Udayavni Special

ಎಲ್ಲ ರಂಗದಲ್ಲೂ ಇಂಡಿ ಅಭಿವೃದ್ಧಿ

Team Udayavani, Nov 9, 2020, 8:14 PM IST

ಎಲ್ಲ ರಂಗದಲ್ಲೂ ಇಂಡಿ ಅಭಿವೃದ್ಧಿ

ಇಂಡಿ: ಕ್ಷೇತ್ರದಲ್ಲಿ ಅನೇಕ ನೀರಾವರಿ ಯೋಜನೆಗಳನ್ನು ತರುವ ಮೂಲಕ ಈ ಭಾಗದಲ್ಲಿನ ಕೆರೆಗಳನ್ನು ತುಂಬಿ ಕ್ಷೇತ್ರವನ್ನು ನೀರಾವರಿ ಸೇರಿದಂತೆ ಎಲ್ಲ ರಂಗಗಳಲ್ಲೂ ಅಭಿವೃದ್ಧಿ ಪಡಿಸಿದ್ದೇನೆ ಎಂದು ಶಾಸಕ ಯಶವಂತರಾಯಗೌಡ ಪಾಟೀಲ ಹೇಳಿದರು.

ತಾಲೂಕಿನ ಗುಂದವಾನ ಕೆರೆ ನಂ. 1ರಲ್ಲಿ ಬಾಗಿನ ಅರ್ಪಿಸಿ ಮಾತನಾಡಿದ ಅವರು, ದೇಶದಲ್ಲಿ ಅತಿ ಹೆಚ್ಚು ಕೆರೆಗಳು ಇರುವ ರಾಜ್ಯ ಓರಿಸ್ಸಾ. ಆ ರಾಜ್ಯದಲ್ಲಿ ಒಂದು ದೊಡ್ಡ ಕ್ರಾಂತಿ ನಡೆದಿದೆ. ಅಲ್ಲಿ ಗ್ರಾಮಕ್ಕೊಂದು ಕೆರೆ ಇರಬೇಕು. ಆ ಕೆರೆಗಳೆ ಆ ಗ್ರಾಮದ ಭವಿಷ್ಯವನ್ನು ರೂಪಿಸುತ್ತವೆ. ಕರ್ನಾಟಕ ರಾಜ್ಯದಲ್ಲಿ ವಿಜಯಪುರ ಜಿಲ್ಲೆ ಇಂಡಿ ತಾಲೂಕಿನ ಗುಂದವಾನ ಕೆರೆ ನಂ.1 ಮತ್ತು 2ರಲ್ಲಿ ಕೆರೆಗಳನ್ನು 1979ರಲ್ಲಿ ಅನೇಕ ಜನರ ಮತ್ತು ಗ್ರಾಮಗಳ ಸಹಾಯದಿಂದ ನಿರ್ಮಾಣ ಮಾಡಲಾಗಿದೆ. ಇಂದು ಈ ಕೆರೆ ಸಂಪೂರ್ಣ ತುಂಬಿದ್ದು ರೈತರಿಗೆ ಆಶಾಕಿರಣವಾಗಿದೆ ಎಂದರು.

ಓರಿಸ್ಸಾ ರಾಜ್ಯದ ಪ್ರೇರಣೆಯಿಂದ ನಮ್ಮ ಕರ್ನಾಟಕ ರಾಜ್ಯದಲ್ಲಿ ಈ ಕರೆ ತುಂಬುವ ಯೋಜನೆಯನ್ನು 2009ರಲ್ಲಿ ಪ್ರಾರಂಭ ಮಾಡಲಾಯಿತು. ಹಿಂದಿನ ಸರಕಾರದ ಅವ ಧಿಯಲ್ಲಿ ಕೆರೆ ತುಂಬುವ ಯೋಜನೆಗಳಿಗೆ ಚಾಲನೆ ದೊರಕಿತು. ಅದರ ಫಲವೇ ಈ ಭಾಗದ ಅಣಚಿ ಮತ್ತು ಸಂಖ, ಭೂಂಯ್ಯಾರ ಕೆರೆಗಳು ತುಂಬಲು ಯೋಜನೆ ರೂಪಿಸಿ ನದಿಗಳಿಂದ ಕರೆ ತುಂಬಿಸುವುದು ಸಾಧ್ಯವಾಗಿದೆ ಎಂದರು.

