣೆ ತಟದಲ್ಲಿ ಸಹಸ್ರಾರು ಭಕ್ತರಿಂದ ಪುಣ್ಯಸ್ನಾನ


Team Udayavani, Jan 16, 2020, 12:06 PM IST

16-January-6

ಆಲಮಟ್ಟಿ: ಮಕರ ಸಂಕ್ರಮಣ ದಿನ ಬುಧವಾರ ನಾಡಿನ ವಿವಿಧ ಭಾಗಗಳಿಂದ ಸಾವಿರಾರು ಸಂಖ್ಯೆಯಲ್ಲಿ ಆಗಮಿಸಿದ್ದ ಜನರು ಕೃಷ್ಣೆಯಲ್ಲಿ ಮಿಂದೆದ್ದು ಪುನೀತರಾದರು. ಆಲಮಟ್ಟಿ ಪಟ್ಟಣ ಕೃಷ್ಣಾ ನದಿ ದಂಡೆಯಲ್ಲಿದ್ದು ರಾಷ್ಟ್ರೀಯ ಹೆದ್ದಾರಿ, ರಾಜ್ಯ ಹೆದ್ದಾರಿ ಮತ್ತು ರೈಲು ಸಂಪರ್ಕ ಹೊಂದಿ ವಿವಿಧ ಉದ್ಯಾನ ಹಾಗೂ ಧಾರ್ಮಿಕ ಕೇಂದ್ರಗಳ ಕೇಂದ್ರವಾಗಿದೆ. ದಕ್ಷಿಣಾಯಣ ಮುಗಿದು ಉತ್ತರಾಯಣ ಆರಂಭದ ದಿನ ಮಹಾರಾಷ್ಟ್ರದ ಸೊಲ್ಲಾಪುರ, ಕೊಲ್ಹಾಪುರ ಜಿಲ್ಲೆ ಹಾಗೂ ರಾಜ್ಯದ ವಿವಿಧ ಭಾಗಗಳಿಂದ ಸಾವಿರಾರು ಸಂಖ್ಯೆಯಲ್ಲಿ ಆಗಮಿಸಿದ್ದ ಭಕ್ತರು ಶಾಸ್ತ್ರಿ ಜಲಾಶಯದ ಹಿನ್ನೀರು ಪ್ರದೇಶ ಹಾಗೂ ಜಲಾಶಯದ ಮುಂಭಾಗದ ಕೃಷ್ಣಾ ಸೇತುವೆಗಳ ಕೆಳ ಭಾಗಗಳಲ್ಲಿ ಮತ್ತು ಯಲಗೂರ, ಕಾಶಿನಕುಂಟಿ, ಸೀತಿಮನಿ, ಮನಹಳ್ಳಿ ಹೀಗೆ ನದಿ ದಡದಲ್ಲಿ ಪುಣ್ಯ ಸ್ನಾನ ಮಾಡಿದರು.

