ಸಿಡಿ ಇಟ್ಟುಕೊಂಡು ಎಂಎಲ್ ಸಿ, ಮಂತ್ರಿ ಆದವರಿಂದ ಕಲಿಯಬೇಕಾದದ್ದೇನಿಲ್ಲ: ಯತ್ನಾಳ್
Team Udayavani, Apr 4, 2021, 2:48 PM IST
ವಿಜಯಪುರ: ಮಂತ್ರಿಯಾಗಲು, ಎಂಎಲ್ ಸಿ ಆಗಲು ಅಶ್ಲೀಲ ಸಿಡಿ ಇಟ್ಟುಕೊಂಡು ಬ್ಲ್ಯಾಕ್ ಮೇಲ್ ಮಾಡುವವರಿಂದ ನಾನು ಕಲಿಯಬೇಕಾದುದು ಏನೂ ಇಲ್ಲ ಎಂದು ಬಸನಗೌಡ ಪಾಟೀಲ ಯತ್ನಾಳ ಮತ್ತೆ ಹರಿ ಹಾಯ್ದಿದ್ದಾರೆ.
ನಗರದಲ್ಲಿ ಪತ್ರಕರ್ತರೊಂದಿಗೆ ಮಾತನಾಡಿದ ಅವರು, ರಾಜಕೀಯ ಸ್ವಾರ್ಥಕ್ಕಾಗಿ ಬಾಗಲಕೋಟೆ ಜಿಲ್ಲೆಯ ಮಾಜಿ ಶಾಸಕ, ಸಚಿವರ ಅಶ್ಲೀಲ ಸಿಡಿ ಮಾಡಿದವರು ನಾಲಾಯಕರು ಎಂದು ಪರೋಕ್ಷವಾಗಿ ಸಚಿವ ಮುರುಗೇಶ ನಿರಾಣಿ ವಿರುದ್ಧ ವಾಗ್ದಾಳಿ ನಡೆಸಿದರು.
ಇದನ್ನೂ ಓದಿ:ಯಡಿಯೂರಪ್ಪ ಮೊದಲು ಯತ್ನಾಳ್ ಗೆ ಬೈದು ಬಾಯಿ ಮುಚ್ಚಿಸಲಿ: ಸಿದ್ದರಾಮಯ್ಯ
ಮಂತ್ರಿ ಆಗಲು ನಾನು ಯಾರಿಗೂ ಹಣ ಕೊಟ್ಟಿಲ್ಲ, ಯಾರ ಕೈಕಾಲು ಹಿಡಿದಿಲ್ಲ. ಸಪ್ಲಾಯರ್ ಕೆಲಸ ಮಾಡಿಲ್ಲ. ಹೀಗಾಗಿ ಸಪ್ಲೈಯರ್ ಗಳಿಂದ ನಾನು ಏನನ್ನೂ ಕಲಿಯಬೇಕಿಲ್ಲ ಎಂದು ಕಿಡಿ ಕಾರಿದರು.