ರೇವಣಸಿದ್ದೇಶ್ವರ ಏತ ನೀರಾವರಿ ಸುಮಾರು 2,600 ಕೋಟಿ ರೂ ವೆಚ್ಚದಲ್ಲಿ ಈ ಭಾಗದ ಇಂಡಿ ಮತ್ತು ಚಡಚಣ ತಾಲೂಕಿನ 18 ಕೆರೆಗಳಿಗೆ ಕಾಲುವೆ ಮೂಲಕ ನೀರು ತುಂಬುವಕೆಲಸ ನಡೆಯುತ್ತಿದೆ. ಇದರಿಂದ 33 ಸಾವಿರ ಹೆಕ್ಟೇರ್‌ ಪ್ರದೇಶ ನೀರಾವರಿಯಾಗಿ ರೈತರಿಗೆ ಅನಕೂಲವಾಗಲಿದೆ. ಈ ಕಾರ್ಯವನ್ನು ಇಂದಿನ ಸರಕಾರದ ಜಲ ಸಂಪನ್ಮೂಲಸಚಿವ ರಮೇಶ ಜಾರಕಿಹೊಳಿಯವರು ಮಾಡುತ್ತಿದ್ದಾರೆ. ಅವರಿಂದಲೇ ಆ ಕೆರೆಗಳಿಗೆ ಚಾಲನೆ ನೀಡುತ್ತೇನೆ ಎಂದರು.

ಭಾರತೀಯ ಕಿಸಾನ್‌ ಸಂಘದ ಉತ್ತರ ಪ್ರಾಂತ ಅಧ್ಯಕ್ಷ ಗುರುನಾತ ಬಗಲಿ ಮಾತನಾಡಿದರು. ಜಿಪಂ ಸದಸ್ಯ ಮಹಾದೇವ ಪೂಜಾರಿ, ಬಿ.ಎನ್‌. ಮಹಿಷಿ, ಶ್ರೀಮಂತ ಇಂಡಿ, ಈರಣ್ಣ ವಾಲಿ, ರವಿ ಖಾನಾಪುರ, ಹನುಮಂತ ಖಡೆಖಡೆ, ಧರ್ಮರಾಜ್‌ ವಾಲೀಕಾರ, ಶ್ರೀಕಾಂತ ಕನಮಡಿ, ರಮೇಶ ಚವ್ಹಾಣ, ತಾಪಂ ಮಾಜಿ ಅಧ್ಯಕ್ಷ ರುಕ್ಮುದ್ದಿನ್‌ ತದ್ದೇವಾಡಿ, ಸುನೀಲಗೌಡ ಬಿರಾದಾರ, ರೇವಣಸಿದ್ದ ಗೋಡಕೆ, ಎಂ.ಎಸ್‌. ಪಾಟೀಲ, ಅಂಬಣ್ಣ ಜಾಧವ, ಗಿರೀಶ ಬಿರಾದಾರ ಇದ್ದರು.

Ad

ಶ್ರೀ ಅಷ್ಠ ಲಕ್ಷ್ಮೀ ಜೋತಿಷ್ಯ ಮಂದಿರ,
ಉದ್ಯೋಗ, ಮದುವೆ ವಿಳಂಬ, ಸತಿ-ಪತಿ ಕಲಹ, ಶತ್ರುಪೀಡೆ, ಅತ್ತೆ-ಸೊಸೆ ಕಲಹ, ವಶೀಕರಣ, ವ್ಯವಹಾರದಲ್ಲಿ ನಷ್ಟ, ನಿಮ್ಮ ಸಮಸ್ಯೆ ಯಾವುದೇ ಇರಲಿ, ಎಷ್ಟೇ ಕಠಿಣವಾಗಿರಲಿ ಶಾಶ್ವತ ಪರಿಹಾರ ಶತಃಸಿದ್ಧ. ನಿಮ್ಮ ಯಾವುದೇ ಇಷ್ಟಾರ್ಥ ಕಾರ್ಯಗಳಿದ್ದರೂ ಕೇವಲ ೫ ದಿನಗಳಲ್ಲಿ ನೆರವೇರಿಸಿ ಕೊಡುತ್ತಾರೆ. ಇಂದೇ ಭೇಟಿ ನೀಡಿ.
ಶ್ರೀ ಶ್ರೀ ಬಿ ಹೆಚ್ ಆಚಾರ್ಯ ಗುರೂಜಿ, ಜಯನಗರ ಬೆಂಗಳೂರು, ಮೋ- 8884889444