ಎತ್ತಿನ ಗಾಡಿ, ಆಟೋ, ಟ್ರ್ಯಾಕ್ಟರ್‌, ಕಾರು, ಬಸ್‌, ದ್ವಿಚಕ್ರ ವಾಹನಗಳ ಮೂಲಕ ಬೆಳಿಗ್ಗೆಯಿಂದಲೇ ನಗರ, ಪಟ್ಟಣ, ಗ್ರಾಮೀಣ ಭಾಗಗಳಿಂದ ಜನರು ಪುಣ್ಯ ಸ್ನಾನ ಮಾಡಲು ಜನ ತಂಡೋಪ ತಂಡೋಪವಾಗಿ ಹರಿದು ಬರುತ್ತಿದ್ದ ದೃಶ್ಯ ಸಾಮಾನ್ಯವಾಗಿತ್ತು. ಕೃಷ್ಣೆಯಲ್ಲಿ ಮಿಂದೆದ್ದ ಜನರು ನದಿ ದಡದಲ್ಲಿ ಹಾಗೂ ರಾಕ್‌ ಉದ್ಯಾನದಲ್ಲಿ ಜನ ತಾವು ತಂದಿದ್ದ ಶೇಂಗಾ ಹೋಳಗಿ, ಕಡಕ್‌ ಸಜ್ಜೆರೊಟ್ಟಿ, ಶೇಂಗಾ ಚಟ್ನಿ, ಮೊಸರು, ತುಪ್ಪ, ಬದನೆಕಾಯಿ ಪಲೆÂ, ಕರೆಳ್ಳು ಚಟ್ನಿ, ಎಣ್ಣೆಗಾಯಿ, ನಿಂಬೆಹಣ್ಣಿನ ಉಪ್ಪಿನಕಾಯಿ, ಮಾವಿನ ಉಪ್ಪಿನಕಾಯಿ, ನೆಲ್ಲಿಕಾಯಿ ಚಟ್ನಿ ಸೇರಿದಂತೆ ವಿವಿಧ ಖಾದ್ಯಗಳನ್ನು ಸವಿದರು.

ಮಕ್ಕಳಂತೂ ನದಿ ತೀರದಲ್ಲಿ ಮತ್ತು ರಾಕ್‌ ಉದ್ಯಾನದಲ್ಲಿಯೇ ಮಕ್ಕಳಿಗಾಗಿ ನಿರ್ಮಿಸಿರುವ ನೂತನ ಉದ್ಯಾನದಲ್ಲಿ ಅಳವಡಿಸಲಾಗಿರುವ ಸಾಮಗ್ರಿಗಳೊಂದಿಗೆ ಆಟವಾಡಿ ಸಂಭ್ರಮಿಸಿದರು. ಮಧ್ಯಾಹ್ನ 1 ಗಂಟೆ ನಂತರ ಉದ್ಯಾನಕ್ಕೆ ಆಗಮಿಸುವ ಪ್ರವಾಸಿಗರ ಸಂಖ್ಯೆಯಲ್ಲಿ ಏರಿಕೆಯಾಗಿ ರಾಕ್‌ ಉದ್ಯಾನದ ಎರಡೂ ಪ್ರವೇಶ ದ್ವಾರಗಳಲ್ಲಿ ಟಿಕೆಟ್‌ ಕೌಂಟರ್‌ ಆರಂಭಿಸಿದ್ದರಿಂದ ಪ್ರವಾಸಿಗರು ಟಿಕೆಟ್‌ ಪಡೆಯಲು ತೊಂದರೆಯಾಗಲಿಲ್ಲ.

