ವಿಜಯಪುರ: ಬಸ್-ಬೈಕ್ ಮುಖಾಮುಖಿ ಡಿಕ್ಕಿ; ಇಬ್ಬರು ಸವಾರರ ಸಾವು
Team Udayavani, Sep 12, 2020, 9:43 PM IST
ಸಾಂದರ್ಭಿಕ ಚಿತ್ರ
ವಿಜಯಪುರ: ಜಿಲ್ಲೆಯ ಸಿಂದಗಿ ಬಳಿ ಬೈಕ್ ಗೆ ಬಸ್ ಡಿಕ್ಕಿ ಹೊಡೆದ ಕಾರಣ ಬೈಕ್ ಮೇಲೆ ಹೊರಟಿದ್ದ ಮೂವರಲ್ಲು ಇಬ್ಬರು ಸವಾರರು ಮೃತಪಟ್ಟು, ಓರ್ವ ಗಂಭೀರವಾಗಿ ಗಾಯಗೊಂಡ ಘಟನೆ ಶನಿವಾರ ಸಂಜೆ ಜರುಗಿದೆ.
ಸಿಂದಗಿ ಬಸ್ ನಿಲ್ದಾಣದಿಂದ ಯಾದಗಿರಿ ಜಿಲ್ಲೆಯ ಶಹಾಪೂರ ಕಡೆಗೆ ಹೋರಟ ಸಾರಿಗೆ ಸಂಸ್ಥೆಯ ಬಸ್ ಗೆ ಯಂಕಂಚಿ ಗ್ರಾಮದಿಂದ ಸಿಂದಗಿ ಕಡೆಗೆ ಬರುತ್ತಿದ್ದ ಪಲ್ಸರ್ ಬೈಕ್ ಮುಖಾಮುಖಿ ಡಿಕ್ಕಿಯಾಗಿವೆ. ಪರಿಣಾಮ ಬೈಕ್ ನ ಇಬ್ಬರು ಸವಾರರು ಸ್ಥಳದಲ್ಲೇ ಮೃತಪಟ್ಟಿದ್ದಾರೆ. ಬೈಕ ಸವಾರರಲ್ಲಿ ಮತ್ತೋರ್ವ ಗಂಭೀರ ಗಾಯವಾಗಿ ಆಸ್ಪತ್ರೆಗೆ ದಾಖಲಿಸಲ್ಪಟ್ಟಿದ್ದಾನೆ.
ತಾಲೂಕಿನ ಕೊಕಟನೂರ ಗ್ರಾಮದ ತಿಪ್ಪಣ್ಣ ಮಲ್ಲಪ್ಪ ಬ್ಯಾಕೋಡ (28), ಯಂಕಂಚಿ ಗ್ರಾಮದ ರಮೇಶ ಗೌಡಪ್ಪ ಮುಳಸಾವಳಗಿ (35) ಸ್ಥಳದಲ್ಲೇ ಮೃತಪಟ್ಟಿದ್ದು. ಯಂಕಂಚಿ ನಿವಾದಿ ಶಿವಾನಂದ ನಿಂಗಪ್ಪ ಕುರನಳ್ಳಿ (30) ಗಂಭೀರ ಗಾಯಗೊಂಡು ವಿಜಯಪುರ ಸರಕಾರಿ ಆಸ್ಪತ್ರೆಗೆ ಚಿಕಿತ್ಸೆಗಾಗಿ ಸಾಗಿಸಲಾಗಿದೆ. ಘಟನಾ ಸ್ಥಳಕ್ಕೆ ಆಗಮಿಸಿರುವ ಸಿಂದಗಿ ಪೋಲಿಸರು ತನಿಖೆ ಆರಂಭಿಸಿದ್ದಾರೆ.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
ವಿಜಯಪುರ : ಆಲಮಟ್ಟಿ ಶಾಸ್ತ್ರಿ ಸಾಗರ ಉದ್ಯಾನ ವೀಕ್ಷಿಸಿದ ರಾಜ್ಯಪಾಲ ಗೆಹ್ಲೋಟ್
ನಾಲತವಾಡ: ಮೂರು ವರ್ಷಗಳಿಗೊಮ್ಮೆ ನಡೆಯುವ ಗ್ರಾಮ ದೇವತೆ ಜಾತ್ರೆಗೆ ಅದ್ಧೂರಿ ಆರಂಭ
ಅಕ್ರಮ ಮಕ್ಕಳ ಸಾಗಾಣಿಕೆ: ವಿಜಯಪುರದ ಸ್ಟಾಪ್ ನರ್ಸ್ ಪೊಲೀಸರ ವಶಕ್ಕೆ
ಪ್ರಾಥಮಿಕ ಆರೋಗ್ಯ ಕೇಂದ್ರದಲ್ಲಿ ವೈದ್ಯರ ನಿರ್ಲಕ್ಷದಿಂದ ನೆಲದ ಮೇಲೆ ನರಳಾಡಿದ ಗರ್ಭಿಣಿ
ಪಂಚಪೀಠಗಳ ಕೊಡುಗೆ ಅಪಾರ: ರಂಭಾಪುರಿ ಜಗದ್ಗುರು