ಟಾಪ್ ನ್ಯೂಸ್

ಅಂತಿಮ ಏಕದಿನ: ಟಾಸ್ ಗೆದ್ದ ಭಾರತ, ಇಬ್ಬರು ಆಟಗಾರರು ಪದಾರ್ಪಣೆ

ಅಂತಿಮ ಏಕದಿನ: ಟಾಸ್ ಗೆದ್ದ ಭಾರತ, ಇಬ್ಬರು ಆಟಗಾರರು ಪದಾರ್ಪಣೆ

ಬಹು ದಿನಗಳ ಬಳಿಕ ಮತ್ತೆ ಬಣ್ಣ ಹಚ್ಚಲಿದ್ದಾರೆ ‘ಸುಪ್ರೀಂ ಹೀರೋ’ ಶಶಿಕುಮಾರ್

ಬಹು ದಿನಗಳ ಬಳಿಕ ಮತ್ತೆ ಬಣ್ಣ ಹಚ್ಚಲಿದ್ದಾರೆ ‘ಸುಪ್ರೀಂ ಹೀರೋ’ ಶಶಿಕುಮಾರ್

ಮ್ಯಾಚ್‌ ಫಿಕ್ಸಿಂಗ್‌: ಸ್ಪೇನ್‌ ಟೆನಿಸಿಗ ಎನ್ರಿಕ್‌ ಲೋಪೆಝ್ ಪೆರೆಝ್ ಗೆ 8 ವರ್ಷ ನಿಷೇಧ

ಮ್ಯಾಚ್‌ ಫಿಕ್ಸಿಂಗ್‌: ಸ್ಪೇನ್‌ ಟೆನಿಸಿಗ ಎನ್ರಿಕ್‌ ಲೋಪೆಝ್ ಪೆರೆಝ್ ಗೆ 8 ವರ್ಷ ನಿಷೇಧ

burevi

ಡಿ.4ರಂದು ತಮಿಳುನಾಡಿಗೆ ಅಪ್ಪಳಿಸಲಿದೆ ‘ಬುರೆವಿ’ ಚಂಡಮಾರುತ: ಧಾರಾಕಾರ ಮಳೆಯಾಗುವ ಸಾಧ್ಯತೆ !