ನಿಷೇಧ: ಜಲಾಶಯದ ಭದ್ರತೆ ಹಿನ್ನೆಲೆಯಲ್ಲಿ ಹಾಗೂ ಜನತೆ ಹಿತ ಕಾಪಾಡಲು ಕೃಷ್ಣೆಯ ಹಿನ್ನೀರು ಭಾಗ ಹಾಗೂ ಜಲಾಶಯದ ಮುಂಭಾಗದ ನೀರಿನಲ್ಲಿ 500
ಮೀ. ಪ್ರದೇಶದಲ್ಲಿ ಸ್ನಾನ ಮಾಡುವುದನ್ನು ನಿಷೇಧಿಸಲಾಗಿತ್ತು. ಕೆಬಿಜೆಎನ್ನೆಲ್‌ ಅಧಿ ಕಾರಿಗಳು ಮೊಘಲ್‌, ಇಟಾಲಿಯನ್‌, ಫ್ರೆಂಚ್‌, ಗುಲಾಬಿ ಸೇರಿದಂತೆ ಕೆಲವು ಉದ್ಯಾನಗಳಲ್ಲಿ ಮಧ್ಯಾಹ್ನದವರೆಗೆ ಪ್ರವೇಶ ನಿರಾಕರಿಸಲಾಗಿತ್ತು. ದೋಣಿ ವಿಹಾರ ಕೇಂದ್ರದಲ್ಲಿ ಮಕ್ಕಳು, ಮಹಿಳೆಯರು, ವಯೋವೃದ್ಧರು ಸೇರಿದಂತೆ ಸಿಲ್ವರ್‌ ಲೇಕ್‌ನಲ್ಲಿ ದೋಣಿ ವಿಹಾರ ನಡೆಸಲು ಮುಗಿಬಿದ್ದರು.
ಮೇಳ ಸಂಯೋಜಿಸಿ: ಕೃ.ಮೇ.ಯೋ. ರಾಜ್ಯದ ಪ್ರತಿಷ್ಠಿತ ನೀರಾವರಿ ಯೋಜನೆಯಾಗಿದ್ದು ಪ್ರತಿ ವರ್ಷವೂ ರೈತ ವರ್ಗದವರು ಹೆಚ್ಚಾಗಿ ಆಗಮಿಸುತ್ತಾರೆ. ಕೃಷ್ಣಾ ಭಾಗ್ಯ ಜಲ ನಿಗಮದ ವತಿಯಿಂದ ಕೃಷಿಗೆ ಪೂರಕವಾಗುವ ಹಾಗೂ ನೀರು ಮತ್ತು ಮಣ್ಣು ರಕ್ಷಣೆ ಬಗ್ಗೆ ಮಾಹಿತಿ ಒದಗಿಸುವ ಕಾರ್ಯಕ್ರಮ ಮತ್ತು ಈ ಭಾಗದ ಕಲೆ, ಸಂಸ್ಕೃತಿಯನ್ನು ಪರಿಚಯದಂಥ ಕಾರ್ಯಕ್ರಮ ಏರ್ಪಡಿಸಿದ್ದರೆ ಚೆನ್ನಾಗಿರುತ್ತಿತ್ತು ಎನ್ನುತ್ತಾರೆ ಪ್ರಗತಿಪರ ರೈತ ವಿಠ್ಠಲ ಕಾನಗೌಡರ.

ದೂರದಿಂದ ಆಗಮಿಸಿದ್ದ ದ್ವಿಚಕ್ರ, ಲಘು ಹಾಗೂ ಭಾರಿ ವಾಹನಗಳ ನಿಲುಗಡೆಗೆ ಖಾಯಂ ನಿಲುಗಡೆ ಸ್ಥಳ ಹಾಗೂ ಹೆಲಿಪ್ಯಾಡ್‌ನ‌ಲ್ಲಿ ವಾಹನ ನಿಲ್ಲಿಸಲು ಅವಕಾಶಕಲ್ಪಿಸಿದ್ದರಿಂದ ಯಾವುದೇ ತೊಂದರೆಯಾಗಲಿಲ್ಲ. ಬಸವನಬಾಗೇವಾಡಿ ಡಿವೈಎಸ್ಪಿ ಶಾಂತವೀರ ನೇತೃತ್ವದಲ್ಲಿ ಓರ್ವ ಸಿಪಿಐ, ಆಲಮಟ್ಟಿ, ನಿಡಗುಂದಿ, ಮನಗೂಳಿ, ಕೊಲ್ಹಾರ, ಕೂಡಗಿ ಎನ್‌ ಟಿಪಿಸಿ, ಬಸವನಬಾಗೇವಾಡಿ ಠಾಣೆಗಳ ಒಟ್ಟು ಐವರು ಪಿಎಸೈ, 8 ಜನ ಎಎಸೈ, ಐನೂರು ಪೊಲೀಸ್‌ ಪೇದೆಗಳು, 12 ಹೋಮ್‌ ಗಾರ್ಡ್‌, 1 ಡಿಎಆರ್‌ ತುಕಡಿ, ಮೂವರು ಅರಣ್ಯ ಇಲಾಖೆ ಅಧಿಕಾರಿಗಳು, 150ಕ್ಕೂ ಹೆಚ್ಚು ದಿನಗೂಲಿಗಳು, ಕೆಎಸ್‌ಐಎಸ್‌ಎಫ್‌ನ 3 ಸಿಪಿಐ, ಓರ್ವ ಪಿಎಸೈ, ಓರ್ವ ಎಸೈ, 27 ಪೇದೆಗಳು
ಭದ್ರತೆ ಒದಗಿಸಿದ್ದರು.

