ಶಾಸಕರ ವಿರುದ್ಧ ಬಿಜೆಪಿ ಸಲ್ಲದ ಆರೋಪ: ಕಾಂಗ್ರೆಸ್‌

Team Udayavani, Jan 23, 2022, 5:56 PM IST

19BJP

ಇಂಡಿ: ಪುರಸಭೆಯಲ್ಲಿ ಕಾಂಗ್ರೆಸ್‌ ಪಕ್ಷಕ್ಕೆ ಬಹುಮತ ಇರದಿದ್ದರಿಂದ ಶಾಸಕರು ಚುನಾವಣೆ ಎದುರಿಸುವುದು ಬೇಡ, ವಿರೋಧ ಪಕ್ಷದಲ್ಲಿರೋಣ ಎಂದಿದ್ದರು. ಬಿಜೆಪಿಯ ಮೂವರು ಸದಸ್ಯರು ಬಂದು ಕೈಕಾಲು ಹಿಡಿದು ಚುನಾವಣೆಯಲ್ಲಿ ನಿಮ್ಮನ್ನು ಬೆಂಬಲಿಸುತ್ತೇವೆ ಎಂದು ಕೇಳಿಕೊಂಡ ಪ್ರಯುಕ್ತ ಚುನಾವಣೆ ಕಣಕ್ಕಿಯಲಾಯಿತು ಎಂದು ಕಾಂಗ್ರೆಸ್‌ ಮುಖಂಡರು ಹೇಳಿದರು.

ಶನಿವಾರ ಪಟ್ಟಣದ ಕಾಂಗ್ರೆಸ್‌ ಕಾರ್ಯಾಲ ಯದಲ್ಲಿ ಜಂಟಿ ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿದ ಮುಖಂಡರು, ಪುರಸಭೆಯಲ್ಲಿ ಕೇವಲ ಎಂಟು ಸ್ಥಾನ ಹೊಂದಿದ್ದು ಬಹುಮತ ವಿರಲಿಲ್ಲ. ಯಾರೂ 2ಎ ಮಹಿಳೆ ಮೀಸಲಾತಿಗೆ ಆಯ್ಕೆಯಾಗಿರಲಿಲ್ಲ. ಹೀಗಾಗಿ ಶಾಸಕ ಯಶವಂತರಾಯಗೌಡ ಪಾಟೀಲರಿಗೆ ಆಸಕ್ತಿ ಇರಲಿಲ್ಲ ಎಂದರು.

ಬಿಜೆಪಿ ಸದಸ್ಯರಾದ ದೇವೇಂದ್ರ ಕುಂಬಾರ, ಪಿಂಟು ರಾಠೊಡ, ವಿಜಯಕುಮಾರ ಮೂರಮನ ಶಾಸಕರ ಮನೆಗೆ ಬಂದು ಜೆಡಿಎಸ್‌ನ ಶೈಲಜಾ ಪೂಜಾರಿ ಮತ್ತು ಬಿಜೆಪಿಯ ಭಾಗಿರಥಿ ಕುಂಬಾರ ಇವರಿಗೆ ಮೊದಲ ಅವಧಿಗೆ 15 ತಿಂಗಳು ನಂತರ ಅವಧಿಗೆ 15 ತಿಂಗಳ ಷರತ್ತಿಗೆ ಒಪ್ಪಿಸಿದರು. ಶೈಲಜಾ ಅಧ್ಯಕ್ಷೆಯಾಗಿ, ಪಕ್ಷೇತರ ಇಸ್ಮಾಯಿಲ್‌ ಅರಬ ಉಪಾಧ್ಯಕ್ಷರಾಗಿ ಅವಿರೋಧ ಆಯ್ಕೆಯಾದರು. ನಂತರ ಅವಧಿಗೆ ಶೈಲಜಾ ಪೂಜಾರಿ ಕೊಟ್ಟ ಮಾತಿನಂತೆ ನಡೆದು ಅಧ್ಯಕ್ಷ ಸ್ಥಾನಕ್ಕೆ ರಾಜೀನಾಮೆ ನೀಡಿದರು. ನಂತರ ಬಿಜೆಪಿಯ ಭಾಗಿರಥಿ ಕುಂಬಾರ ಅವರಿಗೆ ಅಧ್ಯಕ್ಷ ಸ್ಥಾನ ನೀಡಿ ಅವರಿಗೆ ಗೆಲ್ಲಿಸುವ ಪ್ರಕ್ರಿಯೆ ಆರಂಭವಾದಾಗ ಯಾರು ಮಾತುಕತೆ ಮಾಡಿ ಹೋಗಿದ್ದರೋ ಅವರೇ ಕೈ ಕೊಡತೊಡಗಿದರು. ಬಿಜೆಪಿಯ ಭೀಮನಗೌಡ ಪಾಟೀಲರು ಕೂಡ ಬೆಂಬಲ ಸೂಚಿಸುವದಾಗಿ ಅತಿ ನಿಷ್ಠೆಯಿಂದ ಹೇಳಿದ್ದರಿಂದ ಶಾಸಕರು ಅನಿವಾರ್ಯವಾಗಿ ಚುನಾವಣೆಗೆ ಮುಂದಾದರು. ಮಾತು ಕೊಟ್ಟರಂತೆ ಬಿಜೆಪಿ ಸದಸ್ಯರು ನಡೆದುಕೊಂಡಿಲ್ಲ. ಆದರೆ ಮಾತು ಉಳಿಸಿಕೊಳ್ಳಲು ಶಾಸಕರು ಶ್ರಮಿಸಿದ್ದಾರೆ ಎಂದರು.