Yogiswar

ಯೋಗಿಗೆ ಸಚಿವ ಸ್ಥಾನ? ಬಿಜೆಪಿಯೊಳಗೆ ಹೆಚ್ಚಿದ ಮುಸುಕಿನ ಗುದ್ದಾಟ

River

ಚೀನದ ವಿರುದ್ಧ ಈಗ ಜಲ ಸಮರ

Siddu

ಸಿದ್ದುಗೆ ಲವ್‌ ಜೆಹಾದ್‌ ಆಕ್ರೋಶ; ಶಾಂತಿ ಕದಡುವುದೇ ಉದ್ದೇಶ ಎಂದ ಸಿದ್ದು

ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು

ವಿಜಯಪುರ: ಹಳ್ಳಕ್ಕೆ ಬಿದ್ದ ಲಾರಿ; ಕ್ಲೀನರ್ ಸಾವು

ವಿಜಯಪುರ: ಹಳ್ಳಕ್ಕೆ ಬಿದ್ದ ಲಾರಿ; ಕ್ಲೀನರ್ ಸಾವು

ಕರ್ನಾಟಕ ಬಂದ್ ಗೆ ಕರೆ ನೀಡಿದವರ ಆಸ್ತಿ ಜಪ್ತಿ ಮಾಡಿ! ಡಿ.5ರ ಬಂದ್ ವಿರೋಧಿಸಿ ಪ್ರತಿಭಟನೆ

ಕರ್ನಾಟಕ ಬಂದ್ ಗೆ ಕರೆ ನೀಡಿದವರ ಆಸ್ತಿ ಜಪ್ತಿ ಮಾಡಿ! ಡಿ.5ರ ಬಂದ್ ವಿರೋಧಿಸಿ ಪ್ರತಿಭಟನೆ

ಬಸ್‌ ನಿಲ್ದಾಣ ಕಾಮಗಾರಿಗೆ ಅಡ್ಡಿಪಡಿಸಿಲ್ಲ: ನಾಡಗೌಡ

ಬಸ್‌ ನಿಲ್ದಾಣ ಕಾಮಗಾರಿಗೆ ಅಡ್ಡಿಪಡಿಸಿಲ್ಲ: ನಾಡಗೌಡ

ವಿದ್ಯುತ್‌ ಸಮಸ್ಯೆ ನೀಗಿಸಲು ಕ್ರಮ

ವಿದ್ಯುತ್‌ ಸಮಸ್ಯೆ ನೀಗಿಸಲು ಕ್ರಮ

ಮಾರುವೇಷದಲ್ಲಿ ಬಂದು ವಿಜಯಪುರ ಜಿಲ್ಲಾಧಿಕಾರಿ ಕಚೇರಿಗೆ ಮುತ್ತಿಗೆ ಹಾಕುವೆ: ವಾಟಾಳ್ ನಾಗರಾಜ್

ಮಾರುವೇಷದಲ್ಲಿ ಬಂದು ಜಿಲ್ಲಾಧಿಕಾರಿ ಕಚೇರಿಗೆ ಮುತ್ತಿಗೆ ಹಾಕುವೆ: ವಾಟಾಳ್ ನಾಗರಾಜ್ ಆಕ್ರೋಶ

MUST WATCH

udayavani youtube

ಮಂಗಳೂರು: ಮೀನುಗಾರಿಕೆಗೆ ತೆರಳಿದ್ದ ದೋಣಿ ದುರಂತ – ಇಬ್ಬರ ಮೃತದೇಹ ಪತ್ತೆ

udayavani youtube

ಮಂಗಳೂರು: ಮೀನುಗಾರಿಕೆಗೆ ತೆರಳಿ ವಾಪಾಸಾಗುವ ವೇಳೆ ಮಗುಚಿಬಿದ್ದ ಬೋಟ್: 6 ಮಂದಿ ನಾಪತ್ತೆ

udayavani youtube

ರೋಗ ನಿರ್ಮೂಲನೆಯಲ್ಲಿ ಆಯುರ್ವೇದ ವೈದ್ಯ ಪದ್ಧತಿಯ ಮಹತ್ವವೇನು?

udayavani youtube

Success story of a couple In Agriculture | Integrated Farming | Udayavani

udayavani youtube

ಮೂರೂವರೆ ಸಾವಿರದಷ್ಟು ವಿವಿಧ ಪತ್ರಿಕೆಗಳನ್ನು ಸಂಗ್ರಹಿಸಿರುವ ಎಕ್ಕಾರು ಉಮೇಶ ರಾಯರು

ಹೊಸ ಸೇರ್ಪಡೆ

ಅಂತಿಮ ಏಕದಿನ: ಟಾಸ್ ಗೆದ್ದ ಭಾರತ, ಇಬ್ಬರು ಆಟಗಾರರು ಪದಾರ್ಪಣೆ

ಅಂತಿಮ ಏಕದಿನ: ಟಾಸ್ ಗೆದ್ದ ಭಾರತ, ಇಬ್ಬರು ಆಟಗಾರರು ಪದಾರ್ಪಣೆ

ಬಹು ದಿನಗಳ ಬಳಿಕ ಮತ್ತೆ ಬಣ್ಣ ಹಚ್ಚಲಿದ್ದಾರೆ ‘ಸುಪ್ರೀಂ ಹೀರೋ’ ಶಶಿಕುಮಾರ್

ಬಹು ದಿನಗಳ ಬಳಿಕ ಮತ್ತೆ ಬಣ್ಣ ಹಚ್ಚಲಿದ್ದಾರೆ ‘ಸುಪ್ರೀಂ ಹೀರೋ’ ಶಶಿಕುಮಾರ್

ಮ್ಯಾಚ್‌ ಫಿಕ್ಸಿಂಗ್‌: ಸ್ಪೇನ್‌ ಟೆನಿಸಿಗ ಎನ್ರಿಕ್‌ ಲೋಪೆಝ್ ಪೆರೆಝ್ ಗೆ 8 ವರ್ಷ ನಿಷೇಧ

ಮ್ಯಾಚ್‌ ಫಿಕ್ಸಿಂಗ್‌: ಸ್ಪೇನ್‌ ಟೆನಿಸಿಗ ಎನ್ರಿಕ್‌ ಲೋಪೆಝ್ ಪೆರೆಝ್ ಗೆ 8 ವರ್ಷ ನಿಷೇಧ

burevi

ಡಿ.4ರಂದು ತಮಿಳುನಾಡಿಗೆ ಅಪ್ಪಳಿಸಲಿದೆ ‘ಬುರೆವಿ’ ಚಂಡಮಾರುತ: ಧಾರಾಕಾರ ಮಳೆಯಾಗುವ ಸಾಧ್ಯತೆ !

ವಿದ್ಯಾದಾನ ಮನುಷ್ಯನ ಏಳಿಗೆಗೆ ಅತೀ ದೊಡ್ಡ ದಾನ: ರಾಜೇಂದ್ರ ಕುಮಾರ್‌

ವಿದ್ಯಾದಾನ ಮನುಷ್ಯನ ಏಳಿಗೆಗೆ ಅತೀ ದೊಡ್ಡ ದಾನ: ರಾಜೇಂದ್ರ ಕುಮಾರ್‌

Thanks for visiting Udayavani

You seem to have an Ad Blocker on.
To continue reading, please turn it off or whitelist Udayavani.