ಟಾಪ್ ನ್ಯೂಸ್

accident

ಅಪಘಾತ: ಪುತ್ರ‌ನ ಮದುವೆಗೆ ಆಮಂತ್ರಿಸಲು ಹೋದ ದಂಪತಿ ದುರ್ಮರಣ

Online

ಟೆಕ್ಕಿಗಳ ಪ್ರಯತ್ನಕ್ಕೆ ಆನ್‌ಲೈನ್‌ ಸಪೋರ್ಟ್‌

1-fdssdf

ರೌಡಿ ಹಿನ್ನಲೆ, ತೆರಿಗೆ ಕಳ್ಳರೇ ಡಿಕೆಶಿ ಆಯ್ಕೆ : ಬಿಜೆಪಿಯಿಂದ ಟ್ವೀಟ್ ಆಸ್ತ್ರಗಳ ಪ್ರಯೋಗ

ಘೀಳಿಡಲು ರೆಡಿಯಾದ ಮದಗಜ; 900ಕ್ಕೂ ಹೆಚ್ಚು ಸ್ಕ್ರೀನ್‌ಗಳಲ್ಲಿ ಬಿಡುಗಡೆ

ಘೀಳಿಡಲು ರೆಡಿಯಾದ ಮದಗಜ; 900ಕ್ಕೂ ಹೆಚ್ಚು ಸ್ಕ್ರೀನ್‌ಗಳಲ್ಲಿ ಬಿಡುಗಡೆ

covid-1

ಒಮಿಕ್ರಾನ್: ಅಮೆರಿಕಾದಲ್ಲಿ ರೂಪಾಂತರಿ ಮೊದಲ ಪ್ರಕರಣ ವರದಿ

ದೇವೇಗೌಡ

ಡಿ.13ಕ್ಕೆ ಎಚ್‌ಡಿಡಿ ಆತ್ಮ ಚರಿತ್ರೆ ಬಿಡುಗಡೆ

ಮೊದಲ ಪತ್ನಿಯನ್ನು ಕೊಂದು ಜೈಲಿಗೆ ಹೋಗಿ ಬಂದವ 2ನೇ ಮದುವೆಯಾಗಿ ಅವಳನ್ನೂ ಕೊಂದೇ ಬಿಟ್ಟ

ಮೊದಲ ಪತ್ನಿಯನ್ನು ಕೊಂದು ಜೈಲಿಗೆ ಹೋಗಿ ಬಂದವ 2ನೇ ಮದುವೆಯಾಗಿ ಅವಳನ್ನೂ ಕೊಂದೇ ಬಿಟ್ಟಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು

1-g

‘ಗೇಮ್ ಓವರ್’, ‘ಗೇಮ್ ಸ್ಟಾರ್ಟ್’ ಮದುವೆಯಲ್ಲಿ ಗಮನ ಸೆಳೆದ ಬರಹ !!