ಶಾಸಕರನ್ನು ಮಾನಸಿಕವಾಗಿ ಕುಗ್ಗಿಸಲು ಬಿಜೆಪಿಯವರು ಇಲ್ಲಸಲ್ಲದ ಆರೋಪ ಮಾಡುತ್ತಿದ್ದಾರೆ. ಆದರೆ ಶಾಸಕರ ಹಿಂದೆ ಕ್ಷೇತ್ರದ ಜನರಿದ್ದಾರೆ. ಬಿಜೆಪಿಯವರ ಗೂಂಡಾವರ್ತನೆ ಜನರಿಗೆ ತಿಳಿಯುತ್ತಲಿದೆ. ಮುಂಬರುವ ದಿನಗಳಲ್ಲಿ ಕ್ಷೇತ್ರದಲ್ಲಿ ಬಿಜೆಪಿ ನೆಲಸಮವಾಗಲಿದೆ. ಸೋಲು ಗೆಲುವು ಎಲ್ಲರಿಗೂ ಇದ್ದದ್ದೆ, ಆದರೆ ಅದು ಪ್ರೀತಿ, ವಿಶ್ವಾಸ, ಪ್ರಾಮಾಣಿಕತೆಯಿಂದ ಕೂಡಿರಬೇಕು ಎಂದು ಹೇಳಿದರು.

ಪುರಸಭೆ ಮಾಜಿ ಅಧ್ಯಕ್ಷ ಶ್ರೀಕಾಂತ ಕುಡಿಗನೂರ, ಯಮನಾಜಿ ಸಾಳುಂಕೆ, ಭೀಮಣ್ಣ ಕವಲಗಿ, ಪ್ರಶಾಂತ ಕಾಳೆ, ಸದಾಶಿವ ಪ್ಯಾಟಿ, ನಿರ್ಮಲಾ ತಳಕೇರಿ, ಜಾವೀದ್‌ ಮೋಮಿನ್‌, ಆಯೂಬ ನಾಟೀಕಾರ, ಸತೀಶ ಕುಂಬಾರ, ತಾಪಂ ಮಾಜಿ ಅಧ್ಯಕ್ಷ ಅಣ್ಣಪ್ಪ ಬಿದರಕೋಟೆ, ಮುತ್ತಪ್ಪ ಪೋತೆ, ಅಪ್ಪು ಕಲ್ಲೂರ, ಮಹಾದೇವ ಗಡ್ಡದ, ಶ್ರೀಶೈಲ ಪೂಜಾರಿ ಮತ್ತಿತರರಿದ್ದರು.