24teachers

ಶಿಕ್ಷಕರ ವರ್ಗಾವಣೆ ಸಮಸ್ಯೆ-ಪ್ರತಿಭಟನೆ

23indian

ಸಂವಿಧಾನ ನಮಗೆಲ್ಲ ದಾರಿದೀಪ

22constitution

ವಿಶ್ವದಲ್ಲೇ ನಮ್ಮ ಸಂವಿಧಾನ ಶ್ರೇಷ್ಠ

21protest

ಸರ್ಕಾರದ ವಿರುದ್ದ ವಿದ್ಯಾರ್ಥಿಗಳ ತೀವ್ರ ಆಕ್ರೋಶ

MUST WATCH

udayavani youtube

ಬಿಜೆಪಿ ಶಾಸಕ ಎಸ್.ಆರ್.ವಿಶ್ವನಾಥ್ ಅವರ ಕೊಲೆಗೆ ಸಂಚು ಮಾಡಿಲ್ಲ : ಗೋಪಾಲ ಕೃಷ್ಣ

udayavani youtube

ಬಿಜೆಪಿ ಶಾಸಕ ಎಸ್ ಆರ್ ವಿಶ್ವನಾಥ್ ಹತ್ಯೆಗೆ ಸ್ಕೆಚ್!

udayavani youtube

ಜಡೇಜಾಗಾಗಿ ಮೊದಲ ಸ್ಥಾನವನ್ನೇ ಬಿಟ್ಟುಕೊಟ್ಟ ಮಾಹಿ

udayavani youtube

ನಾಪತ್ತೆಯಾಗಿದ್ದ ವ್ಯಕ್ತಿಯ ಶವ ಕಾಡಿನಲ್ಲಿ ಹೂತಿಟ್ಟ ರೀತಿಯಲ್ಲಿ ಪತ್ತೆ, ಕೊಲೆ ಶಂಕೆ

udayavani youtube

ತುಂಗಭದ್ರಾ ನದಿಯಿಂದ ಹಳ್ಳಗಳಿಗೆ ಬಂದ ಮೊಸಳೆ! ಜನರಲ್ಲಿ ಆತಂಕ

ಹೊಸ ಸೇರ್ಪಡೆ

accident

ಅಪಘಾತ: ಪುತ್ರ‌ನ ಮದುವೆಗೆ ಆಮಂತ್ರಿಸಲು ಹೋದ ದಂಪತಿ ದುರ್ಮರಣ

ಜಯರಾಮ್ ಜನ ಸೇವಾ ಸಂಘದಿಂದ 5 ಲಕ್ಷ ರೂ ವೆಚ್ಚದ ಮುಕ್ತಿ ವಾಹನ ಉಚಿತವಾಗಿ ಸಮರ್ಪಣೆ

ಜಯರಾಮ್ ಜನ ಸೇವಾ ಸಂಘದಿಂದ 5 ಲಕ್ಷ ರೂ ವೆಚ್ಚದ ಮುಕ್ತಿ ವಾಹನ ಉಚಿತವಾಗಿ ಸಮರ್ಪಣೆ

ಉತ್ತರದ ಮದುವೆಗೆ ದಕ್ಷಿಣದ ಸವಿರುಚಿ : ಸಹೋದರರ ತಂಡದಿಂದ ನವ ಖಾದ್ಯೋದ್ಯಮ

ಉತ್ತರದ ಮದುವೆಗೆ ದಕ್ಷಿಣದ ಸವಿರುಚಿ : ಸಹೋದರರ ತಂಡದಿಂದ ನವ ಖಾದ್ಯೋದ್ಯಮ

Online

ಟೆಕ್ಕಿಗಳ ಪ್ರಯತ್ನಕ್ಕೆ ಆನ್‌ಲೈನ್‌ ಸಪೋರ್ಟ್‌

1-fdssdf

ರೌಡಿ ಹಿನ್ನಲೆ, ತೆರಿಗೆ ಕಳ್ಳರೇ ಡಿಕೆಶಿ ಆಯ್ಕೆ : ಬಿಜೆಪಿಯಿಂದ ಟ್ವೀಟ್ ಆಸ್ತ್ರಗಳ ಪ್ರಯೋಗ

Thanks for visiting Udayavani

You seem to have an Ad Blocker on.
To continue reading, please turn it off or whitelist Udayavani.