ಟಾಪ್ ನ್ಯೂಸ್

ಆಸ್ಟ್ರೇಲಿಯಾದ ಫೆಡರಲ್‌ ಚುನಾವಣೆಯಲ್ಲಿ ಮೀರಾ ಡಿ’ಸಿಲ್ವ ಸೋಲು

ಆಸ್ಟ್ರೇಲಿಯಾದ ಫೆಡರಲ್‌ ಚುನಾವಣೆಯಲ್ಲಿ ಮೀರಾ ಡಿ’ಸಿಲ್ವ ಸೋಲು

1-afff

ರಾಹುಲ್‌ ಬಾಬಾ ನಿಮ್ಮ ಇಟಲಿ ಕನ್ನಡಕ ತೆಗೆಯಿರಿ: ಅಮಿತ್‌ ಶಾ ಟಾಂಗ್‌

nirmala

ತೆರಿಗೆ ಇಳಿಕೆಗೆ ಕೇಂದ್ರದ ಸಮರ್ಥನೆ: ಮಹಾರಾಷ್ಟ್ರ, ಒಡಿಶಾದಿಂದಲೂ ವ್ಯಾಟ್‌ ಇಳಿಕೆ

ಚುನಾವಣೆಗಾಗಿ ಕಾಂಗ್ರೆಸ್‌ ವಿವಾದ ಸೃಷ್ಟಿ: ಹರಿಕೃಷ್ಣ ಬಂಟ್ವಾಳ್‌

ಚುನಾವಣೆಗಾಗಿ ಕಾಂಗ್ರೆಸ್‌ ವಿವಾದ ಸೃಷ್ಟಿ: ಹರಿಕೃಷ್ಣ ಬಂಟ್ವಾಳ್‌

ನಿಬಿಡ ಶುಭ ಸಮಾರಂಭಗಳು: ಮೆಲ್ಕಾರ್‌-ಕಲ್ಲಡ್ಕ ಟ್ರಾಫಿಕ್‌ ಜಾಮ್‌

ನಿಬಿಡ ಶುಭ ಸಮಾರಂಭಗಳು: ಮೆಲ್ಕಾರ್‌-ಕಲ್ಲಡ್ಕ ಟ್ರಾಫಿಕ್‌ ಜಾಮ್‌

ದಕ್ಷಿಣ ಕನ್ನಡ ಜಿಲ್ಲೆಯಲ್ಲಿ ಬಿರುಸು ಪಡೆದ ಮಳೆ

ದಕ್ಷಿಣ ಕನ್ನಡ ಜಿಲ್ಲೆಯಲ್ಲಿ ಬಿರುಸು ಪಡೆದ ಮಳೆ

ವಿಮಾನ ದುರಂತದಲ್ಲಿ ಮಡಿದವರಿಗೆ ಶ್ರದ್ಧಾಂಜಲಿ ಅರ್ಪಣೆ

ವಿಮಾನ ದುರಂತದಲ್ಲಿ ಮಡಿದವರಿಗೆ ಶ್ರದ್ಧಾಂಜಲಿ ಅರ್ಪಣೆಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು

1-adasdsa

ವಿಜಯಪುರ : ಬಿಗಿ ಭದ್ರತೆಯಲ್ಲಿ ಶಿಕ್ಷಕರ ಜಿಪಿಎಸ್‌ಟಿ ಪರೀಕ್ಷೆ

19krishna

ಆಲಮಟ್ಟಿ ಶಾಸ್ತ್ರೀ ಸಾಗರಕ್ಕೆ ಒಳ ಹರಿವು ಆರಂಭ: ಜೀವನದಿ ಕೃಷ್ಣೆಗೆ ಜೀವಕಳೆ

ವಿಜಯಪುರ ಸರ್ಕಾರಿ ಆಸ್ಪತ್ರೆ ಪ್ರಕರಣ: ಲೋಕಾಯುಕ್ತರಿಂದ ಸ್ವಯಂ ಪ್ರೇರಿತ ದೂರು

ವಿಜಯಪುರ ಸರ್ಕಾರಿ ಆಸ್ಪತ್ರೆ ಪ್ರಕರಣ: ಲೋಕಾಯುಕ್ತರಿಂದ ಸ್ವಯಂ ಪ್ರೇರಿತ ದೂರು

3DC

ಪದವೀಧರ ಪರೀಕ್ಷಾ ಕೇಂದ್ರಕ್ಕೆ ಡಿಸಿ-ಎಸ್ಪಿ ಭೇಟಿ

ಬಾಣಂತಿಯರ ಶಸ್ತ್ರಚಿಕಿತ್ಸೆಯಲ್ಲಿ ಲೋಪ : ವಿಜಯಪುರ ಸರ್ಕಾರಿ ಆಸ್ಪತ್ರೆಗೆ ಉಪ ಲೋಕಾಯುಕ್ತ ಭೇಟಿ

ಬಾಣಂತಿಯರ ಶಸ್ತ್ರಚಿಕಿತ್ಸೆಯಲ್ಲಿ ಲೋಪ : ವಿಜಯಪುರ ಸರ್ಕಾರಿ ಆಸ್ಪತ್ರೆಗೆ ಉಪ ಲೋಕಾಯುಕ್ತ ಭೇಟಿ

MUST WATCH

udayavani youtube

ಉಡುಪಿಯಲ್ಲಿ ‘ ಮಾವಿನ ಮೇಳ ‘ | ನಾಳೆ ( may 23) ಕೊನೇ ದಿನ

udayavani youtube

ಶಿರ್ವ : ನೂತನ ಹೈಟೆಕ್‌ ಬಸ್ಸು ನಿಲ್ದಾಣ ಲೋಕಾರ್ಪಣೆ

udayavani youtube

ಬೆಳ್ತಂಗಡಿಯಲ್ಲೊಂದು ಗೋಡಂಬಿಯಾಕಾರದ ಮೊಟ್ಟೆ ಇಡುವ ಕೋಳಿ..

udayavani youtube

ಆಗ ನಿಮ್ಮಲ್ಲಿ 2 ಆಯ್ಕೆಗಳಿರುತ್ತವೆ .. ಅದೇನಂದ್ರೆ..

udayavani youtube

ದತ್ತಪೀಠದಲ್ಲಿ ನಮಾಜ್.. ವಿಡಿಯೋ ವೈರಲ್ : ಜಿಲ್ಲಾಧಿಕಾರಿ ಹೇಳಿದ್ದೇನು ?

ಹೊಸ ಸೇರ್ಪಡೆ

ಆಸ್ಟ್ರೇಲಿಯಾದ ಫೆಡರಲ್‌ ಚುನಾವಣೆಯಲ್ಲಿ ಮೀರಾ ಡಿ’ಸಿಲ್ವ ಸೋಲು

ಆಸ್ಟ್ರೇಲಿಯಾದ ಫೆಡರಲ್‌ ಚುನಾವಣೆಯಲ್ಲಿ ಮೀರಾ ಡಿ’ಸಿಲ್ವ ಸೋಲು

1-afff

ರಾಹುಲ್‌ ಬಾಬಾ ನಿಮ್ಮ ಇಟಲಿ ಕನ್ನಡಕ ತೆಗೆಯಿರಿ: ಅಮಿತ್‌ ಶಾ ಟಾಂಗ್‌

nirmala

ತೆರಿಗೆ ಇಳಿಕೆಗೆ ಕೇಂದ್ರದ ಸಮರ್ಥನೆ: ಮಹಾರಾಷ್ಟ್ರ, ಒಡಿಶಾದಿಂದಲೂ ವ್ಯಾಟ್‌ ಇಳಿಕೆ

ಚುನಾವಣೆಗಾಗಿ ಕಾಂಗ್ರೆಸ್‌ ವಿವಾದ ಸೃಷ್ಟಿ: ಹರಿಕೃಷ್ಣ ಬಂಟ್ವಾಳ್‌

ಚುನಾವಣೆಗಾಗಿ ಕಾಂಗ್ರೆಸ್‌ ವಿವಾದ ಸೃಷ್ಟಿ: ಹರಿಕೃಷ್ಣ ಬಂಟ್ವಾಳ್‌

ನಿಬಿಡ ಶುಭ ಸಮಾರಂಭಗಳು: ಮೆಲ್ಕಾರ್‌-ಕಲ್ಲಡ್ಕ ಟ್ರಾಫಿಕ್‌ ಜಾಮ್‌

ನಿಬಿಡ ಶುಭ ಸಮಾರಂಭಗಳು: ಮೆಲ್ಕಾರ್‌-ಕಲ್ಲಡ್ಕ ಟ್ರಾಫಿಕ್‌ ಜಾಮ್‌

Thanks for visiting Udayavani

You seem to have an Ad Blocker on.
To continue reading, please turn it off or whitelist Udayavani.